IND Vs AFG 3rd T20I Highlights: ಎರಡನೇ ಸೂಪರ್​ ಓವರ್​ನಲ್ಲಿ ಗೆದ್ದು ಬೀಗಿದ ಭಾರತ

India vs AFG 3rd T20I Highlights in Kannada: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರನೇ ಟಿ20 ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

IND Vs AFG 3rd T20I  Highlights: ಎರಡನೇ ಸೂಪರ್​ ಓವರ್​ನಲ್ಲಿ ಗೆದ್ದು ಬೀಗಿದ ಭಾರತ
ಭಾರತ- ಅಫ್ಘಾನಿಸ್ತಾನ

Updated on: Jan 17, 2024 | 11:28 PM

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರನೇ ಟಿ20 ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಫ್ಘಾನಿಸ್ತಾನಕ್ಕೆ 213 ರನ್ ಟಾರ್ಗೆಟ್ ನೀಡಿತ್ತು. ಉತ್ತರವಾಗಿ ಅಫ್ಘಾನಿಸ್ತಾನ ತಂಡ ಕೂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಹೀಗಾಗಿ ಪಂದ್ಯ ಟೈ ಆಯಿತು. ಮೊದಲ ಸೂಪರ್​ ಓವರ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 6 ಎಸೆತಗಳಲ್ಲಿ 16 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಭಾರತ ಕೂಡ 6 ಎಸೆತಗಳಲ್ಲಿ 16 ರನ್ ಕಲೆಹಾಕಿತು. ಹೀಗಾಗಿ ಪಂದ್ಯ ಎರಡನೇ ಬಾರಿಯೂ ಟೈ ಆಯಿತು. ಆದ್ದರಿಂದ ಪಂದ್ಯ ಮತ್ತೊಮ್ಮೆ ಸೂಪರ್​ ಓವರ್​ಗೆ ಸಾಗಿತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಮೊದಲ ಐದು ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು 11 ರನ್ ಕಲೆಹಾಕಿತು. ಈ ಮೂಲಕ ಅಫ್ಘಾನಿಸ್ತಾನಕ್ಕೆ 12 ರನ್ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಅಫ್ಘಾನ್ ಮೊದಲ ಎಸೆತಗಳಲ್ಲಿ 1 ರನ್ ಬಾರಿಸಿ ಎರಡು ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ಭಾರತ 10 ರನ್​ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

LIVE NEWS & UPDATES

The liveblog has ended.
  • 17 Jan 2024 11:21 PM (IST)

    ಭಾರತಕ್ಕೆ ಜಯ

    ಎರಡನೇ ಸೂಪರ್ ಓವರ್​ನಲ್ಲಿ 12 ರನ್​ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಮೊದಲ ಮೂರು ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು 10 ರನ್​ಗಳಿಂದ ಸೋಲೊಪ್ಪಿಕೊಂಡಿತು.

  • 17 Jan 2024 11:19 PM (IST)

    ಅಫ್ಘಾನ್​ಗೆ 12 ರನ್ ಟಾರ್ಗೆಟ್

    ಎರಡನೇ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಿದ ಭಾರತ ತಂಡ 11 ರನ್ ಗಳಿಸಿತು. ಇನ್ನು ಅಫ್ಘಾನಿಸ್ತಾನ ಪಂದ್ಯ ಗೆಲ್ಲಲು 12 ರನ್ ಗಳಿಸಬೇಕಿದೆ.


  • 17 Jan 2024 11:06 PM (IST)

    ಸೂಪರ್‌ಓವರ್ ಕೂಡ ಟೈ ಆಗಿದೆ

    ಸೂಪರ್ ಓವರ್‌ನಲ್ಲಿ ಭಾರತ ಗೆಲ್ಲಲು 17 ರನ್ ಗಳಿಸಬೇಕಿತ್ತು, ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ ಕೇವಲ 16 ರನ್ ಗಳಿಸಿದ್ದು, ಸೂಪರ್ ಓವರ್ ಕೂಡ ಟೈ ಆಗಿದೆ.

  • 17 Jan 2024 10:54 PM (IST)

    ಭಾರತಕ್ಕೆ ಗೆಲ್ಲಲು 17 ರನ್‌ಗಳ ಅಗತ್ಯವಿದೆ

    ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 16 ರನ್ ಗಳಿಸಿತು. ಇನ್ನು ಭಾರತ ಗೆಲ್ಲಲು 17 ರನ್ ಗಳಿಸಬೇಕಿದೆ.

  • 17 Jan 2024 10:39 PM (IST)

    ಪಂದ್ಯ ಟೈ ಆಗಿದೆ

    ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಟಿ20 ಪಂದ್ಯ ಟೈ ಆಗಿದ್ದು, ಇದೀಗ ಪಂದ್ಯ ಸೂಪರ್ ಓವರ್‌ನತ್ತ ಸಾಗಿದೆ. ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು.

  • 17 Jan 2024 10:38 PM (IST)

    ಗುಲ್ಬದಿನ್ ಅರ್ಧಶತಕ

    ಗುಲ್ಬಾದಿನ್ ಕೊನೆಯ ಓವರ್‌ನ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದಿದ್ದಾರೆ. ಅವರು 21 ಎಸೆತಗಳಲ್ಲಿ 50 ರನ್ ಪೂರೈಸಿದರು.

  • 17 Jan 2024 10:27 PM (IST)

    ಅದ್ಭುತ ಕ್ಯಾಚ್ ಹಿಡಿದ ಕೊಹ್ಲಿ

    ಅಫ್ಘಾನಿಸ್ತಾನ ತನ್ನ ಆರನೇ ವಿಕೆಟ್ ಕಳೆದುಕೊಂಡಿದೆ. ನಜೀಬುಲ್ಲಾ 5 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ ಬೌಂಡರಿ ಲೈನ್​ನಲ್ಲಿ ಅದ್ಭುತ ಕ್ಯಾಚ್ ಹಿಡಿದರು.

    ಅಫ್ಘಾನ್ 182/6

  • 17 Jan 2024 10:24 PM (IST)

    ಕರೀಂ ಜನತ್ ಔಟ್

    18ನೇ ಓವರ್‌ನ ಮೊದಲ ಎಸೆತದಲ್ಲಿ ಕರೀಂ ಜನತ್ ರನೌಟ್ ಆದರು.

  • 17 Jan 2024 10:19 PM (IST)

    ಮೊಹಮ್ಮದ್ ನಬಿ ಔಟ್

    ವಾಷಿಂಗ್ಟನ್ ಸುಂದರ್ ಅಫ್ಘಾನಿಸ್ತಾನಕ್ಕೆ ನಾಲ್ಕನೇ ದೊಡ್ಡ ಹೊಡೆತ ನೀಡಿದರು. ಮೊಹಮ್ಮದ್ ನಬಿ 34 ರನ್ ಗಳಿಸಿ ಔಟಾದರು.

  • 17 Jan 2024 10:19 PM (IST)

    ನಬಿ ಸಿಡಿಲಬ್ಬರದ ಬ್ಯಾಟಿಂಗ್

    ಒಂದರ ಹಿಂದೊಂದರಂತೆ ವಿಕೆಟ್‌ಗಳು ಪತನಗೊಂಡ ನಂತರ ಮೊಹಮ್ಮದ್ ನಬಿ ಮತ್ತು ಗುಲ್ಬಾದಿನ್ ಭಾರತದ ಬೌಲರ್‌ಗಳನ್ನು ಬೆಂಡೆತ್ತುದ್ದಿದ್ದಾರೆ. ಅಫ್ಘಾನಿಸ್ತಾನದ ಸ್ಕೋರ್ 161/3

  • 17 Jan 2024 10:18 PM (IST)

    ಬ್ಯಾಕ್ ಟು ಬ್ಯಾಕ್ ವಿಕೆಟ್

    ಅಫ್ಘಾನಿಸ್ತಾನ ಒಂದೇ ಓವರ್‌ನಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತು. ಮೊದಲು ನಾಯಕ ಇಬ್ರಾಹಿಂ ಜದ್ರಾನ್ ಔಟಾದರೆ ನಂತರ ಬಂದ ಉಮರ್ಜಾಯ್ ಮೊದಲ ಎಸೆತದಲ್ಲೇ ಔಟಾದರು.

  • 17 Jan 2024 09:48 PM (IST)

    ಗುರ್ಬಾಝ್ ಔಟ್

    ಅಫ್ಘಾನಿಸ್ತಾನದ ಮೊದಲ ವಿಕೆಟ್ ಪತನವಾಗಿದೆ. 50 ರನ್ ಕಲೆಹಾಕಿದ ಬೆನ್ನಲ್ಲೇ ಗುರ್ಬಾಝ್ ಕ್ಯಾಚಿತ್ತು ಔಟಾಗಿದ್ದಾರೆ.

  • 17 Jan 2024 09:41 PM (IST)

    ಭಾರತಕ್ಕೆ ಬೇಕು ವಿಕೆಟ್

    ಅಫ್ಘಾನಿಸ್ತಾನದ ಆರಂಭಿಕರು ಉತ್ತಮ ಆರಂಭ ನೀಡಿದ್ದಾರೆ. ಪ್ರವಾಸಿ ತಂಡ 50 ರನ್ ಪೂರೈಸಿದೆ. ಟೀಂ ಇಂಡಿಯಾ ಇನ್ನೂ ವಿಕೆಟ್‌ಗಾಗಿ ಹುಡುಕಾಟ ನಡೆಸುತ್ತಿದೆ.

  • 17 Jan 2024 09:40 PM (IST)

    ಅಫ್ಘಾನಿಸ್ತಾನಕ್ಕೆ ಉತ್ತಮ ಆರಂಭ

    ಅಫ್ಘಾನಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ. 5 ಓವರ್‌ಗಳ ನಂತರ ತಂಡದ ಸ್ಕೋರ್ 45/0

  • 17 Jan 2024 09:14 PM (IST)

    ಅಫ್ಘಾನಿಸ್ತಾನದ ಬ್ಯಾಟಿಂಗ್ ಆರಂಭ

    ಅಫ್ಘಾನಿಸ್ತಾನದ ಬ್ಯಾಟಿಂಗ್ ಶುರುವಾಗಿದೆ. ಗುರ್ಬಾಜ್ ಮತ್ತು ಇಬ್ರಾಹಿಂ ಕ್ರೀಸ್‌ನಲ್ಲಿದ್ದಾರೆ.

  • 17 Jan 2024 08:54 PM (IST)

    212 ರನ್ ಟಾರ್ಗೆಟ್

    ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು. ಭಾರತದ ಪರ ನಾಯಕ ರೋಹಿತ್ ಶರ್ಮಾ 121 ರನ್ ಹಾಗೂ ರಿಂಕು ಸಿಂಗ್ 69 ರನ್ ಗಳಿಸಿದರು.

  • 17 Jan 2024 08:40 PM (IST)

    ರಿಂಕು ಅರ್ಧಶತಕ

    ಟೀಂ ಇಂಡಿಯಾದ ಆಪತ್ಭಾಂಧವ ರಿಂಕು ಸಿಂಗ್ ಕಷ್ಟದ ಸಮಯದಲ್ಲಿ ತಂಡದ ಇನ್ನಿಂಗ್ಸ್ ನಿಭಾಯಿಸಿ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ.

  • 17 Jan 2024 08:38 PM (IST)

    ಶತಕ ಸಿಡಿಸಿದ ರೋಹಿತ್ ಶರ್ಮಾ

    ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೇವಲ 64 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ರೋಹಿತ್ ಬ್ಯಾಟಿಂಗ್ ಆಧಾರದ ಮೇಲೆ ಭಾರತ 170 ರನ್​ಗಳ ಗಡಿ ದಾಟಿದೆ.

  • 17 Jan 2024 08:20 PM (IST)

    ಭಾರತದ ಶತಕ ಪೂರ್ಣ

    15 ಓವರ್‌ಗಳ ನಂತರ ಭಾರತದ ಸ್ಕೋರ್ 4 ವಿಕೆಟ್ ನಷ್ಟದಲ್ಲಿ 109 ರನ್ ಆಗಿದೆ. ರೋಹಿತ್ ಶರ್ಮಾ 55 ರನ್ ಹಾಗೂ ರಿಂಕು ಸಿಂಗ್ 29 ಎಸೆತಗಳಲ್ಲಿ 36 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 17 Jan 2024 08:09 PM (IST)

    ರೋಹಿತ್ ಶರ್ಮಾ ಅರ್ಧಶತಕ

    ಮೂರನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ 41 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಆರಂಭದಲ್ಲಿ 4 ವಿಕೆಟ್‌ಗಳು ಪತನಗೊಂಡ ನಂತರ ರೋಹಿತ್ ಶರ್ಮಾ ಜವಾಬ್ದಾರಿ ವಹಿಸಿಕೊಂಡು ತಂಡದ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ.

  • 17 Jan 2024 08:09 PM (IST)

    10 ಓವರ್‌ ಮುಕ್ತಾಯ

    10 ಓವರ್‌ಗಳ ನಂತರ ಭಾರತದ ಸ್ಕೋರ್ 4 ವಿಕೆಟ್ ನಷ್ಟದಲ್ಲಿ 61 ರನ್ ಆಗಿದೆ. ರಿಂಕು ಸಿಂಗ್ 19 ರನ್ ಹಾಗೂ ರೋಹಿತ್ ಶರ್ಮಾ 27 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪವರ್‌ಪ್ಲೇಯಲ್ಲಿಯೇ ಭಾರತ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

  • 17 Jan 2024 08:09 PM (IST)

    8 ಓವರ್‌ ಮುಕ್ತಾಯ

    8 ಓವರ್‌ಗಳ ಅಂತ್ಯಕ್ಕೆ ಭಾರತದ ಸ್ಕೋರ್ 4 ವಿಕೆಟ್ ನಷ್ಟದಲ್ಲಿ 48 ರನ್ ಆಗಿದೆ. 22 ರನ್‌ಗಳಾಗುವಷ್ಟರಲ್ಲಿ ಸಂಜು ಸ್ಯಾಮ್ಸನ್‌ ರೂಪದಲ್ಲಿ ಭಾರತ ನಾಲ್ಕನೇ ವಿಕೆಟ್‌ ಕಳೆದುಕೊಂಡಿತು. ಅಂದಿನಿಂದ ರೋಹಿತ್ ಮತ್ತು ರಿಂಕು 26 ರನ್ ಸೇರಿಸಿದರು.

  • 17 Jan 2024 07:48 PM (IST)

    50 ರನ್ ಪೂರ್ಣ

    ಟೀಂ ಇಂಡಿಯಾ 9ನೇ ಓವರ್​ನಲ್ಲಿ 50 ರನ್​ಗಳ ಗಡಿ ದಾಟಿದೆ. ರೋಹಿತ್, ರಿಂಕು ಕ್ರೀಸ್​ನಲ್ಲಿದ್ದಾರೆ.

  • 17 Jan 2024 07:42 PM (IST)

    ಪವರ್‌ಪ್ಲೇ ಅಂತ್ಯ

    ಪವರ್‌ಪ್ಲೇ ಅಂತ್ಯಗೊಂಡಿದ್ದು ಭಾರತದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 30 ರನ್ ಆಗಿದೆ. ಪವರ್‌ಪ್ಲೇಯಲ್ಲಿ ಭಾರತ ತಂಡ ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶಿವಂ ದುಬೆ ಮತ್ತು ಸಂಜು ಸ್ಯಾಮ್ಸನ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು . ಫರೀದ್ ಅಹ್ಮದ್ ಮಲಿಕ್ 3 ಮತ್ತು ಉಮರ್ಜಾಯ್ 1 ವಿಕೆಟ್ ಪಡೆದರು.

  • 17 Jan 2024 07:25 PM (IST)

    ಶೂನ್ಯಕ್ಕೆ ಸಂಜು ಔಟ್

    ಬಹಳ ದಿನಗಳ ನಂತರ ಟಿ20 ತಂಡದಲ್ಲಿ ಅವಕಾಶ ಪಡೆದಿದ್ದ ಸಂಜು ಸ್ಯಾಮ್ಸನ್ ಮೊದಲ ಎಸೆತದಲ್ಲೇ ಕ್ಯಾಚಿತ್ತು ಔಟಾಗಿದ್ದಾರೆ.

  • 17 Jan 2024 07:22 PM (IST)

    ಮೂರನೇ ವಿಕೆಟ್ ಪತನ

    ಕಳೆದೆರಡು ಪಂದ್ಯಗಳಲ್ಲಿ ಹೀರೋ ಎನಿಸಿಕೊಂಡಿದ್ದ ಶಿವಂ ದುಬೆ ಈ ಪಂದ್ಯದಲ್ಲಿ ಕೇವಲ 1 ರನ್​ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ.

  • 17 Jan 2024 07:15 PM (IST)

    ಕೊಹ್ಲಿ ಔಟ್

    ಶೂನ್ಯಕ್ಕೆ ವಿರಾಟ್ ಕೊಹ್ಲಿ ವಿಕೆಟ್ ಪತನವಾಗಿದೆ. ಜೈಸ್ವಾಲ್ ನಂತರ ಬಂದ ಕೊಹ್ಲಿ ಮೊದಲ ಎಸೆತದಲ್ಲಿ ಕ್ಯಾಚಿತ್ತು ಔಟಾದರು.

  • 17 Jan 2024 07:14 PM (IST)

    ಜೈಸ್ವಾಲ್ ಔಟ್

    ಟೀಂ ಇಂಡಿಯಾ ಇನ್ನಿಂಗ್ಸ್​ನ ಮೂರನೇ ಓವರ್​ನಲ್ಲಿ ತಂಡದ ಮೊದಲ ವಿಕೆಟ್ ಪತನವಾಗಿದೆ. ಆರಂಭಿಕ ಜೈಸ್ವಾಲ್ ಕೇವಲ 4 ರನ್​ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ.

  • 17 Jan 2024 07:05 PM (IST)

    ಭಾರತದ ಬ್ಯಾಟಿಂಗ್ ಆರಂಭ

    ಭಾರತದ ಬ್ಯಾಟಿಂಗ್ ಆರಂಭವಾಗಿದ್ದು,ನಾಯಕ ರೋಹಿತ್ ಹಾಗೂ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮೊದಲ ಓವರ್​ನಲ್ಲಿ 11 ರನ್ ಬಂದವು. 2 ಬೌಂಡರಿ ಲೆಗ್ ಬೈಸ್​ನಿಂದ ಬಂದವು.

  • 17 Jan 2024 06:42 PM (IST)

    ಅಫ್ಘಾನಿಸ್ತಾನ ತಂಡ

    ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್ (ನಾಯಕ), ಗುಲ್ಬದಿನ್ ನೈಬ್, ಅಜ್ಮತುಲ್ಲಾ ಉಮರ್ಜಾಯ್, ಮೊಹಮ್ಮದ್ ನಬಿ, ನಜೀಬುಲ್ಲಾ ಝದ್ರಾನ್, ಕರೀಂ ಜನತ್, ಶರಫುದ್ದೀನ್ ಅಶ್ರಫ್, ಖೈಸ್ ಅಹ್ಮದ್, ಮೊಹಮ್ಮದ್ ಸಲೀಮ್ ಸಫಿ, ಫರೀದ್ ಅಹ್ಮದ್ ಮಲಿಕ್.

  • 17 Jan 2024 06:41 PM (IST)

    ಭಾರತ ತಂಡ

    ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶಿವಂ ದುಬೆ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಅವೇಶ್ ಖಾನ್, ಮುಖೇಶ್ ಕುಮಾರ್.

  • 17 Jan 2024 06:07 PM (IST)

    ಟೀಂ ಇಂಡಿಯಾದ ಕೊನೆಯ ಪಂದ್ಯ

    2024ರ ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗೆ ಮೂರನೇ ಟಿ20 ಪಂದ್ಯ ಕೊನೆಯ ಪಂದ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿಯವರೆಗೆ ಹೊರಗೆ ಕುಳಿತಿದ್ದ ಆಟಗಾರರಿಗೆ ಇಂದು ನಾಯಕ ರೋಹಿತ್ ಶರ್ಮಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ನೀಡಬಹುದು.

  • Published On - 6:06 pm, Wed, 17 January 24