ನೂತನ ಐಸಿಸಿ ಏಕದಿನ ರ್ಯಾಂಕಿಂಗ್ (ICC ODI Rankings) ಪಟ್ಟಿ ಬಿಡುಗಡೆಯಾಗಿದ್ದು, ಹಾಲಿ ಟಿ20 ಚಾಂಪಿಯನ್ ಇಂಗ್ಲೆಂಡ್ (England) ತಂಡ ತನ್ನ ನಂಬರ್ ಒನ್ ಪಟ್ವನ್ನು ನ್ಯೂಜಿಲೆಂಡ್ಗೆ ಬಿಟ್ಟುಕೊಟ್ಟಿದೆ. ಟಿ20 ವಿಶ್ವಕಪ್ ಮುಗಿದ ಬಳಿಕ ಆಸ್ಟ್ರೇಲಿಯಾ (Australia’) ವಿರುದ್ಧ ನಡೆದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಂಗ್ಲರು ಹೀನಾಯ ಸೋಲು ಅನುಭವಿಸಿದ್ದರು. ಈ ಸೋಲಿಗೆ ಭಾರಿ ಬೆಲೆ ತೆತ್ತಿರುವ ಇಂಗ್ಲೆಂಡ್ ತಂಡ ನಂ.1 ಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಟೀಂ ಇಂಡಿಯಾ (Team India) 3ನೇ ಸ್ಥಾನದಲ್ಲಿ ಭದ್ರವಾಗಿ ಕುಳಿತಿದೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮೊದಲು, ಇಂಗ್ಲೆಂಡ್ 119 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿ ಆರಾಮವಾಗಿ ಕುಳಿತುಕೊಂಡಿತು. ಆದರೆ ಸತತ ಮೂರು ಪಂದ್ಯಗಳ ಸೋತ ಇಂಗ್ಲೆಂಡ್ ತಂಡ ಆರು ಅಂಕಗಳನ್ನು ಕಳೆದುಕೊಂಡು 113 ರೇಟಿಂಗ್ ಪಾಯಿಂಟ್‌ಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಇಂಗ್ಲೆಂಡ್ಗಿಂತ ಒಂದು ಅಂಕ ಹೆಚ್ಚಿರುವ ನ್ಯೂಜಿಲೆಂಡ್ ತಂಡ 113 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೊದಲನೇ ಸ್ಥಾನಕ್ಕೇರಿದೆ.
ಇದನ್ನೂ ಓದಿ: ರೊನಾಲ್ಡೊ, ನೇಮರ್ ಅಖಾಡಕ್ಕೆ, 10 ಗಂಟೆಗಳಲ್ಲಿ ಬರೋಬ್ಬರಿ 4 ಪಂದ್ಯಗಳು! ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಆಸ್ಟ್ರೇಲಿಯಕ್ಕೂ ಲಾಭ
ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಕ್ಲೀನ್ ಸ್ವೀಪ್ ಮಾಡಿರುವ ಆಸ್ಟ್ರೇಲಿಯಾ ಕೂಡ ಏಕದಿನ ಶ್ರೇಯಾಂಕದಲ್ಲಿ ಬಂಪರ್ ಲಾಭ ಪಡೆದಿದ್ದು, 107 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದ ಪಾಕಿಸ್ತಾನವನ್ನು ಹಿಂದಿಕ್ಕಿ 112 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಏರಿದೆ. ಇದರ ಫಲವಾಗಿ ಭಾರತ ಮತ್ತು ಆಸ್ಟ್ರೇಲಿಯಾ ಈಗ ರೇಟಿಂಗ್ ಪಾಯಿಂಟ್‌ಗಳಲ್ಲಿ ಸಮಬಲ ಸಾಧಿಸಿದ್ದು, ಭಾರತ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ.
ಭಾರತಕ್ಕೆ ನಂ.1 ಆಗುವ ಅವಕಾಶ
ಇನ್ನು ಟೀಂ ಇಂಡಿಯಾಕ್ಕೆ ಮೊದಲನೇ ಸ್ಥಾನಕ್ಕೇರುವ ಅವಕಾಶವಿದ್ದು, ಇದಕ್ಕಾಗಿ ನ.25ರಿಂದ ಆರಂಭವಾಗುವ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಧವನ್ ಪಡೆ ಗೆಲ್ಲಬೇಕಿದೆ. ಸದ್ಯ 113 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೊದಲನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡವನ್ನು ಮೂರು ಪಂದ್ಯಗಳಲ್ಲಿ ಮಣಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾದರೆ 6 ಅಂಕಗಳನ್ನು ಕಲೆಹಾಕುವುದರೊಂದಿಗೆ ಒಟ್ಟು 118 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೊದಲನೇ ಸ್ಥಾನಕ್ಕೆ ಏರಲಿದೆ.
112 ರೇಟಿಂಗ್ ಅಂಕಗಳು ಮತ್ತು ಒಟ್ಟು 3802 ಅಂಕಗಳೊಂದಿಗೆ ಭಾರತ ಮೂರನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 112 ಮತ್ತು 3572 ಒಟ್ಟು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇದರ ಹೊರತಾಗಿಯೂ ಇಂಗ್ಲೆಂಡ್ ತಂಡಕ್ಕೆ ಮೊದಲ ಸ್ಥಾನ ಪಡೆಯುವ ಅವಕಾಶವಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಜನವರಿ 2023 ರಲ್ಲಿ ನಡೆಯುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಗೆಲ್ಲುವ ಮೂಲಕ ತನ್ನ ಮೊದಲ ಸ್ಥಾನವನ್ನು ಮತ್ತೆ ಅಲಂಕರಿಸಬಹುದಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:32 am, Thu, 24 November 22