SA vs AUS, ODI WC Semi Final: ಫೈನಲ್ಗೇರಿದ ಆಸ್ಟ್ರೇಲಿಯಾ
SA vs AUS ICC Men’s ODI world cup: ಈ ಗೆಲುವಿನೊಂದಿಗೆ ಫೈನಲ್ಗೆ ಪ್ರವೇಶಿಸಿರುವ ಆಸ್ಟ್ರೇಲಿಯಾ ತಂಡವು ನವೆಂಬರ್ 19 ರಂದು ಅಹಮದಾಬಾದ್ನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯಲಿದೆ.

ಏಕದಿನ ವಿಶ್ವಕಪ್ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ತಂಡ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್ನ ಫೈನಲ್ಗೇರಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡ 49.4 ಓವರ್ಗಳಲ್ಲಿ 212 ರನ್ಗಳಿಸಿ ಆಲೌಟ್ ಆಯಿತು.
213 ರನ್ಗಳ ಸುಲಭ ಗುರಿ ಪಡೆದ ಆಸ್ಟ್ರೇಲಿಯಾ ತಂಡವು 193 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದಾಗ್ಯೂ ಅಂತಿಮ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡ 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಫೈನಲ್ಗೆ ಪ್ರವೇಶಿಸಿರುವ ಆಸ್ಟ್ರೇಲಿಯಾ ತಂಡವು ನವೆಂಬರ್ 19 ರಂದು ಅಹಮದಾಬಾದ್ನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯಲಿದೆ.
ಏಕದಿನ ಕ್ರಿಕೆಟ್ನಲ್ಲಿ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು 110 ಬಾರಿ ಮುಖಾಮುಖಿಯಾಗಿವೆ. ಈ ವೇಳೆ 55 ಪಂದ್ಯಗಳಲ್ಲಿ ಸೌತ್ ಆಫ್ರಿಕಾ ತಂಡ ಜಯ ಸಾಧಿಸಿದರೆ, 51 ಮ್ಯಾಚ್ಗಳಲ್ಲಿ ಆಸ್ಟ್ರೇಲಿಯಾ ಗೆಲುವು ದಾಖಲಿಸಿದೆ. ಇನ್ನು 3 ಮ್ಯಾಚ್ಗಳು ಕಾರಣಾಂತರಗಳಿಂದ ರದ್ದಾದರೆ, 1 ಪಂದ್ಯ ಟೈ ಆಗಿತ್ತು.
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಜೆರಾಲ್ಡ್ ಕೊಯೆಟ್ಜಿ, ಕಗಿಸೊ ರಬಾಡ, ತಬ್ರೇಝ್ ಶಮ್ಸಿ.
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ, ಜೋಶ್ ಹ್ಯಾಝಲ್‌ವುಡ್.
LIVE Cricket Score & Updates
-
SA vs AUS, ODI WC Semi Final Live Score: ಆಸ್ಟ್ರೇಲಿಯಾಗೆ ರೋಚಕ ಜಯ
ಸೌತ್ ಆಫ್ರಿಕಾ ವಿರುದ್ಧ 3 ವಿಕೆಟ್ಗಳ ರೋಚಕ ಜಯ ಸಾಧಿಸಿ ಫೈನಲ್ಗೆ ಪ್ರವೇಶಿಸಿದ ಆಸ್ಟ್ರೇಲಿಯಾ ತಂಡ.
ಸೌತ್ ಆಫ್ರಿಕಾ– 212 (49.4)
ಆಸ್ಟ್ರೇಲಿಯಾ– 215/7 (47.2)
ನವೆಂಬರ್ 19 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ಮುಖಾಮುಖಿ.
-
SA vs AUS, ODI WC Semi Final Live Score: 45 ಓವರ್ಗಳು ಮುಕ್ತಾಯ
45 ಓವರ್ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 206 ರನ್ಗಳು.
ಕೊನೆಯ ಐದು ಓವರ್ಗಳಲ್ಲಿ ಆಸ್ಟ್ರೇಲಿಯಾಗೆ ಕೇವಲ 7 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್.
AUS 206/7 (45)
3 ವಿಕೆಟ್ ಪಡೆದರೆ ಸೌತ್ ಆಫ್ರಿಕಾ ಫೈನಲ್ಗೆ…ರೋಚಕ ಘಟ್ಟದಲ್ಲಿ 2ನೇ ಸೆಮಿಫೈನಲ್.
-
-
SA vs AUS, ODI WC Semi Final Live Score: 9 ರನ್ಗಳ ಅವಶ್ಯಕತೆ
ಆಸ್ಟ್ರೇಲಿಯಾ ತಂಡದ ಗೆಲುವಿಗೆ ಕೇವಲ 9 ರನ್ಗಳ ಅವಶ್ಯಕತೆ.
44 ಓವರ್ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 204 ರನ್ಗಳು.
ಕ್ರೀಸ್ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್.
AUS 204/7 (44)
-
SA vs AUS, ODI WC Semi Final Live Score: ಆಸ್ಟ್ರೇಲಿಯಾದ 7ನೇ ವಿಕೆಟ್ ಪತನ
ಜೆರಾಲ್ಡ್ ಕೊಯಟ್ಝಿ ಎಸೆದ 40ನೇ ಓವರ್ನ 5ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಜೋಶ್ ಇಂಗ್ಲಿಸ್.
49 ಎಸೆತಗಳಲ್ಲಿ 28 ರನ್ ಬಾರಿಸಿ ಔಟಾದ ಜೋಶ್ ಇಂಗ್ಲಿಸ್.
ಆಸ್ಟ್ರೇಲಿಯಾ ಗೆಲುವಿಗೆ 20 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್.
AUS 193/7 (40)
-
SA vs AUS, ODI WC Semi Final Live Score: 35 ಓವರ್ಗಳು ಮುಕ್ತಾಯ
35 ಓವರ್ಗಳಲ್ಲಿ 177 ರನ್ ಕಲೆಹಾಕಿದ ಆಸ್ಟ್ರೇಲಿಯಾ ಬ್ಯಾಟರ್ಗಳು.
6 ವಿಕೆಟ್ ಕಬಳಿಸಿರುವ ಸೌತ್ ಆಫ್ರಿಕಾ ಬೌಲರ್ಗಳು.
ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 90 ಎಸೆತಗಳಲ್ಲಿ 36 ರನ್ಗಳ ಅವಶ್ಯಕತೆ
ಕ್ರೀಸ್ ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್.
AUS 177/6 (35)
-
-
SA vs AUS, ODI WC Semi Final Live Score: ಆಸ್ಟ್ರೇಲಿಯಾದ 6ನೇ ವಿಕೆಟ್ ಪತನ
ಜೆರಾಲ್ಡ್ ಕೊಯಟ್ಝಿ ಎಸೆದ 34ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಸ್ಟೀವ್ ಸ್ಮಿತ್.
62 ಎಸೆತಗಳಲ್ಲಿ 30 ರನ್ ಬಾರಿಸಿ ಔಟಾದ ಸ್ಟೀವ್ ಸ್ಮಿತ್.
ಕ್ರೀಸ್ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್.
AUS 175/6 (34)
-
SA vs AUS, ODI WC Semi Final Live Score: ಗೆಲುವಿನತ್ತ ಆಸ್ಟ್ರೇಲಿಯಾ
33 ಓವರ್ಗಳಲ್ಲಿ 174 ರನ್ ಕಲೆಹಾಕಿದ ಆಸ್ಟ್ರೇಲಿಯಾ ತಂಡ.
ಇನ್ನು 17 ಓವರ್ಗಳಲ್ಲಿ ಕೇವಲ 39 ರನ್ ಗಳ ಅವಶ್ಯಕತೆ.
ಸೌತ್ ಆಫ್ರಿಕಾ ಗೆಲ್ಲಬೇಕಿದ್ದರೆ 5 ವಿಕೆಟ್ಗಳನ್ನು ಪಡೆಯಬೇಕು.
ಕ್ರೀಸ್ ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್.
AUS 174/5 (33)
-
SA vs AUS, ODI WC Semi Final Live Score: 30 ಓವರ್ಗಳು ಮುಕ್ತಾಯ
30 ಓವರ್ಗಳ ಮುಕ್ತಾಯದ ವೇಳೆಗೆ 162 ರನ್ ಕಲೆಹಾಕಿದ ಆಸ್ಟ್ರೇಲಿಯಾ ತಂಡ.
5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಸೌತ್ ಆಫ್ರಿಕಾ ಬೌಲರ್ಗಳು.
ಕ್ರೀಸ್ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್.
AUS 162/5 (30)
ಆಸ್ಟ್ರೇಲಿಯಾ ಗೆಲುವಿಗೆ 51 ರನ್ಗಳ ಅವಶ್ಯಕತೆ.
-
SA vs AUS, ODI WC Semi Final Live Score: ಆಸ್ಟ್ರೇಲಿಯಾದ 5ನೇ ವಿಕೆಟ್ ಪತನ
ತಬ್ರೇಝ್ ಶಂಸಿ ಎಸೆದ 24ನೇ ಓವರ್ನ 4ನೇ ಎಸೆತದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕ್ಲೀನ್ ಬೌಲ್ಡ್.
5 ಎಸೆತಗಳಲ್ಲಿ ಕೇವಲ 1 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಗ್ಲೆನ್ ಮ್ಯಾಕ್ಸ್‌ವೆಲ್.
ಕ್ರೀಸ್ನಲ್ಲಿ ಜೋಶ್ ಇಂಗ್ಲಿಸ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್.
AUS 140/5 (24)
-
SA vs AUS, ODI WC Semi Final Live Score: ಆಸ್ಟ್ರೇಲಿಯಾದ 4ನೇ ವಿಕೆಟ್ ಪತನ
ತಬ್ರೇಝ್ ಶಂಸಿ ಎಸೆದ 22ನೇ ಓವರ್ನ 5ನೇ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದ ಮಾರ್ನಸ್ ಲಾಬುಶೇನ್.
31 ಎಸೆತಗಳಲ್ಲಿ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮಾರ್ನಸ್ ಲಾಬುಶೇನ್.
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್.
AUS 133/4 (22)
-
SA vs AUS, ODI WC Semi Final Live Score: ಆಸ್ಟ್ರೇಲಿಯಾ ಉತ್ತಮ ಬ್ಯಾಟಿಂಗ್
21 ಓವರ್ಗಳ ಮುಕ್ತಾಯದ ವೇಳೆಗೆ 130 ರನ್ ಕಲೆಹಾಕಿದ ಆಸ್ಟ್ರೇಲಿಯಾ ತಂಡ.
3 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿರುವ ಸೌತ್ ಆಫ್ರಿಕಾ ಬೌಲರ್ಗಳು.
ಕ್ರೀಸ್ನಲ್ಲಿ ಮಾರ್ನಸ್ ಲಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್.
AUS 130/3 (21)
ಆಸ್ಟ್ರೇಲಿಯಾ ಗೆಲುವಿಗೆ ಕೇವಲ 83 ರನ್ಗಳ ಅವಶ್ಯಕತೆ.
-
SA vs AUS, ODI WC Semi Final Live Score: ಆಸ್ಟ್ರೇಲಿಯಾದ 3ನೇ ವಿಕೆಟ್ ಪತನ
ಕೇಶವ್ ಮಹಾರಾಜ್ ಎಸೆದ 15ನೇ ಓವರ್ನ ಮೊದಲ ಎಸೆತದಲ್ಲೇ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್.
48 ಎಸೆತಗಳಲ್ಲಿ 62 ರನ್ ಬಾರಿಸಿ ಔಟಾದ ಟ್ರಾವಿಸ್ ಹೆಡ್.
15 ಓವರ್ ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 109 ರನ್ಗಳು.
AUS 109/3 (15)
-
SA vs AUS, ODI WC Semi Final Live Score: ಅರ್ಧಶತಕ ಪೂರೈಸಿದ ಹೆಡ್
ಜೆರಾಲ್ಡ್ ಕೊಯಟ್ಝಿ ಎಸೆದ 12ನೇ ಓವರ್ನಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ ಟ್ರಾವಿಸ್ ಹೆಡ್.
ಈ ಫೋರ್ಗಳೊಂದಿಗೆ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಟ್ರಾವಿಸ್.
ಕ್ರೀಸ್ ನಲ್ಲಿ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್.
AUS 92/2 (12)
-
SA vs AUS, ODI WC Semi Final Live Score: 10 ಓವರ್ಗಳು ಮುಕ್ತಾಯ
10 ಓವರ್ಗಳ ಮುಕ್ತಾಯದ ವೇಳೆಗೆ 74 ರನ್ ಕಲೆಹಾಕಿದ ಆಸ್ಟ್ರೇಲಿಯಾ ತಂಡ.
2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಸೌತ್ ಆಫ್ರಿಕಾ ಬೌಲರ್ಗಳು.
ಕ್ರೀಸ್ನಲ್ಲಿ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್.
AUS 74/2 (10)
ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಔಟ್.
-
SA vs AUS, ODI WC Semi Final Live Score: ಆಸ್ಟ್ರೇಲಿಯಾದ 2ನೇ ವಿಕೆಟ್ ಪತನ
ಕಗಿಸೊ ರಬಾಡ ಎಸೆದ 8ನೇ ಓವರ್ನ 4ನೇ ಎಸೆತದಲ್ಲಿ ಫ್ರಂಟ್ ಫೀಲ್ಡರ್ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಿಡಿದ ಅದ್ಭುತ ಡೈವಿಂಗ್ ಕ್ಯಾಚ್ಗೆ ಬಲಿಯಾದ ಮಿಚೆಲ್ ಮಾರ್ಷ್ (0).
ಕ್ರೀಸ್ನಲ್ಲಿ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್.
AUS 61/2 (8)
-
SA vs AUS, ODI WC Semi Final Live Score: ಆಸ್ಟ್ರೇಲಿಯಾದ ಮೊದಲ ವಿಕೆಟ್ ಪತನ
ಐಡೆನ್ ಮಾರ್ಕ್ರಾಮ್ ಎಸೆದ 7ನೇ ಓವರ್ನ ಮೊದಲ ಎಸೆತದಲ್ಲೇ ಡೇವಿಡ್ ವಾರ್ನರ್ ಕ್ಲೀನ್ ಬೌಲ್ಡ್.
18 ಎಸೆತಗಳಲ್ಲಿ 29 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಡೇವಿಡ್ ವಾರ್ನರ್.
ಕ್ರೀಸ್ನಲ್ಲಿ ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್.
AUS 60/1 (7)
-
SA vs AUS, ODI WC Semi Final Live Score: 5 ಓವರ್ಗಳು ಮುಕ್ತಾಯ
ಮಾರ್ಕೊ ಯಾನ್ಸೆನ್ ಎಸೆದ 5ನೇ ಓವರ್ನ ಕೊನೆಯ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಬಾರಿಸಿದ ಡೇವಿಡ್ ವಾರ್ನರ್.
5 ಓವರ್ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 39 ರನ್ಗಳು.
ಕ್ರೀಸ್ನಲ್ಲಿ ಟ್ರಾವಿಸ್ ಹೆಡ್ ಹಾಗೂ ಡೇವಿಡ್ ವಾರ್ನರ್ ಬ್ಯಾಟಿಂಗ್.
AUS 39/0 (5)
-
SA vs AUS, ODI WC Semi Final Live Score: ಭರ್ಜರಿ ಸಿಕ್ಸ್ ಸಿಡಿಸಿದ ವಾರ್ನರ್
ಕಗಿಸೊ ರಬಾಡ ಎಸೆದ 4ನೇ ಓವರ್ನ 3ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಡೇವಿಡ್ ವಾರ್ನರ್.
ಕ್ರೀಸ್ನಲ್ಲಿ ಟ್ರಾವಿಸ್ ಹೆಡ್ ಹಾಗೂ ಡೇವಿಡ್ ವಾರ್ನರ್ ಬ್ಯಾಟಿಂಗ್.
AUS 24/0 (4)
ಆಸ್ಟ್ರೇಲಿಯಾಗೆ 213 ರನ್ಗಳ ಗುರಿ ನೀಡಿರುವ ಸೌತ್ ಆಫ್ರಿಕಾ.
-
SA vs AUS, ODI WC Semi Final Live Score: ಆಕರ್ಷಕ ಬೌಂಡರಿ
ಕಗಿಸೊ ರಬಾಡ ಎಸೆದ 2ನೇ ಓವರ್ನ 4ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಟ್ರಾವಿಸ್ ಹೆಡ್.
2 ಓವರ್ಗಳಲ್ಲಿ 10 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಟ್ರಾವಿಸ್ ಹೆಡ್ ಹಾಗೂ ಡೇವಿಡ್ ವಾರ್ನರ್ ಬ್ಯಾಟಿಂಗ್.
AUS 10/0 (2)
-
SA vs AUS, ODI WC Semi Final Live Score: ಆಸ್ಟ್ರೇಲಿಯಾ ಇನಿಂಗ್ಸ್ ಆರಂಭ
ಮಾರ್ಕೊ ಯಾನ್ಸೆನ್ ಎಸೆದ ಮೊದಲ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಟ್ರಾವಿಸ್ ಹೆಡ್.
ಕ್ರೀಸ್ನಲ್ಲಿ ಟ್ರಾವಿಸ್ ಹೆಡ್ ಹಾಗೂ ಡೇವಿಡ್ ವಾರ್ನರ್ ಬ್ಯಾಟಿಂಗ್.
AUS 5/0 (1)
ಆಸ್ಟ್ರೇಲಿಯಾಗೆ 213 ರನ್ಗಳ ಗುರಿ ನೀಡಿರುವ ಸೌತ್ ಆಫ್ರಿಕಾ.
-
SA vs AUS, ODI WC Semi Final Live Score: ಸೌತ್ ಆಫ್ರಿಕಾ ಇನಿಂಗ್ಸ್ ಅಂತ್ಯ
49.4 ಓವರ್ಗಳಲ್ಲಿ 212 ರನ್ ಕಲೆಹಾಕಿ ಆಲೌಟ್ ಆದ ಸೌತ್ ಆಫ್ರಿಕಾ ತಂಡ.
ಸೌತ್ ಆಫ್ರಿಕಾ ಪರ 101 ರನ್ ಬಾರಿಸಿ ಮಿಂಚಿದ ಎಡಗೈ ದಾಂಡಿಗ ಡೇವಿಡ್ ಮಿಲ್ಲರ್.
ಸೌತ್ ಆಫ್ರಿಕಾ– 212 (49.4)
ಆಸ್ಟ್ರೇಲಿಯಾ ತಂಡಕ್ಕೆ 213 ರನ್ಗಳ ಗುರಿ ನೀಡಿದ ಸೌತ್ ಆಫ್ರಿಕಾ.
-
SA vs AUS, ODI WC Semi Final Live Score: ಶತಕ ಸಿಡಿಸಿದ ಡೇವಿಡ್ ಮಿಲ್ಲರ್
ಪ್ಯಾಟ್ ಕಮಿನ್ಸ್ ಎಸೆದ 48ನೇ ಓವರ್ನ ಮೊದಲ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಸಿಡಿಸಿದ ಡೇವಿಡ್ ಮಿಲ್ಲರ್.
ಈ ಸಿಕ್ಸ್ನೊಂದಿಗೆ 115 ಎಸೆತಗಳಲ್ಲಿ ಶತಕ ಪೂರೈಸಿದ ಡೇವಿಡ್ ಮಿಲ್ಲರ್.
2ನೇ ಎಸೆತದಲ್ಲಿ ಮತ್ತೊಂದು ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಮಿಲ್ಲರ್ (101).
SA 203/9 (48)
-
SA vs AUS, ODI WC Semi Final Live Score: ಸೌತ್ ಆಫ್ರಿಕಾದ 8ನೇ ವಿಕೆಟ್ ಪತನ
ಮಿಚೆಲ್ ಸ್ಟಾರ್ಕ್ ಎಸೆದ 47ನೇ ಓವರ್ನ 2ನೇ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಕೇಶವ್ ಮಹಾರಾಜ್.
ಸೌತ್ ಆಫ್ರಿಕಾ ತಂಡದ 8ನೇ ವಿಕೆಟ್ ಪತನ.
ಕ್ರೀಸ್ನಲ್ಲಿ ಡೇವಿಡ್ ಮಿಲ್ಲರ್ ಹಾಗೂ ಕಗಿಸೊ ರಬಾಡ ಬ್ಯಾಟಿಂಗ್.
RSA 196/8 (47)
-
SA vs AUS, ODI WC Semi Final Live Score: ಸೌತ್ ಆಫ್ರಿಕಾದ 7ನೇ ವಿಕೆಟ್ ಪತನ
ಪ್ಯಾಟ್ ಕಮಿನ್ಸ್ ಎಸೆದ 44ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಜೆರಾಲ್ಡ್ ಕೊಯಟ್ಝಿ.
39 ಎಸೆತಗಳಲ್ಲಿ 19 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಜೆರಾಲ್ಡ್.
ಕ್ರೀಸ್ನಲ್ಲಿ ಡೇವಿಡ್ ಮಿಲ್ಲರ್ ಹಾಗೂ ಕೇಶವ್ ಮಹಾರಾಜ್ ಬ್ಯಾಟಿಂಗ್.
RSA 172/7 (44)
-
SA vs AUS, ODI WC Semi Final Live Score: 40 ಓವರ್ಗಳು ಮುಕ್ತಾಯ
40 ಓವರ್ಗಳ ಮುಕ್ತಾಯದ ವೇಳೆಗೆ 156 ರನ್ ಕಲೆಹಾಕಿದ ಸೌತ್ ಆಫ್ರಿಕಾ.
6 ವಿಕೆಟ್ ಕಬಳಿಸಿರುವ ಆಸ್ಟ್ರೇಲಿಯಾ ಬೌಲರ್ಗಳು.
ಕ್ರೀಸ್ನಲ್ಲಿ ಡೇವಿಡ್ ಮಿಲ್ಲರ್ ಹಾಗೂ ಜೆರಾಲ್ಡ್ ಕೊಯಟ್ಝಿ ಬ್ಯಾಟಿಂಗ್.
RSA 156/6 (40)
ಟೆಂಬಾ ಬವುಮಾ, ಕ್ವಿಂಟನ್ ಡಿಕಾಕ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್ ಹಾಗೂ ಮಾರ್ಕೊ ಯಾನ್ಸೆನ್ ಔಟ್.
-
SA vs AUS, ODI WC Semi Final Live Score: 150 ರನ್ ಪೂರೈಸಿದ ಸೌತ್ ಆಫ್ರಿಕಾ
ಮಿಚೆಲ್ ಸ್ಟಾರ್ಕ್ ಎಸೆದ 39ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಜೆರಾಲ್ಡ್ ಕೊಯಟ್ಝಿ.
ಈ ಫೋರ್ನೊಂದಿಗೆ 150 ರನ್ ಪೂರೈಸಿದ ಸೌತ್ ಆಫ್ರಿಕಾ ತಂಡ.
ಕ್ರೀಸ್ನಲ್ಲಿ ಡೇವಿಡ್ ಮಿಲ್ಲರ್ ಹಾಗೂ ಜೆರಾಲ್ಡ್ ಕೊಯಟ್ಝಿ ಬ್ಯಾಟಿಂಗ್.
SA 154/6 (39)
-
SA vs AUS, ODI WC Semi Final Live Score: ವೆಲ್ಕಂ ಬೌಂಡರಿ
ಟ್ರಾವಿಸ್ ಹೆಡ್ ಎಸೆದ 35ನೇ ಓವರ್ನ ಮೊದಲ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಫೋರ್ ಬಾರಿಸಿದ ಜೆರಾಲ್ಡ್ ಕೊಯಟ್ಝಿ.
35 ಓವರ್ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 134 ರನ್ಗಳು.
ಕ್ರೀಸ್ನಲ್ಲಿ ಡೇವಿಡ್ ಮಿಲ್ಲರ್ ಹಾಗೂ ಜೆರಾಲ್ಡ್ ಕೊಯಟ್ಝಿ ಬ್ಯಾಟಿಂಗ್.
SA 134/6 (35)
-
SA vs AUS, ODI WC Semi Final Live Score: ಅರ್ಧಶತಕ ಪೂರೈಸಿದ ಮಿಲ್ಲರ್
ಗ್ಲೆನ್ ಮ್ಯಾಕ್ಸ್‌ವೆಲ್ ಎಸೆದ 32ನೇ ಓವರ್ನ 3ನೇ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಫೋರ್ ಬಾರಿಸಿದ ಡೇವಿಡ್ ಮಿಲ್ಲರ್.
ಈ ಫೋರ್ನೊಂದಿಗೆ 70 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಡೇವಿಡ್ ಮಿಲ್ಲರ್.
ಕ್ರೀಸ್ನಲ್ಲಿ ಡೇವಿಡ್ ಮಿಲ್ಲರ್ ಹಾಗೂ ಜೆರಾಲ್ಡ್ ಕೊಯಟ್ಝಿ ಬ್ಯಾಟಿಂಗ್.
SA 125/6 (32)
-
SA vs AUS, ODI WC Semi Final Live Score: ಬ್ಯಾಕ್ ಟು ಬ್ಯಾಕ್ ವಿಕೆಟ್
ಟ್ರಾವಿಸ್ ಹೆಡ್ ಎಸೆದ 31ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಹೆನ್ರಿಕ್ ಕ್ಲಾಸೆನ್.
4ನೇ ಎಸೆತದಲ್ಲಿ ಕ್ಲಾಸೆನ್ ರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದ ಟ್ರಾವಿಸ್ ಹೆಡ್.
48 ಎಸೆತಗಳಲ್ಲಿ 47 ರನ್ ಬಾರಿಸಿ ಔಟಾದ ಹೆನ್ರಿಕ್ ಕ್ಲಾಸೆನ್.
5ನೇ ಎಸೆತದಲ್ಲಿ ಮಾರ್ಕೊ ಯಾನ್ಸೆನ್ (0) ಎಲ್ಬಿಡಬ್ಲ್ಯೂ ಔಟ್.
SA 119/6 (31)
-
SA vs AUS, ODI WC Semi Final Live Score: 30 ಓವರ್ಗಳು ಮುಕ್ತಾಯ
30 ಓವರ್ಗಳಲ್ಲಿ 111 ರನ್ ಕಲೆಹಾಕಿದ ಸೌತ್ ಆಫ್ರಿಕಾ ಬ್ಯಾಟರ್ಗಳು.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
5ನೇ ವಿಕೆಟ್ಗೆ 87 ರನ್ಗಳ ಜೊತೆಯಾಟವಾಡಿದ ಮಿಲ್ಲರ್-ಕ್ಲಾಸೆನ್ ಜೋಡಿ.
SA 111/4 (30)
ಟೆಂಬಾ ಬವುಮಾ, ಕ್ವಿಂಟನ್ ಡಿಕಾಕ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಐಡೆನ್ ಮಾರ್ಕ್ರಾಮ್ ಔಟ್.
-
SA vs AUS, ODI WC Semi Final Live Score: ಶತಕ ಪೂರೈಸಿದ ಸೌತ್ ಆಫ್ರಿಕಾ
28 ಓವರ್ಗಳಲ್ಲಿ ಶತಕ ಪೂರೈಸಿದ ಸೌತ್ ಆಫ್ರಿಕಾ ತಂಡ.
4 ವಿಕೆಟ್ ಕಬಳಿಸಿರುವ ಆಸ್ಟ್ರೇಲಿಯಾ ಬೌಲರ್ಗಳು.
97 ಎಸೆತಗಳಲ್ಲಿ 79 ರನ್ಗಳ ಜೊತೆಯಾಟದೊಂದಿಗೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ಹೆನ್ರಿಕ್ ಕಾಸ್ಲೆನ್ ಹಾಗೂ ಡೇವಿಡ್ ಮಿಲ್ಲರ್.
SA 100/4 (28)
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
-
SA vs AUS, ODI WC Semi Final Live Score: ಕ್ಲಾಸೆನ್ ಕ್ಲಾಸ್- ಡಬಲ್ ಸಿಕ್ಸ್
ಆ್ಯಡಂ ಝಂಪಾ ಎಸೆದ 27ನೇ ಓವರ್ನ 3ನೇ ಮತ್ತು 4ನೇ ಎಸೆತಗಳಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ಗಳನ್ನು ಸಿಡಿಸಿದ ಹೆನ್ರಿಕ್ ಕ್ಲಾಸೆನ್.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಉತ್ತಮ ಬ್ಯಾಟಿಂಗ್.
RSA 95/4 (27)
-
SA vs AUS, ODI WC Semi Final Live Score: 25 ಓವರ್ಗಳು ಮುಕ್ತಾಯ
25 ಓವರ್ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 79 ರನ್ಗಳು.
5ನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟದೊಂದಿಗೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಕ್ಲಾಸೆನ್-ಮಿಲ್ಲರ್.
ಮೊದಲ ಪವರ್ಪ್ಲೇನಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದ ಆಸ್ಟ್ರೇಲಿಯಾ ಬೌಲರ್ಗಳು.
RSA 79/4 (25)
ಟೆಂಬಾ ಬವುಮಾ, ಕ್ವಿಂಟನ್ ಡಿಕಾಕ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಐಡೆನ್ ಮಾರ್ಕ್ರಾಮ್ ಔಟ್.
-
SA vs AUS, ODI WC Semi Final Live Score: ಹೆನ್ರಿಕ್-ಮಿಲ್ಲರ್ ಉತ್ತಮ ಜೊತೆಯಾಟ
5ನೇ ವಿಕೆಟ್ಗೆ 47 ರನ್ಗಳ ಜೊತೆಯಾಟದೊಂದಿಗೆ ಸೌತ್ ಆಫ್ರಿಕಾ ತಂಡಕ್ಕೆ ಆಸರೆಯಾದ ಹೆನ್ರಿಕ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್.
23 ಓವರ್ಗಳ ಮುಕ್ತಾಯದ ವೇಳೆಗೆ 71 ರನ್ ಕಲೆಹಾಕಿದ ಸೌತ್ ಆಫ್ರಿಕಾ.
4 ವಿಕೆಟ್ ಕಬಳಿಸಿರುವ ಆಸ್ಟ್ರೇಲಿಯಾ ಬೌಲರ್ಗಳು.
RSA 71/4 (23)
-
SA vs AUS, ODI WC Semi Final Live Score: 20 ಓವರ್ಗಳು ಮುಕ್ತಾಯ
ಪ್ಯಾಟ್ ಕಮಿನ್ಸ್ ಎಸೆದ 20ನೇ ಓವರ್ನ 5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಡೇವಿಡ್ ಮಿಲ್ಲರ್.
20 ಓವರ್ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 64 ರನ್ಗಳು.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
RSA 67/4 (20)
-
SA vs AUS, ODI WC Semi Final Live Score: ಕಿಲ್ಲರ್ ಮಿಲ್ಲರ್
ಆ್ಯಡಂ ಝಂಪಾ ಎಸೆದ 19ನೇ ಓವರ್ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಡೇವಿಡ್ ಮಿಲ್ಲರ್.
ಬಿರುಸಿನ ಬ್ಯಾಟಿಂಗ್ಗೆ ಮುಂದಾದ ಸೌತ್ ಆಫ್ರಿಕಾದ ಎಡಗೈ ದಾಂಡಿಗ.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
SA 62/4 (19)
-
SA vs AUS, ODI WC Semi Final Live Score: ಅರ್ಧಶತಕ ಪೂರೈಸಿದ ಸೌತ್ ಆಫ್ರಿಕಾ
ಆ್ಯಡಂ ಝಂಪಾ ಎಸೆದ 17ನೇ ಓವರ್ನ 5ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಡೇವಿಡ್ ಮಿಲ್ಲರ್. ಇದು ಸೌತ್ ಆಫ್ರಿಕಾ ಇನಿಂಗ್ಸ್ನ ಮೊದಲ ಸಿಕ್ಸರ್.
ಈ ಸಿಕ್ಸ್ನೊಂದಿಗೆ ಅರ್ಧಶತಕ ಪೂರೈಸಿದ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
SA 55/4 (17)
-
SA vs AUS, ODI WC Semi Final Live Score: 15 ಓವರ್ಗಳು ಮುಕ್ತಾಯ
15 ಓವರ್ಗಳ ಮುಕ್ತಾಯದ ವೇಳೆಗೆ ಕೇವಲ 46 ರನ್ ಕಲೆಹಾಕಿದ ಸೌತ್ ಆಫ್ರಿಕಾ.
4 ವಿಕೆಟ್ ಕಬಳಿಸುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
SA 46/4 (15)
ಟೆಂಬಾ ಬವುಮಾ, ಕ್ವಿಂಟನ್ ಡಿಕಾಕ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಐಡೆನ್ ಮಾರ್ಕ್ರಾಮ್ ಔಟ್.
-
SA vs AUS, ODI WC Semi Final Live Score: ಮಳೆ ಸ್ಥಗಿತ: ಶ್ರೀಘ್ರದಲ್ಲೇ ಪಂದ್ಯ ಶುರು
ಈಡನ್ ಗಾರ್ಡನ್ಸ್ ಮೈದಾನದ ಸುತ್ತ ಮುತ್ತ ಮಳೆ ಸ್ಥಗಿತವಾಗಿದ್ದು, ಹೀಗಾಗಿ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯವು ಶೀಘ್ರದಲ್ಲೇ ಶುರುವಾಗಲಿದೆ.
ಸೌತ್ ಆಫ್ರಿಕಾ- 44/4 (14)
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಸೌತ್ ಆಫ್ರಿಕಾ.
-
SA vs AUS, ODI WC Semi Final Live Score: ಸೆಮಿಫೈನಲ್ ರೈನ್ ರೂಲ್ಸ್
- ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಮೀಸಲು ದಿನದಾಟವಿದೆ.
- ಇವತ್ತು ಮಳೆಯ ಕಾರಣ ಪಂದ್ಯ ನಡೆಯದಿದ್ದರೆ, ನಾಳೆ ಮ್ಯಾಚ್ ಮುಂದುವರೆಯಲಿದೆ.
- ಇಂದು ಯಾವ ಹಂತದಲ್ಲಿ ಪಂದ್ಯದ ಸ್ಥಗಿತವಾಗಿತ್ತೊ, ಅಲ್ಲಿಂದಲೇ ಮ್ಯಾಚ್ ಶುರುವಾಗಲಿದೆ.
- ಉಭಯ ತಂಡಗಳು ತಲಾ 20 ಓವರ್ಗಳನ್ನು ಬ್ಯಾಟಿಂಗ್ ಮಾಡಿದ್ದರೆ ಮಾತ್ರ ಡಕ್ವರ್ತ್ ಲೂಯಿಸ್ ನಿಯಮ ಅನ್ವಯಿಸಿ ಫಲಿತಾಂಶ ನಿರ್ಧರಿಸಲಾಗುತ್ತದೆ.
- ಮೀಸಲು ದಿನದಾಟದಲ್ಲೂ ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ, ಲೀಗ್ ಹಂತದ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಸೌತ್ ಆಫ್ರಿಕಾ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.
-
SA vs AUS, ODI WC Semi Final Live Score: ಮಳೆಯಿಂದಾಗಿ ಪಂದ್ಯ ಸ್ಥಗಿತ
ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ-ಆಸ್ಟ್ರೇಲಿಯಾ ನಡುವಣ 2ನೇ ಸೆಮಿಫೈನಲ್ ಪಂದ್ಯವನ್ನು ಮಳೆಯಿಂದಾಗಿ ಸ್ಥಗಿತಗೊಳಿಸಲಾಗಿದೆ.
14 ಓವರ್ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡ 4 ವಿಕೆಟ್ ಕಳೆದುಕೊಂಡು 44 ರನ್ ಕಲೆಹಾಕಿದೆ.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
RSA 44/4 (14)
-
SA vs AUS, ODI WC Semi Final Live Score: ಸೌತ್ ಆಫ್ರಿಕಾದ 4ನೇ ವಿಕೆಟ್ ಪತನ
ಜೋಶ್ ಹ್ಯಾಝಲ್‌ವುಡ್ ಎಸೆದ 12ನೇ ಓವರ್ನ 5ನೇ ಎಸೆತದಲ್ಲಿ ಸ್ಲಿಪ್ನಲ್ಲಿದ್ದ ಸ್ಟೀವ್ ಸ್ಮಿತ್ಗೆ ಕ್ಯಾಚ್ ನೀಡಿದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್.
31 ಎಸೆತಗಳಲ್ಲಿ 6 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
SA 28/4 (12)
-
SA vs AUS, ODI WC Semi Final Live Score: ಸೌತ್ ಆಫ್ರಿಕಾ 3ನೇ ವಿಕೆಟ್ ಪತನ
ಮಿಚೆಲ್ ಸ್ಟಾರ್ಕ್ ಎಸೆದ 11ನೇ ಓವರ್ನ 5ನೇ ಎಸೆತದಲ್ಲಿ ಡೇವಿಡ್ ವಾರ್ನರ್ಗೆ ಕ್ಯಾಚ್ ನೀಡಿದ ಐಡೆನ್ ಮಾರ್ಕ್ರಾಮ್.
20 ಎಸೆತಗಳಲ್ಲಿ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಐಡೆನ್ ಮಾರ್ಕ್ರಾಮ್.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಬ್ಯಾಟಿಂಗ್.
SA 22/3 (11)
-
SA vs AUS, ODI WC Semi Final Live Score: 10 ಓವರ್ಗಳು ಮುಕ್ತಾಯ
10 ಓವರ್ಗಳ ಮುಕ್ತಾಯದ ವೇಳೆಗೆ ಕೇವಲ 18 ರನ್ ಕಲೆಹಾಕಿದ ಸೌತ್ ಆಫ್ರಿಕಾ ಬ್ಯಾಟರ್ಗಳು.
ಮೊದಲ ಪವರ್ಪ್ಲೇನಲ್ಲಿ 2 ವಿಕೆಟ್ ಕಬಳಿಸಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾ ವೇಗಿಗಳು.
ಕ್ರೀಸ್ನಲ್ಲಿ ಐಡೆನ್ ಮಾರ್ಕ್ರಾಮ್ ಹಾಗೂ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಬ್ಯಾಟಿಂಗ್.
SA 18/2 (10)
ಟೆಂಬಾ ಬವುಮಾ ಹಾಗೂ ಕ್ವಿಂಟನ್ ಡಿಕಾಕ್ ಔಟ್.
-
SA vs AUS, ODI WC Semi Final Live Score: ಮೊದಲ ಬೌಂಡರಿ
ಮಿಚೆಲ್ ಸ್ಟಾರ್ಕ್ ಎಸೆದ 9ನೇ ಓವರ್ನ 4ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಐಡೆನ್ ಮಾರ್ಕ್ರಾಮ್.
ಇದು ಸೌತ್ ಆಫ್ರಿಕಾ ಇನಿಂಗ್ಸ್ನ ಮೊದಲ ಬೌಂಡರಿ.
ಕ್ರೀಸ್ನಲ್ಲಿ ಐಡೆನ್ ಮಾರ್ಕ್ರಾಮ್ ಹಾಗೂ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಬ್ಯಾಟಿಂಗ್.
SA 17/2 (9)
-
SA vs AUS, ODI WC Semi Final Live Score: 10 ರನ್ ಪೂರೈಸಿದ ಸೌತ್ ಆಫ್ರಿಕಾ
10 ರನ್ ಕಲೆಹಾಕಲು ಬರೋಬ್ಬರಿ 8 ಓವರ್ಗಳನ್ನು ತೆಗೆದುಕೊಂಡ ಸೌತ್ ಆಫ್ರಿಕಾ ಬ್ಯಾಟರ್ಗಳು.
ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಆಸ್ಟ್ರೇಲಿಯಾ ವೇಗಿಗಳು.
ಕ್ರೀಸ್ ನಲ್ಲಿ ಐಡೆನ್ ಮಾರ್ಕ್ರಾಮ್ ಹಾಗೂ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಬ್ಯಾಟಿಂಗ್.
SA 10/2 (8)
-
SA vs AUS, ODI WC Semi Final Live Score: ಸೌತ್ ಆಫ್ರಿಕಾ 2ನೇ ವಿಕೆಟ್ ಪತನ
ಜೋಶ್ ಹ್ಯಾಝಲ್‌ವುಡ್ ಎಸೆದ 6ನೇ ಓವರ್ನ 4ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಪ್ಯಾಟ್ ಕಮಿನ್ಸ್ಗೆ ಕ್ಯಾಚ್ ನೀಡಿದ ಕ್ವಿಂಟನ್ ಡಿಕಾಕ್.
14 ಎಸೆತಗಳಲ್ಲಿ ಕೇವಲ 3 ರನ್ಗಳಿಸಿ ವಿಕೆಟ್ ಒಪ್ಪಿಸಿದ ಡಿಕಾಕ್.
ಕ್ರೀಸ್ನಲ್ಲಿ ಐಡೆನ್ ಮಾರ್ಕ್ರಾಮ್ ಹಾಗೂ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಬ್ಯಾಟಿಂಗ್.
SA 8/2 (6)
-
SA vs AUS, ODI WC Semi Final Live Score: 5 ಓವರ್ಗಳು ಮುಕ್ತಾಯ
ಮೊದಲ 5 ಓವರ್ಗಳಲ್ಲಿ ಕೇವಲ 8 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಒಂದೇ ಒಂದು ಫೋರ್ ನೀಡದ ಆಸ್ಟ್ರೇಲಿಯಾ ಬೌಲರ್ಗಳು.
ಟೆಂಬಾ ಬವುಮಾ (0) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಮಿಚೆಲ್ ಸ್ಟಾರ್ಕ್.
SA 8/1 (5)
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಬ್ಯಾಟಿಂಗ್.
-
SA vs AUS, ODI WC Semi Final Live Score: ಆಸೀಸ್ ಮಿಂಚಿನ ದಾಳಿ
ಮೊದಲ ಮೂರು ಓವರ್ಗಳಲ್ಲಿ ಕೇವಲ 4 ರನ್ ನೀಡಿದ ಆಸ್ಟ್ರೇಲಿಯಾ ಬೌಲರ್ಗಳು.
2 ಓವರ್ಗಳಲ್ಲಿ 2 ರನ್ ನೀಡಿದ 1 ವಿಕೆಟ್ ಪಡೆದ ಮಿಚೆಲ್ ಸ್ಟಾರ್ಕ್.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಬ್ಯಾಟಿಂಗ್.
SA 4/1 (3)
-
SA vs AUS, ODI WC Semi Final Live Score: ಆಸ್ಟ್ರೇಲಿಯಾ ಉತ್ತಮ ಬೌಲಿಂಗ್
2ನೇ ಓವರ್ನಲ್ಲಿ ಕೇವಲ 1 ರನ್ ನೀಡಿದ ಬಲಗೈ ವೇಗಿ ಜೋಶ್ ಹ್ಯಾಝಲ್‌ವುಡ್.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಬ್ಯಾಟಿಂಗ್.
SA 2/1 (2)
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಸೌತ್ ಆಫ್ರಿಕಾ.
-
SA vs AUS, ODI WC Semi Final Live Score: ಸೌತ್ ಆಫ್ರಿಕಾ ಮೊದಲ ವಿಕೆಟ್ ಪತನ
ಮಿಚೆಲ್ ಸ್ಟಾರ್ಕ್ ಎಸೆದ ಮೊದಲ ಓವರ್ನ 6ನೇ ಎಸೆತದಲ್ಲಿ ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ಗೆ ಕ್ಯಾಚ್ ನೀಡಿದ ಟೆಂಬಾ ಬವುಮಾ.
ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಓವರ್ನಲ್ಲೇ ಮೊದಲ ಯಶಸ್ಸು ತಂದು ಕೊಟ್ಟ ಎಡಗೈ ವೇಗಿ ಸ್ಟಾರ್ಕ್.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಬ್ಯಾಟಿಂಗ್.
SA 1/1 (1)
-
SA vs AUS, ODI WC Semi Final Live Score: ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ, ಜೋಶ್ ಹ್ಯಾಝಲ್‌ವುಡ್.
-
SA vs AUS, ODI WC Semi Final Live Score: ಸೌತ್ ಆಫ್ರಿಕಾ ಪ್ಲೇಯಿಂಗ್ ಇಲೆವೆನ್
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಜೆರಾಲ್ಡ್ ಕೊಯೆಟ್ಜಿ, ಕಗಿಸೊ ರಬಾಡ, ತಬ್ರೇಝ್ ಶಮ್ಸಿ.
-
SA vs AUS, ODI WC Semi Final Live Score: ಟಾಸ್ ಗೆದ್ದ ಸೌತ್ ಆಫ್ರಿಕಾ
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Published On - Nov 16,2023 1:33 PM
