AUS vs SL: ಟಿ20 ವಿಶ್ವಕಪ್​ನಲ್ಲಿಂದು ಆಸ್ಟ್ರೇಲಿಯಾ-ಶ್ರೀಲಂಕಾ ನಡುವೆ ಹೈವೋಲ್ಟೇಜ್ ಪಂದ್ಯ: ಫಿಂಚ್ ಪಡೆಗೆ ಗೆಲುವು ಅನಿವಾರ್ಯ

| Updated By: Vinay Bhat

Updated on: Oct 25, 2022 | 10:46 AM

Australia vs Sri Lanka, T20 World Cup: ಈಗಾಗಲೇ ನ್ಯೂಜಿಲೆಂಡ್‌ ವಿರುದ್ಧ 89 ರನ್‌ಗಳ ಭಾರೀ ಅಂತರದ ಸೋಲನುಭವಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾಕ್ಕೆ ಈ ಪಂದ್ಯ ಮಹತ್ವದ್ದಾಗಿದೆ.

AUS vs SL: ಟಿ20 ವಿಶ್ವಕಪ್​ನಲ್ಲಿಂದು ಆಸ್ಟ್ರೇಲಿಯಾ-ಶ್ರೀಲಂಕಾ ನಡುವೆ ಹೈವೋಲ್ಟೇಜ್ ಪಂದ್ಯ: ಫಿಂಚ್ ಪಡೆಗೆ ಗೆಲುವು ಅನಿವಾರ್ಯ
AUS vs SL
Follow us on

ಐಸಿಸಿ ಟಿ20 ವಿಶ್ವಕಪ್ (T20 World Cup) ಮಹಾಟೂರ್ನಿಯಲ್ಲಿಂದು ಮಹತ್ವದ ಪಂದ್ಯ ನಡೆಯಲಿದೆ. ಪರ್ತ್​ ಸ್ಟೇಡಿಯಂನಲ್ಲಿ ಆಥಿತೇಯ ಆಸ್ಟ್ರೇಲಿಯಾಕ್ಕೆ ಶ್ರೀಲಂಕಾ (Australia vs Sri Lanka) ಸವಾಲೊಡ್ಡಲಿದೆ. ಈಗಾಗಲೇ ನ್ಯೂಜಿಲೆಂಡ್‌ ವಿರುದ್ಧ 89 ರನ್‌ಗಳ ಭಾರೀ ಅಂತರದ ಸೋಲನುಭವಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. ಇನ್ನೊಂದೆಡೆ ಶ್ರೀಲಂಕಾ ಪಾಯಿಂಟ್ ಟೇಬಲ್​ನಲ್ಲಿ (Point Table) ಎರಡನೇ ಸ್ಥಾನದಲ್ಲಿದ್ದು ಅಗ್ರಸ್ಥಾನಕ್ಕೇರಲು ಈ ಪಂದ್ಯವನ್ನು ಗೆಲ್ಲುವ ಯೋಜನೆ ಮಾಡಿಕೊಂಡಿದೆ. ಉಭಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿರುವ ಪಂದ್ಯ ಇದಾಗಿದ್ದು, ಪರ್ತ್​ನಲ್ಲಿ ಹೈವೋಲ್ಟೇಜ್ ಕದನ ನಿರೀಕ್ಷಿಸಲಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಹೀನಾಯ ಪ್ರದರ್ಶನ ತೋರಿತ್ತು. 201 ರನ್​ಗಳ ಟಾರ್ಗೆಟ್ ಬೆನ್ನಟ್ಟಲು ಸಾಧ್ಯವಾಗದೆ ಕೇವಲ 111 ರನ್​ಗೆ ಸರ್ವಪತನ ಕಂಡಿತು. ತಂಡದ ಪರ ಗ್ಲೆನ್ ಮ್ಯಾಕ್ಸ್​ವೆಲ್ 28 ರನ್ ಗಳಿಸಿದ್ದೇ ಹೆಚ್ಚು. ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ್ದ ನಾಯಕ ಆ್ಯರೋನ್ ಫಿಂಚ್ ಮಂಕಾಗಿರುವುದು ತಂಡಕ್ಕೆ ದೊಡ್ಡ ತಲೆನೋವು.

ಡೇವಿಡ್ ವಾರ್ನರ್ ಬ್ಯಾಟ್​ನಿಂದ ಕೂಡ ರನ್ ಬರುತ್ತಿಲ್ಲ. ಸ್ಟೀವ್ ಸ್ಮಿತ್ ಇಂದಿನ ಪಂದ್ಯದಲ್ಲಿ ಆಡಬಹುದು. ಮಿಚೆಲ್ ಮಾರ್ಶ್, ಸ್ಟೋಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ ಕೊಡುಗೆ ತಂಡಕ್ಕೆ ಬೇಕಿದೆ. ಮಿಚೆಲ್ ಸ್ಟಾರ್ಕ್, ಹ್ಯಾಜ್ಲೆವುಡ್, ಪ್ಯಾಟ್ ಕಮಿನ್ಸ್, ಸ್ಟಾಯಿನಿಸ್ ಹಾಗೂ ಆ್ಯಡಂ ಝಂಪಾ ಎಲ್ಲ ಬೌಲರ್​ಗಳು ಕಳೆದ ಪಂದ್ಯದಲ್ಲಿ ದುಬಾರಿ ಆಗಿದ್ದರು.

ಇದನ್ನೂ ಓದಿ
IND vs NED: ಸಿಡ್ನಿಗೆ ಬಂದ ಟೀಮ್ ಇಂಡಿಯಾ ಆಟಗಾರರು: ಭಾರತದ ಮುಂದಿನ ಟಾರ್ಗೆಟ್ ಯಾರು?
Virat Kohli: ಕೊಹ್ಲಿಗಾಗಿ ಬೌಂಡರಿ ಲೈನ್​ ಬಳಿ ಕಾದು ಕುಳಿತ ಇರ್ಫಾನ್ ಪಠಾಣ್: ವಿರಾಟ್ ಬಂದಾಗ ಏನು ಮಾಡಿದ್ರು ನೋಡಿ
T20 World Cup 2022 Point Table: ಟಿ20 ವಿಶ್ವಕಪ್ ಪಾಯಿಂಟ್ ಟೇಬಲ್: ಅಗ್ರಸ್ಥಾನದಲ್ಲಿ ನ್ಯೂಜಿಲೆಂಡ್, ಬಾಂಗ್ಲಾದೇಶ್
India vs Pakistan: ಕ್ಲೀನ್ ಬೌಲ್ಡ್, 3 ರನ್​: ಐಸಿಸಿ ನಿಯಮ ಮತ್ತು ವಿವಾದ

ಶ್ರೀಲಂಕಾ ತಂಡವು ಮೊದಲ ಹಣಾಹಣಿಯಲ್ಲಿ ಸ್ಪಿನ್ನರ್‌ಗಳಾದ ಮಹೀಶ್ ತೀಕ್ಷಣ ಮತ್ತು ವನಿಂದು ಹಸರಂಗ ಅವರ ಬೌಲಿಂಗ್ ನೆರವಿನಿಂದ ಐರ್ಲೆಂಡ್ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತ್ತು. ಹೀಗಾಗಿ ಲಂಕಾ ಆತ್ಮವಿಶ್ವಾಸದಲ್ಲಿದೆ. ವನಿಂದು ಹಸರಂಗ ಟ್ರಂಪ್‌ಕಾರ್ಡ್‌ ಆಗಿದ್ದಾರೆ. ದಾಖಲೆಗಳನ್ನು ನೋಡುವುದಾದರೆ ಆಸ್ಟ್ರೇಲಿಯ ಮುಂದಿದೆ. ಕಾಂಗರೂ ನೆಲದಲ್ಲಿ ಶ್ರೀಲಂಕಾ ಒಟ್ಟು 14 ಟಿ20 ಪಂದ್ಯಗಳನ್ನಾಡಿದ್ದು, ಆಸ್ಟ್ರೇಲಿಯ 7ರಲ್ಲಿ, ಲಂಕಾ 6ರಲ್ಲಿ ಗೆದ್ದಿದೆ. ಒಂದು ಪಂದ್ಯ ಟೈ ಆಗಿದೆ. ಇತ್ತಂಡಗಳ 4 ಟಿ20 ವಿಶ್ವಕಪ್‌ ಪಂದ್ಯಗಳಲ್ಲಿ ಆಸೀಸ್‌ ಮೂರನ್ನು ಗೆದ್ದಿದೆ. ಉಳಿದೊಂದು ಪಂದ್ಯ ಲಂಕಾ ಗೆದ್ದಿದೆ.

ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಆಯರೋನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್ / ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ಜೋಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ.

ಶ್ರೀಲಂಕಾ ತಂಡ: ಅಶೆನ್ ಬಂಡಾರ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಭಾನುಕಾ ರಾಜಪಕ್ಸೆ, ಚರಿತ್ ಅಸಲಂಕಾ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕಾ ಕರುಣಾರತ್ನ, ಬಿನೂರ ಫೆರ್ನಾಂಡೋ, ಮಹೇಶ್ ತೀಕ್ಷಣ, ಲಹಿರು ಕುಮಾರ.

ಪಂದ್ಯ ಆರಂಭ: ಸಂಜೆ 4.30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌, ಡಿಸ್ನಿ+ ಹಾಟ್‌ಸ್ಟಾರ್.