Sign In

By signing in or creating an account, you agree with Associated Broadcasting Company's Terms & Conditions and Privacy Policy.

SA vs AUS, Semi Final: ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಸೆಮಿಫೈನಲ್​ನಲ್ಲಿ ಯಾವ ತಂಡಕ್ಕೆ ಗೆಲುವು?: ಇಲ್ಲಿದೆ ನೋಡಿ ಭವಿಷ್ಯ

ICC ODI World Cup Semi Final 2 South Africa vs Australia: ತಮ್ಮ ಆರಂಭಿಕ ಎರಡು ಪಂದ್ಯಗಳಲ್ಲಿ ಸೋತ ನಂತರ, ಆಸ್ಟ್ರೇಲಿಯಾ ಕಮ್​ಬ್ಯಾಕ್ ಮಾಡಿದ್ದು ಅದ್ಭುತವಾಗಿತ್ತು. ಕಾಂಗರೂ ಪಡೆ ನಾಕೌಟ್ ಅಥವಾ ಮಹತ್ವದ ಪಂದ್ಯ ಎಂದು ಬಂದಾಗ ಗೆಲುವು ಸಾಧಿಸಿದ ದಾಖಲೆ ಹೆಚ್ಚಿದೆ. ಅಲ್ಲದೆ ಇದು ಕಮಿನ್ಸ್ ಪಡೆಗೆ ಸೇಡಿನ ಪಂದ್ಯ ಕೂಡ ಹೌದು.

SA vs AUS, Semi Final: ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಸೆಮಿಫೈನಲ್​ನಲ್ಲಿ ಯಾವ ತಂಡಕ್ಕೆ ಗೆಲುವು?: ಇಲ್ಲಿದೆ ನೋಡಿ ಭವಿಷ್ಯ
SA vs AUS (1)
Follow us
Vinay Bhat
|

Updated on: Nov 16, 2023 | 2:12 PM

ಐಸಿಸಿ ಏಕದಿನ ವಿಶ್ವಕಪ್ 2023ರ ಎರಡನೇ ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ (South Africa vs Australia) ತಂಡಗಳು ಸೆಣೆಸಾಟ ನಡೆಸುತ್ತಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ರಿಕಾ ನಾಯಕ ಟೆಂಬಾ ಬವುಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಎರಡು ಬಲಿಷ್ಠ ತಂಡಗಳ ನಡುವಣ ಕಾದಾಟ ಸಾಕಷ್ಟು ಕುತೂಹಲ ಕೆರಳಿಸಿದ್ದು, ಯಾರಿಗೆ ಗೆಲುವು ಎಂಬುದು ನೋಡಬೇಕಿದೆ. ಆದರೆ, ಹಿಂದಿನ ಪ್ರದರ್ಶನವನ್ನೆಲ್ಲ ಗಮನಿಸಿದರೆ ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲ್ಲುವ ನೆಚ್ಚಿನ ತಂಡವಾಗಿದೆ. ಇದಕ್ಕೆ ಕಾರಣ ಕೂಡ ಇದೆ.

ತಮ್ಮ ಆರಂಭಿಕ ಎರಡು ಪಂದ್ಯಗಳಲ್ಲಿ ಸೋತ ನಂತರ, ಆಸ್ಟ್ರೇಲಿಯಾ ಕಮ್​ಬ್ಯಾಕ್ ಮಾಡಿದ್ದು ಅದ್ಭುತವಾಗಿತ್ತು. ಕಾಂಗರೂ ಪಡೆ ನಾಕೌಟ್ ಅಥವಾ ಮಹತ್ವದ ಪಂದ್ಯ ಎಂದು ಬಂದಾಗ ಗೆಲುವು ಸಾಧಿಸಿದ ದಾಖಲೆ ಹೆಚ್ಚಿದೆ. ಅಲ್ಲದೆ ಇದು ಕಮಿನ್ಸ್ ಪಡೆಗೆ ಸೇಡಿನ ಪಂದ್ಯ ಕೂಡ ಆಗಿದ್ದು, ಲೀಗ್ ಹಂತದಲ್ಲಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 134 ರನ್‌ಗಳಿಂದ ಸೋತಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ