LSG vs KKR Highlights, IPL 2024: ಲಕ್ನೋ ವಿರುದ್ಧ ಕೆಕೆಆರ್ಗೆ 98 ರನ್‌ಗಳ ಭಾರಿ ಜಯ
Lucknow Super Giants Vs Kolkata Knight Riders Highlights in Kannada: ಇಂದು ನಡೆದ ಐಪಿಎಲ್ 2024 ರ 54 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಬರೋಬ್ಬರಿ 98 ರನ್ಗಳಿಂದ ಮಣಿಸುವಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಯಶಸ್ವಿಯಾಗಿದೆ.

ಇಂದು ನಡೆದ ಐಪಿಎಲ್ 2024 ರ 54 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಬರೋಬ್ಬರಿ 98 ರನ್ಗಳಿಂದ ಮಣಿಸುವಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಕೆಕೆಆರ್ ತಂಡ ಲೀಗ್ನಲ್ಲಿ 8ನೇ ಗೆಲುವು ದಾಖಲಿಸಿ ಒಟ್ಟು 16 ಅಂಕ ಸಂಪಾಧಿಸಿದೆ. ಅಲ್ಲದೆ ಪ್ಲೇಆಫ್ ಸುತ್ತಿಗೆ ಭಾಗಶಃ ಎಂಟ್ರಿಕೊಟ್ಟಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಂಡು 235 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಕ್ನೋ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ 16.1 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
LIVE NEWS & UPDATES
-
ಲಕ್ನೋಗೆ 98 ರನ್ ಸೋಲು
ಕೆಕೆಆರ್ ನೀಡಿದ 236 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಗುರಿ ಲಕ್ನೋ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ 16.1 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
-
ಕೃನಾಲ್ ಪಾಂಡ್ಯ ಔಟ್
ಲಕ್ನೋ ತಂಡದ 8ನೇ ವಿಕೆಟ್ ಪತನವಾಗಿದೆ. ಕೃನಾಲ್ ಪಾಂಡ್ಯ 5 ರನ್ ಗಳಿಸಿ ಪೆವಿಲಿಯನ್ಗೆ ಮರಳಿದ್ದಾರೆ.
-
-
ಏಳನೇ ವಿಕೆಟ್ ಪತನ
ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಲಕ್ನೋ ಏಳನೇ ವಿಕೆಟ್ ಕಳೆದುಕೊಂಡಿದೆ. ಆಷ್ಟನ್ ಟರ್ನರ್ 16 ರನ್ ಗಳಿಸಲಷ್ಟೇ ಶಕ್ತರಾದರು.
-
6ನೇ ವಿಕೆಟ್
ಕೆಕೆಆರ್ ವಿರುದ್ಧ ಲಕ್ನೋ ಇನ್ನಿಂಗ್ಸ್ ಸಂಕಷ್ಟಕ್ಕೆ ಸಿಲುಕಿದೆ. ತಂಡ ಇದುವರೆಗೆ 6 ವಿಕೆಟ್ ಕಳೆದುಕೊಂಡಿದ್ದು, ಆಯುಷ್ ಬದೋನಿ 15 ರನ್ ಗಳಿಸಿ ಪೆವಿಲಿಯನ್ಗೆ ಮರಳಿದ್ದಾರೆ. ಲಕ್ನೋ 13 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿದೆ.
-
ಸ್ಟೊಯಿನಿಸ್ ಔಟ್
ಲಕ್ನೋ ಪ್ರಮುಖ ವಿಕೆಟ್ ಕಳೆದುಕೊಂಡಿದೆ ಮಾರ್ಕಸ್ ಸ್ಟೊಯಿನಿಸ್ 36 ರನ್ ಗಳಿಸಿ ಕ್ಯಾಚಿತ್ತು ಔಟಾದರು.
-
-
ಲಕ್ನೋ ಅರ್ಧ ಇನ್ನಿಂಗ್ಸ್ ಅಂತ್ಯ
ಲಕ್ನೋ ತಂಡದ ಅರ್ಧ ಇನ್ನಿಂಗ್ಸ್ ಅಂತ್ಯಗೊಂಡಿದೆ. ಅಂದರೆ ಈ 10 ಓವರ್‌ಗಳಲ್ಲಿ ಲಕ್ನೋ ತಂಡ 4 ವಿಕೆಟ್ ಕಳೆದುಕೊಂಡು 96 ರನ್ ಬಾರಿಸಿದೆ.
-
ಹೂಡಾ ಔಟ್
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ದೀಪಕ್ ಹೂಡಾ ಐದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
-
ಕೆಎಲ್ ರಾಹುಲ್ ಔಟ್
ನಾಯಕ ಕೆಎಲ್ ರಾಹುಲ್ 21 ಎಸೆತಗಳಲ್ಲಿ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
-
ಲಕ್ನೋ ಪವರ್ ಪ್ಲೇ ಅಂತ್ಯ
ಲಕ್ನೋ ಪವರ್ ಪ್ಲೇ ಅಂತ್ಯಗೊಂಡಿದೆ. ತಂಡ ಈ 6 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 55 ರನ್ ಕಲೆಹಾಕಿದೆ.
-
ಮೊದಲ ವಿಕೆಟ್ ಪತನ
ಲಕ್ನೋ 20 ರನ್ ಗಳಿಸುವಷ್ಟರಲ್ಲಿ ಅರ್ಶಿನ್ ಕುಲಕರ್ಣಿ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದೆ.
-
ರಿಂಕು ಸಿಂಗ್ ಔಟ್
ರಿಂಕು ಸಿಂಗ್ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ರಮಣದೀಪ್ ಸಿಂಗ್ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. 18 ಓವರ್‌ಗಳ ನಂತರ ತಂಡದ ಸ್ಕೋರ್ 200/5.
-
ಯುದ್ಧವೀರ್ ಸಿಂಗ್ಗೆ ವಿಕೆಟ್
ಆಂಗ್ಕ್ರಿಶ್ ರಘುವಂಶಿ 32 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ.
-
13 ಓವರ್ ಅಂತ್ಯಕ್ಕೆ ಕೆಕೆಆರ್ ಸ್ಕೋರ್
13 ಓವರ್‌ಗಳ ಅಂತ್ಯಕ್ಕೆ ಕೆಕೆಆರ್ ತಂಡ 2 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿದೆ. ಆಂಗ್‌ಕ್ರಿಶ್ ರಘುವಂಶಿ 27 ರನ್ ಮತ್ತು ಆಂಡ್ರೆ ರಸೆಲ್ 7 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.
-
ನರೈನ್ ಔಟ್
ಸುನಿಲ್ ನರೈನ್ ಶತಕ ವಂಚಿತರಾಗಿದ್ದು, 81 ರನ್ ಗಳಿಸಿ ಔಟಾದರು. ಅವರನ್ನು ರವಿ ಬಿಷ್ಣೋಯ್ ಔಟ್ ಮಾಡಿದರು.
-
10 ಓವರ್ ಪೂರ್ಣ
ಕೆಕೆಆರ್ ತಂಡ 10 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿದೆ. ಆಂಗ್‌ಕ್ರಿಶ್ ರಘುವಂಶಿ 22 ರನ್ ಮತ್ತು ಸುನಿಲ್ ನರೈನ್ 54 ರನ್ ಬಾರಿಸಿ ಕ್ರೀಸ್‌ನಲ್ಲಿದ್ದಾರೆ.
-
ನರೈನ್ ಅರ್ಧಶತಕ
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸುನಿಲ್ ನರೈನ್ ಕೇವಲ 27 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ.
-
ರಘುವಂಶಿ-ನರೈನ್ ಜೊತೆಯಾಟ
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿರುವ ಆಂಗ್‌ಕ್ರಿಶ್ ರಘುವಂಶಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರು ಸುನಿಲ್ ನರೈನ್ ಅವರೊಂದಿಗೆ 20 ರನ್‌ಗಳ ಜೊತೆಯಾಟವಾಡಿದ್ದಾರೆ. ಏಳು ಓವರ್‌ಗಳ ನಂತರ ತಂಡದ ಸ್ಕೋರ್ 81/1.
-
ಫಿಲ್ ಸಾಲ್ಟ್ ಔಟ್
ಫಿಲ್ ಸಾಲ್ಟ್ ಇನ್ನಿಂಗ್ಸ್ 32 ರನ್ಗಳಿಗೆ ಅಂತ್ಯಗೊಂಡಿದೆ.
-
2 ಓವರ್‌ಗೆ 18 ರನ್
ಲಕ್ನೋ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 2 ಓವರ್‌ಗಳ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 18 ರನ್ ಗಳಿಸಿದೆ. ಸುನಿಲ್ ನರೈನ್ 2 ರನ್ ಗಳಿಸಿದರೆ, ಫಿಲ್ ಸಾಲ್ಟ್ 16 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
-
ಲಕ್ನೋ ಸೂಪರ್ ಜೈಂಟ್ಸ್
ಕೆಎಲ್ ರಾಹುಲ್ (ವಿಕೆಟ್ ಕೀಪರ್/ನಾಯಕ), ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಆಷ್ಟನ್ ಟರ್ನರ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಮೊಹ್ಸಿನ್ ಖಾನ್, ಯಶ್ ಠಾಕೂರ್.
-
ಕೋಲ್ಕತ್ತಾ ನೈಟ್ ರೈಡರ್ಸ್
ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ಆಂಗ್ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.
-
ಟಾಸ್ ಗೆದ್ದ ಲಕ್ನೋ
ಟಾಸ್ ಗೆದ್ದ ಲಕ್ನೋ ನಾಯಕ ಕೆಎಲ್ ರಾಹುಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - May 05,2024 7:03 PM
