ಐಸಿಸಿ ಏಕದಿನ ಬ್ಯಾಟರ್ಗಳ ನೂತನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಹೊಸ ರ‍್ಯಾಂಕಿಂಗ್ ಪಟ್ಟಿಯಲ್ಲಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ಟೀಮ್ ಇಂಡಿಯಾದ ಯುವ ಬ್ಯಾಟರ್ ಶುಭ್ಮನ್ ಗಿಲ್ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಟಾಪ್-5 ಪಟ್ಟಿಯಲ್ಲಿ ಶುಭ್ಮನ್ ಗಿಲ್ ಅವರನ್ನು ಹೊರತುಪಡಿಸಿ ಭಾರತದ ಬೇರೆ ಯಾವುದೇ ಬ್ಯಾಟರ್ ಸ್ಥಾನ ಪಡೆದಿಲ್ಲ. ಹಾಗೆಯೇ ಅಗ್ರ ಹತ್ತರಲ್ಲಿ ವಿರಾಟ್ ಕೊಹ್ಲಿ 9ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಏಷ್ಯಾಕಪ್ನಲ್ಲಿ ಶ್ರೇಯಾಂಕ ಬದಲಾವಣೆ:
ಏಷ್ಯಾಕಪ್ ಆರಂಭಕ್ಕೆ ಇನ್ನು ವಾರ ಮಾತ್ರ ಉಳಿದಿದೆ. ಹೀಗಾಗಿ ಮುಂದಿನ ಶ್ರೇಯಾಂಕದಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆ ಹೆಚ್ಚು. ಏಕೆಂದರೆ ಅಗ್ರ ಹತ್ತರಲ್ಲಿ ಏಷ್ಯಾದ ಐವರು ಬ್ಯಾಟರ್ಗಳು ಕಾಣಿಸಿಕೊಂಡಿದ್ದಾರೆ.
ಇವರಲ್ಲಿ ಪಾಕ್ನ ಬಾಬರ್ ಆಝಂ ಅಗ್ರಸ್ಥಾನದಲ್ಲಿದ್ದರೆ, ಟೀಮ್ ಇಂಡಿಯಾದ ಶುಭ್ಮನ್ ಗಿಲ್ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ. ಇನ್ನು ಪಾಕಿಸ್ತಾನದ ಇಮಾಮ್ ಉಲ್ ಹಕ್ ಹಾಗೂ ಫಖರ್ ಝಮಾನ್ ಕ್ರಮವಾಗಿ 3ನೇ ಮತ್ತು 5ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ 9ನೇ ಸ್ಥಾನದಲ್ಲಿದ್ದಾರೆ.
ಹೀಗಾಗಿ ಏಷ್ಯಾಕಪ್ ಮುಕ್ತಾಯದೊಂದಿಗೆ ಐವರು ಬ್ಯಾಟರ್ಗಳ ಶ್ರೇಯಾಂಕದಲ್ಲಿ ಮಹತ್ವದ ಬದಲಾವಣೆಯಂತು ಕಂಡು ಬರಲಿದೆ. ಹಾಗೆಯೇ ಕೆಲ ಆಟಗಾರರು ಟಾಪ್-10 ಗೆ ಎಂಟ್ರಿ ಕೊಡಬಹುದು.
ಐಸಿಸಿ ನೂತನ ಶ್ರೇಯಾಂಕ ಪಟ್ಟಿ:
ಇದನ್ನೂ ಓದಿ: RCB ಯಿಂದ ಇಬ್ಬರು, CSK ಯಿಂದ ಒಬ್ಬರು: ತಂಡದಲ್ಲಿ ಮುಂಬೈ ಅವರದ್ದೇ ದರ್ಬಾರು..!
ಏಷ್ಯಾಕಪ್ ಯಾವಾಗ ಶುರು?
ಈ ಬಾರಿಯ ಏಷ್ಯಾಕಪ್ ಆಗಸ್ಟ್ 30 ರಿಂದ ಶುರುವಾಗಲಿದೆ. ಏಕದಿನ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಸೆಣಸಲಿದೆ. ಇನ್ನು ಸೆಪ್ಟೆಂಬರ್ 2 ರಂದು ಪಾಕಿಸ್ತಾನ್ ತಂಡವನ್ನು ಎದುರಿಸುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಹಾಗೆಯೇ ಫೈನಲ್ ಪಂದ್ಯವು ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ನಡೆಯಲಿದೆ.