U19 World Cup 2024: ಸೂಪರ್ ಸಿಕ್ಸ್ ಹಂತದ ವೇಳಾಪಟ್ಟಿ ಪ್ರಕಟ; ಭಾರತದ ಎದುರಾಳಿಗಳು ಯಾರ್ಯಾರು?

|

Updated on: Jan 29, 2024 | 6:42 PM

U19 World Cup 2024: ಸೂಪರ್ ಸಿಕ್ಸ್ ಹಂತ ಜನವರಿ 30 ರಿಂದ ಆರಂಭವಾಗಲಿದ್ದು, ಫೆಬ್ರವರಿ 3 ರವರೆಗೆ ನಡೆಯಲ್ಲಿದೆ. ಐದು ದಿನಗಳ ಕಾಲ ನಡೆಯುವ ಈ ಹಂತದಲ್ಲಿ ಯಾವ ತಂಡ ಯಾವ ತಂಡದ ವಿರುದ್ಧ ಸೆಣಸಲಿದೆ ಎಂಬುದಕ್ಕೆ ಐಸಿಸಿ ಬಿಡುಗಡೆ ಮಾಡಿರುವ ಸೂಪರ್ ಸಿಕ್ಸ್ ಹಂತದ ವೇಳಾಪಟ್ಟಿಯಲ್ಲಿ ಉತ್ತರ ಸಿಕ್ಕಿದೆ.

U19 World Cup 2024: ಸೂಪರ್ ಸಿಕ್ಸ್ ಹಂತದ ವೇಳಾಪಟ್ಟಿ ಪ್ರಕಟ; ಭಾರತದ ಎದುರಾಳಿಗಳು ಯಾರ್ಯಾರು?
ಅಂಡರ್-19 ವಿಶ್ವಕಪ್
Follow us on

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್​ನ (U19 World Cup 2024) ಗುಂಪು ಹಂತ ಮುಕ್ತಾಯಗೊಂಡಿದೆ. ಇದರೊಂದಿಗೆ ಸೂಪರ್ ಸಿಕ್ಸ್ (Super Six) ಹಂತಕ್ಕೆ 12 ತಂಡಗಳು ಎಂಟ್ರಿಕೊಟ್ಟಿದೆ. ಈ 12 ತಂಡಗಳನ್ನು ತಲಾ 6 ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಿಲಾಗಿದೆ. ಲೀಗ್ ಹಂತದಲ್ಲಿ ಪ್ರತಿಯೊಂದು ಗುಂಪಿನಿಂದ ತಲಾ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಆಯ್ಕೆಯಾಗಿವೆ. ಇದೀಗ ಮುಂದಿನ ಹಂತ ಅಂದರೆ ಸೂಪರ್ ಸಿಕ್ಸ್ ಹಂತ ಜನವರಿ 30 ರಿಂದ ಆರಂಭವಾಗಲಿದ್ದು, ಫೆಬ್ರವರಿ 3 ರವರೆಗೆ ನಡೆಯಲ್ಲಿದೆ. ಐದು ದಿನಗಳ ಕಾಲ ನಡೆಯುವ ಈ ಹಂತದಲ್ಲಿ ಯಾವ ತಂಡ ಯಾವ ತಂಡದ ವಿರುದ್ಧ ಸೆಣಸಲಿದೆ ಎಂಬುದಕ್ಕೆ ಐಸಿಸಿ (ICC) ಬಿಡುಗಡೆ ಮಾಡಿರುವ ಸೂಪರ್ ಸಿಕ್ಸ್ ಹಂತದ ವೇಳಾಪಟ್ಟಿಯಲ್ಲಿ ಉತ್ತರ ಸಿಕ್ಕಿದೆ.

2 ಗುಂಪುಗಳಾಗಿ ವಿಂಗಡಣೆ

ಗುಂಪು 1: ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಐರ್ಲೆಂಡ್, ನೇಪಾಳ ಮತ್ತು ನ್ಯೂಜಿಲೆಂಡ್.

ಗುಂಪು 2: ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ.

ಮೇಲೆ ಹೇಳಿದಂತೆ ಜನವರಿ 30 ಮಂಗಳವಾರದಿಂದ ಆರಂಭವಾಗಲಿರುವ ಈ ಸುತ್ತು ಫೆಬ್ರವರಿ 3 ಶನಿವಾರದವರೆಗೆ ನಡೆಯಲ್ಲಿದೆ. ಈ ಪಂದ್ಯಗಳು 4 ಕ್ರೀಡಾಂಗಣಗಳಲ್ಲಿ ನಡೆಯಲಿದ್ದು, ಬ್ಲೋಮ್‌ಫಾಂಟೈನ್‌ನ ಮಂಗೌಂಗ್ ಓವಲ್, ಕಿಂಬರ್ಲಿಯಲ್ಲಿ ಕಿಂಬರ್ಲಿ ಓವಲ್, ಪೊಟ್ಚೆಫ್‌ಸ್ಟ್ರೂಮ್‌ನಲ್ಲಿರುವ ಜೆಬಿ ಮಾರ್ಕ್ಸ್ ಓವಲ್ ಮತ್ತು ಬೆನೋನಿಯ ವಿಲೋಮೂರ್ ಪಾರ್ಕ್ ಆತಿಥ್ಯವಹಿಸುತ್ತಿವೆ. ಉಳಿದಂತೆ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳು ಬೆನೋನಿಯ ವಿಲೋಮೂರ್ ಪಾರ್ಕ್‌ನಲ್ಲಿ ನಡೆಯಲಿವೆ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 1:20ಕ್ಕೆ ಆರಂಭವಾಗಲಿವೆ.

ಸೂಪರ್ ಸಿಕ್ಸ್ ಹಂತದ ವೇಳಾಪಟ್ಟಿ

30 ಜನವರಿ:

  • ಭಾರತ vs ನ್ಯೂಜಿಲೆಂಡ್ – ಮಂಗಾಂಗ್ ಓವಲ್, ಬ್ಲೋಮ್‌ಫಾಂಟೈನ್
  • ಶ್ರೀಲಂಕಾ vs ವೆಸ್ಟ್ ಇಂಡೀಸ್ – ಕಿಂಬರ್ಲಿ ಓವಲ್, ಕಿಂಬರ್ಲಿ
  • ಪಾಕಿಸ್ತಾನ vs ಐರ್ಲೆಂಡ್ – ಜೆಬಿ ಮಾರ್ಕ್ಸ್ ಓವಲ್, ಪೊಚೆಫ್‌ಸ್ಟ್ರೂಮ್

31 ಜನವರಿ:

  • ನೇಪಾಳ vs ಬಾಂಗ್ಲಾದೇಶ – ಮಂಗಾಂಗ್ ಓವಲ್, ಬ್ಲೋಮ್‌ಫಾಂಟೈನ್
  • ಆಸ್ಟ್ರೇಲಿಯಾ vs ಇಂಗ್ಲೆಂಡ್ – ಕಿಂಬರ್ಲಿ ಓವಲ್, ಕಿಂಬರ್ಲಿ
  • ಜಿಂಬಾಬ್ವೆ vs ದಕ್ಷಿಣ ಆಫ್ರಿಕಾ – ಜೆಬಿ ಮಾರ್ಕ್ಸ್ ಓವಲ್, ಪೊಚೆಫ್‌ಸ್ಟ್ರೂಮ್
  • ಯುಎಸ್​ಎ vs ಅಫ್ಘಾನಿಸ್ತಾನ – ವಿಲೋಮೂರ್ ಪಾರ್ಕ್, ಬೆನೋನಿ

1 ಫೆಬ್ರವರಿ:

ಸ್ಕಾಟ್ಲೆಂಡ್ vs ನಮೀಬಿಯಾ – ವಿಲೋಮೂರ್ ಪಾರ್ಕ್, ಬೆನೋನಿ

2 ಫೆಬ್ರವರಿ:

  • ಭಾರತ vs ನೇಪಾಳ – ಮಂಗಾಂಗ್ ಓವಲ್, ಬ್ಲೋಮ್‌ಫಾಂಟೈನ್
  • ವೆಸ್ಟ್ ಇಂಡೀಸ್ vs ಆಸ್ಟ್ರೇಲಿಯಾ – ಕಿಂಬರ್ಲಿ ಓವಲ್, ಕಿಂಬರ್ಲಿ
  • ದಕ್ಷಿಣ ಆಫ್ರಿಕಾ vs ಶ್ರೀಲಂಕಾ – ಜೆಬಿ ಮಾರ್ಕ್ಸ್ ಓವಲ್, ಪೊಚೆಫ್‌ಸ್ಟ್ರೂಮ್

3 ಫೆಬ್ರವರಿ:

  • ಪಾಕಿಸ್ತಾನ vs ಬಾಂಗ್ಲಾದೇಶ – ವಿಲೋಮೂರ್ ಪಾರ್ಕ್, ಬೆನೋನಿ
  • ನ್ಯೂಜಿಲೆಂಡ್ vs ಐರ್ಲೆಂಡ್ – ಮಂಗಾಂಗ್ ಓವಲ್, ಬ್ಲೋಮ್‌ಫಾಂಟೈನ್
  • ಇಂಗ್ಲೆಂಡ್ vs ಜಿಂಬಾಬ್ವೆ – ಜೆಬಿ ಮಾರ್ಕ್ಸ್ ಓವಲ್, ಪೊಚೆಫ್‌ಸ್ಟ್ರೂಮ್

6 ಫೆಬ್ರವರಿ:

ಸೆಮಿಫೈನಲ್ 1: ಮೊದಲ ಗುಂಪಿನ ಅಗ್ರ ತಂಡ vs ಎರಡನೇ ಗುಂಪಿನ ಎರಡನೇ ತಂಡ – ವಿಲೋಮೂರ್ ಪಾರ್ಕ್, ಬೆನೋನಿ

8 ಫೆಬ್ರವರಿ:

ಸೆಮಿಫೈನಲ್ 2: ಎರಡನೇ ಗುಂಪಿನ ಮೊದಲ ತಂಡ vs ಮೊದಲ ಗುಂಪಿನ ಎರಡನೇ ತಂಡ – ವಿಲೋಮೂರ್ ಪಾರ್ಕ್, ಬೆನೋನಿ

11 ಫೆಬ್ರವರಿ:

ಫೈನಲ್ – ವಿಲೋಮೂರ್ ಪಾರ್ಕ್, ಬೆನೋನಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:40 pm, Mon, 29 January 24