T20 World Cup 2021: ಯಾರು ಬಲಿಷ್ಠ? ಇಲ್ಲಿದೆ ಟಿ20 ವಿಶ್ವಕಪ್ ತಂಡಗಳ ಸಂಪೂರ್ಣ ಪಟ್ಟಿ

T20 World Cup 2021 All teams squads: ಅಕ್ಟೋಬರ್ 17 ರಿಂದ ಅರ್ಹತಾ ಸುತ್ತು ಆರಂಭವಾಗಲಿದ್ದು, ಈ ಸುತ್ತಿನಿಂದ ನಾಲ್ಕು ತಂಡಗಳು ಸೂಪರ್ 12ಗೆ ಪ್ರವೇಶಿಸಲಿದೆ. ಸೂಪರ್ 12 ಹಂತವು ಅಕ್ಟೋಬರ್ 23 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿದೆ.

T20 World Cup 2021: ಯಾರು ಬಲಿಷ್ಠ? ಇಲ್ಲಿದೆ ಟಿ20 ವಿಶ್ವಕಪ್ ತಂಡಗಳ ಸಂಪೂರ್ಣ ಪಟ್ಟಿ
ದುಬೈನಲ್ಲಿ ಇಂದು (ನವೆಂಬರ್ 14) ನಡೆಯಲಿರುವ 7ನೇ ಆವೃತ್ತಿ ಟಿ20 ವಿಶ್ವಕಪ್​ನ ಫೈನಲ್​ನಲ್ಲಿ ನ್ಯೂಜಿಲೆಂಡ್-ಆಸ್ಟ್ರೇಲಿಯಾ ಮುಖಾಮುಖಿಯಾಗಲಿದ್ದು, ಈ ಬಾರಿ ಯಾರು ಚಾಂಪಿಯನ್​ ಪಟ್ಟ ಅಲಂಕರಿಸಲಿದ್ದಾರೆ ಕಾದು ನೋಡಬೇಕಿದೆ.
Updated By: ಝಾಹಿರ್ ಯೂಸುಫ್

Updated on: Sep 10, 2021 | 6:27 PM

ICC T20 World Cup 2021 All teams squads: ಟಿ20 ವಿಶ್ವಕಪ್ (T20 World Cup 2021) ಕ್ರೇಜ್ ಕಾವೇರುತ್ತಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಲ್ಲಿ ಅಕ್ಟೋಬರ್ 17 ರಿಂದ ಆರಂಭವಾಗಲಿರುವ ಚುಟುಕು ಕ್ರಿಕೆಟ್​ ಕದನಕ್ಕಾಗಿ ಇಡೀ ವಿಶ್ವ ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಇತ್ತ ಟೂರ್ನಿಗಾಗಿ ಸೂಪರ್ 12ನಲ್ಲಿ ಸ್ಥಾನ ಪಡೆದಿರುವ 8 ದೇಶಗಳು ತಮ್ಮ ಆಡುವ ಬಳಗವನ್ನು ಪ್ರಕಟಿಸಿದೆ. ಇನ್ನು ನಾಲ್ಕು ತಂಡಗಳು ಅರ್ಹತಾ ಸುತ್ತಿನ ಮೂಲಕ ಸೂಪರ್ 12 ಹಂತ ಪ್ರವೇಶಿಸಲಿದೆ. ಐಸಿಸಿ ನಿಯಮಗಳ ಪ್ರಕಾರ, ಪ್ರತಿ ತಂಡಗಳು 15 ಸದಸ್ಯರನ್ನು ಒಳಗೊಂಡಿರಬೇಕು. ಹಾಗೆಯೇ ಮೀಸಲು ಆಟಗಾರರನ್ನಾಗಿ ಮೂವರನ್ನು ಹೆಸರಿಸಬಹುದು ಎಂದು ತಿಳಿಸಿದೆ. ಇದಲ್ಲದೆ ಫೈನಲ್ ಪ್ಲೇಯರ್ಸ್​ ಪಟ್ಟಿಯಲ್ಲಿ ಸಲ್ಲಿಸಲು ಅಕ್ಟೋಬರ್ 10ರವರೆಗೆ ಸಮಯವಕಾಶ ನೀಡಿದೆ. ಇದರಿಂದಾಗಿ, ಒಂದು ವೇಳೆ ಆಟಗಾರರು ಗಾಯಗೊಂಡರೆ ಅಥವಾ ಇನ್ನಿತರ ಕಾರಣಗಳಿಂದ ಹೊರಗುಳಿದರೆ ತಂಡಗಳಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.

ಸೂಪರ್ 12ನಲ್ಲಿರುವ 8 ತಂಡಗಳ ಆಟಗಾರರ ಪಟ್ಟಿ ಹೀಗಿದೆ:

ಟೀಮ್ ಇಂಡಿಯಾ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ , ಕೆಎಲ್ ರಾಹುಲ್ , ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ , ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್ , ಅಕ್ಷರ್ ಪಟೇಲ್ , ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ.
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್ , ದೀಪಕ್ ಚಹಾರ್, ಶಾರ್ದೂಲ್ ಠಾಕೂರ್

ಪಾಕಿಸ್ತಾನ್ ತಂಡ: ಬಾಬರ್ ಆಜಮ್ (ನಾಯಕ), ಶಾದಬ್ ಖಾನ್, ಆಸಿಫ್ ಅಲಿ, ಆಜಮ್ ಖಾನ್, ಹಾರಿಸ್ ರೌಫ್, ಹಸನ್ ಅಲಿ, ಇಮಾದ್ ವಾಸಿಂ, ಖುಷ್ದಿಲ್ ಶಾ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ, ಶಾಹೀನ್ ಶಾ ಅಫ್ರಿದಿ, ಸೋಹೈಬ್ ಮಕ್ಸೂದ್

ಆಸ್ಟ್ರೇಲಿಯಾ ತಂಡ: ಆರೋನ್ ಫಿಂಚ್ (ನಾಯಕ), ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್, ಜೋಶ್ ಹಝಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್ , ಗ್ಲೆನ್ ಮ್ಯಾಕ್ಸ್‌ವೆಲ್ , ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್ , ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್ , ಮಿಚೆಲ್ ಸ್ವೇಪ್ಸನ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್ , ಆಡಮ್ ಝಂಪಾ

ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆಸ್ಟಲ್, ಟ್ರೆಂಟ್ ಬೌಲ್ಟ್ , ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲೂಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ಕೈಲ್ ಜೇಮೀಸನ್, ಡಾರಿಲ್ ಮಿಚೆಲ್, ಜಿಮ್ಮಿ ನೀಶಮ್ , ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್ , ಇಶ್ ಸೋಧಿ, ಟಿಮ್ ಸೌಥಿ, ಆಡಮ್ ಮಿಲ್ನೆ.

ವೆಸ್ಟ್ ಇಂಡೀಸ್ ತಂಡ: ಕೀರನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್, ಕ್ರಿಸ್ ಗೇಲ್, ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೋ, ರೋಸ್ಟನ್ ಚೇಸ್, ಆಂಡ್ರೆ ಫ್ಲೆಚರ್, ಶಿಮ್ರಾನ್ ಹೆಟ್ಮೇಯರ್, ಎವಿನ್ ಲೆವಿಸ್, ರವಿ ರಾಂಪಾಲ್, ಆಂಡ್ರೆ ರಸ್ಸೆಲ್, ಲೆಂಡಲ್ ಸಿಮನ್ಸ್ , ಓಶಾನ್ ಥಾಮಸ್, ಹೇಡನ್ ವಾಲ್ಷ್, ಓಬೇಡ್ ಮೆಕಾಯ್.

ಅಫ್ಘಾನಿಸ್ತಾನ್ ತಂಡ: ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ರಹಮಾನುಲ್ಲಾ ಗುರ್ಬಾಜ್, ಹಜರತುಲ್ಲಾ ಝಝೈ, ಉಸ್ಮಾನ್ ಘನಿ, ಅಸ್ಘರ್ ಅಫ್ಘಾನ್, ನಜೀಬುಲ್ಲಾ ಝದ್ರಾನ್, ಹಷ್ಮತುಲ್ಲಾ ಶಾಹಿದಿ, ಮೊಹಮ್ಮದ್ ಶಹಜಾದ್, ಮುಜೀಬ್ ಉರ್ ರೆಹಮಾನ್, ಕರೀಂ ಜನ್ನತ್, ಗುಲ್ಬುದ್ದೀನ್ ನೈಬ್, ನವೀನ್ -ಉಲ್-ಹಕ್, ಹಮೀದ್ ಹಸನ್, ದೌಲತ್ ಝದ್ರಾನ್, ಶರ್ಫುದ್ದೀನ್ ಅಶ್ರಫ್, ಶಪೂರ್ ಝದ್ರಾನ್, ಕೈಸ್ ಅಹ್ಮದ್.

ದಕ್ಷಿಣ ಆಫ್ರಿಕಾ ತಂಡ: ತೆಂಬಾ ಬಾವುಮಾ (ನಾಯಕ), ಕೇಶವ್ ಮಹಾರಾಜ್, ಕ್ವಿಂಟನ್ ಡಿ ಕಾಕ್, ಜಾರ್ನ್ ಫಾರ್ಚೂನ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಎಡಿನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಡಬ್ಲ್ಯೂ ಮುಲ್ಡರ್, ಲುಂಗಿ ನ್ಗಿಡಿ, ಎನ್ರಿಕ್ ನಾರ್ಖಿಯಾ, ಡ್ವೇಯ್ನ್ ಪ್ರಿಡೋರಿಯಸ್, ಕಗಿಸೊ ರಬಾಡಿ ತಾಬಿ ವ್ಯಾನ್ ಡೆರ್ ಡಸ್ಸೆನ್

ಇಂಗ್ಲೆಂಡ್ ತಂಡ: ಇಯಾನ್ ಮೊರ್ಗನ್ (ನಾಯಕ), ಮೊಯೀನ್ ಅಲಿ, ಜಾನಿ ಬೈರ್‌ಸ್ಟೊ, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕರಣ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಟೈಮಲ್ ಮಿಲ್ಸ್, ಆದಿಲ್ ರಶೀದ್, ಜೇಸನ್ ರಾಯ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

ಐಸಿಸಿ ಪುರುಷರ ಕ್ರಿಕೆಟ್ ಟಿ20 ವಿಶ್ವಕಪ್ 2021 ಗುಂಪುಗಳು ಹೀಗಿವೆ:
ಅರ್ಹತಾ ಸುತ್ತು:
ರೌಂಡ್ 1: ಗ್ರೂಪ್ ಎ- ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ
ರೌಂಡ್ 1: ಗ್ರೂಪ್ ಬಿ- ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ ಮತ್ತು ಒಮಾನ್

ಸೂಪರ್ 12 ಸುತ್ತು:-
ಸೂಪರ್ 12: ಗ್ರೂಪ್ 1- ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಎ 1 ಮತ್ತು ಬಿ 2
ಸೂಪರ್ 12: ಗುಂಪು 2- ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್, ಅಫ್ಘಾನಿಸ್ತಾನ, ಎ 2 ಮತ್ತು ಬಿ

ಅಕ್ಟೋಬರ್ 17 ರಿಂದ ಅರ್ಹತಾ ಸುತ್ತು ಆರಂಭವಾಗಲಿದ್ದು, ಈ ಸುತ್ತಿನಿಂದ ನಾಲ್ಕು ತಂಡಗಳು ಸೂಪರ್ 12ಗೆ ಪ್ರವೇಶಿಸಲಿದೆ. ಸೂಪರ್ 12 ಹಂತವು ಅಕ್ಟೋಬರ್ 23 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿದೆ. ಹಾಗೆಯೇ ಅಕ್ಟೋಬರ್ 24 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ದ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಅಭಿಮಾನ ಆರಂಭಿಸಲಿದೆ.

ಅರ್ಹತಾ ಸುತ್ತಿನಲ್ಲಿರುವ ತಂಡಗಳ ಪಟ್ಟಿ:

ಓಮಾನ್ ತಂಡ: ಜೀಶನ್ ಮಕ್ಸೂದ್ (ನಾಯಕ), ಅಕಿಬ್ ಇಲ್ಯಾಸ್, ಜತೀಂದರ್ ಸಿಂಗ್, ಖಾವರ್ ಅಲಿ, ಮೊಹಮ್ಮದ್ ನದೀಮ್, ಅಯಾನ್ ಖಾನ್, ಸೂರಜ್ ಕುಮಾರ್, ಸಂದೀಪ್ ಗೌಡ, ನೆಸ್ಟರ್ ದಂಬಾ, ಕಲೀಮುಲ್ಲಾ, ಬಿಲಾಲ್ ಖಾನ್, ನಸೀಮ್ ಖುಷಿ, ಸುಫ್ಯಾನ್ ಮೆಹಮೂದ್, ಫಯಾಜ್ ಬಟ್, ಖುರಮ್

ಪಪುವಾ ನ್ಯೂ ಗಿನಿಯಾ ತಂಡ: ಅಸ್ಸಾದ್ ವಾಲಾ (ನಾಯಕ), ಚಾರ್ಲ್ಸ್ ಅಮಿನಿ, ಲೆಗಾ ಸಿಯಾಕ, ನಾರ್ಮನ್ ವನುವಾ, ನೊಸೈನ ಪೊಕಾನ, ಕಿಪ್ಲಿಂಗ್ ಡೊರಿಗಾ, ಟೋನಿ ಉರಾ, ಹಿರಿ ಹಿರಿ, ಗೌಡಿ ಟೋಕಾ, ಸೆಸೆ ಬೌ, ಡೇಮಿಯನ್ ರಾವು, ಕಾಬುವಾ ವಾಗಿ-ಮೋರಿಯಾ, ಸೈಮನ್ ಅಟೈ, ಜೇಸನ್ ಕಿಲಾ , ಚಾಡ್ ಸೋಪರ್, ಜ್ಯಾಕ್ ಗಾರ್ಡ್ನರ್.

ಬಾಂಗ್ಲಾದೇಶ ತಂಡ: ಮಹ್ಮದುಲ್ಲಾ (ನಾಯಕ), ನಯೀಮ್ ಶೇಖ್, ಸೌಮ್ಯ ಸರ್ಕಾರ್, ಲಿಟ್ಟನ್ ಕುಮಾರ್ ದಾಸ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಅಫಿಫ್ ಹೊಸೈನ್, ನೂರುಲ್ ಹಸನ್ ಸೋಹನ್, ಶಾಕ್ ಮಹೇದಿ ಹಸನ್, ನಸುಮ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಶೈಫ್ ಉದ್ದೀನ್, ಶಮೀಮ್ ಹೊಸೇನ್

ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್, ನಮೀಬಿಯಾ ಮತ್ತು ಸ್ಕಾಟ್ಲೆಂಡ್ ತಮ್ಮ ತಂಡಗಳನ್ನು ಇನ್ನೂ ಪ್ರಕಟಿಸಿಲ್ಲ.

ಇದನ್ನೂ ಓದಿ: Rashid Khan: ಟಿ20 ವಿಶ್ವಕಪ್​ಗೆ ಅಫ್ಘಾನ್ ತಂಡ ಪ್ರಕಟ: ನಾಯಕತ್ವಕ್ಕೆ ರಶೀದ್ ಖಾನ್ ರಾಜೀನಾಮೆ

ಇದನ್ನೂ ಓದಿ: BMW CE 02: 90 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಬೈಕ್ ಪರಿಚಯಿಸಿದ BMW

ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು

(ICC T20 World Cup 2021 All teams squads)

Published On - 6:24 pm, Fri, 10 September 21