T20 World Cup 2024: 6 ಬ್ಯಾಟರ್ಸ್ಗಳು ಒಂದೇ ರೀತಿ ಔಟ್! ಹೀಗೊಂದು ದಾಖಲೆ ಸೃಷ್ಟಿ
T20 World Cup 2024: ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಒಮಾನ್ ತಂಡದ 6 ಬ್ಯಾಟ್ಸ್‌ಮನ್‌ಗಳು ಎಲ್‌ಬಿಡಬ್ಲ್ಯೂ ಆಗುವ ಮೂಲಕ ತಮ್ಮ ವಿಕೆಟ್ ಕೈಚೆಲ್ಲಿದರು. ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದು ಇನ್ನಿಂಗ್ಸ್‌ನಲ್ಲಿ 6 ಬ್ಯಾಟ್ಸ್‌ಮನ್‌ಗಳು ಎಲ್‌ಬಿಡಬ್ಲ್ಯೂ ಆಗಿ ಔಟಾಗಿದ್ದು ಇದೇ ಮೊದಲು.
2024 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಇಂದು ನಡೆದ ಮೂರನೇ ಪಂದ್ಯದಲ್ಲಿ ಒಮಾನ್ ತಂಡವನ್ನು ಸೂಪರ್ ಓವರ್ನಲ್ಲಿ ಮಣಿಸಿದ ನಮೀಬಿಯಾ (Namibia vs Oman) ತಂಡ ಲೀಗ್ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಒಮಾನ್ ತಂಡ, ನಮೀಬಿಯಾ ಬೌಲರ್ಗಳ ದಾಳಿಗೆ ನಲುಗಿ 109 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನಮೀಬಿಯಾ ಕೂಡ ಈ ಅಲ್ಪ ಗುರಿ ಬೆನ್ನಟ್ಟಲು ಹರಸಾಹಸ ಪಡಬೇಕಾಯಿತು. ಅಂತಿಮವಾಗಿ ಪಂದ್ಯ ಸೂಪರ್ ಓವರ್ ಮೂಲಕ ಅಂತ್ಯಗೊಂಡಿತು. ಇದು ಪಂದ್ಯದ ಪಲಿತಾಂಶವಾದರೆ, ಇದೇ ಪಂದ್ಯ ಪುರುಷರ ಟಿ20 ಕ್ರಿಕೆಟ್ನಲ್ಲಿ ಹಿಂದೆಂದೂ ನಡೆಯದ ಘಟನೆಗೆ ಸಾಕ್ಷಿಯಾಯಿತು. ಒಮಾನ್ ತಂಡದ 6 ಬ್ಯಾಟ್ಸ್‌ಮನ್‌ಗಳು ಒಂದೇ ರೀತಿಯಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡರು.
ಭಾರತೀಯ ಕಾಲಮಾನದ ಪ್ರಕಾರ ಇಂದು ಮುಂಜಾನೆ ಆರಂಭವಾದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಒಮಾನ್ ತಂಡದ 6 ಬ್ಯಾಟ್ಸ್‌ಮನ್‌ಗಳು ಎಲ್‌ಬಿಡಬ್ಲ್ಯೂ ಆಗುವ ಮೂಲಕ ತಮ್ಮ ವಿಕೆಟ್ ಕೈಚೆಲ್ಲಿದರು. ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದು ಇನ್ನಿಂಗ್ಸ್‌ನಲ್ಲಿ 6 ಬ್ಯಾಟ್ಸ್‌ಮನ್‌ಗಳು ಎಲ್‌ಬಿಡಬ್ಲ್ಯೂ ಆಗಿ ಔಟಾಗಿದ್ದು ಇದೇ ಮೊದಲು.
Oman’s innings is the first-ever instance of six LBW dismissals in men’s T20Is ☝️#T20WorldCup #AzamKhan #BabarAzam #ShoaibAkhtar #FullVedio #ViralVedio #NAMvOMA #OMAvsNAM pic.twitter.com/36RHVyC4Y0
— Zafar Iqbal (@zafarlakarmar) June 3, 2024
ಎಲ್‌ಬಿಡಬ್ಲ್ಯೂಗೆ ಬಲಿಯಾದ 6 ಬ್ಯಾಟ್ಸ್‌ಮನ್‌ಗಳು!
ನಮೀಬಿಯಾ ವಿರುದ್ಧ ಮೊದಲು ಬ್ಯಾಟ್ ಮಾಡಿದ ಒಮಾನ್ ತಂಡದ6 ಬ್ಯಾಟ್ಸ್‌ಮನ್‌ಗಳಲ್ಲಿ ಮೂವರು (ಕಶ್ಯಪ್ ಪ್ರಜಾಪತಿ, ಅಕಿಬ್ ಇಲ್ಯಾಸ್, ಕಲೀಮುಲ್ಲಾ), ನಮೀಬಿಯಾ ಬೌಲರ್ ರೂಬೆನ್ ಟ್ರಂಪೆಲ್‌ಮನ್ ಅವರ ಬೌಲಿಂಗ್ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರೆ, ಎರಾಸ್ಮಸ್, ಡೇವಿಡ್ ವೀಸಾ ಮತ್ತು ಬರ್ನಾರ್ಡ್ ತಲಾ ಒಬ್ಬ ಬ್ಯಾಟ್ಸ್‌ಮನ್ ಅನ್ನು ಎಲ್‌ಬಿಡಬ್ಲ್ಯು ಮಾಡಿದರು. ನಮೀಬಿಯಾ ಪರ ಮಾರಕ ದಾಳಿ ನಡೆಸಿದ ರುಬೆನ್ ಟ್ರಂಪೆಲ್‌ಮನ್ 4 ಓವರ್‌ಗಳಲ್ಲಿ 21 ರನ್ ನೀಡಿ 4 ವಿಕೆಟ್ ಪಡೆದರೆ, ಡೇವಿಡ್ ವಿಸಾ 3.4 ಓವರ್‌ಗಳಲ್ಲಿ 28 ರನ್ ನೀಡಿ 3 ವಿಕೆಟ್ ಪಡೆದರು.
View this post on Instagram
ಮೊದಲ 2 ಎಸೆತಗಳಲ್ಲಿ 2 ವಿಕೆಟ್
ಇದಲ್ಲದೆ ಈ ಪಂದ್ಯದಲ್ಲಿ ನಮೀಬಿಯಾ ಪರ ಬೌಲಿಂಗ್ ದಾಳಿ ಆರಂಭಿಸಿದ ರುಬೆನ್ ಟ್ರಂಪೆಲ್‌ಮನ್ ಮೊದಲ ಎರಡು ಎಸೆತಗಳಲ್ಲಿ ಒಮಾನ್ನ ಇಬ್ಬರು ಬ್ಯಾಟರ್ಗಳನ್ನು ಶೂನ್ಯಕ್ಕೆ ಪೆವಿಲಿಯನ್ಗಟ್ಟಿದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಉರುಳಿಸಿದ ಮೊದಲ ಬೌಲರ್ ಎಂಬ ದಾಖಲೆಯನ್ನು ರುಬೆನ್ ಟ್ರಂಪೆಲ್‌ಮನ್ ಬರೆದರು. ಕುತೂಹಲಕಾರಿ ಸಂಗತಿಯೆಂದರೆ ಈ ಇಬ್ಬರು ಬ್ಯಾಟರ್ಗಳು ಎಲ್‌ಬಿಡಬ್ಲ್ಯೂ ಆಗುವ ಮೂಲಕ ತಮ್ಮ ವಿಕೆಟ್ ಒಪ್ಪಿಸಿ ತಮ್ಮ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:14 pm, Mon, 3 June 24