ಹ್ಯಾಪಿ ಬರ್ತ್ ​ಡೇ ಮಿ. 360: ಕ್ರಿಕೆಟ್ ಜಗತ್ತಿನ ಅಜಾತಶತ್ರು ಡಿವಿಲಿಯರ್ಸ್‌ಗೆ ಅದೊಂದು ಕನಸು ನನಸಾಗಲೇ ಇಲ್ಲ!

Happy Birthday AB de Villiers: ಇಡೀ ತಂಡ ಸಂಭ್ರಮದಲ್ಲಿ ಕುಣಿಯಲ್ಲಾರಂಭಿಸಿತು. ಆದರೆ, ಅಷ್ಟರಲ್ಲೇ ನನಗೆ ಎಚ್ಚರವಾಯಿತು. ಕಣ್ಣು ಬಿಟ್ಟು ನೋಡಿದರೆ ಅದು ಕನಸು ಎಂಬುದನ್ನು ಅರ್ಥ ಮಾಡಿಕೊಳ್ಳಲು ನನಗೆ ಹೆಚ್ಚಿನ ಸಮಯ ಬೇಕಾಗಲಿಲ್ಲ.

ಹ್ಯಾಪಿ ಬರ್ತ್ ​ಡೇ ಮಿ. 360: ಕ್ರಿಕೆಟ್ ಜಗತ್ತಿನ ಅಜಾತಶತ್ರು ಡಿವಿಲಿಯರ್ಸ್‌ಗೆ ಅದೊಂದು ಕನಸು ನನಸಾಗಲೇ ಇಲ್ಲ!
ಎಬಿ ಡಿವಿಲಿಯರ್ಸ್
Follow us
ಪೃಥ್ವಿಶಂಕರ
|

Updated on:Feb 17, 2023 | 2:44 PM

Happy Birthday AB de Villiers:  ಕ್ರಿಕೆಟ್ ಜಗತ್ತಿನ ಅಜಾತಶತ್ರು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮೆಚ್ಚಿನ ಆಟಗಾರ, ಕ್ರಿಕೆಟ್ ಲೋಕದ ಮಿಸ್ಟರ್ 360 ಡಿ​ಗ್ರಿ ಎಬಿ ಡಿವಿಲಿಯರ್ಸ್ (AB De Villiers) ಇಂದು ತಮ್ಮ 39 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನೆಲಕಚ್ಚಿ ನಿಂತರೇ ಎದುರಾಳಿ ಬೌಲರ್ ಯಾರೇ ಆಗಿರಲಿ ಅವನ ಹುಟ್ಟಡಗಿಸುತ್ತಿದ್ದ ಎಬಿಡಿ ಆಟಕ್ಕೆ ಮನಸೋಲದವರೇ ಇಲ್ಲ. ಕ್ರಿಕೆಟ್ ಪುಸ್ತಕಗಳಲ್ಲೇ ಇರದ ಅದೇಷ್ಟೋ ಬ್ಯಾಟಿಂಗ್ ಪಾಠಗಳನ್ನು ವಿಶ್ವ ಕ್ರಿಕೆಟ್​ಗೆ ಹೇಳಿಕೊಟ್ಟ ಕೀರ್ತಿ ಮಿ. ಸವ್ಯಸಾಚಿಗೆ ಸಲ್ಲಬೇಕು. ಎಬಿಡಿ ಎಂದೊಡನೆ ತಟ್ಟನೇ ನೆನಪಾಗುವುದೆಂದರೆ ಅದು ಆರ್​ಸಿಬಿ ತಂಡ. ಆರ್​ಸಿಬಿ (RCB) ಇದುವರೆಗೂ ಒಂದೇ ಒಂದು ಐಪಿಎಲ್ ಟ್ರೋಫಿ ಗೆಲ್ಲದಿದ್ದರೂ ಅದಕ್ಕಿರುವ ಅಭಿಮಾನಿ ಬಳಗ ಕೊಂಚವೂ ಕಡಿಮೆಯಾಗದ್ದಿರುವುದಕ್ಕೆ ಕಾರಣ ಎಬಿಡಿ. ಆರ್​ಸಿಬಿ ಪರ ಅದೇಷ್ಟೋ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟ ಎಬಿಡಿ ಇಂದಿಗೂ, ಎಂದಿಗೂ ಆರ್​ಸಿಬಿ ಅಭಿಮಾನಿಗಳ ಸೂಪರ್​ಮ್ಯಾನ್ ಎಂದರೆ ತಪ್ಪಾಗಲಾರದು. ಭಾರತೀಯರಿಗೆ ಎಬಿಡಿ ಎಂದರೆ ಎಷ್ಟು ಅಚ್ಚುಮೆಚ್ಚೋ, ಎಬಿಡಿಗೂ ಅಷ್ಟೇ. ಭಾರತ, ಬೆಂಗಳೂರು ಎಂದರೆ ಬಲು ಅಚ್ಚುಮೆಚ್ಚು!

ಫೆಬ್ರವರಿ 17, 1984 ರಂದು ಜನಿಸಿದ ಡಿವಿಲಿಯರ್ಸ್ ತಮ್ಮ ವೃತ್ತಿಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದಾರೆ. ಅನೇಕ ವಿಶ್ವ ದಾಖಲೆಗಳನ್ನು ಕೂಡ ಮಾಡಿದ್ದಾರೆ. ಆಫ್ರಿಕಾ ತಂಡದ ನಾಯಕತ್ವ ವಹಿಸಿಕೊಂಡು ಅದೇಷ್ಟೋ ಐತಿಹಾಸಿಕ ಸರಣಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಈ ಕ್ರಿಕೆಟ್ ಸವ್ಯಸಾಚಿಗೆ ಅದೊಂದು ಮೈಲಿಗಲ್ಲನ್ನು ಮಾತ್ರ ಸಾಧಿಸಲು ಸಾಧ್ಯವಾಗಲೇ ಇಲ್ಲ. ಆಫ್ರಿಕಾ ತಂಡದ ಪರ ವಿಶ್ವ ಮೆಚ್ಚುವ ಆಟವಾಡಿದ್ದ ಎಬಿಡಿಗೆ ತನ್ನ ತಂಡಕ್ಕೆ ಒಂದೇ ಒಂದು ವಿಶ್ವಕಪ್ ಗೆಲ್ಲಿಸಿಕೊಡಲಾಗಲಿಲ್ಲ. ಅಂತಿಮವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ ಬಳಿಕವೂ ಎಬಿಡಿಗೆ ಇದೊಂದು ಕೊರಗು ಕಾಡುತ್ತಿರುವುದು ಸುಳ್ಳಲ್ಲ. ಯಾಕೆಂದರೆ ವಿಶ್ವಕಪ್ ಗೆಲ್ಲುವುದು ಎಬಿಡಿಯ ಬಾಲ್ಯದ ಕನಸಾಗಿತ್ತು ಎಂಬುದನ್ನು ಸ್ವತಃ ಎಬಿಡಿಯೇ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ.

Asia Cup 2022: ‘ನಿನ್ನೆ ಮಾತನಾಡಿದಾಗಲೇ ಅಂದುಕೊಂಡಿದ್ದೆ’; ಕೊಹ್ಲಿಯ ಶತಕದ ಸುಳಿವು ಡಿವಿಲಿಯರ್ಸ್​ಗೆ ಮುಂಚಿಯೇ ಸಿಕ್ಕಿತ್ತಾ?

ಈಡೇರದ ಕನಸು

ತನ್ನ ಮಹಾ ಕನಸ್ಸಿನ ಬಗ್ಗೆ ತನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿರುವ ಎಬಿಡಿ, ‘ಅದು ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಫೈನಲ್. ನಮ್ಮ ತಂಡ ಬೌಲಿಂಗ್ ಮಾಡುತ್ತಿತ್ತು. ನಾನು ಕವರ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದೇನೆ. ಎದುರಾಳಿ ತಂಡದ ಎಡಗೈ ಬ್ಯಾಟ್ಸ್‌ಮನ್ ಚೆಂಡನ್ನು ನನ್ನ ಕಡೆ ಆಡಿದರು. ನಾನು ನನ್ನ ಬಲಭಾಗಕ್ಕೆ ಧುಮುಕಿ, ಚೆಂಡನ್ನು ತೆಗೆದುಕೊಂಡು, ಸ್ಟಂಪ್‌ಗಳ ಕಡೆಗೆ ಓಡಿ ಬೇಲ್‌ಗಳನ್ನು ಬೀಳಿಸಿದೆ. ಎಲ್ಲರೂ ಮನವಿ ಮಾಡಿದ್ದೇವೂ, ಅಂಪೈರ್ ಕೂಡ ಔಟ್ ನೀಡಿದರು. ದಕ್ಷಿಣ ಆಫ್ರಿಕಾ ವಿಶ್ವಕಪ್ ಗೆದ್ದಿತು.

ಇಡೀ ತಂಡ ಸಂಭ್ರಮದಲ್ಲಿ ಕುಣಿಯಲ್ಲಾರಂಭಿಸಿತು. ಆದರೆ, ಅಷ್ಟರಲ್ಲೇ ನನಗೆ ಎಚ್ಚರವಾಯಿತು. ಕಣ್ಣು ಬಿಟ್ಟು ನೋಡಿದರೆ ಅದು ಕನಸು ಎಂಬುದನ್ನು ಅರ್ಥ ಮಾಡಿಕೊಳ್ಳಲು ನನಗೆ ಹೆಚ್ಚಿನ ಸಮಯ ಬೇಕಾಗಲಿಲ್ಲ’ ಎಂಬ ಈ ಮಹಾಕನಸಿನ ಬಗ್ಗೆ ಸ್ವತಃ ಡಿವಿಲಿಯರ್ಸ್​ ಅವರೇ ತಮ್ಮ ಆತ್ಮಚರಿತ್ರೆ ದಿ ಡ್ರೀಮ್‌ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಡಿವಿಲಿಯರ್ಸ್ ನಿದ್ದೆ ಕೆಡಿಸಿದ್ದ ಅದೊಂದು ಸೋಲು

ವಾಸ್ತವವಾಗಿ ದಕ್ಷಿಣ ಆಫ್ರಿಕಾ ತಂಡ 2015ರಲ್ಲಿ ವಿಶ್ವಕಪ್ ಗೆಲ್ಲುವ ಸನಿಹದಲ್ಲಿತ್ತು. ಆದರೆ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತು. ಈ ಬಾರಿ ವಿಶ್ವಕಪ್ ಗೆಲ್ಲಲೇಬೇಕೆಂದು ಅಖಾಡಕ್ಕೆ ಎಂಟ್ರಿಕೊಟ್ಟಿದ್ದ ಡಿವಿಲಿಯರ್ಸ್ ಕನಸು ನನಸಾಗಲೇ ಇಲ್ಲ. ಜೊತೆಗೆ ಆಫ್ರಿಕಾ ತಂಡದ ಅದೃಷ್ಟವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಈ ನನಸಾಗದ ಕನಸಿನ ನೋವಿನಿಂದ ಹೊರಬರಲು ಎಬಿಡಿಗೆ ವರ್ಷಗಳೇ ಬೇಕಾಯಿತು. ಈ ವಿಶ್ವಕಪ್ ಸೋಲು ಎಬಿಡಿಯ ಅದೇಷ್ಟೋ ದಿನಗಳ ನಿದ್ದೆಯನ್ನು ಕಸಿದುಕೊಂಡಿತ್ತು.

ಸೋಲಿನ ನಂತರ ಎಷ್ಟೋ ಬಾರಿ ಕಣ್ಣೀರಿಟ್ಟಿದ್ದ ಎಬಿಡಿ

1992, 1999 ಮತ್ತು 2003 ರ ವಿಶ್ವಕಪ್‌ಗಳನ್ನು ತಮ್ಮ ಕುಟುಂಬದೊಂದಿಗೆ ಕುಳಿತು ವೀಕ್ಷಿಸುತ್ತಿದ್ದ ಎಬಿಡಿ, 1999 ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಸೋತಾಗ ತಮ್ಮ ಕೋಣೆಯಲ್ಲಿ ಕಣ್ಣೀರಿಟ್ಟಿದ್ದರು ಎಂಬುದನ್ನು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. 2004 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಡಿವಿಲಿಯರ್ಸ್, 2018 ರಲ್ಲಿ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್‌ಗಳನ್ನಾಡಿರುವ ಎಬಿಡಿ, 22 ಶತಕ ಮತ್ತು 46 ಅರ್ಧ ಶತಕ ಸೇರಿದಂತೆ 8765 ರನ್ ಗಳಿಸಿದ್ದಾರೆ. ಹಾಗೆಯೇ 228 ಏಕದಿನ ಪಂದ್ಯಗಳಲ್ಲಿ 25 ಶತಕ ಮತ್ತು 53 ಅರ್ಧ ಶತಕ ಸೇರಿದಂತೆ ಒಟ್ಟು 9577 ರನ್ ಗಳಿಸಿದ್ದಾರೆ. ಒಟ್ಟು 78 ಟಿ20 ಪಂದ್ಯಗಳಲ್ಲಿ ಡಿವಿಲಿಯರ್ಸ್ 10 ಅರ್ಧಶತಕ ಸೇರಿದಂತೆ ದಕ್ಷಿಣ ಆಫ್ರಿಕಾ ಪರ 1672 ರನ್ ಗಳಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:23 am, Fri, 17 February 23

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ