ಐಸಿಸಿ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ತಿಂಗಳಿನ ಆಟಗಾರ ಪ್ರಶಸ್ತಿ (ICC Player of the Month Award)ಗೆ ನಾಮನಿರ್ದೇಶನಗೊಂಡಿರುವ ಆಟಗಾರರ ಹೆಸರನ್ನು ಐಸಿಸಿ ಪ್ರಕಟಿಸಿದೆ. ಫೆಬ್ರವರಿ ತಿಂಗಳಿನಲ್ಲಿ ಆಟಗಾರರ ಪ್ರದರ್ಶನದ ಆಧಾರದ ಮೇಲೆ 6 ಆಟಗಾರರ ಹೆಸರನ್ನು ಆಯ್ಕೆ ಮಾಡಲಾಗಿದೆ. ಪುರುಷರ ವಿಭಾಗದಲ್ಲಿ ಯುಎಇಯ ವೃತ್ಯ ಅರವಿಂದ್, ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ (Shreyas Iyer) ಮತ್ತು ನೇಪಾಳದ ದೀಪೇಂದರ್ ಸಿಂಗ್ ಎರಿ ಅವರನ್ನು ಐಸಿಸಿ ನಾಮನಿರ್ದೇಶನ ಮಾಡಿದೆ. ಅದೇ ಸಮಯದಲ್ಲಿ, ಮಹಿಳೆಯರ ವಿಭಾಗಲ್ಲಿ ಭಾರತದ ಮಿಥಾಲಿ ರಾಜ್ (Mithali Raj) ಜೊತೆಗೆ ಏಕದಿನ ತಂಡದ ನಾಯಕಿ ದೀಪ್ತಿ ಶರ್ಮಾ ಕೂಡ ಆಯ್ಕೆಯಾಗಿದ್ದಾರೆ. ಇವರಲ್ಲದೆ ಅಮೆಲಿಯಾ ಕರ್ ಕೂಡ ನಾಮಿನೇಟ್ ಆಗಿದ್ದಾರೆ.
ICC ಪ್ರತಿ ತಿಂಗಳು ಮೂರು ಆಟಗಾರರನ್ನು ತಿಂಗಳ ಆಟಗಾರನಿಗೆ ಎರಡೂ ವಿಭಾಗಗಳಲ್ಲಿ ನಾಮನಿರ್ದೇಶನ ಮಾಡುತ್ತದೆ. ಆ ತಿಂಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರ ಪಟ್ಟಿಯಲ್ಲಿ ಈ 6 ಜನ ಆಟಗಾರರಿದ್ದು, ಈ ಆಟಗಾರರಲ್ಲಿ ವಿಜೇತರು ಯಾರು ಎಂಬುದನ್ನು ಆಯ್ಕೆ ಮಾಡಲಾಗುತ್ತದೆ. ಫೆಬ್ರವರಿ ತಿಂಗಳಲ್ಲಿ, ಆರು ಆಟಗಾರರನ್ನು ಅವರ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ ನಾಮನಿರ್ದೇಶನ ಮಾಡಲಾಗಿದೆ.
ಪುರುಷರ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಆಟಗಾರರು
ಯುಎಇಯ ವೃತ್ಯಾ ಅರವಿಂದ್ ಅವರು ಮೊದಲ ಬಾರಿಗೆ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದು, ಟಿ20 ವಿಶ್ವಕಪ್‌ನ ಕ್ವಾಲಿಫೈಯರ್‌ನಲ್ಲಿ ಅರವಿಂದ್ ಉತ್ತಮ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಒಟ್ಟು ಐದು ಪಂದ್ಯಗಳಲ್ಲಿ 89 ಸರಾಸರಿಯಲ್ಲಿ 267 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರು ಐರ್ಲೆಂಡ್ ವಿರುದ್ಧ 67 ಎಸೆತಗಳಲ್ಲಿ 97 ರನ್ ಗಳಿಸಿದ್ದು, ಉತ್ತಮ ಇನ್ನಿಂಗ್ಸ್ ಆಗಿದೆ. ಇದಲ್ಲದೇ ಉಳಿದ ಪಂದ್ಯಗಳಲ್ಲಿ 40, 84, 46 ರನ್ ಗಳಿಸಿದ್ದರು.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ ಅವರು ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ಸೀಮಿತ ಓವರ್‌ಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದರು. ಈ ಸಮಯದಲ್ಲಿ, ಅವರು ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ODI ನಲ್ಲಿ 80 ರನ್‌ಗಳ ಇನ್ನಿಂಗ್ಸ್ ಆಡಿದರು. ನಂತರ T20 ಸರಣಿಯ ಕೊನೆಯ ಪಂದ್ಯದಲ್ಲಿ 16 ಎಸೆತಗಳಲ್ಲಿ 25 ರನ್ ಗಳಿಸಿದರು. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಅವರು 174.35 ಸ್ಟ್ರೈಕ್ ರೇಟ್‌ನಲ್ಲಿ 204 ರನ್ ಗಳಿಸಿದ್ದರು.
ನೇಪಾಳದ ದೀಪೇಂದ್ರ ಐಸಿಸಿ ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಅದ್ಭುತವಾಗಿ ಆಡಿದರು, ಈ ಕಾರಣದಿಂದಾಗಿ ತಂಡವು ಮೂರನೇ ಸ್ಥಾನ ಗಳಿಸಿತು. ಈ ವೇಳೆ ಅವರು 159 ರನ್ ಗಳಿಸಿ ಮೂರು ವಿಕೆಟ್ ಪಡೆದರು. ಅವರು ಫಿಲಿಪ್ಪೀನ್ಸ್ ವಿರುದ್ಧ 47 ಎಸೆತಗಳಲ್ಲಿ 83 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇದಕ್ಕೂ ಮುನ್ನ ನಾಲ್ಕು ರಾಷ್ಟ್ರಗಳ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ 142 ರನ್ ಗಳಿಸಿದ್ದರು.
ಮಹಿಳಾ ವಿಭಾಗದಲ್ಲಿ ನಾಮನಿರ್ದೇಶಿತ ಆಟಗಾರ್ತಿಯರು
ನ್ಯೂಜಿಲೆಂಡ್ ವಿರುದ್ಧ ದೀಪ್ತಿ ಶರ್ಮಾ ಆಲ್ ರೌಂಡ್ ಪ್ರದರ್ಶನ ನೀಡಿ, ODI ಸರಣಿಯಲ್ಲಿ ಅತಿ ಹೆಚ್ಚು 10 ವಿಕೆಟ್‌ಗಳನ್ನು ಪಡೆದರು. ಜೊತೆಗೆ ಐದು ಪಂದ್ಯಗಳಲ್ಲಿ 116 ರನ್ ಗಳಿಸಿದರು. ಎರಡನೇ ODIನಲ್ಲಿ ನಾಲ್ಕು ವಿಕೆಟ್‌ಗಳ ಜೊತೆಗೆ, ಅವರು ಅಜೇಯ 69 ರನ್ ಗಳಿಸಿದರು. ಇದರ ಫಲವಾಗಿ ಭಾರತ 280 ರನ್ ಗಳಿಸಿತ್ತು ಆದರೆ ನ್ಯೂಜಿಲೆಂಡ್ ದಾಖಲೆಯ ಚೇಸ್‌ನೊಂದಿಗೆ ಈ ಪಂದ್ಯವನ್ನು ಗೆದ್ದುಕೊಂಡಿತ್ತು.
ಅಮೆಲಿಯಾ ಕರ್ ಇತ್ತೀಚಿನ ದಿನಗಳಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಜೊತೆಗೆ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ತಂಡದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಮೊದಲಿಗರಾಗಿದ್ದಾರೆ. ಅವರು ಮೂರು ಅರ್ಧಶತಕಗಳನ್ನು ಒಳಗೊಂಡಂತೆ 117.66 ಸರಾಸರಿಯಲ್ಲಿ 353 ರನ್ ಗಳಿಸಿದರು. ಅದೇ ಸಮಯದಲ್ಲಿ, ಅವರು ಈ ಸರಣಿಯಲ್ಲಿ ಏಳು ವಿಕೆಟ್ಗಳನ್ನು ಪಡೆದರು. ಜೊತೆಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.
ನ್ಯೂಜಿಲೆಂಡ್ ವಿರುದ್ಧದ ನಿರಾಶಾದಾಯಕ ಸರಣಿಯಲ್ಲಿ ಮಿಥಾಲಿ ರಾಜ್ ಪ್ರದರ್ಶನ ಮಾತ್ರ ಉತ್ತಮ ವಿಷಯವಾಗಿತ್ತು. ಅವರು ಐದು ಪಂದ್ಯಗಳಲ್ಲಿ 77.33 ಸರಾಸರಿಯಲ್ಲಿ ಮೂರು ಅರ್ಧ ಶತಕಗಳನ್ನು ಒಳಗೊಂಡಂತೆ 232 ರನ್ ಗಳಿಸಿದರು. ಕೊನೆಯ ಏಕದಿನ ಪಂದ್ಯದಲ್ಲಿ ಮಿಥಾಲಿ ಅಜೇಯ 54 ರನ್ ಗಳಿಸಿ ತಂಡವನ್ನು ಸರಣಿಯ ಏಕೈಕ ಗೆಲುವಿಗೆ ಕಾರಣರಾದರು. ಇದರೊಂದಿಗೆ ಭಾರತ ಕ್ಲೀನ್ ಸ್ವೀಪ್ ಆತಂಕವನ್ನು ತಪ್ಪಿಸುವಲ್ಲಿ ಯಶಸ್ವಿಯಾಯಿತು.
ಇದನ್ನೂ ಓದಿ:ಕೇವಲ 9 ಆಟಗಾರರಿದ್ದರು ಆಟ ಮುಂದುವರೆಸಬಹುದು! ಕ್ರಿಕೆಟ್ನಲ್ಲಿ ಮಹತ್ತರ ಬದಲಾವಣೆ ತಂದ ಐಸಿಸಿ; ಆದರೆ?