AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC: 60 ಸೆಕೆಂಡ್ ಗಡುವು; ಬೌಲರ್​ಗಳಿಗೆ ಸಂಕಷ್ಟ ತಂದ ಐಸಿಸಿ ಹೊಸ ನಿಯಮ..!

Stop Clock Rule: ಈ ವರ್ಷದ ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಐಸಿಸಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅದರಂತೆ ಕಳೆದ ಡಿಸೆಂಬರ್ ಆರಂಭದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ ಸ್ಟಾಪ್ ಕ್ಲಾಕ್ ನಿಯಮವನ್ನು ಶಾಶ್ವತವಾಗಿ ಜಾರಿಗೆ ತರಲು ಐಸಿಸಿ ಮುಂದಾಗಿದೆ.

ICC: 60 ಸೆಕೆಂಡ್ ಗಡುವು; ಬೌಲರ್​ಗಳಿಗೆ ಸಂಕಷ್ಟ ತಂದ ಐಸಿಸಿ ಹೊಸ ನಿಯಮ..!
ಸ್ಟಾಪ್ ಕ್ಲಾಕ್ ನಿಯಮ
ಪೃಥ್ವಿಶಂಕರ
|

Updated on:Mar 15, 2024 | 5:15 PM

Share

ಈ ವರ್ಷದ ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್‌ಗೆ (T20 World Cup 2024) ಸಂಬಂಧಿಸಿದಂತೆ ಐಸಿಸಿ (ICC) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅದರಂತೆ ಕಳೆದ ಡಿಸೆಂಬರ್ ಆರಂಭದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ ಸ್ಟಾಪ್ ಕ್ಲಾಕ್ ನಿಯಮವನ್ನು (Stop Clock Rule) ಶಾಶ್ವತವಾಗಿ ಅನುಷ್ಠಾನಗೊಳಿಸಲು ಐಸಿಸಿ ಮುಂದಾಗಿದೆ. ಈ ನಿಯಮದ ಪ್ರಕಾರ ಫೀಲ್ಡಿಂಗ್ ತಂಡವು ಒಂದು ಓವರ್ ಮುಗಿದ ನಂತರ ನಿಗದಿತ ಸಮಯದೊಳಗೆ ಎರಡನೇ ಓವರ್ ಅನ್ನು ಪ್ರಾರಂಭಿಸಬೇಕು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಫೀಲ್ಡಿಂಗ್ ತಂಡಕ್ಕೆ 5 ರನ್​ಗಳನ್ನು ದಂಡವಾಗಿ ವಿಧಿಸಲಾಗುತ್ತದೆ. ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಮುಂದಿನ ಟಿ20 ವಿಶ್ವಕಪ್‌ನಿಂದ ಐಸಿಸಿ ಈ ನಿಯಮವನ್ನು ಶಾಶ್ವತವಾಗಿ ಜಾರಿಗೆ ತರಲಿದೆ. ಇದಾದ ಬಳಿಕ ಟಿ20 ಮಾತ್ರವಲ್ಲದೆ ಏಕದಿನ ಪಂದ್ಯಕ್ಕೂ ಈ ನಿಯಮ ಅನ್ವಯವಾಗಲಿದೆ ಎಂದು ವರದಿಯಾಗಿದೆ.

ಐಸಿಸಿ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಾಯೋಗಿಕವಾಗಿ ಈ ನಿಯಮವನ್ನು ಜಾರಿಗೆ ತಂದಿತ್ತು. ಈಗ ಈ ನಿಯಮವನ್ನು ಕ್ರಿಕೆಟ್‌ನ ಶಾಶ್ವತ ನಿಯಮಗಳ ಪಟ್ಟಿಯಲ್ಲಿ ಸೇರಿಸಲಾಗುವುದು. ಪಂದ್ಯವನ್ನು ನಿಗದಿತ ಸಮಯಕ್ಕೆ ಮುಗಿಸಲು ಓವರ್‌ಗಳ ನಡುವೆ ಸಮಯ ವ್ಯರ್ಥವಾಗುವುದನ್ನು ತಡೆಯುವುದು ಈ ನಿಯಮದ ಉದ್ದೇಶವಾಗಿದೆ.

3 ಐಸಿಸಿ ಪ್ರಶಸ್ತಿಯೊಂದಿಗೆ ವೃತ್ತಿಬದುಕಿಗೆ ವಿದಾಯ ಹೇಳಿದ ದಿಗ್ಗಜ ಅಂಪೈರ್ ಮರೈಸ್ ಎರಾಸ್ಮಸ್..!

ಏನಿದು ನಿಯಮ?

ಈ ನಿಯಮದ ಪ್ರಕಾರ, ಒಂದು ಓವರ್ ಮುಗಿದ ನಂತರ, ಫೀಲ್ಡಿಂಗ್ ತಂಡವು 60 ಸೆಕೆಂಡುಗಳಲ್ಲಿ ಅಂದರೆ ಒಂದು ನಿಮಿಷದೊಳಗೆ ಮುಂದಿನ ಓವರ್ ಅನ್ನು ಪ್ರಾರಂಭಿಸಬೇಕು. ಓವರ್ ಮುಗಿದ ತಕ್ಷಣ, ಮೂರನೇ ಅಂಪೈರ್ ಸ್ಟಾಪ್ ವಾಚ್ ಅನ್ನು ಪ್ರಾರಂಭಿಸುತ್ತಾರೆ. ನಂತರ 60 ಸೆಕೆಂಡುಗಳ ಕಾಲ ಕಾಯುತ್ತಾರೆ. ಫೀಲ್ಡಿಂಗ್ ತಂಡವು ಈ ನಿಯಮವನ್ನು ಅನುಸರಿಸಲು ಸಾಧ್ಯವಾಗದಿದ್ದರೆ, ಬೌಲಿಂಗ್ ಮಾಡುವ ತಂಡಕ್ಕೆ ದಂಡ ಹಾಕಲಾಗುತ್ತದೆ. ಈ ನಿಯಮವನ್ನು ಜಾರಿಗೊಳಿಸಲು ಆನ್-ಫೀಲ್ಡ್ ಅಂಪೈರ್‌ಗಳು ಜವಾಬ್ದಾರರಾಗಿರುತ್ತಾರೆ.

ನಿಗದಿತ ಸಮಯದೊಳಗೆ ಓವರ್ ಪ್ರಾರಂಭವಾಗದಿದ್ದರೆ, ಮೈದಾನದಲ್ಲಿರುವ ಅಂಪೈರ್ ಫೀಲ್ಡಿಂಗ್ ತಂಡಕ್ಕೆ ಎರಡು ಎಚ್ಚರಿಕೆಗಳನ್ನು ನೀಡುತ್ತಾರೆ. ಇದರ ನಂತರವೂ ನಿಯಮ ಉಲ್ಲಂಘಿಸಿದರೆ, ತಂಡಕ್ಕೆ ಐದು ರನ್ ದಂಡ ವಿಧಿಸಲಾಗುತ್ತದೆ. ಟೈಮರ್ ಅನ್ನು ಯಾವಾಗ ಪ್ರಾರಂಭಿಸಬೇಕು ಎಂಬ ನಿರ್ಧಾರವನ್ನು ಅಂಪೈರ್‌ಗಳು ತೆಗೆದುಕೊಳ್ಳಲಿದ್ದಾರೆ.

ಐಸಿಸಿ ಅನುಮೋದನೆ ನೀಡಿದೆ

ಈ ನಿಯಮವನ್ನು ಪ್ರಾಯೋಗಿಕ ಆಧಾರದ ಮೇಲೆ ಡಿಸೆಂಬರ್ 2023 ರ ಆರಂಭದಲ್ಲಿ ಜಾರಿಗೆ ತರಲಾಗಿದ್ದು, ಇದರ ಪ್ರಾಯೋಗಿಕ ಅವಧಿ ಏಪ್ರಿಲ್‌ನಲ್ಲಿ ಕೊನೆಗೊಳ್ಳಲಿದೆ. ಆದರೆ ಈ ನಿಯಮ ತುಂಬಾ ಪ್ರಯೋಜನಕಾರಿಯಾಗಿ ಎಂಬುದನ್ನು ಮನಗಂಡಿರುವ ಐಸಿಸಿ, ಈ ನಿಯಮವನ್ನು ಶಾಶ್ವತವಾಗಿ ಜಾರಿಗೆ ತರಲು ನಿರ್ಧರಿಸಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಪ್ರಸ್ತುತ ಅನೇಕ ಐಸಿಸಿ ಸಭೆಗಳು ದುಬೈನಲ್ಲಿ ನಡೆಯುತ್ತಿವೆ. ಆ ಸಭೆಯೊಂದರಲ್ಲಿ ಈ ನಿಯಮವನ್ನು ಅನುಮೋದಿಸಲಾಗಿದೆ ಎಂದು ತಿಳಿದುಬಂದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Fri, 15 March 24

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ