IND vs SL: ಪ್ಲೇಯಿಂಗ್ 11 ಇರಲ್ಲ, ರನ್, ವಿಕೆಟ್ ಲೆಕ್ಕಕ್ಕಿಲ್ಲ; ಅಭ್ಯಾಸ ಪಂದ್ಯದ ನಿಯಮಗಳಿವು
India vs Sri Lanka Practice Game: ಭಾರತ-ಶ್ರೀಲಂಕಾ ಟೆಸ್ಟ್ ಸರಣಿಗೆ ಮುನ್ನ ನಡೆಯುವ ಮೂರು ದಿನಗಳ ಅಭ್ಯಾಸ ಪಂದ್ಯದ ವಿಶೇಷ ನಿಯಮಗಳನ್ನು ತಿಳಿಯಿರಿ. ಇದು ಕೇವಲ ಆಟಗಾರರ ಅಭ್ಯಾಸಕ್ಕಾಗಿ ಮೀಸಲಾಗಿದ್ದು, ಇಲ್ಲಿ ನಿರ್ದಿಷ್ಟ ಪ್ಲೇಯಿಂಗ್ ಇಲೆವೆನ್ ಇರುವುದಿಲ್ಲ. ತಂಡದ ಎಲ್ಲಾ ಆಟಗಾರರು ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಬಹುದು. ಬ್ಯಾಟರ್‌ಗಳ ರನ್ ಅಥವಾ ಬೌಲರ್‌ಗಳ ವಿಕೆಟ್‌ಗಳು ಅಧಿಕೃತ ದಾಖಲೆಗಳಿಗೆ ಸೇರುವುದಿಲ್ಲ. ಪಿಚ್ ಸಹ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಸಿದ್ಧವಾಗಿರುತ್ತದೆ.

ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಟೆಸ್ಟ್ ತಂಡ ಶ್ರೀಲಂಕಾ (India vs Sri Lanka) ಪ್ರವಾಸದಲ್ಲಿದೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 15 ರಿಂದ ಆರಂಭವಾಗಲಿದೆ. ಆದರೆ ಆ ಪಂದ್ಯಕ್ಕೂ ಮುನ್ನ ಮೂರು ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ. ವಾಸ್ತವವಾಗಿ ಈ ಅಭ್ಯಾಸ ಪಂದ್ಯವನ್ನು ಈ ಮೊದಲು 4 ದಿನಗಳಿಗೆ ನಿಗದಿಪಡಿಸಲಾಗಿತ್ತು. ಆದರೆ 4 ದಿನಗಳನ್ನು 3 ದಿನಗಳಿಗೆ ಇಳಿಸಲಾಗಿದೆ. ಇದರರ್ಥ ಆಗಸ್ಟ್ 7 ರಿಂದ ಆರಂಭವಾಗುವ ಈ ಅಭ್ಯಾಸ ಪಂದ್ಯ ಆಗಸ್ಟ್ 9 ಕ್ಕೆ ಮುಗಿಯಲಿದೆ. ಈ ಪಂದ್ಯದಲ್ಲಿ ಭಾರತ ತಂಡ, ಶ್ರೀಲಂಕಾ ಇಲೆವೆನ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಅಭ್ಯಾಸ ಪಂದ್ಯದ ನಿಯಮಗಳೇನು? ಈ ಪಂದ್ಯದಲ್ಲಿ ಪ್ಲೇಯಿಂಗ್ 11 ಇರುವುದಿಲ್ಲ ಏಕೆ? ಬೌಲರ್ಗಳು ಪಡೆದ ವಿಕೆಟ್‌ಗಳು ಲೆಕ್ಕಕ್ಕಿಲ್ಲ ಏಕೆ? ಹಗೆಯೇ ಬ್ಯಾಟರ್ಗಳು ಬಾರಿಸಿದ ರನ್‌ಗಳು ಲೆಕ್ಕಕ್ಕಿಲ್ಲ ಏಕೆ ಎಂಬುದನ್ನು ನೋಡೋಣ.
ಪ್ಲೇಯಿಂಗ್ 11 ಇರುವುದಿಲ್ಲ
ಮೊದಲಿಗೆ ಈ ಅಭ್ಯಾಸ ಪಂದ್ಯಕ್ಕೆ ಪ್ಲೇಯಿಂಗ್ 11 ಏಕೆ ಇರುವುದಿಲ್ಲ ಎಂಬುದನ್ನು ನೋಡುವುದಾದರೆ.. ಹೆಸರೇ ಹೇಳುವಂತೆ ಇದು ಅಭ್ಯಾಸ ಪಂದ್ಯ. ಮುಖ್ಯ ಪಂದ್ಯಕ್ಕೂ ಮುನ್ನ ಆಟಗಾರರು ತಮ್ಮ ಲಯ ಕಂಡುಕೊಳ್ಳಲು ಮತ್ತು ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಈ ಅಭ್ಯಾಸ ಪಂದ್ಯ ಅನುವು ಮಾಡಿಕೊಡುತ್ತದೆ. ಹೀಗಾಗಿ ಅಭ್ಯಾಸ ಪಂದ್ಯದಲ್ಲಿ ತಂಡದ ಎಲ್ಲಾ ಆಟಗಾರರು ಬ್ಯಾಟಿಂಗ್ ಮಾಡಬಹುದು. ಅಂದರೆ ಈ ಪಂದ್ಯಕ್ಕೆ ನಿರ್ದಿಷ್ಟ ಪ್ಲೇಯಿಂಗ್ ಇಲೆವೆನ್ ಇರುವುದಿಲ್ಲ. ಈ ಪ್ರವಾಸಕ್ಕೆ ಆಯ್ಕೆಯಾಗಿರುವ ತಂಡದ ಎಲ್ಲಾ 15 ಆಟಗಾರರು ಬ್ಯಾಟಿಂಗ್ ಮಾಡಬಹುದು. ಹಾಗೆಯೇ ನಾಯಕನಿಗೆ ಸಾಕೆನಿಸಿದಾಗ ಕ್ರೀಸ್ನಲ್ಲಿರುವ ಬ್ಯಾಟ್ಸ್ಮನ್ನ ಮತ್ತೆ ವಾಪಸ್ ಪೆವಿಲಿಯನ್ಗೆ ಕರೆಸಿಕೊಳ್ಳಬಹುದು. ಅವನ ಬದಲಿಗೆ ಬೇರೆ ಆಟಗಾರನಿಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಬಹುದು. ಹಾಗೆಯೇ ನಾಯಕನು ಬಯಸಿದರೆ ಎಲ್ಲಾ ಆಟಗಾರರು ಬೌಲಿಂಗ್ ಮಾಡುಬಹುದು.
ದಾಖಲೆಗಳಲ್ಲಿ ದಾಖಲಾಗಲ್ಲ
ಇನ್ನು ಈ ಅಭ್ಯಾಸ ಪಂದ್ಯದಲ್ಲಿ ಬ್ಯಾಟ್ಸ್‌ಮನ್ ರನ್ ಗಳಿಸಿದರೆ, ಬೌಲರ್ ವಿಕೆಟ್ ಪಡೆದರೆ ಅದ್ಯಾವುದು ದಾಖಲೆ ಪುಸ್ತಕದಲ್ಲಿ ದಾಖಲಾಗಲ್ಲ. ಒಬ್ಬ ಬ್ಯಾಟ್ಸ್‌ಮನ್ ಎಷ್ಟೇ ರನ್ ಗಳಿಸಿದರೂ ಅದು ಅಭ್ಯಾಸಕ್ಕಾಗಿ ಮಾತ್ರ. ಈ ರನ್‌ಗಳು ಅಥವಾ ವಿಕೆಟ್‌ಗಳು ಅವರ ದಾಖಲೆಯಲ್ಲಿ ಎಣಿಕೆಯಾಗುವುದಿಲ್ಲ. ಆಡಿದ ಪಂದ್ಯಗಳ ಸಂಖ್ಯೆಯನ್ನು ಸಹ ಲೆಕ್ಕಿಸಲಾಗುವುದಿಲ್ಲ. ಯಾರಾದರೂ ಶತಕ ಗಳಿಸಿದರೆ, ಒಬ್ಬ ಬೌಲರ್ ಹ್ಯಾಟ್ರಿಕ್ ವಿಕೆಟ್ ಪಡೆದರೆ ಅದನ್ನು ದಾಖಲೆ ಪುಸ್ತಕಗಳಲ್ಲಿ ಎಣಿಸಲಾಗುವುದಿಲ್ಲ ಅಥವಾ ಅವರ ಅಂಕಿಅಂಶಗಳಲ್ಲಿ ಸೇರಿಸಲಾಗುವುದಿಲ್ಲ. ಇದರರ್ಥ ಅದು ಅವರ ಶ್ರೇಯಾಂಕಗಳ ಮೇಲೆ ಪರಿಣಾಮ ಬೀರುವುದಿಲ್ಲ.
WTC Final: ಟೀಂ ಇಂಡಿಯಾ ಡಬ್ಲ್ಯೂಟಿಸಿ ಫೈನಲ್‌ಗೇರಲು ಇನ್ನೆಷ್ಟು ಪಂದ್ಯಗಳನ್ನು ಗೆಲ್ಲಬೇಕು?
ಪಿಚ್ನಲ್ಲಿ ವ್ಯತ್ಯಾಸವಿರಲ್ಲ
ಅಭ್ಯಾಸ ಪಂದ್ಯಗಳಿಗೂ ಪಿಚ್ ಅನ್ನು ಸಂಪೂರ್ಣವಾಗಿ ಸಿದ್ಧಪಡಿಸಲಾಗುತ್ತದೆ, ಅಂತರರಾಷ್ಟ್ರೀಯ ಪಂದ್ಯಕ್ಕೆ ಸಿದ್ಧಪಡಿಸುವ ರೀತಿಯಲ್ಲಿಯೇ ಮೈದಾನವನ್ನು ಸಿದ್ಧಪಡಿಸಲಾಗುತ್ತದೆ. ಇದು ಅಭ್ಯಾಸ ಪಂದ್ಯವಾಗಿದ್ದರೂ, ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಪಿಚ್ ಅನ್ನು ಮಾನದಂಡಗಳ ಪ್ರಕಾರವೇ ರೂಪಿಸಲಾಗಿರುತ್ತದೆ.




