AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC Rankings: ಕಳೆದ ವಾರ ಟಾಪ್ 5 ರೊಳಗಿದ್ದ ರೋಹಿತ್, ಕೊಹ್ಲಿ ಹೆಸರು ಇದ್ದಕ್ಕಿದ್ದಂತೆ ನಾಪತ್ತೆ..!

ICC Rankings: ಐಸಿಸಿ ಹೊಸದಾಗಿ ಬಿಡುಗಡೆ ಮಾಡಿದ ಏಕದಿನ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಹೆಸರುಗಳು ಕಾಣೆಯಾಗಿವೆ. ಇದು ತಾಂತ್ರಿಕ ದೋಷವಾಗಿರಬಹುದು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಐಸಿಸಿ ನಿಯಮಗಳ ಪ್ರಕಾರ, 9-12 ತಿಂಗಳ ಕಾಲ ಪಂದ್ಯ ಆಡದಿದ್ದರೆ ಮಾತ್ರ ಶ್ರೇಯಾಂಕದಿಂದ ಹೊರಗುಳಿಯಲಾಗುತ್ತದೆ. ಆದರೆ ಇಬ್ಬರೂ ಇತ್ತೀಚೆಗೆ ಪಂದ್ಯಗಳನ್ನು ಆಡಿದ್ದಾರೆ. ಐಸಿಸಿ ಈ ತಪ್ಪನ್ನು ಶೀಘ್ರದಲ್ಲೇ ಸರಿಪಡಿಸುವ ನಿರೀಕ್ಷೆಯಿದೆ.

ICC Rankings: ಕಳೆದ ವಾರ ಟಾಪ್ 5 ರೊಳಗಿದ್ದ ರೋಹಿತ್, ಕೊಹ್ಲಿ ಹೆಸರು ಇದ್ದಕ್ಕಿದ್ದಂತೆ ನಾಪತ್ತೆ..!
Rohit, Kohli
ಪೃಥ್ವಿಶಂಕರ
|

Updated on:Aug 20, 2025 | 4:28 PM

Share

ಐಸಿಸಿ, ಏಕದಿನ ಬ್ಯಾಟ್ಸ್‌ಮನ್‌ಗಳ ನೂತನ ರ್ಯಾಂಕಿಂಗ್ ಪಟ್ಟಿಯನ್ನು (ICC ODI Rankings) ಪ್ರಕಟಿಸಿದೆ. ಇದರಲ್ಲಿ ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಹೆಸರು ಈ ಪಟ್ಟಿಯಿಂದ ಕಾಣೆಯಾಗಿರುವುದು. ವಾಸ್ತವವಾಗಿ ಈ ಇಬ್ಬರು ಆಟಗಾರರು ಇತ್ತೀಚಿನ ಐಸಿಸಿ ರ್ಯಾಂಕಿಂಗ್​ನಿಂದ ಹೊರಗುಳಿದಿಲ್ಲ, ಬದಲಿಗೆ ಕಣ್ಮರೆಯಾಗಿದ್ದಾರೆ. ಕಳೆದ ವಾರ ಐಸಿಸಿ ಬಿಡುಗಡೆ ಮಾಡಿದ್ದ ಏಕದಿನ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಟಾಪ್ 5 ರಲ್ಲಿ ಸ್ಥಾನ ಪಡೆದಿದ್ದರು. ಆದರೆ, ಹೊಸ ಶ್ರೇಯಾಂಕ ಪಟ್ಟಿಯಲ್ಲಿ ಇವರಿಬ್ಬರ ಹೆಸರು ನಾಪತ್ತೆಯಾಗಿದೆ.

ಕೊಹ್ಲಿ, ರೋಹಿತ್ ಹೆಸರು ನಾಪತ್ತೆ

ಕಳೆದ ವಾರದ ಏಕದಿನ ಶ್ರೇಯಾಂಕದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಟಾಪ್ 5 ರಲ್ಲಿದ್ದರು. ರೋಹಿತ್ ಶರ್ಮಾ 756 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ ಕೂಡ 736 ರೇಟಿಂಗ್ ಅಂಕಗಳೊಂದಿಗೆ 4 ನೇ ಸ್ಥಾನದಲ್ಲಿದ್ದರು. ಆದರೆ ಆಗಸ್ಟ್ 19 ರಂದು ಹೊರಬಂದ ಶ್ರೇಯಾಂಕದಲ್ಲಿ, ಈ ಇಬ್ಬರು ಆಟಗಾರರು ಟಾಪ್ 10 ರೊಳಗೂ ಕಾಣಿಸಿಕೊಂಡಿಲ್ಲ.

ಹೆಸರು ಕಾಣದಿರಲು ಕಾರಣವೇನು?

ಈಗ ಪ್ರಶ್ನೆ ಏನೆಂದರೆ ರೋಹಿತ್ ಮತ್ತು ವಿರಾಟ್ ಐಸಿಸಿ ಏಕದಿನ ಶ್ರೇಯಾಂಕದಿಂದ ಹಠಾತ್ತನೆ ಹೊರಬಿದ್ದಿರುವುದಕ್ಕೆ ಕಾರಣವೇನು? ಇದರ ಹಿಂದೆ ಯಾವುದೇ ನಿಯಮವಿದೆಯೇ ಅಥವಾ ಇದು ಐಸಿಸಿಯ ತಪ್ಪೇ?. ಮೊದಲನೆಯದಾಗಿ, ಐಸಿಸಿ ಶ್ರೇಯಾಂಕ ನಿಯಮಗಳ ಪ್ರಕಾರ, ಒಬ್ಬ ಆಟಗಾರ ನಿವೃತ್ತರಾಗಿದ್ದರೆ ಅಥವಾ 9-12 ತಿಂಗಳೊಳಗೆ ಯಾವುದೇ ಏಕದಿನ ಪಂದ್ಯವನ್ನು ಆಡದಿದ್ದರೆ ಮಾತ್ರ ಏಕದಿನ ಶ್ರೇಯಾಂಕದ ಟಾಪ್ 100 ರಲ್ಲಿ ಸ್ಥಾನ ಪಡೆಯುವುದಿಲ್ಲ. ಆದರೆ, ರೋಹಿತ್ ಮತ್ತು ವಿರಾಟ್​ಗೆ ಈ ನಿಯಮ ಅನ್ವಯವಾಗುವುದಿಲ್ಲ. ಏಕೆಂದರೆ ಇಬ್ಬರೂ ಈ ವರ್ಷದ ಮಾರ್ಚ್‌ನಲ್ಲಿ ಏಕದಿನ ಪಂದ್ಯಗಳನ್ನು ಆಡಿದ್ದರು. ಇಬ್ಬರೂ ಆಟಗಾರರು ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ಕೊನೆಯ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ ಆಡಿದ್ದರು. ಅಂದರೆ, ಅವರು ಕೊನೆಯ ಏಕದಿನ ಪಂದ್ಯವನ್ನು ಆಡಿ ಕೇವಲ 6 ತಿಂಗಳುಗಳಾಗಿವೆ. ಇನ್ನು ಎರಡನೇಯಾದಾಗಿ ಇವರಿಬ್ಬರೂ ಟಿ20 ಹಾಗೂ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆಯೇ ಹೊರತು, ಪೂರ್ಣವಾಗಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿಲ್ಲ.

ಹೀಗಿದ್ದಾಗಲೂ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಹೆಸರು ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಕಾಣೆಯಾಗಲು ಕಾರಣವೇನಿರಬಹುದು ಎಂಬುದನ್ನು ಹುಡುಕಿದಾಗ, ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಇದರ ಹಿಂದಿನ ಕಾರಣ ನಿಯಮವಲ್ಲ, ಬದಲಾಗಿ ತಾಂತ್ರಿಕ ದೋಷವಾಗಿರಬಹುದು. ಹೀಗಾಗಿ ಐಸಿಸಿ ಶೀಘ್ರದಲ್ಲೇ ತನ್ನಿಂದಾಗಿರುವ ತಪ್ಪನ್ನು ಸರಿಪಡಿಸಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Wed, 20 August 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ