IPL 2022: ಐಪಿಎಲ್​ ಆರಂಭಕ್ಕೂ ಮುನ್ನ CSKಗೆ ಸಿಹಿಸುದ್ದಿ: ಸ್ಟಾರ್​ ಆಟಗಾರ ಮರಳುವ ಸೂಚನೆ

IPL 2022 CSK: ದೀಪಕ್ ಚಹರ್ ಅನುಪಸ್ಥಿತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸಂಕಷ್ಟಕ್ಕೀಡಾಗಬಹುದು. ಏಕೆಂದರೆ ಪವರ್‌ಪ್ಲೇನಲ್ಲಿ ಚಹರ್ ಚೆನ್ನೈಗೆ ಪ್ರಮುಖ ಬೌಲರ್.

IPL 2022: ಐಪಿಎಲ್​ ಆರಂಭಕ್ಕೂ ಮುನ್ನ CSKಗೆ ಸಿಹಿಸುದ್ದಿ: ಸ್ಟಾರ್​ ಆಟಗಾರ ಮರಳುವ ಸೂಚನೆ
CSK
Follow us
TV9 Web
| Updated By: ಝಾಹಿರ್ ಯೂಸುಫ್

Updated on: Mar 09, 2022 | 2:32 PM

ಐಪಿಎಲ್​ (IPL 2022) ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಸಿಹಿಸುದ್ದಿಯೊಂದು ಸಿಕ್ಕಿದೆ. ಏಕೆಂದರೆ ಗಾಯಗೊಂಡು ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ವೇಗಿ ದೀಪಕ್ ಚಹರ್ (Deepak Chahar) ಐಪಿಎಲ್​ಗೆ ಲಭ್ಯರಿರಲಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಗಾಯಗೊಂಡಿರುವ ಚಹರ್ ಐಪಿಎಲ್ ಟೂರ್ನಿ ಮಿಸ್ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೀಗ ದೀಪಕ್ ಚಹರ್​ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ವೈದ್ಯರು ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಚಹರ್ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಂಡರೂ, ಏಪ್ರಿಲ್​ ಮಧ್ಯಮ ಭಾಗದಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ದೀಪಕ್ ಚಹರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (CSK) 14 ಕೋಟಿ ರೂ.ಗೆ ಮತ್ತೆ ಖರೀದಿಸಿತು. ಅಷ್ಟೇ ಅಲ್ಲದೆ ಈ ಬಾರಿ ಸಿಎಸ್​ಕೆ ಖರೀದಿಸಿದ ಅತ್ಯಂತ ದುಬಾರಿ ಆಟಗಾರ ಕೂಡ ಚಹರ್ ಆಗಿದ್ದರು. ಆದರೆ ಮೆಗಾ ಹರಾಜು ಬೆನ್ನಲ್ಲೇ ಚಹರ್ ಗಾಯಗೊಂಡಿದ್ದು ಸಿಎಸ್​ಕೆ ತಂಡದ ಚಿಂತೆಗೆ ಕಾರಣವಾಗಿತ್ತು. ಇದೀಗ ಸಿಎಸ್​ಕೆ ವೇಗಿ ಐಪಿಎಲ್​ನ ಮೊದಲಾರ್ಧದ ಅಂತ್ಯ ಹಂತದಲ್ಲಿ ಮರಳಲಿದ್ದಾರೆ ಎಂದು ತಿಳಿದು ಬಂದಿದೆ. ಅವರು ಚೆನ್ನೈನ ಅತ್ಯಂತ ದುಬಾರಿ ಆಟಗಾರ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ದೀಪಕ್ ಚಹರ್ ಏಪ್ರಿಲ್ ಎರಡನೇ ವಾರದೊಳಗೆ ತಂಡಕ್ಕೆ ಮರಳಲಿದ್ದಾರೆ. ಚಹರ್ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದು, 8 ವಾರಗಳ ಫಿಟ್​ನೆಸ್​ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ಐಪಿಎಲ್​ನ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಂಡರೂ ದೀಪಕ್ ಚಹರ್ ಈ ಬಾರಿ ಐಪಿಎಲ್ ಆಡುವುದು ಬಹುತೇಕ ಖಚಿತ ಎನ್ನಲಾಗಿದೆ.

ದೀಪಕ್ ಚಹರ್ ಗಾಯಗೊಂಡಾಗ, MRI ಸ್ಕ್ಯಾನ್ ನಂತರ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಗಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಿಂದಾಗಿ ದೀಪಕ್ ಚಹರ್ ಶಸ್ತ್ರಚಿಕಿತ್ಸೆ ಬಯಸುವುದಿಲ್ಲ. ಶಸ್ತ್ರಚಿಕಿತ್ಸೆಯಿಂದಾಗಿ, ದೀಪಕ್ ಚಹಾರ್ ಅವರು ದೀರ್ಘಕಾಲದವರೆಗೆ ಮೈದಾನದಿಂದ ಹೊರಗುಳಿಯಬಹುದು. ಇದರಿಂದಾಗಿ ಅವರು ಟಿ20 ವಿಶ್ವಕಪ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ದೀಪಕ್ ಚಹರ್ ಅವರಿಗೆ 8 ವಾರಗಳ ರಿಹ್ಯಾಬ್​ ಪ್ರೊಗ್ರಾಮ್ ನಿಗದಿಪಡಿಸಲಾಗಿದೆ.

ಚಹರ್ ಫಿಟ್​ನೆಸ್ ಮೇಲೆ ಸಿಎಸ್​ಕೆ ಕಣ್ಣು: ದೀಪಕ್ ಚಹರ್ ಅವರ ಫಿಟ್ನೆಸ್ ಮೇಲೆ ಸಿಎಸ್​ಕೆ ಕಣ್ಣಿಟ್ಟಿದ್ದು, ಆದಷ್ಟು ಬೇಗ ಕ್ಯಾಂಪ್​ಗೆ ಕರೆಸಿಕೊಳ್ಳುವ ಇರಾದೆಯಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮಾರ್ಚ್ 26 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದ್ದು, ಇದಾಗ್ಯೂ ಈ ಪಂದ್ಯದಕ್ಕೆ ಚಹರ್ ಕಣಕ್ಕಿಳಿಯಲಾಗುವುದಿಲ್ಲ. ಆದರೆ ಚಹರ್ ತಂಡದ ಪ್ರಮುಖ ಬೌಲರ್ ಆಗಿರುವ ಕಾರಣ ಅವರ ಮರಳುವಿಕೆಯನ್ನು ಸಿಎಸ್​ಕೆ ಎದುರು ನೋಡುತ್ತಿದೆ.

ದೀಪಕ್ ಚಹರ್ ಅನುಪಸ್ಥಿತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸಂಕಷ್ಟಕ್ಕೀಡಾಗಬಹುದು. ಏಕೆಂದರೆ ಪವರ್‌ಪ್ಲೇನಲ್ಲಿ ಚಹರ್ ಚೆನ್ನೈಗೆ ಪ್ರಮುಖ ಬೌಲರ್. 58 ಐಪಿಎಲ್ ಪಂದ್ಯಗಳಲ್ಲಿ 58 ವಿಕೆಟ್ ಪಡೆದಿರುವ ದೀಪಕ್ ಚಹರ್ ಪವರ್‌ಪ್ಲೇಯಲ್ಲಿ 42 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಅಂದರೆ ಐಪಿಎಲ್​ನಲ್ಲಿ ಪವರ್​ಪ್ಲೇನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಚಹರ್ ಹೆಸರಿನಲ್ಲಿದೆ. ಹೀಗಾಗಿ ದೀಪಕ್ ಚಹರ್ ಅನುಪಸ್ಥಿತಿ ಸಿಎಸ್​ಕೆ ಆರಂಭಿಕ ಪಂದ್ಯಗಳ ಫಲಿತಾಂಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಇದನ್ನೂ ಓದಿ: Ipl 2022 Rcb Schedule: RCB ತಂಡ ಸಂಪೂರ್ಣ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(IPL 2022: Relief for CSK, Deepak Chahar likely to return from injury mid-April)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್