ICC awards: ಮೊಹಮ್ಮದ್ ರಿಜ್ವಾನ್​ಗೆ ಒಲಿದ 2021ರ ಅತ್ಯುತ್ತಮ ಟಿ20 ಕ್ರಿಕೆಟಿಗ ಪ್ರಶಸ್ತಿ

| Updated By: ಝಾಹಿರ್ ಯೂಸುಫ್

Updated on: Jan 23, 2022 | 2:59 PM

Mohammad Rizwan: ಯುಎಇ ಮತ್ತು ಒಮಾನ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲೂ ರಿಜ್ವಾನ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪಾಕಿಸ್ತಾನವನ್ನು ಸೆಮಿಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ICC awards: ಮೊಹಮ್ಮದ್ ರಿಜ್ವಾನ್​ಗೆ ಒಲಿದ 2021ರ ಅತ್ಯುತ್ತಮ ಟಿ20 ಕ್ರಿಕೆಟಿಗ ಪ್ರಶಸ್ತಿ
Mohammad Rizwan
Follow us on

ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ 2021 ರ ಐಸಿಸಿ ಪುರುಷರ ಟಿ20 ಕ್ರಿಕೆಟಿಗರಾಗಿ ಆಯ್ಕೆಯಾಗಿದ್ದಾರೆ. ರಿಜ್ವಾನ್ 2021 ರಲ್ಲಿ 26 ಇನ್ನಿಂಗ್ಸ್‌ಗಳಲ್ಲಿ 73.66 ಸರಾಸರಿಯಲ್ಲಿ 1326 ರನ್ ಬಾರಿಸಿದ್ದರು. ಈ ಅವಧಿಯಲ್ಲಿ ಒಂದು ಶತಕ ಮತ್ತು 12 ಅರ್ಧ ಶತಕಗಳನ್ನು ಸಿಡಿಸಿದ್ದರು. ಇದಲ್ಲದೆ ವಿಕೆಟ್ ಕೀಪಿಂಗ್ ಮೂಲಕ 22 ಕ್ಯಾಚ್ ಹಾಗೂ 2 ಸ್ಟಂಪಿಂಗ್ ಕೂಡ ಮಾಡಿದ್ದರು. ಹೀಗಾಗಿ ಮೊಹಮ್ಮದ್ ರಿಜ್ವಾನ್ ಅವರನ್ನು ಐಸಿಸಿ 2021ರ ಬೆಸ್ಟ್ ಟಿ20 ಪ್ಲೇಯರ್ ಆಗಿ ಆಯ್ಕೆ ಮಾಡಿಕೊಂಡಿದೆ.

ಇನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದ ಟಿ20 ತಂಡದಲ್ಲಿ ಪಾಕ್ ನಾಯಕ ಬಾಬರ್ ಆಜಮ್ ಹಾಗೂ ವಿಕೆಟ್ ಕೀಪರ್ ಆಗಿ ಮೊಹಮ್ಮದ್ ರಿಜ್ವಾನ್ ಸ್ಥಾನ ಪಡೆದಿದ್ದರು. ವಿಶೇಷ ಎಂದರೆ ಈ ತಂಡದಲ್ಲಿ ಟೀಮ್ ಇಂಡಿಯಾದ ಯಾವೊಬ್ಬ ಆಟಗಾರನೂ ಕೂಡ ಸ್ಥಾನ ಪಡೆದಿರಲಿಲ್ಲ.

ಟಿ20 ವಿಶ್ವಕಪ್​ನಲ್ಲೂ ರಿಜ್ವಾನ್ ಮಿಂಚಿಂಗ್:
ಯುಎಇ ಮತ್ತು ಒಮಾನ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲೂ ರಿಜ್ವಾನ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪಾಕಿಸ್ತಾನವನ್ನು ಸೆಮಿಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಾಯಕ ಬಾಬರ್ ಜೊತೆ ಇನಿಂಗ್ಸ್ ಆರಂಭಿಸಿದ್ದ ರಿಜ್ವಾನ್ 6 ಪಂದ್ಯಗಳಲ್ಲಿ ಮೂರು ಅರ್ಧಶತಕಗಳ ನೆರವಿನಿಂದ 281 ರನ್ ಕಲೆಹಾಕಿದ್ದರು.

2021 ರಲ್ಲಿ ದಾಖಲೆ ಬರೆದ ರಿಜ್ವಾನ್:
ಮೊಹಮ್ಮದ್ ರಿಜ್ವಾನ್ ಒಂದು ವರ್ಷದಲ್ಲಿ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ಮತ್ತು ಕ್ರಿಸ್ ಗೇಲ್ ಅವರಂತಹ ದಿಗ್ಗಜರಿಗೂ ಕೂಡ ಒಂದು ವರ್ಷದಲ್ಲಿ ಅಂತರರಾಷ್ಟ್ರೀಯ ಟಿ20ಯಲ್ಲಿ ಸಾವಿರ ರನ್ ಪೇರಿಸಲಾಗಿರಲಿಲ್ಲ. ಕೊಹ್ಲಿ 2016ರಲ್ಲಿ ಗರಿಷ್ಠ 641 ರನ್ ಗಳಿಸಿದ್ದು ದಾಖಲೆಯಾಗಿತ್ತು. ಆದರೆ 2021 ರಲ್ಲಿ ರಿಜ್ವಾನ್ 1326 ರನ್ ಬಾರಿಸುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದಿದ್ದರು.

ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!

(ICC awards: Mohammad Rizwan named Mens T20 Cricketer of the Year)

Published On - 2:58 pm, Sun, 23 January 22