2021 ರ ಐಸಿಸಿ ವರ್ಷದ ಏಕದಿನ ಆಟಗಾರರ ನಾಮನಿರ್ದೇಶಿತ ಪಟ್ಟಿ ಪ್ರಕಟಗೊಂಡಿದೆ. ಒಟ್ಟು ನಾಲ್ವರು ಆಟಗಾರರನ್ನು ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾಗಿದ್ದು, ಅದರಂತೆ ಈ ಬಾರಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ, ಬಾಂಗ್ಲಾದೇಶ ತಂಡದ ಮಾಜಿ ನಾಯಕ ಶಕೀಬ್ ಅಲ್ ಹಸನ್, ದಕ್ಷಿಣ ಆಫ್ರಿಕಾದ ಜನೆಮನ್ ಮಲಾನ್ ಮತ್ತು ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ ಅವರು ಸ್ಥಾನ ಪಡೆದಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯಾವೊಬ್ಬ ಆಟಗಾರ ಕೂಡ ಸ್ಥಾನ ಪಡೆಯದಿಲ್ಲ ಎಂಬುದು ವಿಶೇಷ.
ಬಾಂಗ್ಲಾದೇಶದ ಮಾಜಿ ನಾಯಕ ಮತ್ತು ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಈ ವರ್ಷ 9 ಏಕದಿನ ಪಂದ್ಯಗಳಲ್ಲಿ 40ರ ಸರಾಸರಿಯಲ್ಲಿ 277 ರನ್ ಗಳಿಸಿದ್ದಾರೆ. ಇದಲ್ಲದೇ ಈ ಎಡಗೈ ಸ್ಪಿನ್ನರ್ 17 ವಿಕೆಟ್ ಕಬಳಿಸಿದ್ದಾರೆ.
ಪಾಕಿಸ್ತಾನದ ನಾಯಕ ಬಾಬರ್ ಆಜಂ ಈ ವರ್ಷ ಕೇವಲ 6 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 68 ರ ಸರಾಸರಿಯಲ್ಲಿ 405 ರನ್ ಗಳಿಸಿದ್ದಾರೆ. ಇದೇ ವೇಳೆ 2 ಶತಕಗಳನ್ನು ಕೂಡ ಬಾರಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಜನೆಮನ್ ಮಲಾನ್ ಕೂಡ ಏಕದಿನದ ಅತ್ಯುತ್ತಮ ಆಟಗಾರನ ರೇಸ್‌ನಲ್ಲಿದ್ದಾರೆ. ಮಲಾನ್ 8 ಪಂದ್ಯಗಳಲ್ಲಿ 85ರ ಸರಾಸರಿಯಲ್ಲಿ 509 ರನ್ ಗಳಿಸಿದ್ದಾರೆ. ಈ ಭರ್ಜರಿ ಇನಿಂಗ್ಸ್ ವೇಳೆ ಮಲಾನ್ ಅವರ ಬ್ಯಾಟ್ನಿಂದ 2 ಶತಕ ಮತ್ತು 2 ಅರ್ಧ ಶತಕಗಳು ಮೂಡಿ ಬಂದಿವೆ.
ಇನ್ನು ಐರ್ಲೆಂಡ್‌ನ ಹಿರಿಯ ಆಟಗಾರ ಪಾಲ್ ಸ್ಟಿರ್ಲಿಂಗ್ ಕೂಡ ಐಸಿಸಿ ಏಕದಿನ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ವರ್ಷ 14 ಪಂದ್ಯಗಳಲ್ಲಿ 80ರ ಸರಾಸರಿಯಲ್ಲಿ ಸ್ಟಿರ್ಲಿಂಗ್ 705 ರನ್ ಗಳಿಸಿದ್ದಾರೆ. ಈ ವೇಳೆ 3 ಶತಕ ಹಾಗೂ 2 ಅರ್ಧ ಶತಕ ಬಾರಿಸಿದ್ದಾರೆ.
ಇದನ್ನೂ ಓದಿ: ಭಾರತವನ್ನು ಗೇಲಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗನ ಕಾಲೆಳೆದ ಆಸ್ಟ್ರೇಲಿಯಾ ಪತ್ರಕರ್ತೆ..!
ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…
ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
(ICC Men’s ODI Player of the Year Award)