
ಈ ವರ್ಷ ಕ್ರಿಕೆಟ್ ಲೋಕದಲ್ಲಿ ಡಬಲ್ ಧಮಾಕ ಇದೆ. ಮೊದಲನೆಯದ್ದು, ಇನ್ನು ಕೆಲವೇ ದಿನಗಳಲ್ಲಿ ಪುರುಷರ ಟಿ20 ವಿಶ್ವಕಪ್ (T20 World Cup 2024) ಆರಂಭವಾಗಲಿದೆ. ಈ ಮಿನಿ ವಿಶ್ವಕಪ್ ಸರಿಸುಮಾರು 1 ತಿಂಗಳು ನಡೆಯಲ್ಲಿದೆ. ಅದಾದ ಬಳಿಕ ಮಹಿಳೆಯರ ಟಿ20 ವಿಶ್ವಕಪ್ (Women’s T20 World Cup 2024) ಕೂಡ ನಡೆಯಲ್ಲಿದೆ. ವನಿತೆಯರ ವಿಶ್ವಕಪ್‌ಗೆ ಬಾಂಗ್ಲಾದೇಶ ಆತಿಥ್ಯವಹಿಸುತ್ತಿದ್ದು, ಅಕ್ಟೋಬರ್ 3 ರಿಂದ ಪಂದ್ಯಾವಳಿ ಆರಂಭವಾಗಲಿದೆ. ಇದೀಗ ಈ ಮಿನಿ ವಿಶ್ವಸಮರದ ಸಂಪೂರ್ಣ ವೇಳಾಪಟ್ಟಿಯನ್ನು ಐಸಿಸಿ (ICC) ಇಂದು ಬಿಡುಗಡೆ ಮಾಡಿದೆ.
ಮೇಲೆ ಹೇಳಿದಂತೆ ಈ ಬಾರಿ ಬಾಂಗ್ಲಾದೇಶ ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದೆ. ಈ ಪಂದ್ಯಾವಳಿಯಲ್ಲಿ ಆಡುತ್ತಿರುವ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದರೆ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ.
PBKS vs CSK Live Score, IPL 2024: ಸಿಎಸ್ಕೆ ಮೂರನೇ ವಿಕೆಟ್ ಪತನ
ಮಹಿಳೆಯರ ಟಿ20 ವಿಶ್ವಕಪ್ ಈ ವರ್ಷದ ಅಕ್ಟೋಬರ್ 3 ರಂದು ಆರಂಭವಾಗಲಿದೆ. ಮೊದಲ ಪಂದ್ಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ಢಾಕಾದಲ್ಲಿ ನಡೆಯಲಿದೆ. ಎಲ್ಲಾ ತಂಡಗಳು ತಮ್ಮ ತಮ್ಮ ಗುಂಪುಗಳಲ್ಲಿ ತಲಾ 4 ಪಂದ್ಯಗಳನ್ನು ಆಡಲಿವೆ. ಈ ಟೂರ್ನಿಯ ಅಂತಿಮ ಪಂದ್ಯ ಅಕ್ಟೋಬರ್ 20 ರಂದು ನಡೆಯಲಿದೆ.
The ICC Women’s #T20WorldCup 2024 in Bangladesh to commence on 3 October with the final slated for 20 October.
Details 👉 https://t.co/MRtx7UXXPM pic.twitter.com/v4jBsD0gIe
— ICC (@ICC) May 5, 2024
ಗುಂಪು ಎ- ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಕ್ವಾಲಿಫೈಯರ್ 1.
ಗುಂಪು ಬಿ- ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಕ್ವಾಲಿಫೈಯರ್ 2.
ಟಿ20 ವಿಶ್ವಕಪ್ನಲ್ಲಿ ಭಾರತ ಮಹಿಳಾ ತಂಡವು ಅಕ್ಟೋಬರ್ 4 ರಂದು ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಇದಾದ ನಂತರ ಟೀಂ ಇಂಡಿಯಾದ ಎರಡನೇ ಪಂದ್ಯ ಅಕ್ಟೋಬರ್ 6 ರಂದು ಪಾಕಿಸ್ತಾನದ ವಿರುದ್ಧ ನಡೆಯಲಿದೆ. ಇದರ ನಂತರ, ಭಾರತ ತಂಡವು ಅಕ್ಟೋಬರ್ 9 ರಂದು ಕ್ವಾಲಿಫೈಯರ್ 1 ತಂಡದೊಂದಿಗೆ ಸೆಣಸಾಡಲಿದೆ. ಆ ನಂತರ ಅಕ್ಟೋಬರ್ 13 ರಂದು ಆಸ್ಟ್ರೇಲಿಯಾ ವಿರುದ್ಧ ಹೈವೋಲ್ಟೇಜ್ ಪಂದ್ಯ ನಡೆಯಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:18 pm, Sun, 5 May 24