World Cup 2025: ಕೊನೆಗೂ ಟಾಸ್ ಗೆದ್ದ ಹರ್ಮನ್‌ಪ್ರೀತ್ ಕೌರ್; ಉಮಾ ಛೆಟ್ರಿಗೆ ಚೊಚ್ಚಲ ಪಂದ್ಯ
India Women vs Bangladesh League Match:ಐಸಿಸಿ ಮಹಿಳಾ ವಿಶ್ವಕಪ್ 2025ರ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶವನ್ನು ಎದುರಿಸುತ್ತಿದೆ. ಸೆಮಿಫೈನಲ್‌ಗೆ ಅರ್ಹತೆ ಪಡೆದಿರುವ ಭಾರತ, ಈ ಪಂದ್ಯದಲ್ಲಿ ತನ್ನ ನ್ಯೂನತೆಗಳನ್ನು ಸರಿಪಡಿಸಲು ಯತ್ನಿಸಲಿದೆ. ಬಾಂಗ್ಲಾದೇಶ ಗೆಲುವಿನೊಂದಿಗೆ ಅಭಿಯಾನ ಮುಗಿಸಲು ನೋಡುತ್ತಿದೆ. ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದು, ಉಮಾ ಛೆಟ್ರಿ ಏಕದಿನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಐಸಿಸಿ ಮಹಿಳಾ ವಿಶ್ವಕಪ್ 2025 (ICC Women’s World Cup 2025) ರ ಅಂತಿಮ ಲೀಗ್ ಪಂದ್ಯವು ಭಾರತ ಮತ್ತು ಬಾಂಗ್ಲಾದೇಶ (India vs Bangladesh) ನಡುವೆ ನಡೆಯುತ್ತಿದೆ. ಎರಡೂ ತಂಡಗಳು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ. ಟೀಂ ಇಂಡಿಯಾ ಈಗಾಗಲೇ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಆದಾಗ್ಯೂ ಈ ಪಂದ್ಯದಲ್ಲಿ ತನ್ನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಲಿದೆ. ಏತನ್ಮಧ್ಯೆ, ಬಾಂಗ್ಲಾದೇಶವು ಪಂದ್ಯಾವಳಿಯನ್ನು ಗೆಲುವಿನೊಂದಿಗೆ ಮುಗಿಸಲು ನೋಡುತ್ತಿದೆ. ಇನ್ನು ಈ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದಿದ್ದು, ಹರ್ಮನ್‌ಪ್ರೀತ್ ಕೌರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಅಂದರೆ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಲಿದೆ. ಈ ಪಂದ್ಯದಲ್ಲಿ ಟಾಸ್ ಗೆಲ್ಲುವ ಮೂಲಕ ಹರ್ಮನ್‌ಪ್ರೀತ್ ಸತತ ಟಾಸ್ ಸೋಲುಗಳ ಸರಣಿಯನ್ನು ಅಂತ್ಯಗೊಳಿಸಿದ್ದಾರೆ. ವಾಸ್ತವವಾಗಿ ಈ ವಿಶ್ವಕಪ್ನಲ್ಲಿ ಹರ್ಮನ್ ಮೊದಲ ಬಾರಿಗೆ ಟಾಸ್ ಗೆದ್ದಿದ್ದಾರೆ.
ಈ ಟೂರ್ನಿಯಲ್ಲಿ ಭಾರತ ಇದುವರೆಗೆ ಆರು ಪಂದ್ಯಗಳನ್ನು ಆಡಿದ್ದು, ಮೂರರಲ್ಲಿ ಗೆದ್ದಿದ್ದರೆ, ಉಳಿದ ಮೂರು ಪಂದ್ಯಗಳಲ್ಲಿ ಸೋತಿದೆ. ಈ ಮೂಲಕ ಆರು ಅಂಕಗಳು ಮತ್ತು 0.628 ರ ನೆಟ್ ರನ್ ದರದೊಂದಿಗೆ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಮತ್ತೊಂದೆಡೆ, ಬಾಂಗ್ಲಾದೇಶವು ಆಡಿರುವ ಆರು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದ್ದು, ಉಳಿದ ಐದು ಪಂದ್ಯಗಳಲ್ಲಿ ಸೋಲನುಭವಿಸಿದೆ. ಬಾಂಗ್ಲಾ ತಂಡ ತನ್ನ ಏಕೈಕ ಗೆಲುವನ್ನು ಪಾಕಿಸ್ತಾನದ ವಿರುದ್ಧ ಪಡೆದಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
ಉಮಾ ಛೆಟ್ರಿಗೆ ಚೊಚ್ಚಲ ಪಂದ್ಯ
ಈ ಪಂದ್ಯದಲ್ಲಿ ಭಾರತ ತಂಡದ ಪರ ಉಮಾ ಛೆಟ್ರಿ ಅವರು ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಟಾಸ್‌ಗೆ ಮುನ್ನ ಅವರಿಗೆ ಏಕದಿನ ಕ್ಯಾಪ್ ನೀಡಲಾಯಿತು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತ ತಂಡ ತನ್ನ ಬೆಂಚ್ ಬಲವನ್ನು ಪರೀಕ್ಷಿಸಲು ಬಯಸುತ್ತದೆ. ಛೆಟ್ರಿ ಅವರಿಗೆ ಸ್ಮೃತಿ ಮಂಧಾನ ಅವರು ಏಕದಿನ ಕ್ಯಾಪ್ ನೀಡಿದರು.
ODI debut in a World Cup game ✨👌
Special moment as debutant Uma Chetry receives her ODI cap from vice-captain Smriti Mandhana 🧢
Updates ▶️ https://t.co/lkuocSlGGJ#TeamIndia | #WomenInBlue | #CWC25 | #INDvBAN pic.twitter.com/nt1Qn6Md8G
— BCCI Women (@BCCIWomen) October 26, 2025
ಉಭಯ ತಂಡಗಳು
ಭಾರತ ತಂಡ: ಪ್ರತೀಕಾ ರಾವಲ್, ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ಉಮಾ ಛೆಟ್ರಿ (ವಿಕೆಟ್‌ಕೀಪರ್), ಅಮಂಜೋತ್ ಕೌರ್, ರಾಧಾ ಯಾದವ್, ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್.
ಬಾಂಗ್ಲಾದೇಶ ತಂಡ: ಸುಮೈಯಾ ಅಖ್ತರ್, ರುಬ್ಯಾ ಹೈದರ್ ಝೆಲಿಕ್, ಶರ್ಮೀನ್ ಅಖ್ತರ್, ಸೋಭಾನಾ ಮೊಸ್ತರಿ, ನಿಗರ್ ಸುಲ್ತಾನ (ವಿಕೆಟ್ ಕೀಪರ್/ನಾಯಕಿ), ಶೋರ್ನಾ ಅಖ್ತರ್, ರಿತು ಮೋನಿ, ರಬಿಯಾ ಖಾನ್, ನಹಿದಾ ಅಖ್ತರ್, ನಿಶಿತಾ ಅಖ್ತರ್ ನಿಶಿ, ಮಾರುಫಾ ಅಖ್ತರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:29 pm, Sun, 26 October 25
