Breaking: ವಿನ್ನರ್​ಗೆ ದಾಖಲೆ ಮೊತ್ತದ ಬಹುಮಾನ! ಟಿ20 ವಿಶ್ವಕಪ್ ಬಹುಮಾನದ ಮೊತ್ತ ಪ್ರಕಟಿಸಿದ ಐಸಿಸಿ

|

Updated on: Jun 03, 2024 | 7:09 PM

T20 World Cup 2024 Prize Money: ಐಸಿಸಿ ಈ ಬಾರಿಯ ಟಿ20 ವಿಶ್ವಕಪ್​ನ ಬಹುಮಾನದ ಹಣದ ಗಾತ್ರವನ್ನು ಪ್ರಕಟಿಸಿದೆ. ಅದರಂತೆ ಐಸಿಸಿ, ಈ ಬಾರಿ ಸುಮಾರು ರೂ 93.50 ಕೋಟಿ ರೂಗಳನ್ನು ಬಹುಮಾನದ ಮೊತ್ತವಾಗಿ ಇರಿಸಿದೆ. ಈ ಮೊತ್ತದಲ್ಲಿ ವಿಜೇತ ತಂಡ ಸುಮಾರು 20 ಕೋಟಿ ರೂಗಳನ್ನು ಬಹುಮಾನವಾಗಿ ಪಡೆಯಲ್ಲಿದೆ.

Breaking: ವಿನ್ನರ್​ಗೆ ದಾಖಲೆ ಮೊತ್ತದ ಬಹುಮಾನ! ಟಿ20 ವಿಶ್ವಕಪ್ ಬಹುಮಾನದ ಮೊತ್ತ ಪ್ರಕಟಿಸಿದ ಐಸಿಸಿ
ಟಿ20 ವಿಶ್ವಕಪ್ 2024
Follow us on

9ನೇ ಆವೃತ್ತಿಯ ಟಿ20 ವಿಶ್ವಕಪ್ (T20 World Cup 2024)​ ನಿನ್ನೆಯಿಂದ ಅಂದರೆ ಜೂನ್ 2 ರಿಂದ ಅಮೇರಿಕಾ ಹಾಗೂ ವೆಸ್ಟ್​ ಇಂಡೀಸ್ ಜಂಟಿ ಆತಿಥ್ಯದಲ್ಲಿ ಆರಂಭವಾಗಿದೆ. ಈ ಬಾರಿಯ ಟಿ20 ವಿಶ್ವಕಪ್ ಹಲವು ವಿಚಾರಗಳಿಂದ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಅದರಲ್ಲಿ ಪ್ರಮುಖವಾದುದ್ದೆಂದರೆ ಇದೇ ಮೊದಲ ಬಾರಿಗೆ 20 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಹೀಗಾಗಿ ಈ ಲೀಗ್​ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ನಡುವೆ ಐಸಿಸಿ (ICC), ಈ ಆವೃತ್ತಿಯ ಬಹುಮಾನದ ಮೊತ್ತವನ್ನು (Prize Money) ಪ್ರಕಟಿಸಿದೆ. ಐಸಿಸಿ ಘೋಷಿಸಿರುವ ಪ್ರಕಾರ ಈ ಬಾರಿಯ ಟಿ20 ವಿಶ್ವಕಪ್ ಬಹುಮಾನದ ಗಾತ್ರ 11.25 ಮಿಲಿಯನ್ ಯುಎಸ್ ಡಾಲರ್ ಆಗಿದೆ. ಅಂದರೆ ಭಾರತೀಯ ರೂಪಾರಿಯಲ್ಲಿ ಸುಮಾರು ರೂ 93.50 ಕೋಟಿ ರೂಗಳನ್ನು ಬಹುಮಾನದ ಮೊತ್ತವಾಗಿ ಇರಿಸಲಾಗಿದೆ. ಈ ಮೊತ್ತದಲ್ಲಿ ಚಾಂಪಿಯನ್ ತಂಡಕ್ಕೆ 2.45 ಮಿಲಿಯನ್ ಡಾಲರ್ (ಸುಮಾರು 20 ಕೋಟಿ ರೂ.) ಬಹುಮಾನ ಸಿಗಲಿದೆ.

ಚಾಂಪಿಯನ್ ತಂಡಕ್ಕೆ 20 ಕೋಟಿ..!

ಟಿ20 ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಚಾಂಪಿಯನ್ ತಂಡಕ್ಕೆ ಇಷ್ಟು ಗಾತ್ರದ ಹಣವನ್ನು ಬಹುಮಾನವನ್ನಾಗಿ ನೀಡಲಾಗುತ್ತಿದೆ. ಚಾಂಪಿಯನ್ ತಂಡಕ್ಕೆ 20 ಕೋಟಿ ರೂ. ಬಹುಮಾನವಾಗಿ ಸಿಕ್ಕರೆ, ರನ್ನರ್ ಅಪ್ ತಂಡಕ್ಕೆ ಅಂದರೆ ಫೈನಲ್​ನಲ್ಲಿ ಸೋತ ತಂಡಕ್ಕೆ 1.28 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ 10.64 ಕೋಟಿ ರೂ. ಬಹುಮಾನ ಸಿಗಲಿದೆ. ಇಷ್ಟೆ ಅಲ್ಲದೆ ಸೆಮಿಫೈನಲ್​ನಲ್ಲಿ ಸೋತ ತಂಡಗಳಿಗೂ ಭರ್ಜರಿ ಬಹುಮಾನ ಸಿಗಲಿದೆ.

ಉಳಿದಂತೆ ಬಹುಮಾನದ ವಿವರ ಹೀಗಿದೆ

ಅದರಂತೆ ಸೆಮಿಫೈನಲ್​ನಲ್ಲಿ ಸೋತ ತಂಡಗಳಿಗೆ ತಲಾ 6.55 ಕೋಟಿ ರೂಗಳನ್ನು ಬಹುಮಾನವನ್ನಾಗಿ ನೀಡಲಾಗುತ್ತದೆ. ಸೂಪರ್ 8 ಹಂತದಲ್ಲಿ ಸೋತು ಲೀಗ್​ನಿಂದ ಹೊರಬಿಳುವ ಪ್ರತಿಯೊಂದು ತಂಡಗಳಿಗೆ 3.18 ಕೋಟಿ ರೂಗಳ ಬಹುಮಾನ ಸಿಗಲಿದೆ. ಹಾಗೆಯೇ ಪ್ರತಿ ಗುಂಪಿನಲ್ಲಿ ಮೂರನೇ ಸ್ಥಾನ ಪಡೆಯುವ ತಂಡಗಳಿಗೆ 2.06 ಕೋಟಿ ರೂ. ಬಹುಮಾನ ಸಿಕ್ಕರೆ, ಉಳಿದ ತಂಡಗಳು 1.87 ಕೋಟಿ ರೂಗಳನ್ನು ಬಹುಮಾನವನ್ನಾಗಿ ಪಡೆಯಲ್ಲಿವೆ. ಇದನ್ನು ಹೊರತುಪಡಿಸಿ ಸೂಪರ್ 8 ಹಂತದವರೆಗೆ ಪ್ರತಿ ಪಂದ್ಯವನ್ನು ಗೆಲ್ಲುವ ಪ್ರತಿಯೊಂದು ತಂಡಗಳಿಗೆ 25.9 ಲಕ್ಷ ರೂಗಳನ್ನು ಬಹುಮಾನವನ್ನಾಗಿ ನೀಡಲಾಗುತ್ತದೆ.

ಕಳೆದ ಬಾರಿಗಿಂತ ದುಪ್ಪಟ್ಟು

ವಾಸ್ತವವಾಗಿ ಐಸಿಸಿ ಕಳೆದ ಬಾರಿಗಿಂತ ಈ ಬಾರಿ ದುಪ್ಪಟ್ಟು ಹಣವನ್ನು ಬಹುಮಾನಕ್ಕಾಗಿ ಮೀಸಲಿರಿಸಿದೆ. ಕಳೆದ ಆವೃತ್ತಿಯಲ್ಲಿ ಒಟ್ಟಾರೆ ಬಹುಮಾನದ ಗಾತ್ರ  5.6 ಮಿಲಿಯನ್‌ ಡಾಲರ್ ಆಗಿತ್ತು. ಅಂದರೆ ಈ ಬಾರಿಯ ಬಹುಮಾನದ ಗಾತ್ರದ ಅರ್ಧದಷ್ಟು ಹಣ ಕಳೆದ ಆವೃತ್ತಿಯಲ್ಲಿ ಬಹುಮಾನವಾಗಿ ಹಂಚಿಕೆಯಾಗಿತ್ತು. ಹಾಗೆಯೇ ಕಳೆದ ಬಾರಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ತಂಡಕ್ಕೆ ಸುಮಾರು 13 ಕೋಟಿ ರೂಗಳನ್ನು ಬಹುಮಾನವಾಗಿ ನೀಡಿದ್ದರೆ, ರನ್ನರ್ ಅಪ್ ಪಾಕಿಸ್ತಾನ ತಂಡಕ್ಕೆ 6.44 ಕೋಟಿ ರೂಗಳನ್ನು ಬಹುಮಾನವಾಗಿ ನೀಡಲಾಗಿತ್ತು. ಆದರೆ ಈ ಬಾರಿ ಫೈನಲ್​ಗೇರುವ ತಂಡಗಳ ಖಜಾನೆಗೆ ಭಾರಿ ಮೊತ್ತವೇ ಬಹುಮಾನವಾಗಿ ಬೀಳಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:54 pm, Mon, 3 June 24