ICC Awards 2023: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕಳೆದ ವರ್ಷದ ಅತ್ಯುತ್ತಮ ಆಟಗಾರರ ಪ್ರಶಸ್ತಿಗಾಗಿ ನಾಮನಿರ್ದೇಶಿತ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಮಾತ್ರ ಕಾಣಿಸಿಕೊಂಡಿದ್ದಾರೆ. ಮಿಸ್ಟರ್ 360 ಡಿಗ್ರಿ ಖ್ಯಾತಿಯ ಸೂರ್ಯಕುಮಾರ್ ಯಾದವ್ 2023 ರ ಅತ್ಯುತ್ತಮ ಟಿ20 ಕ್ರಿಕೆಟಿಗರ ನಾಮನಿರ್ದೇಶಿತ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
2023 ರಲ್ಲಿ 17 ಟಿ20 ಇನಿಂಗ್ಸ್ ಆಡಿರುವ ಸೂರ್ಯಕುಮಾರ್ ಯಾದವ್ 155.95 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 48.86 ಸರಾಸರಿಯಲ್ಲಿ ಒಟ್ಟು 733 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಸಿಸಿ 2023ರ ಟಿ20 ಕ್ರಿಕೆಟಿಗ ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಹಾಗೆಯೇ 11 ಇನಿಂಗ್ಸ್ಗಳಲ್ಲಿ 515 ರನ್ ಬಾರಿಸಿರುವ ಝಿಂಬಾಬ್ವೆಯ ಸಿಕಂದರ್ ರಾಝ ಹಾಗೂ 19 ಇನಿಂಗ್ಸ್ಗಳಲ್ಲಿ 576 ರನ್ ಕಲೆಹಾಕಿರುವ ನ್ಯೂಝಿಲೆಂಡ್ನ ಮಾರ್ಕ್ ಚಾಪ್ಮನ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಇವರೊಂದಿಗೆ 2023 ರಲ್ಲಿ ಟಿ20 ಕ್ರಿಕೆಟ್ನಲ್ಲಿ 55 ವಿಕೆಟ್ ಕಬಳಿಸಿರುವ ಉಗಾಂಡದ ಅಲ್ಪೇಶ್ ರಾಮ್ಜಾನಿ ಕೂಡ ಟಿ20 ಕ್ರಿಕೆಟಿಗ ಪ್ರಶಸ್ತಿ ಪಟ್ಟಿಯಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.
ಹಾಗೆಯೇ ಉದಯೋನ್ಮುಖ ಆಟಗಾರರಿಗೆ ನೀಡಲಾಗುವ ಪ್ರಶಸ್ತಿ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಸ್ಥಾನ ಪಡೆದಿದ್ದಾರೆ. ಈ ಪ್ರಶಸ್ತಿಗಳಿಗೆ ನಾಮನಿರ್ದೇಶಿತರಾಗಿರುವವರಿಗೆ ಕ್ರಿಕೆಟ್ ಅಭಿಮಾನಿಗಳು icc-cricket.com ಮೂಲಕ ವೋಟ್ ಮಾಡಬಹುದು. ಈ ಮೂಲಕ ಆಯಾ ವಿಭಾಗದಲ್ಲಿ ವಿಜೇತರಾದ ಕ್ರಿಕೆಟರುಗಳ ಹೆಸರುಗಳನ್ನು ಜನವರಿ 2024 ರಲ್ಲಿ ಘೋಷಿಸಲಾಗುತ್ತದೆ. ಟಿ20 ಕ್ರಿಕೆಟರ್ ಹಾಗೂ ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿಗೆ ನಾಮನಿರ್ದೇಶಿತರಾಗಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.
ICC ವರ್ಷದ ಪುರುಷ ಟಿ20 ಕ್ರಿಕೆಟಿಗ ಪ್ರಶಸ್ತಿ:
ICC ವರ್ಷದ ಮಹಿಳಾ ಟಿ20 ಆಟಗಾರ್ತಿ:
ICC ವರ್ಷದ ಉದಯೋನ್ಮುಖ ಪುರುಷ ಕ್ರಿಕೆಟಿಗ:
ಇದನ್ನೂ ಓದಿ: Virat Kohli: ಪಾಕ್ ಕ್ರಿಕೆಟಿಗರನ್ನು ಹಿಂದಿಕ್ಕಿದ ಕಿಂಗ್ ಕೊಹ್ಲಿ
ICC ವರ್ಷದ ಉದಯೋನ್ಮುಖ ಮಹಿಳಾ ಆಟಗಾರ್ತಿ:
Published On - 10:31 am, Thu, 4 January 24