ICC World Cup 2023
ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ರನ್ ಪ್ರವಾಹವೇ ಹರಿದು ಬಂದಿದೆ. ಇದಕ್ಕೆ ಸಾಕ್ಷಿಯೇ ಲೀಗ್ ಹಂತದ 45 ಪಂದ್ಯಗಳಲ್ಲಿ ಮೂಡಿಬಂದಿರುವ ಒಟ್ಟು ಸ್ಕೋರ್. ಅಂದರೆ ಈ ಬಾರಿಯ ವಿಶ್ವಕಪ್ನ ಲೀಗ್ ಹಂತದಲ್ಲಿ ಒಟ್ಟು 45 ಪಂದ್ಯಗಳನ್ನಾಡಲಾಗಿದೆ. ಈ ವೇಳೆ 10 ತಂಡಗಳು ಸೇರಿ ಕಲೆಹಾಕಿರುವ ಒಟ್ಟು ರನ್ಗಳ ಮೊತ್ತ 23 ಸಾವಿರವನ್ನು ದಾಟಿದೆ ಎಂದರೆ ನಂಬಲೇಬೇಕು. ಹಾಗಿದ್ರೆ ಈ ಬಾರಿಯ ವಿಶ್ವಕಪ್ನ ಲೀಗ್ ಹಂತದ ಪಂದ್ಯಗಳಲ್ಲಿ ಕಲೆಹಾಕಿರುವ ರನ್ಗಳು, ಪಡೆದಿರುವ ವಿಕೆಟ್ಗಳು, ಹಿಡಿದ ಕ್ಯಾಚ್ಗಳೆಷ್ಟು ಎಂಬುದರ ಸಂಪೂರ್ಣ ಮಾಹಿತಿ ನೋಡೋಣ…
- ಒಟ್ಟು ರನ್ಗಳು: ಲೀಗ್ ಹಂತದ 45 ಪಂದ್ಯಗಳಿಂದ 10 ತಂಡಗಳು ಸೇರಿ 23002 ರನ್ಗಳನ್ನು ಕಲೆಹಾಕಿದ್ದಾರೆ.
- ಸಿಕ್ಸ್ಗಳ ಸಂಖ್ಯೆ: ಈ ಬಾರಿಯ ವಿಶ್ವಕಪ್ನಲ್ಲಿ ಇದುವರೆಗೆ 592 ಸಿಕ್ಸ್ಗಳನ್ನು ಸಿಡಿಸಲಾಗಿದೆ.
- ಒಟ್ಟು ಕ್ಯಾಚ್ಗಳು: ಲೀಗ್ ಹಂತದ ಪಂದ್ಯಗಳಲ್ಲಿ ಹಿಡಿದಿರುವ ಒಟ್ಟು ಕ್ಯಾಚ್ಗಳ ಸಂಖ್ಯೆ ಬರೋಬ್ಬರಿ 429.
- ಶತಕಗಳ ಸಂಖ್ಯೆ: ಈ ಬಾರಿಯ ವಿಶ್ವಕಪ್ನಲ್ಲಿ ಇದುವರೆಗೆ ಒಟ್ಟು 35 ಶತಕಗಳು ಮೂಡಿ ಬಂದಿವೆ.
- ಅರ್ಧಶತಕಗಳ ಸಂಖ್ಯೆ: ಲೀಗ್ ಹಂತದಲ್ಲಿ ಒಟ್ಟು 113 ಅರ್ಧಶತಕಗಳನ್ನು ಬಾರಿಸಿದ್ದಾರೆ.
- ಒಟ್ಟು ವಿಕೆಟ್ಗಳು: 45 ಪಂದ್ಯಗಳಿಂದ ಒಟ್ಟು 683 ವಿಕೆಟ್ಗಳನ್ನು ಕಬಳಿಸಲಾಗಿದೆ.
- ಶೂನ್ಯಕ್ಕೆ ಔಟ್: 45 ಪಂದ್ಯಗಳಲ್ಲಿ ಒಟ್ಟು 56 ಬಾರಿ ಬ್ಯಾಟರ್ ಶೂನ್ಯಕ್ಕೆ ಔಟಾಗಿದ್ದಾರೆ.
- ಮೇಡನ್ ಓವರ್: ಲೀಗ್ ಹಂತದಲ್ಲಿ ಒಟ್ಟು 137 ಮೇಡನ್ ಓವರ್ಗಳನ್ನು ಎಸೆಯಲಾಗಿದೆ.
- ಫೋರ್ಗಳ ಸಂಖ್ಯೆ: 45 ಪಂದ್ಯಗಳಿಂದ ಮೂಡಿಬಂದ ಒಟ್ಟು ಫೋರ್ಗಳ ಸಂಖ್ಯೆ ಬರೋಬ್ಬರಿ 2109.
ಇದನ್ನೂ ಓದಿ: ಮೈದಾನಕ್ಕೆ ಡ್ರಿಂಕ್ಸ್ ತಂದು ತಾನೇ ಕುಡಿದ ಇಶಾನ್ ಕಿಶನ್..!
3 ಪಂದ್ಯಗಳು ಬಾಕಿ:
ಏಕದಿನ ವಿಶ್ವಕಪ್ನ ಮೂರು ಪಂದ್ಯಗಳು ಇನ್ನೂ ಬಾಕಿಯಿವೆ. ಇದರಲ್ಲಿ 2 ಸೆಮಿ ಫೈನಲ್ಸ್ ಹಾಗೂ ಒಂದು ಫೈನಲ್ ಪಂದ್ಯ ಸೇರಿದೆ. ಅದರಲ್ಲೂ ಸೆಮಿಫೈನಲ್ ಹಂತದಲ್ಲಿ ಕಣಕ್ಕಿಳಿಯುತ್ತಿರುವುದು ಬಲಿಷ್ಠ ಪಡೆ ಎಂದೇ ಗುರುತಿಸಿಕೊಂಡಿರುವ ಟೀಮ್ ಇಂಡಿಯಾ, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಝಿಲೆಂಡ್ ತಂಡಗಳು. ಹೀಗಾಗಿ ವಿಶ್ವಕಪ್ ಮುಕ್ತಾಯದ ವೇಳೆಗೆ ಈ ಅಂಕಿ ಅಂಶಗಳಲ್ಲಿ ಮತ್ತಷ್ಟು ಬದಲಾವಣೆ ಕಂಡು ಬರಲಿದೆ.
ಏಕದಿನ ವಿಶ್ವಕಪ್ ಸೆಮಿ ಫೈನಲ್ ವೇಳಾಪಟ್ಟಿ:
- ಮೊದಲ ಸೆಮಿಫೈನಲ್: ನವೆಂಬರ್ 15 (ಬುಧವಾರ)– ಭಾರತ vs ನ್ಯೂಝಿಲೆಂಡ್ (ವಾಂಖೆಡೆ ಸ್ಟೇಡಿಯಂ, ಮುಂಬೈ)
- ಎರಡನೇ ಸೆಮಿಫೈನಲ್: ನವೆಂಬರ್ 16 (ಗುರುವಾರ)– ಸೌತ್ ಆಫ್ರಿಕಾ vs ಆಸ್ಟ್ರೇಲಿಯಾ (ಈಡನ್ ಗಾರ್ಡನ್ಸ್ ಸ್ಟೇಡಿಯಂ, ಕೊಲ್ಕತ್ತಾ)
- ಫೈನಲ್ ಪಂದ್ಯ: ನವೆಂಬರ್ 19 (ಭಾನುವಾರ)- ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.