IND vs AUS: ಶಮಿ ಬೆಂಕಿ ಎಸೆತಕ್ಕೆ ಮೀಟರ್ ದೂರ ಹಾರಿ ಬಿದ್ದ ವಿಕೆಟ್! ದಂಗಾದ ವಾರ್ನರ್; ವಿಡಿಯೋ ನೋಡಿ

| Updated By: ಪೃಥ್ವಿಶಂಕರ

Updated on: Feb 09, 2023 | 12:56 PM

IND vs AUS: ನಿರೀಕ್ಷೆಯಂತೆ ಭಾರತದ ವೇಗದ ಬೌಲರ್‌ಗಳು ಆಸ್ಟ್ರೇಲಿಯಾದ ಆರಂಭಕ್ಕೆ ಭಂಗ ತಂದರು. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಮೊದಲನೇ ದಿನದಾಟದ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿತು.

IND vs AUS: ಶಮಿ ಬೆಂಕಿ ಎಸೆತಕ್ಕೆ ಮೀಟರ್ ದೂರ ಹಾರಿ ಬಿದ್ದ ವಿಕೆಟ್! ದಂಗಾದ ವಾರ್ನರ್; ವಿಡಿಯೋ ನೋಡಿ
ಶಮಿ ಬೌಲಿಂಗ್​ಗೆ ವಾರ್ನರ್ ಕ್ಲೀನ್ ಬೌಲ್ಡ್
Follow us on

ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ಆರಂಭವಾಗಿದೆ. ಮೊದಲ ದಿನದಾಟದ ಆರಂಭದಲ್ಲೇ ಭಾರತದ ಬೌಲರ್‌ಗಳು ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಸಿರಾಜ್ ಮತ್ತು ಶಮಿ ಒಂದರ ಹಿಂದೆ ಒಂದರಂತೆ ಎರಡು ವಿಕೆಟ್ ಕಬಳಿಸಿ ಆಸ್ಟ್ರೇಲಿಯಾಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಟೀಂ ಇಂಡಿಯಾ (Team India) ವೇಗಿಗಳ ದಾಳಿಗೆ ನಲುಗಿದ ಆಸೀಸ್ ಆರಂಭಿಕರಿಬ್ಬರೂ ತಲಾ 1 ರನ್‌ಗಳ ವೈಯಕ್ತಿಕ ಕೊಡುಗೆಯೊಂದಿಗೆ ಪೆವಿಲಿಯನ್ ಹಾದಿ ಹಿಡಿದಿದ್ದಾರೆ. ಮೊದಲನೇಯದಾಗಿ ಸಿರಾಜ್, ಉಸ್ಮಾನ್ ಖವಾಜಾ ಅವರನ್ನು ಎಲ್​ಬಿ ಬಲೆಗೆ ಬೀಳಿಸದರೆ, ಸೊಗಸಾದ ಇನ್ಸ್ವಿಂಗರ್ ಎಸೆತದಲ್ಲಿ ಡೇವಿಡ್ ವಾರ್ನರ್ (David Warner) ಅವರನ್ನು ಶಮಿ (Mohammed Shami) ಕ್ಲೀನ್ ಬೌಲ್ಡ್ ಮಾಡಿದ್ದು ಮಾತ್ರ ಕ್ರೀಡಾಂಗಣದಲ್ಲಿ ನೆರದಿದ್ದವರಿಗೆ ರೋಮಾಂಚನವನ್ನುಂಟು ಮಾಡಿತು. ಶಮಿ ದಾಳಿಗೆ ಸಿಕ್ಕ ವಿಕೆಟ್ ಮೀಟರ್​ ದೂರ ಹಾರಿ ಬಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 4 ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ಆರಂಭವಾಗಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್‌ಸೆಟ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ 2 ರನ್ ಗಳಿಸುವಷ್ಟರಲ್ಲಿ ಸ್ಟಾರ್ ಆರಂಭಿಕರಿಬ್ಬರ ವಿಕೆಟ್ ಕಳೆದುಕೊಂಡಿತು.

MS Dhoni: ದುಬಾರಿ ಬೆಲೆಯ ಕಾರು- ಬೈಕ್ ಬಿಟ್ಟು ಟ್ರ್ಯಾಕ್ಟರ್ ಏರಿದ ಧೋನಿ! ವಿಡಿಯೋ ನೋಡಿ

ಶಮಿ ವೇಗಕ್ಕೆ ಹಾರಿದ ಸ್ಟಂಪ್‌

ನಿರೀಕ್ಷೆಯಂತೆ ಭಾರತದ ವೇಗದ ಬೌಲರ್‌ಗಳು ಆಸ್ಟ್ರೇಲಿಯಾದ ಆರಂಭಕ್ಕೆ ಭಂಗ ತಂದರು. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಮೊದಲನೇ ದಿನದಾಟದ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿತು. ಇದರಲ್ಲಿ ಉಸ್ಮಾನ್ ಖವಾಜಾ ಮತ್ತು ಡೇವಿಡ್ ವಾರ್ನರ್ ಇಬ್ಬರೂ ಸ್ಟಾರ್ ಆರಂಭಿಕರ ವಿಕೆಟ್ ಪತನವಾಯಿತು. ಆರಂಭಿಕರಿಬ್ಬರೂ ತಲಾ ಒಂದು ರನ್ ಗಳಿಸಿ ಮರಳಿದರು. ಮೊದಲಿಗೆ, ಸಿರಾಜ್ ಪಂದ್ಯದ ತಮ್ಮ ಮೊದಲ ಓವರ್‌ನ ಮೊದಲ ಎಸೆತದಲ್ಲಿಯೇ ಖವಾಜಾ ಅವರನ್ನು ಎಲ್​ಬಿ ಬಲೆಗೆ ಬೀಳಿಸುವುದರೊಂದಿಗೆ ವಿಕೆಟ್ ಭೇಟೆ ಆರಂಭಿಸಿದರು.

ನಂತರ, ಮೂರನೇ ಓವರ್‌ನ ಆರಂಭದಲ್ಲಿ ಶಮಿ ಡೇವಿಡ್ ವಾರ್ನರ್ ವಿಕೆಟ್ ಪಡೆದರು. ವಾರ್ನರ್ ಅವರನ್ನು ಶಮಿ ಕ್ಲೀನ್ ಬೌಲ್ಡ್ ಮಾಡಿದರು. ಇನ್ಸ್ವಿಂಗರ್ ಬಾಲ್ ವಾರ್ನರ್ ಅವರ ಕಾಲಿಗೆ ತಗುಲಿ ವಿಕೆಟ್​ಗೆ ಬಡಿಯಿತು. ಚೆಂಡಿನ ರಬಸಕ್ಕೆ ಸಿಕ್ಕ ಸ್ಟಂಪ್ಸ್ ಮೀಟರ್ ದೂರ ಹಾರಿ ಬಿತ್ತು. ವಾರ್ನರ್ ಕ್ಲೀನ್ ಬೌಲ್ಡ್ ಆಗಿರುವ ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ಸದ್ಯ ಈ ಸುದ್ದಿ ಬರೆಯುವ ಸಮಯಕ್ಕೆ ಆಸೀಸ್ ಪಡೆ ಪ್ರಮುಖ 4 ವಿಕೆಟ್ ಕಳೆದುಕೊಂಡು 85 ರನ್ ಗಳಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Thu, 9 February 23