
ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯುತ್ತಿರುವ 2026 ರ ಪುರುಷರ ಟಿ20 ವಿಶ್ವಕಪ್‌ನ ಸೂಪರ್ 8 ಸುತ್ತು ರೋಚಕಘಟ್ಟ ತಲುಪಿದೆ. ಸೆಮಿಫೈನಲ್‌ಗೇರಲು 8 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ಮುಂಬರುವ ಮಹಿಳಾ ಟಿ20 ವಿಶ್ವಕಪ್‌ನ (Women’s T20 World Cup 2026) ಅಧಿಕೃತ ವೇಳಾಪಟ್ಟಿಯನ್ನು ಐಸಿಸಿ ಇಂದು ಬಿಡುಗಡೆ ಮಾಡಿದೆ. ಅದರಂತೆ ಈ ಪಂದ್ಯಾವಳಿಯು ಜೂನ್ 12 ರಿಂದ ಆರಂಭವಾಗಿ ಜುಲೈ 5, 2026 ರವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿದೆ. ಒಟ್ಟು 12 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಸೆಮಿಫೈನಲ್ ಹಾಗೂ ಫೈನಲ್ ಸೇರಿದ್ದಂತೆ ಒಟ್ಟು 33 ಪಂದ್ಯಗಳು ನಡೆಯಲಿವೆ.
ಈ ಪಂದ್ಯಾವಳಿಯು ಎರಡು ಗುಂಪುಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಗುಂಪು ಆರು ತಂಡಗಳನ್ನು ಒಳಗೊಂಡಿದೆ. ಗುಂಪು 1 ರಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ಸೇರಿದ್ದರೆ, ಗುಂಪು 2 ರಲ್ಲಿ ವೆಸ್ಟ್ ಇಂಡೀಸ್, ಇಂಗ್ಲೆಂಡ್ (ಆತಿಥೇಯರು), ನ್ಯೂಜಿಲೆಂಡ್, ಶ್ರೀಲಂಕಾ, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಸೇರಿವೆ. ಗುಂಪು ಹಂತದಿಂದ ಅಗ್ರ ಎರಡು ತಂಡಗಳು ಜೂನ್ 30 ಮತ್ತು ಜುಲೈ 2 ರಂದು ದಿ ಓವಲ್‌ನಲ್ಲಿ ನಡೆಯಲಿರುವ ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಫೈನಲ್ ಜುಲೈ 5 ರಂದು ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
Save the dates 🗓️
With all 12 teams locked in, presenting the full fixture list for ICC Women’s #T20WorldCup 2026 🏆
Details ➡️ https://t.co/ZijM7mQU38 pic.twitter.com/rH9LyzEo6B
— ICC (@ICC) February 24, 2026
ಈ ಟೂರ್ನಿಯ ಮೊದಲ ಪಂದ್ಯ ಜೂನ್ 12 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 14 ರಂದು ಪಾಕಿಸ್ತಾನದ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ಆಡಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ಆರಂಭವಾಗಲಿದೆ. ಉಳಿದ ಗುಂಪು ಹಂತದ ಪಂದ್ಯಗಳಲ್ಲಿ ಭಾರತ ತಂಡವು ನೆದರ್ಲ್ಯಾಂಡ್ಸ್ (ಜೂನ್ 17, ಹೆಡಿಂಗ್ಲೆ), ಬಾಂಗ್ಲಾದೇಶ (ಜೂನ್ 25, ಓಲ್ಡ್ ಟ್ರಾಫರ್ಡ್) ಮತ್ತು ಆಸ್ಟ್ರೇಲಿಯಾ (ಜೂನ್ 28, ಲಾರ್ಡ್ಸ್) ತಂಡವನ್ನು ಎದುರಿಸಲಿದೆ. ಈ ಎಲ್ಲಾ ಪಂದ್ಯಗಳು ಟೀಂ ಇಂಡಿಯಾಕ್ಕೆ ನಿರ್ಣಾಯಕವಾಗುತ್ತವೆ, ವಿಶೇಷವಾಗಿ ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿಯಾಗಿರುವ ಲಾರ್ಡ್ಸ್‌ನಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಆಡುವುದು.
|
ದಿನಾಂಕ |
ಮುಖಾಮುಖಿ |
ಸ್ಥಳ |
|
12-06-2026 |
ಇಂಗ್ಲೆಂಡ್ vs ಶ್ರೀಲಂಕಾ |
ಎಡ್ಜ್‌ಬಾಸ್ಟನ್ |
|
13-06-2026 |
ಸ್ಕಾಟ್ಲೆಂಡ್ vs ಐರ್ಲೆಂಡ್ |
ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ |
|
13-06-2026 |
ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ, |
ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ |
|
13-06-2026 |
ವೆಸ್ಟ್ ಇಂಡೀಸ್ vs ನ್ಯೂಜಿಲೆಂಡ್ |
ಹ್ಯಾಂಪ್‌ಶೈರ್ ಬೌಲ್ |
|
14-06-2026 |
ಬಾಂಗ್ಲಾದೇಶ vs ನೆದರ್ಲ್ಯಾಂಡ್ಸ್ |
ಎಡ್ಜ್‌ಬಾಸ್ಟನ್ |
|
14-06-2026 |
ಭಾರತ vs. ಪಾಕಿಸ್ತಾನ |
ಎಡ್ಜ್‌ಬಾಸ್ಟನ್ |
|
16-06-2026 |
ನ್ಯೂಜಿಲೆಂಡ್ vs ಶ್ರೀಲಂಕಾ |
ಹ್ಯಾಂಪ್‌ಶೈರ್ ಬೌಲ್ |
|
16-06-2026 |
ಇಂಗ್ಲೆಂಡ್ vs ಐರ್ಲೆಂಡ್ |
ಹ್ಯಾಂಪ್‌ಶೈರ್ ಬೌಲ್ |
|
17-06-2026 |
ಆಸ್ಟ್ರೇಲಿಯಾ vs ಬಾಂಗ್ಲಾದೇಶ |
ಹೆಡಿಂಗ್ಲೆ |
|
17-06-2026 |
ಭಾರತ vs ನೆದರ್ಲ್ಯಾಂಡ್ಸ್ |
ಹೆಡಿಂಗ್ಲೆ |
|
17-06-2026 |
ದಕ್ಷಿಣ ಆಫ್ರಿಕಾ vs ಪಾಕಿಸ್ತಾನ |
ಎಡ್ಜ್‌ಬಾಸ್ಟನ್ |
|
18-06-2026 |
ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್ |
ಹೆಡಿಂಗ್ಲೆ |
|
19-06-2026 |
ನ್ಯೂಜಿಲೆಂಡ್ vs ಐರ್ಲೆಂಡ್ |
ಹ್ಯಾಂಪ್‌ಶೈರ್ ಬೌಲ್ |
|
20-06-2026 |
ಆಸ್ಟ್ರೇಲಿಯಾ vs ನೆದರ್ಲ್ಯಾಂಡ್ಸ್ |
ಹ್ಯಾಂಪ್‌ಶೈರ್ ಬೌಲ್ |
|
20-06-2026 |
ಪಾಕಿಸ್ತಾನ vs ಬಾಂಗ್ಲಾದೇಶ |
ಹ್ಯಾಂಪ್‌ಶೈರ್ ಬೌಲ್ |
|
20-06-2026 |
ಇಂಗ್ಲೆಂಡ್ vs ಸ್ಕಾಟ್ಲೆಂಡ್ |
ಹೆಡಿಂಗ್ಲೆ |
|
21-06-2026 |
ವೆಸ್ಟ್ ಇಂಡೀಸ್ vs ಶ್ರೀಲಂಕಾ |
ಬ್ರಿಸ್ಟಲ್ ಕೌಂಟಿ ಮೈದಾನ |
|
21-06-2026 |
ದಕ್ಷಿಣ ಆಫ್ರಿಕಾ vs ಭಾರತ |
ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ |
|
23-06-2026 |
ನ್ಯೂಜಿಲೆಂಡ್ vs ಸ್ಕಾಟ್ಲೆಂಡ್ |
ಬ್ರಿಸ್ಟಲ್ ಕೌಂಟಿ ಮೈದಾನ |
|
23-06-2026 |
ಶ್ರೀಲಂಕಾ vs ಐರ್ಲೆಂಡ್ |
ಬ್ರಿಸ್ಟಲ್ ಕೌಂಟಿ ಮೈದಾನ |
|
23-06-2026 |
ಆಸ್ಟ್ರೇಲಿಯಾ vs. ಪಾಕಿಸ್ತಾನ |
ಹೆಡಿಂಗ್ಲೆ |
|
24-06-2026 |
ಇಂಗ್ಲೆಂಡ್ vs ವೆಸ್ಟ್ ಇಂಡೀಸ್ |
ಲಾರ್ಡ್ಸ್ ಕ್ರಿಕೆಟ್ ಮೈದಾನ |
|
25-06-2026 |
ಭಾರತ vs ಬಾಂಗ್ಲಾದೇಶ |
ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ |
|
25-06-2026 |
ದಕ್ಷಿಣ ಆಫ್ರಿಕಾ vs ನೆದರ್ಲ್ಯಾಂಡ್ಸ್ |
ಬ್ರಿಸ್ಟಲ್ ಕೌಂಟಿ ಮೈದಾನ |
|
26-06-2026 |
ಶ್ರೀಲಂಕಾ vs ಸ್ಕಾಟ್ಲೆಂಡ್ |
ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ |
|
27-06-2026 |
ಪಾಕಿಸ್ತಾನ vs ನೆದರ್ಲ್ಯಾಂಡ್ಸ್ |
ಬ್ರಿಸ್ಟಲ್ ಕೌಂಟಿ ಮೈದಾನ |
|
27-06-2026 |
ವೆಸ್ಟ್ ಇಂಡೀಸ್ vs ಐರ್ಲೆಂಡ್ |
ಬ್ರಿಸ್ಟಲ್ ಕೌಂಟಿ ಮೈದಾನ |
|
27-06-2026 |
ಇಂಗ್ಲೆಂಡ್ vs ನ್ಯೂಜಿಲೆಂಡ್ |
ದಿ ಓವಲ್ |
|
28-06-2026 |
ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ |
ಲಾರ್ಡ್ಸ್ ಕ್ರಿಕೆಟ್ ಮೈದಾನ |
|
28-06-2026 |
ಆಸ್ಟ್ರೇಲಿಯಾ vs ಭಾರತ |
ಲಾರ್ಡ್ಸ್ ಕ್ರಿಕೆಟ್ ಮೈದಾನ |
|
30-06-2026 |
ಸೆಮಿಫೈನಲ್ 1 |
ದಿ ಓವಲ್ |
|
02-07-2026 |
ಸೆಮಿಫೈನಲ್ 2 |
ದಿ ಓವಲ್ |
|
05-07-2026 |
ಫೈನಲ್ |
ಲಾರ್ಡ್ಸ್ ಕ್ರಿಕೆಟ್ ಮೈದಾನ |
Published On - 4:11 pm, Tue, 24 February 26