Jasprit Bumrah: ಜಸ್ಪ್ರೀತ್ ಬುಮ್ರಾರ ಮತ್ತೊಂದು ಮುಖ ಬಯಲು: ರೂಟ್ ಔಟಾದಾಗ ಮಾಡಿದ್ದೇನು ನೋಡಿ
India vs England 2nd Test: ಈ ಸಂದರ್ಭ ಜಸ್ಪ್ರೀತ್ ಬುಮ್ರಾ ಮಾಸ್ಟರ್ ಪ್ಲಾನ್ ಮಾಡಿ ರೂಟ್ಗೆ ಪೆವಿಲಿಯನ್ ಹಾದಿ ತೋರಿಸಿದರು. ತಮ್ಮ ಸ್ವಿಂಗ್ ಬಾಲ್ ಮೂಲಕ 33 ರನ್ ಗಳಿಸಿದ್ದ ರೂಟ್ ಆಟಕ್ಕೆ ಬ್ರೇಕ್ ಹಾಕಿದರು.
ಭಾರತ ಕ್ರಿಕೆಟ್ ತಂಡದಲ್ಲಿ ಅತಿ ಕಡಿಮೆ ಸಮಯದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಬೌಲರ್ಗಳ ಪೈಕಿ ಜಸ್ಪ್ರೀತ್ ಬುಮ್ರಾ ಪ್ರಮುಖರು. ತಮ್ಮ ಮಾರಕ ಯಾರ್ಕರ್ಗಳ ಮೂಲಕವೇ ಎದುರಾಳಿಗರ ಎದೆ ನಡುಗಿಸುವ ಬುಮ್ರಾ ಈಗೀಗ ಬ್ಯಾಟಿಂಗ್ನಲ್ಲೂ ಕಮಾಲ್ ಮಾಡುತ್ತಿರುವುದನ್ನು ಕಾಣಬಹುದು. ಸಾಮಾನ್ಯವಾಗಿ ಬುಮ್ರಾ ಮೈದಾನದಲ್ಲಿ ಕ್ಯಾಚ್ ಹಿಡಿದಾಗ ಅಥವಾ ವಿಕೆಟ್ ಕಿತ್ತಾಗ ಅವರ ಸಂಭ್ರಮಾಚರಣೆ ಮಿತಿ ಮೀರಿದ್ದು ಕಂಡಿದ್ದಿಲ್ಲ. ಸಿಂಪಲ್ ಆಗಿ ಇರುತ್ತಾರೆ. ಆದರೆ, ನಿನ್ನೆ ಜೋ ರೂಟ್ ವಿಕೆಟ್ ಪಡೆದ ವೇಳೆ ಬುಮ್ರಾ ಅವರ ಹೊಸ ಮುಖ ಬಯಲಾಗಿದೆ.
ಹೌದು, ಪ್ರತಿಬಾರಿ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿದ ಸಂದರ್ಭ ತಂಡಕ್ಕೆ ಆಸರೆಯಾಗುವುದು ನಾಯಕ ಜೋ ರೂಟ್. ಅದು ಎರಡನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲೂ ಕಂಡಿದ್ದೇವೆ. ಏಕಾಂಗಿಯಾಗಿ ನಿಂತು ಅಜೇಯ 180 ರನ್ ಸಿಡಿಸಿದ್ದರು. ಹೀಗಾಗಿ ಎರಡನೇ ಇನ್ನಿಂಗ್ಸ್ನಲ್ಲೂ ಭಾರತಕ್ಕೆ ಭಯವಿದ್ದಿದ್ದು ರೂಟ್ ಮೇಲೆ ಮಾತ್ರ.
ರೂಟ್ ವಿಕೆಟ್ ಭಾರತಕ್ಕೆ ತುಂಬಾನೆ ಮುಖ್ಯವಾಗಿತ್ತು. ಇವರನ್ನು ಔಟ್ ಮಾಡಲು ಭಾರತ ಹರಸಾಹಸ ಪಡುತ್ತಿತ್ತು. ಈ ಸಂದರ್ಭ ಜಸ್ಪ್ರೀತ್ ಬುಮ್ರಾ ಮಾಸ್ಟರ್ ಪ್ಲಾನ್ ಮಾಡಿ ರೂಟ್ಗೆ ಪೆವಿಲಿಯನ್ ಹಾದಿ ತೋರಿಸಿದರು. ತಮ್ಮ ಸ್ವಿಂಗ್ ಬಾಲ್ ಮೂಲಕ 33 ರನ್ ಗಳಿಸಿದ್ದ ರೂಟ್ ಆಟಕ್ಕೆ ಬ್ರೇಕ್ ಹಾಕಿದರು. ಈ ಸಂದರ್ಭ ತುಂಬಾನೆ ಅಗ್ರೆಸಿವ್ನಲ್ಲಿ ಬುಮ್ರಾ ಸಂಭ್ರಮಾಚರಣೆ ಮಾಡಿದರು. ಬುಮ್ರಾ ಅವರ ಈರೀತಿಯ ಸಂಭ್ರಮ ಅಭಿಮಾನಿಗಳು ಈವರೆಗೆ ಕಂಡಿದ್ದಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
A perfect delivery by Jasprit Bumrah to remove Joe Root. The celebrations of Virat, Rohit and Bumrah says it all. pic.twitter.com/zPbn2s7dld
— Mufaddal Vohra (@mufaddal_vohra) August 16, 2021
ಅಷ್ಟಕ್ಕೂ ಬುಮ್ರಾ ಇಷ್ಟು ಕೋಪದಲ್ಲಿ ಸಂಭ್ರಮಿಸಲು ಕಾರಣವಿದೆ. ಇಂಗ್ಲೆಂಡ್ ಬೌಲರ್ಗಳು ಬುಮ್ರಾ ಬ್ಯಾಟಿಂಗ್ ಮಾಡುವಾಗ ಕೊಟ್ಟ ಕಾಟ ಅಷ್ಟಿಟ್ಟಲ್ಲ. ಅದೆಷ್ಟೊ ಬೌನ್ಸರ್ಗಳನ್ನು ಬುಮ್ರಾ ತಡೆದು ನಿಲ್ಲಿಸಿದರು, ಅನೇಕ ಬಾರಿ ಬುಮ್ರಾ ಹೆಲ್ಮೆಟ್ಗೆ ಚೆಂಡುಗಳು ತಾಗಿದ್ದವು. ಇದೇವೇಳೆ ಆಂಗ್ಲರ ಅತಿದೊಡ್ಡ ವಿಕೆಟ್ ಪಡೆದಾಗ ಬುಮ್ರಾ ಸಂಭ್ರಮಾಚರಣೆ ಮಾಮೂಲಾಗಿ ಇರಲಿಲ್ಲ.
Celebration of Jasprit Bumrah when he picked Joe Root’s Wicket. #IndvsEng pic.twitter.com/hqeRVR5lHS
— CricketMAN2 (@man4_cricket) August 16, 2021
ಜಸ್ಪ್ರೀತ್ ಬುಮ್ರಾ ಎರಡನೇ ಇನ್ನಿಂಗ್ಸ್ನಲ್ಲಿ ಮೊಹಮ್ಮದ್ ಶಮಿ ಜೊತೆಗೂಡಿ ಅದ್ಭುತ ಆಟವಾಡಿದರು. ಮುರಿಯದ 89 ರನ್‌ಗಳ ಕಾಣಿಕೆ ನೀಡಿದರು. ಒಂದು ಹಂತದಲ್ಲಿ 200 ರನ್‌ಗಳ ಮುನ್ನಡೆಯೂ ಕಷ್ಟ ಎಂಬ ಪರಿಸ್ಥಿತಿಯಲ್ಲಿದ್ದ ಭಾರತ ತಂಡ ಟೇಲೆಂಡರ್‌ಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ 271 ರನ್‌ಗಳ ಮುನ್ನಡೆ ಪಡೆದು ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. 64 ಎಸೆತಗಳನ್ನು ಎದುರಿಸಿದ ಬುಮ್ರಾ ಅಜೇಯ 34 ರನ್ ಬಾರಿಸಿದರು. ಬೌಲಿಂಗ್ನಲ್ಲೂ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಿತ್ತು ಮಿಂಚಿದರು.
ಟೀಮ್ ಇಂಡಿಯಾವನ್ನು ಸೋಲಿನ ದವಡೆಯಿಂದ ಪಾರು ಮಾಡಿ ಗೆಲುವಿನ ದಡದತ್ತ ಕೊಂಡೊಯ್ದ ಶಮಿ-ಬುಮ್ರಾ ಜೋಡಿಗೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಪ್ರೇಕ್ಷಕರೆಲ್ಲಾ ಎದ್ದು ನಿಂತು ಗೌರವ ಸಲ್ಲಿಸಿದರು. ಅದರಲ್ಲೂ ಶಮಿ ಹಾಗೂ ಬುಮ್ರಾ ಭಾರತದ ಡ್ರೆಸ್ಸಿಂಗ್ ರೂಮ್ಗೆ ಬಂದ ವೇಳೆ ಅಲ್ಲಿದ್ದ ಎಲ್ಲ ಆಟಗಾರರು ಎದ್ದುನಿಂತು ದೊಡ್ಡದಾಗಿ ಕ್ಲಾಪ್ ಹೊಡೆವಿಶೇಷ ಗೌರವ ಸಲ್ಲಿಸಿದರು.
India vs England 2nd Test: ದಾಖಲೆಯ ಜೊತೆಯಾಟ ಆಡಿ ಡ್ರೆಸ್ಸಿಂಗ್ ರೂಮ್ಗೆ ಬಂದ ಶಮಿ-ಬುಮ್ರಾಗೆ ಬಿಗ್ ಸರ್ಪ್ರೈಸ್
(Jasprit Bumrah First time Indian fans saw Angry celebration of Jasprit Bumrah when Root was dismissed)