
ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ (ICC ODI World Cup) ಇಂದು ಎರಡು ಪಂದ್ಯಗಳಲ್ಲಿ ಆಯೋಜಿಸಲಾಗಿದೆ. ಲಖನೌದ ಭಾರತ್ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನ ಸ್ಟೇಡಿಯಂನಲ್ಲಿ ಬೆಳಗ್ಗೆ 10:30ಕ್ಕೆ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ಸ್ಕಾಟ್ ಎಡ್ವರ್ಡ್ಸ್ ನಾಯಕತ್ವದ ನೆದರ್ಲೆಂಡ್ಸ್ ಮತ್ತು ಕುಸಲ್ ಮೆಂಡಿಸ್ ನೇತೃತ್ವದ ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ ಇಂಗ್ಲೆಂಡ್ ಹಾಗೂ ಟೆಂಬಾ ಬವುಮಾ ಅವರ ದಕ್ಷಿಣ ಆಫ್ರಿಕಾ ಟೀಮ್ ಸೆಣೆಸಾಟ ನಡೆಸಲಿದೆ.
ನೆದರ್ಲೆಂಡ್ಸ್ ತಂಡ ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನೀಡಿದ ಪ್ರದರ್ಶನ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇಲ್ಲಿ ಡಚ್ಚರು 38 ರನ್ಗಳಿಂದ ಗೆದ್ದು ಬೀಗಿದ್ದರು. ಟೂರ್ನಿಯಲ್ಲಿ ಒಂದೇ ಒಂದು ಗೆಲುವು ಕಾಣದ ಲಂಕಾ ವಿರುದ್ಧ ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ನೋಡಬೇಕಿದೆ. ಏಷ್ಯಾಕಪ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಸಿಂಹಳೀಯರು ವಿಶ್ವಕಪ್ನಲ್ಲಿ ಮಂಕಾಗಿದ್ದಾರೆ. ಜೊತೆಗೆ ದಸುನ್ ಶನಕಾ, ಹಸರಂಗ ಅಂತಹ ಸ್ಟಾರ್ ಆಟಗಾರರ ಅಲಭ್ಯತೆ ಎದ್ದು ಕಾಣುತ್ತಿದೆ. ನೆದರ್ಲೆಂಡ್ಸ್ ಎರಡನೇ ಗೆಲುವಿನ ಮೇಲೆ ಕಣ್ಣಿಟ್ಟಿದ್ದರೆ ಲಂಕಾನ್ನರು ಖಾತೆ ತೆರೆಯುವ ಪ್ಲಾನ್ನಲ್ಲಿದ್ದಾರೆ.
Aus vs Pak ICC World Cup Highlights: ಆಸೀಸ್ ಸಾಂಘಿಕ ಆಟಕ್ಕೆ ಮಣಿದ ಪಾಕಿಸ್ತಾನ
ನೆದರ್ಲೆಂಡ್ಸ್ ವಿರುದ್ಧ ಸೋತು ಮುಖಭಂಗಕ್ಕೆ ಒಳಗಾಗಿರುವ ಆಫ್ರಿಕಾ ಪುಟಿದೇಳಲು ನೋಡುತ್ತಿದೆ. ಹೀಗಿದ್ದರೂ ಪಾಯಿಂಟ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿದೆ. ತಂಡದಲ್ಲಿ ಸ್ಟಾರ್ ಅನುಭವಿ ಆಟಗಾರರಿದ್ದಾರೆ. ಮೊದಲ ಎರಡು ಪಂದ್ಯದಲ್ಲಿ ಆಫ್ರಿಕಾ ಭರ್ಜರಿ ಪ್ರದರ್ಶನ ತೋರಿತ್ತು. ಅದೇ ಲಯದಲ್ಲಿ ಆಟವಾಡಬೇಕು. ಇತ್ತ ಹಾಲಿ ಚಾಂಪಿಯನ್ ಇಂಗ್ಲೆಂಡ್ ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಸೋತಿದೆ. ಸಂಘಟಿತ ಪ್ರದರ್ಶನ ನೀಡುವಲ್ಲಿ ತಂಡ ಎಡವುತ್ತಿದೆ. ಬಟ್ಲರ್ ನಾಯಕತ್ವ ಸದ್ದು ಮಾಡುತ್ತಿಲ್ಲ. ಹೀಗಾಗಿ ಎರಡು ಬಲಿಷ್ಠ ತಂಡಗಳ ನಡುವಣ ಕಾದಾಟದ ಮೇಲೆ ಎಲ್ಲರ ಕಣ್ಣಿದೆ.
ನೆದರ್ಲೆಂಡ್ಸ್ ತಂಡ: ವಿಕ್ರಂಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಸೈಬ್ರಾಂಡ್ ಎಂಗೆಲ್ಬ್ರೆಕ್ಟ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ರಿಯಾನ್ ಕ್ಲೈನ್, ಆರ್ಯನ್ ದತ್, ಪಾಲ್ ವಾನ್ ಮೀಕೆರೆನ್, ವೆಸ್ಲಿ ಬೀಕ್, ಸಾಕಿಬ್ ಜುಲ್ಫಿಕರ್, ಶರೀಜ್ ಅಹ್ಮದ್.
ಶ್ರೀಲಂಕಾ ತಂಡ: ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಕುಸಾಲ್ ಪೆರೇರಾ, ಧನಂಜಯ ಡಿ ಸಿಲ್ವಾ, ಚಾಮಿಕಾ ಕರುಣಾರತ್ನ, ಕಸುನ್ ರಜಿತ, ಲಹಿರು ಕುಮಾರ, ದುನಿತ್ ವೆಲ್ಲಲಾಗೆ, ದುಶನ್ ಹೇಮಂತ, ದಿಲ್ಶಾನ್ ಮದುಶಾಂಕ, ಮಥೀಶ ಪತಿರಣ, ಮಹೇಶ ತೀಕ್ಷಣ.
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡುಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ, ಲಿಜಾಡ್ ವಿಲಿಯಮ್ಸ್ ಹೆಂಡ್ರಿಕ್ಸ್, ಆಂಡಿಲೆ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ.
ಇಂಗ್ಲೆಂಡ್ ತಂಡ: ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟೋಪ್ಲಿ, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಮೊಯಿನ್ ಅಲಿ, ಗಸ್ ಅಟ್ಕಿನ್ಸನ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ