IND vs AUS: ಬೆರಳು ತೋರಿದ ಸ್ಟೀವ್ ಸ್ಮಿತ್ರನ್ನು ಪೆವಿಲಿಯನ್ಗಟ್ಟಿದ ಜಡೇಜಾ; ವಿಡಿಯೋ ನೋಡಿ
IND vs AUS: ವಾಸ್ತವವಾಗಿ ಸ್ಮಿತ್ ಆಗಾಗ್ಗೆ ಬೌಲರ್‌ಗಳೊಂದಿಗೆ ಇಂತಹ ಕೆಲಸಗಳನ್ನು ಮಾಡುತ್ತಾರೆ. ಕಳೆದ ಭಾರತ ಪ್ರವಾಸದಲ್ಲೂ ಇದೇ ರೀತಿ ಮಾಡಿದ್ದರು.
ನಾಗ್ಪುರದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ (India Vs Australia) ನಡುವಿನ ಟೆಸ್ಟ್ ಸರಣಿಯ ಮೊದಲ ಟೆಸ್ಟ್ನಲ್ಲಿ ಟೀಂ ಇಂಡಿಯಾ (Team India) ಉತ್ತಮ ಆರಂಭ ಪಡೆದುಕೊಂಡಿದೆ. ಟಾಸ್ ಸೋತು ಬೌಲಿಂಗ್ ಆರಂಭಿಸಿರುವ ರೋಹಿತ್ ಪಡೆ ಅಲ್ಪ ರನ್ಗಳಿಗೆ ಆಸೀಸ್ ತಂಡದ ಪ್ರಮುಖ 5 ವಿಕೆಟ್ಗಳನ್ನು ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಬರೋಬ್ಬರಿ 6 ತಿಂಗಳುಗಳ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿರುವ ರವೀಂದ್ರ ಜಡೇಜಾ (Ravindra Jadeja) ತಮ್ಮ ಸ್ಪಿನ್ ಮೋಡಿಯಿಂದ ಕಾಂಗರೂ ತಂಡದ ಪ್ರಮುಖ 3 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರಿಕೆಟ್ನಿಂದ ದೂರ ಉಳಿದು ತಿಂಗಳುಗಳೇ ಕಳೆದಿದ್ದರೂ ತನ್ನ ಹಳೆಯ ಶೈಲಿಯಲ್ಲಿಯೇ ಬೌಲಿಂಗ್ ಆರಂಭಿಸಿದ ಜಡೇಜಾ ಮೊದಲು ಲಬುಶೆನ್ಗೆ ಪೆವಿಲಿಯನ್ ದಾರಿ ತೋರಿಸಿದರೆ, ನಂತರದ ಎಸೆತದಲ್ಲೇ ಮ್ಯಾಥ್ಯೂ ರೆನ್‌ಶಾರನ್ನು ಎಲ್ಬಿ ಬಲೆಗೆ ಬೀಳಿಸಿದರು. ಬಳಿಕ ಜಡೇಜಾ ತೆಗೆದ ಅದೊಂದು ವಿಕೆಟ್ ಮಾತ್ರ ಸಖತ್ ಸದ್ದು ಮಾಡಿತು.
ವಾಸ್ತವವಾಗಿ ಆರಂಭದಲ್ಲಿಯೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆಸೀಸ್ ಪಾಳಯಕ್ಕೆ ಸ್ಟೀವ್ ಸ್ಮಿತ್ ಹಾಗೂ ಲಬುಶೆನ್ ನೆರವಾದರು. ಈ ಇಬ್ಬರು ತಂಡವನ್ನು ಅರ್ಧಶತಕದ ಗಡಿ ದಾಟಿಸಿದರು. ಈ ನಡುವೆ ಸ್ಮಿತ್ ನೀಡಿದ ಕ್ಯಾಚ್ ಅನ್ನು ಕೊಹ್ಲಿ ಕೈ ಚೆಲ್ಲಿದ ಬಳಿಕ ಸ್ಮಿತ್ ಬಿಗ್ ಇನ್ನಿಂಗ್ಸ್ ಆಡುವ ಸೂಚನೆ ನೀಡಿದ್ದರು. ಅಲ್ಲದೆ ಕೆಲವು ಅದ್ಭುತ ಶಾಟ್ ಆಡುವ ಮೂಲಕ ರೋಹಿತ್ ಪಡೆಯಲ್ಲಿ ಭಯ ಹುಟ್ಟಿಸಲು ಆರಂಭಿಸಿದರು.
IND vs AUS: ಶಮಿ ಬೆಂಕಿ ಎಸೆತಕ್ಕೆ ಮೀಟರ್ ದೂರ ಹಾರಿ ಬಿದ್ದ ವಿಕೆಟ್! ದಂಗಾದ ವಾರ್ನರ್; ವಿಡಿಯೋ ನೋಡಿ
ಬ್ಯಾಕ್ ಟು ಬ್ಯಾಕ್ ವಿಕೆಟ್
ಈ ನಡುವೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸಿ ಭಾರತಕ್ಕೆ ನೆರವಾಗಿದ್ದ ಜಡೇಜಾ ಬೌಲಿಂಗ್ಗೆ ಫಿದಾ ಆಗಿದ್ದ ಸ್ಮಿತ್ ಕೂಡ ಜಡೇಜಾ ಅವರ ಉತ್ತಮ ಎಸೆತಗಳಿಗೆ ಹೆಬ್ಬೆರಳನ್ನು ತೋರುವ (Thumbs Up) ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು. ಜಡೇಜಾಗೆ ಮಾತ್ರವಲ್ಲ ಸ್ಮಿತ್, ಟೀಂ ಇಂಡಿಯಾದ ಇತರ ಬೌಲರ್ಗಳಿಗೆ ಇದೇ ರೀತಿಯ ಕೈ ಸನ್ನೆ ಮಾಡುತ್ತಿದ್ದರು. ವಾಸ್ತವವಾಗಿ ಸ್ಮಿತ್ ಆಗಾಗ್ಗೆ ಬೌಲರ್‌ಗಳೊಂದಿಗೆ ಇಂತಹ ಕೆಲಸಗಳನ್ನು ಮಾಡುತ್ತಾರೆ. ಕಳೆದ ಭಾರತ ಪ್ರವಾಸದಲ್ಲೂ ಇದೇ ರೀತಿ ಮಾಡಿದ್ದರು.
That ?????? when @imjadeja let one through Steve Smith’s defence! ??
Follow the match ▶️ https://t.co/SwTGoyHfZx #TeamIndia | #INDvAUS | @mastercardindia pic.twitter.com/Lj5j7pHZi3
— BCCI (@BCCI) February 9, 2023
Back-to-back wickets from Ravi Jadeja finds the Aussies in a bit of trouble. ?
Tune-in to riveting action in the 1st Mastercard #INDvAUS Test on Star Sports & Disney+Hotstar. #BelieveInBlue #TestByFire pic.twitter.com/z2KYiGda9l
— Star Sports (@StarSportsIndia) February 9, 2023
ಊಟದ ನಂತರ ಆಕ್ರಮಣಕಾರಿಯಾದ ಜಡೇಜಾ
ನಾಗ್ಪುರ ಟೆಸ್ಟ್‌ನ ಮೊದಲ ದಿನದ ಊಟದ ನಂತರ ರವೀಂದ್ರ ಜಡೇಜಾ ಅದ್ಭುತ ಬೌಲಿಂಗ್ ಮಾಡಿದರು. ಈ ಎಡಗೈ ಸ್ಪಿನ್ನರ್ ಮೊದಲು ತನ್ನ ಸ್ಪಿನ್‌ನಲ್ಲಿ ಲಬುಶೆನ್ ಅವರನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಮುಂದಿನ ಎಸೆತದಲ್ಲಿಯೇ ಮ್ಯಾಥ್ಯೂ ರೆನ್‌ಶಾ ಎಲ್ ಬಿಡಬ್ಲ್ಯು ಔಟ್ ಆದರು. ಜಡೇಜಾ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶವನ್ನು ಹೊಂದಿದ್ದರು ಆದರೆ ಪೀಟರ್ ಹ್ಯಾಂಡ್ಸ್ಕಾಂಬ್ ಅದಕ್ಕೆ ಅವಕಾಶ ನೀಡಲಿಲ್ಲ. ಆದರೆ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿ ಬಿಗ್ ಇನ್ನಿಂಗ್ಸ್ ಆಡುವ ಸೂಚನೆ ನೀಡಿದ್ದ ಸ್ಮಿತ್ ವಿಕೆಟ್ ಪಡೆಯುವ ಮೂಲಕ ಆಸೀಸ್ಗೆ ಬಿಗ್ ಶಾಕ್ ನೀಡುವಲ್ಲಿ ಜಡೇಜಾ ಯಶಸ್ವಿಯಾದರು. ಅದರಲ್ಲೂ ಸ್ಮಿತ್ ತಂಬ್ಸ್ ಅಪ್ ಮಾಡಿದ ನಂತರದ ಎಸೆತದಲ್ಲಿಯೇ ಜಡೇಜಾ, ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಸರಿಯಾಗಿ ಟಾಂಗ್ ನೀಡಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Thu, 9 February 23