Asia Cup 2022: ‘ನಿನ್ನೆ ಮಾತನಾಡಿದಾಗಲೇ ಅಂದುಕೊಂಡಿದ್ದೆ’; ಕೊಹ್ಲಿಯ ಶತಕದ ಸುಳಿವು ಡಿವಿಲಿಯರ್ಸ್ಗೆ ಮುಂಚಿಯೇ ಸಿಕ್ಕಿತ್ತಾ?
Asia Cup 2022: ಅದರಲ್ಲಿ, ನಿನ್ನೆ ಕೊಹ್ಲಿಯೊಂದಿಗೆ ಮಾತನಾಡಿದಾಗ ಏನೋ ದೊಡ್ಡದಾಗಿ ಸಂಭವಿಸಲಿದೆ ಎಂದು ನನಗೆ ಬಾಸಾವಾಗಿತ್ತು. ಬಹುಶಃ ಅದು 71 ನೇ ಶತಕವೇ ಅಗಿರಬೇಕು ಎಂದು ಎಬಿಡಿ ಬರೆದುಕೊಂಡಿದ್ದಾರೆ.
ಕಾಯುವ ದಿನಗಳು ಇಲ್ಲಿಗೆ ಕೊನೆಗೊಂಡಿವೆ, ಒಂದು ಕಾಲದ ರನ್ ಸರದಾರನಿಗೆ ಒಳ್ಳೆಯ ಸಮಯ ಬಂದಿದೆ. ಅದೇಷ್ಟೋ ಭಾರತೀಯ ಮನಸ್ಸುಗಳಿಗೆ ಕಿಂಗ್ ಕೊಹ್ಲಿ (Virat Kohli) 71ನೇ ಶತಕ ನೆಮ್ಮದಿಯ ನಿದ್ರೆ ನೀಡುವುದಂತೂ ಖಂಡಿತ. ಅಂದಹಾಗೆ, ಟಿ20 ಮಾದರಿಯಲ್ಲಿ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಈ ಕಾಯುವಿಕೆ ಕೊನೆಗೊಳ್ಳುತ್ತದೆ ಎಂದು ಯಾರೂ ಕೂಡ ಯೋಚಿಸಿರಲಿಲ್ಲ. ಆದರೆ, 8 ಸೆಪ್ಟೆಂಬರ್ 2022 ರ ಸಂಜೆ, ದುಬೈ ಮೈದಾನದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಎಲ್ಲರ ಕನಸು ನನಸಾಗಿದೆ. ವಿರಾಟ್ ಕೊಹ್ಲಿ ಶತಕ ಗಳಿಸಿ 1021 ದಿನಗಳ ಕಾಯುವಿಕೆಯನ್ನು ಅಂತ್ಯಗೊಳಿಸಿದ್ದಾರೆ. ಇದು ಅವರ T20 ವೃತ್ತಿಜೀವನದ ಮೊದಲ ಶತಕವಾಗಿದೆ.
ಆದರೆ ಈ ಶತಕದ ಅಚ್ಚರಿ ಸಂಗತಿಯೊಂದು ಈಗ ಹೊರ ಬಿದ್ದಿದೆ. ಇಂದು ಕೊಹ್ಲಿ ಅಬ್ಬರದ ಶತಕ ಸಿಡಿಸಲಿದ್ದಾರೆ ಎಂಬುದು ಬಹುಶಃ ಯಾರು ಕೂಡ ಊಹಿಸಿರಲಿಲ್ಲ. ಆದರೆ ಭಾರತ ಮತ್ತು ಯುಎಇಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ದಕ್ಷಿಣ ಆಫ್ರಿಕಾದಲ್ಲಿ ಕುಳಿತಿರುವ ಎಬಿ ಡಿವಿಲಿಯರ್ಸ್ಗೆ ಈ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ಈ ಬಗ್ಗೆ ಗೊತ್ತಿತ್ತು.
ವಿರಾಟ್ ಮತ್ತು ಎಬಿ ಸ್ನೇಹ ಎಲ್ಲರಿಗೂ ಗೊತ್ತೇ ಇದೆ
ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರ ಸ್ನೇಹ ಶೋಲೆಯಲ್ಲಿ ಜೈ ಮತ್ತು ವೀರು ಅವರಂತೆಯೇ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುವಾಗ ಈ ಸ್ನೇಹ ಗಾಢವಾಯಿತು. ಆಗಾಗ್ಗೆ ಇಬ್ಬರೂ ಪರಸ್ಪರರ ಸಾಧನೆಗಳ ಬಗ್ಗೆ ನಿರರ್ಗಳವಾಗಿ ಮಾತನಾಡುವುದನ್ನು ಕಾಣಬಹುದು. ಆದರೆ, ವಿರಾಟ್ ಕೊಹ್ಲಿ 71ನೇ ಶತಕದ ವಿಚಾರದಲ್ಲಿ ಎಬಿ ಡಿವಿಲಿಯರ್ಸ್ ನೀಡಿರುವ ಹೇಳಿಕೆ ಕೊಂಚ ಭಿನ್ನವಾಗಿದೆ.
ಡಿವಿಲಿಯರ್ಸ್ಗೆ ವಿರಾಟ್ ಅವರ 71 ನೇ ಶತಕದ ಬಗ್ಗೆ ಮೊದಲೇ ತಿಳಿದಿತ್ತಾ?
ವಿರಾಟ್ ಕೊಹ್ಲಿ 71ನೇ ಶತಕ ಸಿಡಿಸಿದ ತಕ್ಷಣ ಎಬಿ ಡಿವಿಲಿಯರ್ಸ್ ಟ್ವೀಟ್ ಮಾಡಿದ್ದು. ಅದರಲ್ಲಿ, ನಿನ್ನೆ ಕೊಹ್ಲಿಯೊಂದಿಗೆ ಮಾತನಾಡಿದಾಗ ಏನೋ ದೊಡ್ಡದಾಗಿ ಸಂಭವಿಸಲಿದೆ ಎಂದು ನನಗೆ ಬಾಸಾವಾಗಿತ್ತು. ಬಹುಶಃ ಅದು 71 ನೇ ಶತಕವೇ ಅಗಿತ್ತು ಎಂದು ಎಬಿಡಿ ಬರೆದುಕೊಂಡಿದ್ದಾರೆ.
When I spoke to him yesterday I knew something was brewing? Well played my friend
— AB de Villiers (@ABdeVilliers17) September 8, 2022
1021 ದಿನಗಳ ನಂತರ 71 ನೇ ಶತಕ
ವಿರಾಟ್ ಕೊಹ್ಲಿ 200 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿ, ತಮ್ಮ 71 ನೇ ಅಂತರಾಷ್ಟ್ರೀಯ ಶತಕವನ್ನು ಪೂರೈಸಿದರು. ಕೊಹ್ಲಿ, ಅಫ್ಘಾನಿಸ್ತಾನ ವಿರುದ್ಧ 61 ಎಸೆತಗಳಲ್ಲಿ 122 ರನ್ ಗಳಿಸಿ, ಅಂತಾರಾಷ್ಟ್ರೀಯ T20I ಕ್ರಿಕೆಟ್‌ನಲ್ಲಿ ಮೊದಲ ಶತಕ ಬಾರಿಸಿದರು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಕೊನೆಯ ಶತಕವನ್ನು ನವೆಂಬರ್ 2019 ರಲ್ಲಿ ಬಾಂಗ್ಲಾದೇಶದ ವಿರುದ್ಧ ಬಾರಿಸಿದ್ದರು. ಅದರ ನಂತರ ಕೊಹ್ಲಿ ಬ್ಯಾಟ್ ಶತಕ ಗಳಿಸುವುದಿರಲಿ, ರನ್ ಗಳಿಸುವುದಕ್ಕೆ ಪರದಾಡುತ್ತಿತ್ತು. ಆದರೆ, ಏಷ್ಯಾಕಪ್‌ನಲ್ಲಿ ಭರ್ಜರಿ ಫಾರ್ಮಗೆ ಬಂದ ವಿರಾಟ್ 1 ಶತಕ ಸೇರಿದಂತೆ 2 ಅರ್ಧಶತಕಗಳನ್ನು ಸಿಡಿಸಿದರು.