ಐಸ್ಲೆಂಡ್ ದೇಶ ಕ್ರಿಕೆಟ್ (Iceland Cricket) ಲೋಕದಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಿ ಈವರೆಗೆ ಗೋಚರಿಸಿಲ್ಲ. ದುರ್ಬಲ ತಂಡವಾಗಿ ಗುರುತಿಸಿಕೊಂಡಿರುವ ಐಸ್ಲೆಂಡ್ ಕ್ರಿಕೆಟ್ ತನ್ನ ಟ್ವಿಟ್ಟರ್ (Iceland Cricket Twitter) ಖಾತೆಯಲ್ಲಿ ಮಾತ್ರ ಪ್ರಚಂಡವಾಗಿದೆ. ಕಳೆದ ಕೆಲವು ವರ್ಷಗಳಿಂದ ಐಸ್ಲೆಂಡ್ ಕ್ರಿಕೆಟ್ನ ಟ್ವಿಟ್ಟರ್ ಖಾತೆ ಟ್ವೀಟ್ಗಳ ವಿಚಾರಕ್ಕೆ ಭಾರೀ ಸುದ್ದಿಯಾಗುತ್ತಲೇ ಇದೆ. ಇದೇ ಕಾರಣಕ್ಕೆ ಐಸ್ಲೆಂಡ್ ಕ್ರಿಕೆಟ್ ಟ್ವಿಟ್ಟರ್ ಖಾತೆಗೆ ಸಾಕಷ್ಟು ಫಾಲೋವರ್ಗಳು ಕೂಡ ಇದ್ದಾರೆ ಎಂದರೆ ನಂಬಲೇ ಬೇಕು. ಸದ್ಯ ಐಸ್ಲೆಂಡ್ ಕ್ರಿಕೆಟ್ ಹೊಸದಾಗಿ ಒಂದು ಟ್ವೀಟ್ ಮಾಡಿದ್ದು, ಇದು ಕ್ರಿಕೆಟ್ ವಲಯದಲ್ಲಿ ಸಖತ್ ಸೌಂಡ್ ಆಡುತ್ತಿದೆ. ಅಷ್ಟಕ್ಕೂ ಐಸ್ಲೆಂಡ್ ಕ್ರಿಕೆಟ್ ಮಾಡಿದ ಈ ಟ್ವೀಟ್ ಏನು..?
ಭಾರತ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಆಸ್ಟ್ರೇಲಿಯಾದ ಬ್ಯಾಟಿಂಗ್ ದಿಗ್ಗಜ ಡಾನ್ ಬ್ರಾಡ್ಮನ್ ಕುರಿತು ಐಸ್ಲೆಂಡ್ ಕ್ರಿಕೆಟ್ ಟ್ವೀಟ್ ಒಂದನ್ನು ಮಾಡಿದೆ. “ಜೀವನದಲ್ಲಿ ಎಲ್ಲವೂ ಸನ್ನಿವೇಶ ಮತ್ತು ಅದೃಷ್ಟದಿಂದ ಕೂಡಿರುತ್ತದೆ. ಉದಾಹರಣೆಗೆ ಆರ್. ಅಶ್ವಿನ್ ಶ್ರೀಲಂಕಾದಲ್ಲಿ ಹುಟ್ಟಿದ್ದರೆ ಅವರು ಮುತ್ತಯ್ಯ ಮುರಳೀಧರನ್ ರೀತಿಯಲ್ಲಿ ಅನೇಕ ವಿಕೆಟ್ಗಳನ್ನು ಪಡೆದುಕೊಂಡು ಕ್ರಿಕೆಟ್ ವೃತ್ತಿ ಜೀವನವನ್ನು ಕೊನೆಗೊಳಿಸಬಹುದಿತ್ತು. ಹಾಗೆಯೇ ಡಾನ್ ಬ್ರಾಡ್ಮನ್ ಐಸ್ಲೆಂಡ್ನಲ್ಲಿ ಹುಟ್ಟಿದ್ದರೆ ಯಾವುದೇ ಅಂತರರಾಷ್ಟ್ರೀಯ ರನ್ ಗಳಿಸುತ್ತಿರಲಿಲ್ಲ ಬದಲಾಗಿ ಮೀನುಗಾರನಾಗುತ್ತಿದ್ದರು. ಅದೇ ಜೀವನ,” ಎಂದ ಟ್ವೀಟ್ ಮಾಡಿದೆ.
Context and luck is everything in life. If Ravi Ashwin had been born in Sri Lanka, he would probably end his career with as many wickets as Muralitharan. If Don Bradman had been born in Iceland, he’d have scored no international runs and been a below par fisherman. That’s life.
— Iceland Cricket (@icelandcricket) December 24, 2021
ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಾಕಷ್ಟು ಕಮೆಂಟ್ಗಳು ಬರುತ್ತಿವೆ. ಐಸ್ಲೆಂಡ್ ಟ್ವಿಟ್ಟರ್ ಖಾತೆಯಿಂದ ಈರೀತಿಯ ಟ್ವೀಟ್ಗಳು ಬರುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಐಸಿಸಿ ಏಕದಿನ ವಿಶ್ವಕಪ್ಗೆ ಟೀಮ್ ಇಂಡಿಯಾ ಪರ ಅಂಬಟಿ ರಾಯುಡು ಅವರನ್ನು ಕೈಬಿಟ್ಟಾಗ ಕೂಡ ಐಸ್ಲೆಂಡ್ ಕ್ರಿಕೆಟ್ ಇದಕ್ಕೆ ಪ್ರತಿಕ್ರಿಯಿಸಿತ್ತು.
ವಿಶ್ವಕಪ್ ವೀಕ್ಷಿಸಲು 3D ಕನ್ನಡಕಕ್ಕೆ ಆರ್ಡರ್ ಮಾಡಿದ್ದೇನೆ ಎಂದು ರಾಯುಡು ವ್ಯಂಗ್ಯ ಮಾಡಿ ಹಾಕಿದ್ದ ಟ್ವೀಟ್ ಎಲ್ಲರ ಗಮನ ಸೆಳೆದಿತ್ತು. ಈ ಬಗ್ಗೆಯೂ ಐಸ್ಲೆಂಡ್ ಕ್ರಿಕೇಟ್ ಮಂಡಳಿ ಉಲ್ಲೇಖ ಮಾಡಿತ್ತು. “ಮಯಾಂಕ್ ಅಗರ್ವಾಲ್ ಬೌಲಿಂಗ್ನಲ್ಲಿ ಶೇ.72.33 ಸರಾಸರಿ ಹೊಂದಿದ್ದಾರೆ. ಈಗಲಾದರೂ ರಾಯುಡು ತಮ್ಮ 3ಡಿ ಗ್ಲಾಸ್ಅನ್ನು ತೆಗೆದಿಡಬೇಕು. ಅವರಿಗೋಸ್ಕರ ಸಿದ್ಧಪಡಿಸಿದ ಈ ದಾಖಲೆಗಳನ್ನು ಓದಲು ಅವರಿಗೆ ಸಾಮಾನ್ಯ ಕನ್ನಡಕದ ಅಗತ್ಯತೆ ಇದೆ. ನಮ್ಮ ಜೊತೆ ಬಂದು ಕೈ ಜೋಡಿಸಿ. ನಾವು ನಿಮ್ಮನ್ನು ಇಷ್ಟಪಡುತ್ತೇವೆ,” ಎಂದು ಐಸ್ಲೆಂಡ್ ಕ್ರಿಕೆಟ್ ಮಂಡಳಿ ಆಹ್ವಾನ ನೀಡಿತ್ತು.
Agarwal has three professional wickets at 72.33 so at least @RayuduAmbati can put away his 3D glasses now. He will only need normal glasses to read the document we have prepared for him. Come join us Ambati. We love the Rayudu things. #BANvIND #INDvBAN #CWC19 pic.twitter.com/L6XAefKWHw
— Iceland Cricket (@icelandcricket) July 1, 2019
ಅಲ್ಲದೆ ರಾಯುಡುಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡದೇ ಇರುವ ವಿಚಾರದಲ್ಲಿ ಲಾಭ ಪಡೆದುಕೊಳ್ಳಲು ಐಸ್ಲೆಂಡ್ ಮುಂದಾಗಿತ್ತು. ಈ ಕುರಿತು ವಿಲಕ್ಷಣ ಟ್ವೀಟ್ ಕೂಡ ಮಾಡಿತ್ತು. “ನೀವು ನಮ್ಮ ದೇಶದ ನಾಗರಿಕತ್ವ ಪಡೆದುಕೊಳ್ಳಿ. ಈ ಮೂಲಕ ಐಸ್ಲೆಂಡ್ ತಂಡವನ್ನು ಪ್ರತಿನಿಧಿಸಿ. ಒಂದೊಮ್ಮೆ ನಿಮಗೆ ವಿಶ್ವಕಪ್ನಲ್ಲಿ ಅವಕಾಶ ಸಿಕ್ಕರೆ ಭಾರತದ ಪರವಾಗಿ ಆಟವಾಡಿ,” ಎಂದು ಕೋರಿತ್ತು.
KL Rahul: ರಹಾನೆ-ಅಯ್ಯರ್ ಪೈಕಿ ಯಾರಿಗೆ ಸ್ಥಾನ?: ಕಠಿಣ ಪ್ರಶ್ನೆಗೆ ಕೆಎಲ್ ರಾಹುಲ್ ಖಡಕ್ ಉತ್ತರ
RCB New Captain: ಶಾಕಿಂಗ್: ಆರ್ಸಿಬಿ ತಂಡಕ್ಕೆ ಕ್ಯಾಪ್ಟನ್ ಫಿಕ್ಸ್?: ಹೊಸ ನಾಯಕ ಯಾರು ಗೊತ್ತೇ?
(Iceland Cricket Hilarious Tweet the names of Ravichandran Ashwin and Don Bradman went viral on the micro-blogging site)
Published On - 11:52 am, Sat, 25 December 21