ಟಿ20 ವಿಶ್ವಕಪ್​ಗೆ 10 ಸ್ಥಳಗಳನ್ನು ಅಂತಿಮಗೊಳಿಸಿದ ಐಸಿಸಿ; ಭಾರತ- ಪಾಕ್ ಪಂದ್ಯ ಎಲ್ಲಿ ನಡೆಯಲ್ಲಿದೆ ಗೊತ್ತಾ?

|

Updated on: Sep 23, 2023 | 6:49 AM

T20 World Cup 2024 Venues: ಐಸಿಸಿ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯ ಪ್ರಮುಖರ ಮುಂದಿನ ವರ್ಷ ನಡೆಯಲ್ಲಿರುವ ಟಿ20 ವಿಶ್ವಕಪ್ ಅನ್ನು 10 ಸ್ಥಳಗಳಲ್ಲಿ ಆಡಿಸಲು ನಿರ್ಧರಿಸಲಾಗಿದೆ. ಇದರಲ್ಲಿ 7 ಸ್ಥಳಗಳು ವೆಸ್ಟ್ ಇಂಡೀಸ್​ಗೆ ಸೇರಿದ್ದರೆ, ಇನ್ನುಳಿದ 3 ಸ್ಥಳಗಳು ಅಮೆರಿಕಾಕ್ಕೆ ಸೇರಿವೆ.

ಟಿ20 ವಿಶ್ವಕಪ್​ಗೆ 10 ಸ್ಥಳಗಳನ್ನು ಅಂತಿಮಗೊಳಿಸಿದ ಐಸಿಸಿ; ಭಾರತ- ಪಾಕ್ ಪಂದ್ಯ ಎಲ್ಲಿ ನಡೆಯಲ್ಲಿದೆ ಗೊತ್ತಾ?
ಟಿ20 ವಿಶ್ವಕಪ್ 2024
Follow us on

ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯ ( West Indies and USA) ಜಂಟಿ ಆತಿಥ್ಯದಲ್ಲಿ ನಡೆಯಲ್ಲಿರುವ 2024 ರ ಟಿ20 ವಿಶ್ವಕಪ್ (T20 World Cup 2024)​ಗೆ ಸಂಬಂದಿಸಿದಂತೆ ಐಸಿಸಿ (ICC) ಮಹತ್ವದ ಪ್ರಕಟಣೆ ಹೊರಡಿಸಿದೆ. ಈ ಚುಟುಕು ಮಾದರಿಯ ವಿಶ್ವಕಪ್ ಮುಂದಿನ ವರ್ಷದ ಜೂನ್ 4 ರಿಂದ ಆರಂಭವಾಗಲಿದ್ದು, ಜೂನ್ 30 ರಂದು ಫೈನಲ್ ಪಂದ್ಯ ನಡೆಯಲಿದೆ. ಇದೀಗ ಈ ವಿಶ್ವಕಪ್​​ನ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿರುವ ಐಸಿಸಿ, ಈ ಚುಟುಕು ವಿಶ್ವ ಸಮರ ಯಾವ್ಯಾವ ಸ್ಥಳಗಳಲ್ಲಿ ನಡೆಯಲ್ಲಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದೆ. ಐಸಿಸಿ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯ ಪ್ರಮುಖರ ಮುಂದಿನ ವರ್ಷ ನಡೆಯಲ್ಲಿರುವ ಟಿ20 ವಿಶ್ವಕಪ್ ಅನ್ನು 10 ಸ್ಥಳಗಳಲ್ಲಿ (Venues) ಆಡಿಸಲು ನಿರ್ಧರಿಸಲಾಗಿದೆ. ಇದರಲ್ಲಿ 7 ಸ್ಥಳಗಳು ವೆಸ್ಟ್ ಇಂಡೀಸ್​ಗೆ ಸೇರಿದ್ದರೆ, ಇನ್ನುಳಿದ 3 ಸ್ಥಳಗಳು ಅಮೆರಿಕಾಕ್ಕೆ ಸೇರಿವೆ.

ಐಸಿಸಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಆಂಟಿಗುವಾ ಮತ್ತು ಬಾರ್ಬುಡಾ, ಬಾರ್ಬಡೋಸ್, ಡೊಮಿನಿಕಾ, ಗಯಾನಾ, ಸೇಂಟ್ ಲೂಸಿಯಾ, ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ ಕೆರಿಬಿಯನ್ ರಾಷ್ಟ್ರಗಳಿಂದ ಆಯ್ಕೆಯಾದ ಏಳು ಸ್ಥಳಗಳಾಗಿದ್ದರೆ, ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ, ಫ್ಲೋರಿಡಾದ ಬ್ರೋವರ್ಡ್ ಕೌಂಟಿ ಮತ್ತು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಯುಎಸ್​ಎ ಇಂದ ಆಯ್ಕೆಯಾಗಿರುವ ಮೂರು ಸ್ಥಳಗಳಾಗಿವೆ.

ಏಕದಿನ ವಿಶ್ವಕಪ್​ನ ಬಹುಮಾನದ ಮೊತ್ತ ಪ್ರಕಟ; ಚಾಂಪಿಯನ್ ತಂಡಕ್ಕೆ ಸಿಗಲಿದೆ 33 ಕೋಟಿ ರೂ..!

20 ತಂಡಗಳು 4 ಗುಂಪುಗಳು ಮತ್ತು 1 ಟ್ರೋಫಿ

ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿವೆ. ಈ 20 ತಂಡಗಳನ್ನು ತಲಾ 5 ತಂಡಗಳ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ನಾಲ್ಕು ಗುಂಪುಗಳಿಂದ ಅಗ್ರ 2 ತಂಡಗಳು ಸೂಪರ್ 8 ಗೆ ಅರ್ಹತೆ ಪಡೆಯುತ್ತವೆ. ಸೂಪರ್ 8 ಸುತ್ತಿಗೆ 4 ತಂಡಗಳನ್ನು ತಲಾ 4ರಂತೆ 2 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಎರಡೂ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ವಿಶೇಷವೆಂದರೆ ಈ ಟೂರ್ನಿಯಲ್ಲಿ ನ್ಯೂಯಾರ್ಕ್​ನಿಂದ ಅನತಿ ದೂರದಲ್ಲಿರುವ ಐಸೆನ್ ಹೋವರ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಭಾರತಕ್ಕೆ ಹೀನಾಯ ಸೋಲು

ಏತನ್ಮಧ್ಯೆ, ಕೊನೆಯ ಟಿ20 ವಿಶ್ವಕಪ್ ಅನ್ನು ಅಂದರೆ, 2022 ರಲ್ಲಿ ನಡೆದ ಟಿ20 ವಿಶ್ವಕಪ್ ಅನ್ನು ಆಸ್ಟ್ರೇಲಿಯಾದಲ್ಲಿ ಆಡಲಾಯಿತು. ಈ ವಿಶ್ವಕಪ್ ಗೆದ್ದಿದ್ದು ಇಂಗ್ಲೆಂಡ್ ಕ್ರಿಕೆಟ್ ತಂಡ. ಆ ಬಾರಿಯ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪಯಣ ಸೆಮಿಫೈನಲ್‌ನಲ್ಲಿ ಅಂತ್ಯಗೊಂಡಿತ್ತು. ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 10 ವಿಕೆಟ್​ಗಳಿಂದ ಮಣಿಸಿದ್ದ ಇಂಗ್ಲೆಂಡ್ ಏಕಪಕ್ಷೀಯ ಗೆಲುವು ಸಾಧಿಸಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:48 am, Sat, 23 September 23