IND vs AUS: ಟೆಸ್ಟ್ ಆರಂಭದಲ್ಲೇ ಮೊಹಮ್ಮದ್ ಸಿರಾಜ್​ಗೆ ಗಾಯ; ಕೈಯಿಂದ ಸುರಿಯಿತು ರಕ್ತ..!

| Updated By: ಪೃಥ್ವಿಶಂಕರ

Updated on: Feb 17, 2023 | 11:42 AM

Mohammed Siraj: ಮೊಹಮ್ಮದ್ ಸಿರಾಜ್ ಅವರ ಕೈಯಿಂದ ರಕ್ತಸ್ರಾವವಾಗುವುದನ್ನು ಕಂಡ ಭಾರತ ತಂಡದ ಫಿಸಿಯೊ ತಕ್ಷಣ ಮೈದಾನಕ್ಕೆ ಬಂದು ಸಿರಾಜ್​ ಕೈಗಳಿಗೆ ಬ್ಯಾಂಡೇಜ್ ಮಾಡಿದರು.

IND vs AUS: ಟೆಸ್ಟ್ ಆರಂಭದಲ್ಲೇ ಮೊಹಮ್ಮದ್ ಸಿರಾಜ್​ಗೆ ಗಾಯ; ಕೈಯಿಂದ ಸುರಿಯಿತು ರಕ್ತ..!
ಮೊಹಮ್ಮದ್ ಸಿರಾಜ್​ಗೆ ಇಂಜುರಿ
Follow us on

ಬಾರ್ಡರ್- ಗವಾಸ್ಕರ್ (Border-Gavaskar Trophy) ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯ ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಟಾಸ್ ಗೆದ್ದ ಆಸೀಸ್ (India Vs Australia) ನಾಯಕ ಮೊದಲ ಟೆಸ್ಟ್​ನಂತೆಯೇ ಈ ಟೆಸ್ಟ್​ನಲ್ಲೂ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಮೊದಲು ಬೌಲಿಂಗ್ ಮಾಡಲಿರುವ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆಯಾಗಿದ್ದು, ಸೂರ್ಯಕುಮಾರ್ ಬದಲಿಗೆ ಶ್ರೇಯಸ್ ಅಯ್ಯರ್ (Shreyas Iyer) ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಈಗಾಗಲೇ ಬ್ಯಾಟಿಂಗ್ ಆರಂಭಿಸಿರುವ ಆಸೀಸ್ ತಂಡ ಅರ್ಧಶತಕದ ಆರಂಭ ಪಡೆದುಕೊಂಡಿದೆ. ಆದರೆ ಆರಂಭದಲ್ಲಿಯೇ ಆಸೀಸ್ ಆರಂಭಿಕ ಡೇವಿಡ್ ವಾರ್ನರ್ ಆಡಿದ ಚೆಂಡು ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj) ಕೈಗೆ ಗಾಯ ಮಾಡಿದೆ.

ಸಿರಾಜ್​ಗೆ ಇಂಜುರಿ

ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಆಗಾಗ್ಗೆ ತಮ್ಮ ಸ್ವಿಂಗ್‌ನಿಂದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ಕೊಡುತ್ತಾರೆ. ಇದು ದೆಹಲಿ ಟೆಸ್ಟ್‌ನ ಆರಂಭಿಕ ಓವರ್‌ನಲ್ಲಿಯೂ ಕಂಡುಬಂದಿತು. ಈ ಬಲಗೈ ವೇಗದ ಬೌಲರ್ ದೆಹಲಿ ಟೆಸ್ಟ್‌ನಲ್ಲೂ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ವಾರ್ನರ್ ಮತ್ತು ಖವಾಜಾಗೆ ತೊಂದರೆ ನೀಡಿದರು. ನಾಲ್ಕನೇ ಓವರ್‌ನಲ್ಲಿ ದಾಳಿಗಿಳಿದ ಮೊಹಮ್ಮದ್ ಸಿರಾಜ್​ಗೆ, ಡೇವಿಡ್ ವಾರ್ನರ್ ಬಾರಿಸಿದ ಚೆಂಡು ಇಂಜುರಿಯಾಗುವಂತೆ ಮಾಡಿದೆ. ಇದರಿಂದಾಗಿ ಕೆಲಕಾಲ ಆಟವನ್ನು ನಿಲ್ಲಿಸಬೇಕಾಯಿತು.

ವಾಸ್ತವವಾಗಿ, ಡೇವಿಡ್ ವಾರ್ನರ್ ಮೊಹಮ್ಮದ್ ಸಿರಾಜ್ ಎಸೆತದ ಬೌನ್ಸರ್ ಎಸೆತವನ್ನು ನೇರವಾಗಿ ಆಡಿದರು. ಈ ವೇಳೆ ಚೆಂಡನ್ನು ಹಿಡಿಯಲು ಯತ್ನಿಸಿದ ಸಿರಾಜ್​ ಅವರ ಹೆಬ್ಬೆರಳು ಮತ್ತು ಬೆರಳುಗಳ ಸಂಧಿಗೆ ಚೆಂಡು ಬಡಿಯಿತು. ಇದರಿಂದ ಸಿರಾಜ್ ಅವರ ಕೈಯಿಂದ ರಕ್ತಸ್ರಾವವಾಗತೊಡಗಿತು.

Chetan Sharma: ಟೀಂ ಇಂಡಿಯಾ ಮುಖ್ಯ ಆಯ್ಕೆಗಾರ ಹುದ್ದೆಗೆ ರಾಜೀನಾಮೆ ನೀಡಿದ ಚೇತನ್ ಶರ್ಮಾ

ಬೌಲಿಂಗ್ ಮುಂದುವರೆಸಿದ ಸಿರಾಜ್

ಮೊಹಮ್ಮದ್ ಸಿರಾಜ್ ಅವರ ಕೈಯಿಂದ ರಕ್ತಸ್ರಾವವಾಗುವುದನ್ನು ಕಂಡ ಭಾರತ ತಂಡದ ಫಿಸಿಯೊ ತಕ್ಷಣ ಮೈದಾನಕ್ಕೆ ಬಂದು ಸಿರಾಜ್​ ಕೈಗಳಿಗೆ ಬ್ಯಾಂಡೇಜ್ ಮಾಡಿದರು. ಇದರ ಹೊರತಾಗಿಯೂ ಸಿರಾಜ್ ತನ್ನ ಓವರ್ ಪೂರ್ಣಗೊಳಿಸಿದ್ದು ದೊಡ್ಡ ವಿಷಯ. ಬಳಿಕ ಮುಂದಿನ ಓವರ್ ಮಾಡಲು ಬಂದ ಸಿರಾಜ್, ತಮ್ಮ ನಾಲ್ಕನೇ ಓವರ್‌ನಲ್ಲಿ ಅದ್ಭುತ ಬೌನ್ಸರ್ ಮೂಲಕ ಉಸ್ಮಾನ್ ಖವಾಜಾ ಹಾಗೂ ವಾರ್ನರ್​ಗೆ ತೊಂದರೆ ನೀಡಿದರು.

ಟಾಸ್ ಗೆದ್ದ ಆಸ್ಟ್ರೇಲಿಯಾ

ಪಂದ್ಯದ ಬಗ್ಗೆ ಮಾತನಾಡುವುದಾದರೆ, ಟಾಸ್ ಗೆದ್ದ ಆಸ್ಟ್ರೇಲಿಯಾ ಈ ಬಾರಿಯೂ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆಸ್ಟ್ರೇಲಿಯಾ ಅಚ್ಚರಿಯ ರೀತಿಯಲ್ಲಿ ಒಬ್ಬ ಮಧ್ಯಮ ವೇಗಿಯನ್ನು ಮಾತ್ರ ತನ್ನ ತಂಡಕ್ಕೆ ಆಯ್ಕೆ ಮಾಡಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡ ಮೂವರು ಸ್ಪಿನ್ನರ್​ಗಳೊಂದಿಗೆ ಕಣಕ್ಕಿಳಿದಿದೆ. ಬೋಲ್ಯಾಂಡ್ ಬದಲಿಗೆ ಆಸ್ಟ್ರೇಲಿಯಾ ಕುಹ್ನ್‌ಮನ್‌ಗೆ ಅವಕಾಶ ನೀಡಿದೆ. ಅದೇ ಸಮಯದಲ್ಲಿ, ಮ್ಯಾಥ್ಯೂ ರೆನ್ಶಾ ಬದಲಿಗೆ ಟ್ರಾವಿಸ್ ಹೆಡ್ ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ.

ಆಸ್ಟ್ರೇಲಿಯಾ ಪ್ಲೇಯಿಂಗ್ XI – ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಪೀಟರ್ ಹ್ಯಾಂಡ್ಸ್ಕಾಂಬ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಟೌಸ್ ಮರ್ಫಿ, ನಾಥನ್ ಲಿಯಾನ್, ಮ್ಯಾಥ್ಯೂ ಕುಹ್ನೆಮನ್.

ಭಾರತ ಪ್ಲೇಯಿಂಗ್ XI – ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶ್ರೀಕರ್ ಭರತ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:42 am, Fri, 17 February 23