ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಅವರನ್ನು ಮುಂದಿನ ಎರಡು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಐಸಿಸಿ ಅಮಾನತುಗೊಳಿಸಿದೆ. ಇತ್ತೀಚೆಗೆ ನಡೆದ ಬಾಂಗ್ಲಾದೇಶ್ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕಿ ಅನುಚಿತ ವರ್ತನೆ ತೋರಿದ್ದರು. ಈ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಔಟ್ ನೀಡಿದ ಅಂಪೈರ್ ತೀರ್ಪಿನಿಂದ ಆಕ್ರೋಶಗೊಂಡ ಹರ್ಮನ್‌ಪ್ರೀತ್ ಬ್ಯಾಟ್ನಿಂದ ವಿಕೆಟ್ಗೆ ಹೊಡೆದಿದ್ದರು. ಇನ್ನು ಅಂತಿಮ ಏಕದಿನ ಪಂದ್ಯವು ಟೈನಲ್ಲಿ ಅಂತ್ಯಗೊಂಡಿದ್ದರಿಂದ ಸರಣಿಯು 1-1 ಅಂತರದಿಂದ ಸಮಬಲಗೊಂಡಿತು. ಹೀಗಾಗಿ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಯಿತು.
ಆದರೆ ಆ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಬಾಂಗ್ಲಾದೇಶ್ ತಂಡದೊಂದಿಗೆ ಫೋಟೋ ತೆಗೆಸಿಕೊಳ್ಳುವಾಗ ಅಂಪೈರ್‌ಗಳನ್ನೂ ಕರೆಯಬೇಕು ಎಂದು ಆತಿಥೇಯ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮೂದಲಿಸಿದರು. ಈ ಎರಡು ದುರ್ವತನೆಗಳಿಗಾಗಿ ಇದೀಗ ಐಸಿಸಿ ಟೀಮ್ ಇಂಡಿಯಾ ನಾಯಕಿಗೆ ಅಮಾನುತಿನ ಶಿಕ್ಷೆ ಜೊತೆಗೆ ದಂಡ ವಿಧಿಸಿದೆ.
People who support #HarmanpreetKaur for this wild behaviour on the pitch in an International match, seems to be a Modi Bhakts. Her behaviour is intolerable, even at street level game. Hates n abuse spread by BJP has boarded on mind of celebrities.
— Striving for Secularism (@SecularTOI) July 25, 2023
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.8 ರ ಅಂಪೈರ್ ನಿರ್ಧಾರಕ್ಕೆ ಭಿನ್ನಾಭಿಪ್ರಾಯವನ್ನು ತೋರಿಸುವುದನ್ನು ಒಳಗೊಂಡಂತೆ ಹರ್ಮನ್‌ಪ್ರೀತ್ ತಪ್ಪಿತಸ್ಥರೆಂದು ಸಾಬೀತಾಗಿದೆ. ಹೀಗಾಗಿ ಐಸಿಸಿ ಇದೀಗ 2 ಪಂದ್ಯಗಳ ನಿಷೇಧ ಹೇರಿದ್ದಾರೆ. ಅಲ್ಲದೆ ಲೆವೆಲ್-2 ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಹರ್ಮನ್‌ಪ್ರೀತ್‌ಗೆ ಶೇ. 50 ರಷ್ಟು ದಂಡ ವಿಧಿಸಲಾಗಿದೆ. ಇದಲ್ಲದೇ ಮೂರು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ.
ಇನ್ನು ಪಂದ್ಯದ ಬಳಿಕ ಬಾಂಗ್ಲಾದೇಶ್ ತಂಡವನ್ನು ಲೇವಡಿ ಮಾಡಿದ ಹರ್ಮನ್ಪ್ರೀತ್ನಿಂದ ನಷ್ಟ ಉಂಟಾಗಿದೆ ಎಂದು ಪಂದ್ಯದ ಆಯೋಜಕರು ಆರೋಪಿಸಿದ್ದಾರೆ. ಇದಕ್ಕಾಗಿ ಹರ್ಮನ್‌ಪ್ರೀತ್‌ಗೆ ಪಂದ್ಯ ಶುಲ್ಕದ ಶೇ.25ರಷ್ಟು ದಂಡ ವಿಧಿಸಲಾಗಿದೆ. ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಡೆದ ಘಟನೆಯನ್ನು ಸಾರ್ವಜನಿಕವಾಗಿ ಟೀಕಿಸುವುದನ್ನು ಒಳಗೊಂಡಿರುವ ಲೆವೆಲ್-1 ರ ತಪ್ಪಿಗಾಗಿ ಈ ದಂಡವನ್ನು ವಿಧಿಸಲಾಗಿದೆ ಎಂದು ಐಸಿಸಿ ತಿಳಿಸಿದೆ.
ಇದನ್ನೂ ಓದಿ: 4,4,4,4,4,4,4: ಟಿ20 ಕ್ರಿಕೆಟ್ನಲ್ಲಿ ದಾಖಲೆ ಬರೆದ ಹರ್ಮನ್‌ಪ್ರೀತ್ ಕೌರ್
ಐಸಿಸಿ ಹೇಳಿಕೆಯ ಪ್ರಕಾರ, ಹರ್ಮನ್‌ಪ್ರೀತ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಹೀಗಾಗಿ ಈ ವಿಷಯದಲ್ಲಿ ಯಾವುದೇ ಅಧಿಕೃತ ವಿಚಾರಣೆಯ ಅಗತ್ಯವಿಲ್ಲ. ಹಾಗಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಶಿಕ್ಷೆ ವಿಧಿಸಲಾಯಿತು.
Published On - 9:09 pm, Tue, 25 July 23