ICC T20 World Cup Schedule: ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತ-ಪಾಕ್ ಪಂದ್ಯ ಯಾವಾಗ?

| Updated By: Digi Tech Desk

Updated on: Aug 17, 2021 | 11:16 AM

ICC Men's T20 World Cup 2021: ಸಾಕಷ್ಟು ರೋಚಕತೆ ಸೃಷ್ಟಿಸಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಅಕ್ಟೋಬರ್ 24 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ICC T20 World Cup Schedule: ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತ-ಪಾಕ್ ಪಂದ್ಯ ಯಾವಾಗ?
ಇನ್ನು ಟಿ20 ಕ್ರಿಕೆಟ್​​ನ ಟಾಪ್ 8 ರ್ಯಾಂಕಿಂಗ್ ತಂಡಗಳು ಈಗಾಗಲೇ ನೇರವಾಗಿ ಸೂಪರ್ 12 ಹಂತಕ್ಕೇರಿದೆ. ಈ ತಂಡಗಳೆಂದರೆ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ. ಈ ತಂಡಗಳ ಜೊತೆ ಅರ್ಹತಾ ಸುತ್ತಿನಿಂದ 4 ತಂಡಗಳು ಸೇರ್ಪಡೆಯಾಗಲಿದ್ದು, ಆ ಬಳಿಕ ಸೂಪರ್ 12 ಪಂದ್ಯಗಳು ಶುರುವಾಗಲಿದೆ.
Follow us on

ಈ ವರ್ಷ ಯುಎಇ ಹಾಗೂ ಓಮನ್‌ನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಕಟ ಮಾಡಿದೆ. ಇದರ ಪ್ರಕಾರ ಟೂರ್ನಿಗೆ ಅಕ್ಟೋಬರ್ 17 ರಂದು ಚಾಲನೆ ಸಿಗಲಿದೆ. ನವೆಂಬರ್ 14 ರಂದು ಫೈನಲ್ ಪಂದ್ಯ ನಡೆಯಲಿದೆ. ಅಕ್ಟೋಬರ್ 17 ಮೊದಲ ರೌಂಡ್ ಪಂದ್ಯ ಒಮನ್ ಮತ್ತು ಪಿಎನ್​ಜಿ ನಡುವೆ ನಡೆಯಲಿದೆ. ಸಾಕಷ್ಟು ರೋಚಕತೆ ಸೃಷ್ಟಿಸಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಅಕ್ಟೋಬರ್ 24 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಟೂರ್ನಿಯ ಮೊದಲ ಸೂಪರ್ 12 ಪಂದ್ಯ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಅ. 23ಕ್ಕೆ ಆರಂಭವಾಗಲಿದೆ.

ಭಾರತ ಪಂದ್ಯಗಳ ವೇಳಾಪಟಟ್ಟಿ:

24 ಅಕ್ಟೋಬರ್: ಭಾರತ-ಪಾಕಿಸ್ತಾನ

31 ಅಕ್ಟೋಬರ್: ಭಾರತ-ನ್ಯೂಜಿಲೆಂಡ್

3 ನವೆಂಬರ್: ಭಾರತ- ಅಫ್ಘಾನಿಸ್ತಾನ

5 ನವೆಂಬರ್: B1

8 ನವೆಂಬರ್: A2

ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನದ ಪಂದ್ಯಗಳು 3:30ಕ್ಕೆ ಆರಂಭವಾಗಲಿದೆ. ರಾತ್ರಿಯ ಪಂದ್ಯ ಸಂಜೆ 7:30ಕ್ಕೆ ಶುರುವಾಗಲಿದೆ. ಭಾರತದ ಎಲ್ಲ ಪಂದ್ಯ ಸಂಜೆ ಪ್ರಾರಂಭವಾಗಲಿದೆ.

 

ಟಿ-20 ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ:

ಸೂಪರ್ 12: ಗ್ರೂಪ್ 1 ಪಂದ್ಯಗಳ ವೇಳಾಪಟ್ಟಿ

ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ – 23 ಅಕ್ಟೋಬರ್ – 3:30 PM

ಇಂಗ್ಲೆಂಡ್ vs ವೆಸ್ಟ್​ ಇಂಡೀಸ್ – 23 ಅಕ್ಟೋಬರ್ – 7:30 PM

A1 vs B2 – 24 ಅಕ್ಟೋಬರ್ – 3:30 PM

ದಕ್ಷಿಣ ಆಫ್ರಿಕಾ vs ವೆಸ್ಟ್​ ಇಂಡೀಸ್ – ಅಕ್ಟೋಬರ್ 26 – 3:30 PM

ಇಂಗ್ಲೆಂಡ್ vs B2 – ಅಕ್ಟೋಬರ್ 24 – 3:30 PM

ಆಸ್ಟ್ರೇಲಿಯಾ vs A2 – ಅಕ್ಟೋಬರ್ 28 – 7:30 PM

ವೆಸ್ಟ್​ ಇಂಡೀಸ್ vs B2 – ಅಕ್ಟೋಬರ್ 29 – 3:30 PM

ದಕ್ಷಿಣ ಆಫ್ರಿಕಾ vs A1 – ಅಕ್ಟೋಬರ್ 30 – 3:30 PM

ಇಂಗ್ಲೆಂಡ್ vs ಆಸ್ಟ್ರೇಲಿಯಾ – ಅಕ್ಟೋಬರ್ 30 – 7:30 PM

ಇಂಗ್ಲೆಂಡ್ vs A1 – ನವೆಂಬರ್ 01 – 7:30 PM

ದಕ್ಷಿಣ ಆಪ್ರಿಕಾ vs B2 – ನವೆಂಬರ್ 02 – 3:30 PM

ಆಸ್ಟ್ರೇಲಿಯಾ vs B2 – ನವೆಂಬರ್ 04 – 3:30 PM

ವೆಸ್ಟ್​ ಇಂಡೀಸ್ vs A1 – ನವೆಂಬರ್ 04- 7:30 PM

ಆಸ್ಟ್ರೇಲಿಯಾ vs ವೆಸ್ಟ್​ ಇಂಡೀಸ್ – ನವೆಂಬರ್ 06 – 3:30 PM

ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ – ನವೆಂಬರ್ 06 – 7:30 PM

ಸೂಪರ್ 12: ಗ್ರೂಪ್ 2 ಪಂದ್ಯಗಳ ವೇಳಾಪಟ್ಟಿ

ಭಾರತ vs ಪಾಕಿಸ್ತಾನ – ಅಕ್ಟೋಬರ್ 24 – 7:30 PM

ಅಫ್ಘಾನಿಸ್ತಾನ vs B1 – ಅಕ್ಟೋಬರ್ 25 – 7:30 PM

ಪಾಕಿಸ್ತಾನ vs ನ್ಯೂಜಿಲೆಂಡ್ – ಅಕ್ಟೋಬರ್ 26 – 7:30 PM

B1 vs A2 – 27 ಅಕ್ಟೋಬರ್ – 7:30 PM

ಅಫ್ಘಾನಿಸ್ತಾನ vs ಪಾಕಿಸ್ತಾನ – 29 ಅಕ್ಟೋಬರ್ – 7:30 PM

ಅಫ್ಘಾನಿಸ್ತಾನ vs A2 – 31 ಅಕ್ಟೋಬರ್ – 3:30 PM

ಭಾರತ vs ನ್ಯೂಜಿಲೆಂಡ್ – 31 ಅಕ್ಟೋಬರ್ – 7:30 PM

ಪಾಕಿಸ್ತಾನ vs A2 – 2 ನವೆಂಬರ್ – 7:30 PM

ನ್ಯೂಜಿಲೆಂಡ್ vs  B1 – 3 ನವೆಂಬರ್ – 3:30 PM

ಭಾರತ vs ಅಫ್ಘಾನಿಸ್ತಾನ – 3 ನವೆಂಬರ್ – 7:30 PM

ನ್ಯೂಜಿಲೆಂಡ್ vs A2 – 5 ನವೆಂಬರ್ – 3:30 PM

ಭಾರತ vs B1 – 5 ನವೆಂಬರ್ – 7:30 PM

ನ್ಯೂಜಿಲೆಂಡ್ vs ಅಫ್ಘಾನಿಸ್ತಾನ – 7 ನವೆಂಬರ್ – 3:30 PM

ಪಾಕಿಸ್ತಾನ vs B1 – 7 ನವೆಂಬರ್ – 7:30 PM

ಭಾರತ vs A2 – 8 ನವೆಂಬರ್ – 7:30 PM

ಸೆಮಿ ಫೈನಲ್ ಪಂದ್ಯ:

ಸೆಮಿ ಫೈನಲ್ 1 – A1 vs B2 – 10 ನವೆಂಬರ್

ಸೆಮಿ ಫೈನಲ್ 2- A2 vs B1 – 11 ನವೆಂಬರ್

ಫೈನಲ್ ಪಂದ್ಯ: 14 ನವೆಂಬರ್

ಗ್ರೂಪ್ ಒಂದರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ , ವೆಸ್ಟ್ ಇಂಡೀಸ್ ತಂಡಗಳು ಇದ್ದರೆ ಎರಡನೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಹಾಗೂ ಅಪ್ಘಾನಿಸ್ತಾನ ತಂಡಗಳು ಇವೆ. ವಿಶೇಷ ಎಂದರೆ ಈ ಗುಂಪುಗಳಲ್ಲಿ ಎರಡು ಸಾಂಪ್ರದಾಯಿಕ ಬದ್ಧ ಎದುರಾಳಿಗಳ ಜೋಡಿ ಒಂದೊಂದು ಗುಂಪುಗಳಲ್ಲಿ ಸ್ಥಾನವನ್ನು ಪಡೆದಿದೆ. ಮೊದಲ ಗುಂಪಿನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಇದ್ದರೆ ಮತ್ತೊಂದರಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳಿ ಇದೆ. ಹೀಗಾಗಿ ಈ ಪರಸ್ಪರ ತಂಡಗಳು ಟಿ-20 ವಿಶ್ವಕಪ್‌ನ ಲೀಗ್‌ಹಂತದಲ್ಲಿಯೇ ಮುಖಾಮುಖಿಯಾಗಲಿದೆ.

ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಆತಿಥ್ಯವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಳಿಸಿಕೊಂಡಿದ್ದು, ದುಬೈ ಅಂತಾರಾಷ್ಟ್ರೀಯ ಮೈದಾನ, ಅಬುಧಾಬಿಯ ಶೇಕ್ ಜಾಯೆದ್ ಮೈದಾನ, ಶಾರ್ಜಾ ಮೈದಾನ ಹಾಗೂ ಓಮನ್ ಕ್ರಿಕೆಟ್ ಅಕಾಡಮಿ ಹೀಗೆ 4 ಮೈದಾನಗಳಲ್ಲಿ ಪಂದ್ಯಾಟಗಳು ನಡೆಯಲಿದೆ. ಅರ್ಹತಾ ಸುತ್ತಿನಲ್ಲಿ 8 ತಂಡಗಳು 4 ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ. ಎರಡು ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ 2 ತಂಡಗಳು ಸೂಪರ್ 12ಗೆ ಅರ್ಹತೆ ಪಡೆಯಲಿವೆ.

ಅಂದುಕೊಂಡಂತೆ ಆಗಿದ್ದರೆ ಈ ಬಾರಿಯ ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್‌ನ ಭೀತಿಯ ಕಾರಣದಿಂದಾಗಿ ಟೂರ್ನಿಯನ್ನು ಒಮಾನ್ ಹಾಗೂ ಯುಎಇಗೆ ಸ್ಥಳಾಂತರಿಸಲಾಯಿತು.

Published On - 10:35 am, Tue, 17 August 21