ICC Mens T20 World Cup: ಟಿ20 ವಿಶ್ವಕಪ್​ನಲ್ಲಿಂದು ಎರಡು ಪಂದ್ಯ: ಐರ್ಲೆಡ್ vs ನೆದರ್ಲೆಂಡ್ಸ್​ ಮತ್ತು ಶ್ರೀಲಂಕಾ vs ನಬಿಯಾ

| Updated By: Vinay Bhat

Updated on: Oct 18, 2021 | 7:44 AM

Sri Lanka vs Ireland and the Netherlands vs Namibia: ಶ್ರೀಲಂಕಾ ಹಾಗೂ ನಬಿಯಾ ನಡುವಣ ಪಂದ್ಯ ಸಂಜೆ 7:30ಕ್ಕೆ ಶುರುವಾಗಲಿದೆ. ಸ್ಟಾರ್ ಬ್ಯಾಟರ್​ಗಳನ್ನು ಹೊಂದಿರುವ ಸಿಂಹಳೀಯರು ಗೆಲ್ಲುವ ಫೇವರಿಟ್ ಎನಿಸಿದೆ.

ICC Mens T20 World Cup: ಟಿ20 ವಿಶ್ವಕಪ್​ನಲ್ಲಿಂದು ಎರಡು ಪಂದ್ಯ: ಐರ್ಲೆಡ್ vs ನೆದರ್ಲೆಂಡ್ಸ್​ ಮತ್ತು ಶ್ರೀಲಂಕಾ vs ನಬಿಯಾ
ICC Mens T20 World Cup
Follow us on

ಐಸಿಸಿ ಟಿ20 ವಿಶ್ವಕಪ್​ನ (ICC Mens T20 World Cup) ಎರಡನೇ ದಿನವಾದ ಇಂದು ಎರಡು ಪಂದ್ಯ ನಡೆಯಲಿದೆ. ಎ ಗುಂಪಿನ ಮೊದಲ ಸುತ್ತಿನ ಮೂರನೇ ಪಂದ್ಯದಲ್ಲಿ ಐರ್ಲೆಂಡ್ ಮತ್ತು ನೆದರ್ಲೆಂಡ್ಸ್​ (Netherlands vs Namibia) ಮುಖಾಮುಖಿಯಾದರೆ ನಾಲ್ಕನೇ ಪಂದ್ಯದಲ್ಲಿ ಶ್ರೀಲಂಕಾ ಮತ್ತು ನಬಿಯಾ (Sri Lanka vs Ireland) ತಂಡ ಸೆಣೆಸಾಟ ನಡೆಸಲಿದೆ. ಈ ಎರಡೂ ಪಂದ್ಯ ಅಬುಧಾಬಿಯ ಶೇಖ್ ಜಯೇದ್ ಕ್ರೀಡಾಂಗಣದಲ್ಲಿ ಜರುಗಲಿದೆ.

3:30ಕ್ಕೆ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ಐರ್ಲೆಂಡ್ ಬಲಿಷ್ಠವಿರುವಂತೆ ಗೋಚರಿಸುತ್ತಿದೆ. ಆಂಡ್ರೆ ಬಲ್ಬಿರಿನ್ ನಾಯಕತ್ವದ ತಂಡದಲ್ಲಿ ಪೌಲ್ ಸ್ಟಿರಿಲಿಂಗ್, ಗೆರೆಥ್ ಡೆಲನಿ, ಜಾರ್ಜ್ ಡಾಕ್​ರೆಲ್ ಮತ್ತು ನೈಲ್ ರಾಕ್ ಪ್ರಮುಖ ಬ್ಯಾಟರ್​ಗಳಾಗಿದ್ದಾರೆ. ಬೆಂಜಮಿನ್ ವೈಟ್ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದರೆ ಇವರಿಗೆ ಆ್ಯಂಡಿ ಮೆಕ್​ಬ್ರಿನ್, ಜೊಶ್ವಾ ಲಿಟಲ್ ಮತ್ತು ಮಾರ್ಕ್ ಅಡೈರ್ ಸಾತ್ ನೀಡಲಿದ್ದಾರೆ.

ಇತ್ತ ನೆದರ್ಲೆಂಡ್ ತಂಡವನ್ನು ಕಡೆಗಣಿಸುವಂತಿಲ್ಲ. ರ್ಯಾನ್ ಟೆನ್ ಟಾಸ್ಕೇಟ್ ನಾಯಕತ್ವದಲ್ಲಿ, ಸ್ಟೆಪನ್ ಮೈಬರ್ಗ್, ಬೆನ್ ಕೂಪರ್, ಲೀಡ್, ಕಾಲಿನ್ ಅಕ್ರಮ್, ಸ್ಕಾಟ್ ಎಡ್ವರ್ಡ್ಸ್ ಬ್ಯಾಟಿಂಗ್ ಅಸ್ತ್ರವಾಗಿದ್ದರೆ, ಫಿಲಿಪ್ ಬಾಯ್ಸ್​ಸೆವೈನ್, ಫ್ರೆಡ್ ಕ್ಲಾಸೆನ್ ವಂಡರ್ ಗಟನ್ ಪ್ರಮುಖ ಬೌಲರ್​ಗಳಾಗಿದ್ದಾರೆ.

ಇನ್ನು ಶ್ರೀಲಂಕಾ ಹಾಗೂ ನಬಿಯಾ ನಡುವಣ ಪಂದ್ಯ ಸಂಜೆ 7:30ಕ್ಕೆ ಶುರುವಾಗಲಿದೆ. ಸ್ಟಾರ್ ಬ್ಯಾಟರ್​ಗಳನ್ನು ಹೊಂದಿರುವ ಸಿಂಹಳೀಯರು ಗೆಲ್ಲುವ ಫೇವರಿಟ್ ಎನಿಸಿದೆ. ಡಸನ್ ಶನಕಾ ನಾಯಕತ್ವದ ಲಂಕಾದಲ್ಲಿ ದಿನೇಶ್ ಚಂದಿಮಲ್, ಕುಸಲ್ ಪೆರೆರಾ, ಚರಿತ್ ಅಸಲಂಕಾ, ಆವಿಶ್ಕಾ ಫೆರ್ನಾಂಡೊ ಬ್ಯಾಟಿಂಗ್ ಬಲದ ತುಂಬಲಿದ್ದಾರೆ. ಬೌಲಿಂಗ್​ನಲ್ಲಿ ವಾನಿಂದು ಹಸರಂಗ, ಚಮಿಕಾ ಕರುಣರತ್ನೆ, ಅಖಿಲಾ ಧನಂಜಯ ಮತ್ತು ದುಶ್ಮಂತಾ ಚಮೀರಾ ಬೌಲಿಂಗ್ ಪಡೆಯಲ್ಲಿದ್ದಾರೆ.

ಅ. 22ರ ತನಕ ಅರ್ಹತಾ ಸುತ್ತು ನಡೆಯಲಿದೆ. ಅ. 23 ರಿಂದ ಕೂಟ ಕಾವೇರಿಸಿಕೊಳ್ಳಲಿದ್ದು, ಅಂದು ಸೂಪರ್‌-12 ಸ್ಪರ್ಧೆ ಮೊದಲ್ಗೊಳ್ಳುತ್ತದೆ. ಈಗಾಗಲೇ ಸೂಪರ್‌-12 ಹಂತದಲ್ಲಿ 8 ತಂಡ ಗಳಿಗೆ ನೇರ ಪ್ರವೇಶ ಲಭಿಸಿದೆ. ಒಂದನೇ ವಿಭಾಗದಲ್ಲಿ ಆಸ್ಟ್ರೇಲಿಯ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳಿವೆ. ಎ-1 ಮತ್ತು ಬಿ-2 ತಂಡಗಳು ಈ ವಿಭಾಗಕ್ಕೆ ಸೇರ್ಪಡೆಗೊಳ್ಳಲಿವೆ. ಎರಡನೇ ವಿಭಾಗದಲ್ಲಿರುವ ತಂಡಗಳೆಂದರೆ ಭಾರತ, ಪಾಕಿಸ್ಥಾನ, ನ್ಯೂಜಿಲ್ಯಾಂಡ್‌ ಮತ್ತು ಅಫ್ಘಾನಿಸ್ಥಾನ. ಎ-2 ಮತ್ತು ಬಿ-1 ತಂಡಗಳು ಈ ವಿಭಾಗದಲ್ಲಿ ಸೆಣಸುವ ಅರ್ಹತೆ ಸಂಪಾದಿಸಲಿವೆ.

Bangladesh vs Scotland: ಟಿ20 ವಿಶ್ವಕಪ್ ಆರಂಭದ ಮೊದಲ ದಿನವೇ ಅಚ್ಚರಿ ಫಲಿತಾಂಶ: ಬಾಂಗ್ಲಾಕ್ಕೆ ಶಾಕ್ ನೀಡಿದ ಸ್ಕಾಟ್ಲೆಂಡ್

(ICC Mens T20 World Cup Today Match Sri Lanka vs Ireland and the Netherlands vs Namibia contest Group A)