T20 World Cup 2021: ಬಿಗ್ ಹಿಟ್ಟರ್ಗಳ ದಂಡು: ಟಿ20 ವಿಶ್ವಕಪ್ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ವೆಸ್ಟ್ ಇಂಡೀಸ್
West Indies T20 World cup Squad: ಕೀರನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್, ಕ್ರಿಸ್ ಗೇಲ್, ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೋ, ರೋಸ್ಟನ್ ಚೇಸ್, ಆಂಡ್ರೆ ಫ್ಲೆಚರ್.
ಚುಟುಕು ಕ್ರಿಕೆಟ್ನ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ( West Indies ) ತಂಡ ಮುಂಬರುವ T20 World Cup 2021 ಗಾಗಿ ಬಲಿಷ್ಠ ಬಳಗವನ್ನು ಪ್ರಕಟಿಸಿದೆ. ಈ ತಂಡವನ್ನು ಕೀರನ್ ಪೊಲಾರ್ಡ್ ಮುನ್ನಡೆಸಲಿದ್ದಾರೆ. 6 ವರ್ಷಗಳ ಬಳಿಕ ವಿಂಡೀಸ್ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ರವಿ ರಾಂಪಾಲ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ್ದಾರೆ. ರಾಂಪಾಲ್ 2015ರಲ್ಲಿ ಕೊನೆಯ ಬಾರಿಗೆ ಟಿ20 ವೆಸ್ಟ್ ಇಂಡೀಸ್ ಪರ ಪಂದ್ಯವಾಡಿದ್ದರು. ಇದೀಗ ಸಿಪಿಎಲ್ನಲ್ಲಿನ ಅದ್ಭುತ ಫಾರ್ಮ್ ಪರಿಗಣಿಸಿ ತಂಡದಲ್ಲಿ ಸ್ಥಾನ ನೀಡಲಾಗಿದೆ. ಹಾಗೆಯೇ ಸ್ಪಿನ್-ಆಲ್ರೌಂಡರ್ ಸುನೀಲ್ ನರೈನ್ಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಇನ್ನು ವೆಸ್ಟ್ ಇಂಡೀಸ್ ತಂಡದಲ್ಲಿ ಅನುಭವಿ ಕ್ರಿಸ್ ಗೇಲ್, ಡ್ವೇನ್ ಬ್ರಾವೋ ಅವರಿಗೂ ಅವಕಾಶ ನೀಡಲಾಗಿದೆ. ಹಾಗೆಯೇ ಜೇಸನ್ ಹೋಲ್ಡರ್, ಶೆಲ್ಡನ್ ಕಾಟ್ರೆಲ್ ಮತ್ತು ಅಕಿಲ್ ಹೊಸೈನ್ ಅವರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ.
ಇನ್ನು ಬಿಗ್ ಹಿಟ್ಟರ್ಗಳ ದಂಡೇ ವೆಸ್ಟ್ ಇಂಡೀಸ್ ತಂಡದಲ್ಲಿರುವುದು ವಿಶೇಷ. ಅದರಂತೆ ಸ್ಪೋಟಕ ಬ್ಯಾಟ್ಸ್ಮನ್ಗಳಾಗಿ ನಿಕೋಲಸ್ ಪೂರನ್, ಕ್ರಿಸ್ ಗೇಲ್, ಕೀರನ್ ಪೊಲ್ಲಾರ್ಡ್, ಶಿಮ್ರಾನ್ ಹೆಟ್ಮೇಯರ್, ಎವಿನ್ ಲೂಯಿಸ್ ತಂಡದಲ್ಲಿದ್ದಾರೆ. ಹಾಗೆಯೇ ಸ್ಪೋಟಕ ಆಲ್ರೌಂಡರ್ಗಳಾಗಿ ಆಂಡ್ರೆ ರಸೆಲ್, ಡ್ವೇನ್ ಬ್ರಾವೊ, ಫ್ಯಾಬಿಯನ್ ಅಲೆನ್ ಸ್ಥಾನ ಪಡೆದಿದ್ದಾರೆ.
ಟಿ20 ವಿಶ್ವಕಪ್‌ಗಾಗಿ ವೆಸ್ಟ್ ಇಂಡೀಸ್ ತಂಡ ಹೀಗಿದೆ:- ಕೀರನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್, ಕ್ರಿಸ್ ಗೇಲ್, ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೋ, ರೋಸ್ಟನ್ ಚೇಸ್, ಆಂಡ್ರೆ ಫ್ಲೆಚರ್, ಶಿಮ್ರಾನ್ ಹೆಟ್ಮೇಯರ್, ಎವಿನ್ ಲೆವಿಸ್, ರವಿ ರಾಂಪಾಲ್, ಆಂಡ್ರೆ ರಸ್ಸೆಲ್, ಲೆಂಡಲ್ ಸಿಮನ್ಸ್ , ಓಶಾನ್ ಥಾಮಸ್, ಹೇಡನ್ ವಾಲ್ಷ್, ಓಬೇಡ್ ಮೆಕಾಯ್.
ರವಿ ರಾಂಪಾಲ್‌ಗೆ ಏಕೆ ಅವಕಾಶ? ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿನ ಅತ್ಯುತ್ತಮ ಪ್ರದರ್ಶನದ ಫಲವಾಗಿ ರವಿ ರಾಂಪಾಲ್ ವೆಸ್ಟ್ ಇಂಡೀಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಬಲಗೈ ವೇಗದ ಬೌಲರ್ CPL 2021 ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ರಾಂಪಾಲ್ 8 ಪಂದ್ಯಗಳಲ್ಲಿ 17 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ 161 ಟಿ20 ಪಂದ್ಯಗಳ ಅನುಭವ ಹೊಂದಿರುವ ರಾಂಪಾಲ್ 209 ವಿಕೆಟ್ ಪಡೆದಿದ್ದಾರೆ.
ಟಿ20 ಕ್ರಿಕೆಟ್ನ ಬಲಿಷ್ಠರು: ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ 2021 ರಲ್ಲಿ ಗೆಲ್ಲುವ ಫೇವರೇಟ್ ತಂಡಗಳಲ್ಲಿ ಒಂದು. ಏಕೆಂದರೆ ವೆಸ್ಟ್ ಇಂಡೀಸ್ ಕೊನೆಯ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2016 ರಲ್ಲಿ ನಡೆದ ಟಿ 20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಇಂಗ್ಲೆಂಡ್ ಅನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು. ಹಾಗೆಯೇ 2012 ರಲ್ಲಿ ಟ್ರೋಫಿ ಗೆದ್ದುಕೊಂಡಿತ್ತು. ಹೀಗೆ ಟಿ20 ವಿಶ್ವಕಪ್‌ನಲ್ಲಿ ಎರಡು ಬಾರಿ ಚಾಂಪಿಯನ್ ಎನಿಸಿಕೊಂಡ ಏಕೈಕ ತಂಡ ವೆಸ್ಟ್ ಇಂಡೀಸ್. ಇದೀಗ ಬಲಿಷ್ಠ ದಾಂಡಿಗರ ದಂಡನ್ನೇ ಆಯ್ಕೆ ಮಾಡಿರುವ ವಿಂಡೀಸ್ ಈ ಬಾರಿ ಕೂಡ ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
ಇದನ್ನೂ ಓದಿ: MS Dhoni: 3 ವಿಶ್ವಕಪ್ ಮೇಲೆ ಬಿಸಿಸಿಐ ಕಣ್ಣು: ಟೀಮ್ ಇಂಡಿಯಾದ ಮುಂದಿನ ಕೋಚ್ ಧೋನಿ?
ಇದನ್ನೂ ಓದಿ: ವಿಚ್ಛೇದಿತ ಮಹಿಳೆಯರನ್ನು ಪ್ರೀತಿಸಿ ಮದುವೆಯಾದ ಭಾರತೀಯ ಕ್ರಿಕೆಟಿಗರು ಇವರೇ
ಇದನ್ನೂ ಓದಿ: Shardul Thakur: ಮುಂಬೈ ಲೋಕಲ್ ಟ್ರೈನ್ ಹುಡುಗ ಇದೀಗ ಟೀಮ್ ಇಂಡಿಯಾ ಸೆನ್ಸೇಷನ್
ಇದನ್ನೂ ಓದಿ: Rashid Khan: ಟಿ20 ವಿಶ್ವಕಪ್ಗೆ ಅಫ್ಘಾನ್ ತಂಡ ಪ್ರಕಟ: ನಾಯಕತ್ವಕ್ಕೆ ರಶೀದ್ ಖಾನ್ ರಾಜೀನಾಮೆ
(T20 World Cup 2021: champions West Indies declares T20 WC squad, Chris Gayle in)