IND vs AUS 3rd Test: ನಾಳೆಯಿಂದ ಭಾರತ-ಆಸ್ಟ್ರೇಲಿಯಾ ತೃತೀಯ ಟೆಸ್ಟ್ ಆರಂಭ: ಇಂದೋರ್ ಪಿಚ್ ಹೇಗಿದೆ?, ಯಾರಿಗೆ ಸಹಕಾರಿ?

India vs Australia 3rd Test: ಇಂದೋರ್​ನ ಹೋಲ್ಕರ್ ಸ್ಟೇಡಿಯಂ ವಿಶ್ವದ ಚಿಕ್ಕ ಕ್ರೀಡಾಂಗಣಗಳಲ್ಲಿ ಒಂದಾಗಿಗೆ. ಈ ಪಿಚ್ ಉತ್ತಮ ಬ್ಯಾಟಿಂಗ್‌ಗೆ ಸಹಕರಿಸುವ ಮೇಲ್ಮೈ ಹೊಂದಿದೆ. ಬೌಂಡರಿ ಲೈನ್ ತುಂಬಾ ಚಿಕ್ಕದಾಗಿದ್ದು, ಬ್ಯಾಟ್ಸ್‌ಮನ್‌ಗಳಿಂದ ದೊಡ್ಡ ಶಾಟ್‌ಗಳನ್ನು ನಿರೀಕ್ಷಿಸಬಹುದು.

IND vs AUS 3rd Test: ನಾಳೆಯಿಂದ ಭಾರತ-ಆಸ್ಟ್ರೇಲಿಯಾ ತೃತೀಯ ಟೆಸ್ಟ್ ಆರಂಭ: ಇಂದೋರ್ ಪಿಚ್ ಹೇಗಿದೆ?, ಯಾರಿಗೆ ಸಹಕಾರಿ?
IND vs AUS 3rd Test

Updated on: Feb 28, 2023 | 8:27 AM

ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1 ಬುಧವಾರದಿಂದ ಆರಂಭವಾಗಲಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಭಾರತ 2-0 ಮುನ್ನಡೆ ಪಡೆದುಕೊಂಡು ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಇನ್ನೊಂದು ಪಂದ್ಯ ಟೀಮ್ ಇಂಡಿಯಾ (Team India) ಗೆದ್ದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ (ICC WTC) ಫೈನಲ್​ಗೆ ಏರಲಿದೆ. ಇತ್ತ ಕಾಂಗರೂ ಪಡೆಗೆ ಇದುವರೆಗೆ ಒಂದೂ ಶುಭಸುದ್ದಿ ಸಿಕ್ಕಿಲ್ಲ. ಸೋಲು ಹಾಗೂ ಇಂಜುರಿಗಳಿಗೆ ಆಸೀಸ್ ತತ್ತರಿಸಿ ಹೋಗಿದೆ. ಇನ್ನೇನಿದ್ದರು ಕನಿಷ್ಠ ಸಮಬಲಕ್ಕೆ ಹೋರಾಟ ನಡೆಸಬೇಕಿದೆ. ಆಸ್ಟ್ರೇಲಿಯಾ ಟೆಸ್ಟ್ ಸರಣಿಯನ್ನು ಸಮಬಲ ಸಾಧಿಸಿ ಮಾನ ಉಳಿಸಿಕೊಳ್ಳ ಬೇಕು ಎಂದರೆ ಉಳಿದಿರುವ ಎರಡು ಪಂದ್ಯದಲ್ಲಿ ಗೆಲ್ಲಲೇ ಬೇಕು. ಹೀಗಾಗಿ ಮುಂದಿನ ಎರಡೂ ಟೆಸ್ಟ್ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ.

ಇಂದು ಕೊನೆಯ ಪ್ರ್ಯಾಕ್ಟೀಸ್ ಸೆಷನ್:

ಶನಿವಾರ ಇಂದೋರ್​​ಗೆ ತಲುಪಿದ್ದು ಭಾರತೀಯ ಆಟಗಾರರು ಭಾನುವಾರದಿಂದ ಅಭ್ಯಾಸ ಶುರು ಮಾಡಿಕೊಂಡಿದ್ದರು. ಇಂದು ಫೈನಲ್ ಪ್ರ್ಯಾಕ್ಟೀಸ್ ಸೆಷನ್​ನಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳಪೆ ಫಾರ್ಮ್​ನಲ್ಲಿರುವ ಕೆಎಲ್ ರಾಹುಲ್ ಕೈಬಿಟ್ಟು ಶುಭ್​ಮನ್ ಗಿಲ್​ಗೆ ಅವಕಾಶ ನೀಡುತ್ತಾರ ಎಂಬುದು ನೋಡಬೇಕಿದೆ. ಆದರೆ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಕೆಎಲ್ ರಾಹುಲ್​ಗೆ ವಿಶೇಷ ತರಬೇತಿ ನೀಡುತ್ತಿರುವುದು ಕಂಡುಬಂದಿದೆ. ಕೆಎಲ್ ಜೊತೆ ದ್ರಾವಿಡ್ ಹೆಚ್ಚು ಸಮಯ ಕಳೆಯುತ್ತಿದ್ದು, ಕನ್ನಡಿಗನಿಗೆ ಮತ್ತೊಂದು ಅವಕಾಶ ಸಿಗುತ್ತಾ ಎಂಬ ಅನುಮಾನ ಕೂಡ ಹುಟ್ಟಿಕೊಂಡಿದೆ.

ಹೋಲ್ಕರ್ ಸ್ಟೇಡಿಯಂ ಹೇಗಿದೆ?, ಪಿಚ್ ಯಾರಿಗೆ ಸಹಕಾರಿ?:

ಇಂದೋರ್​ನ ಹೋಲ್ಕರ್ ಸ್ಟೇಡಿಯಂ ವಿಶ್ವದ ಚಿಕ್ಕ ಕ್ರೀಡಾಂಗಣಗಳಲ್ಲಿ ಒಂದಾಗಿಗೆ. ಬೌಂಡರಿಗಳು ಚಿಕ್ಕದಾಗಿರುವುದರಿಂದ ಹೈ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಲಿಸಬಹುದು. 1990ರಲ್ಲಿ ಸ್ಥಾಪನೆಯಾದ ಕ್ರೀಡಾಂಗಣದಲ್ಲಿ 30 ಸಾವಿರ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಭಾರತ ತಂಡ ಇಲ್ಲಿ ಇದುವರೆಗೂ ಎರಡು ಟೆಸ್ಟ್ ಪಂದ್ಯಗಳನ್ನಾಡಿದ್ದು ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿರುವುದು ಪ್ಲಸ್ ಪಾಯಿಂಟ್. 2016ರ ಅಕ್ಟೋಬರ್​ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 321 ರನ್‌ಗಳ ಅಂತರದ ಜಯ, 2019ರಲ್ಲಿ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಮತ್ತು 130 ರನ್‌ಗಳಿಂದ ಗೆದ್ದಿತ್ತು.

ಇದನ್ನೂ ಓದಿ
IND vs AUS Test: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಬಳಿಕ ನೀವೃತ್ತಿ ನೀಡಲಿದ್ದಾರೆ ಭಾರತದ ಈ ಆಟಗಾರರು?
IPL 2023: ಉಲ್ಟಾ ಆದ ಮುಂಬೈ ಇಂಡಿಯನ್ಸ್ ತಂಡದ​ ಬೆಂಕಿ-ಬಿರುಗಾಳಿ ಜೋಡಿ ಪ್ಲ್ಯಾನ್..!
Shardul Thakur Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಆಟಗಾರ: ಇಲ್ಲಿದೆ ಫೋಟೋಸ್
IPL 2023: ಐಪಿಎಲ್​ನಿಂದ ನಾಲ್ವರು ಔಟ್: ಇಬ್ಬರು ಡೌಟ್

IND vs AUS 3rd Test: ಭಾರತವನ್ನು ಭಾರತದಲ್ಲೇ ಸೋಲಿಸಲು ಆಸ್ಟ್ರೇಲಿಯಾ ಆಟಗಾರರು ಏನೆಲ್ಲ ಹರಸಾಹಸ ಪಡುತ್ತಿದ್ದಾರೆ ನೋಡಿ

ಈ ಪಿಚ್ ಉತ್ತಮ ಬ್ಯಾಟಿಂಗ್‌ಗೆ ಸಹಕರಿಸುವ ಮೇಲ್ಮೈ ಹೊಂದಿದೆ. ಬೌಂಡರಿ ಲೈನ್ ತುಂಬಾ ಚಿಕ್ಕದಾಗಿದ್ದು, ಬ್ಯಾಟ್ಸ್‌ಮನ್‌ಗಳಿಂದ ದೊಡ್ಡ ಶಾಟ್‌ಗಳನ್ನು ನಿರೀಕ್ಷಿಸಬಹುದು. ಹೋಲ್ಕರ್ ಸ್ಟೇಡಿಯಂ ಬ್ಯಾಟಿಂಗ್‌ಗೆ ಉತ್ತಮವಾಗಿರುವುದರಿಂದ, ಆಟವು ಕನಿಷ್ಠ 4ನೇ ದಿನದವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಮುಖ್ಯವಾಗಿ ಪಿಚ್‌ನ ಮಧ್ಯಭಾಗದಲ್ಲಿ ಹಸಿರು ಹುಲ್ಲುಹಾಸು ಎದ್ದು ಕಾಣುತ್ತಿದೆ. ಸ್ಪಿನ್ನರ್‌ಗಳಿಗೆ ನೆರವಾಗುವ ಯಾವುದೇ ಬಿರುಕುಗಳು (ಕ್ರ್ಯಾಕ್ಸ್‌) ಪಿಚ್‌ನ ಮೇಲ್ಮೈ ಮೇಲೆ ಕಾಣಿಸುತ್ತಿಲ್ಲ. ಹೀಗಾಗಿ ಈ ಪಿಚ್‌ನಲ್ಲಿ ರನ್‌ ಹೊಳೆ ಹರಿಯುವ ಸಾಧ್ಯತೆ ಎದ್ದು ಕಾಣುತ್ತಿದೆ. ಸರಣಿಯ ಈ ಹಿಂದಿನ ಎರಡೂ ಪಂದ್ಯಗಳಲ್ಲಿ ಸ್ಪಿನ್ನರ್‌ಗಳ ಟೀಮ್ ಇಂಡಿಯಾಗೆ ಜಯ ತಂದಿದ್ದಾರೆ. ಇದೀಗ ಪಿಚ್‌ನ ಮೇಲ್ಮೈ ಗಮನಿಸಿದರೆ ಮೂರನೇ ಟೆಸ್ಟ್‌ನಲ್ಲಿ ವೇಗದ ಬೌಲರ್‌ಗಳು ಮಹತ್ವದ ಪಾತ್ರ ವಹಿಸಲಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್‌ ನೇರಪ್ರಸಾರ ಮಾಡಲಿದ್ದರೆ, ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್.

ಆಸ್ಟ್ರೇಲಿಯಾ ತಂಡ: ಸ್ಟೀವ್ ಸ್ಮಿತ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲ್ಯಾಬುಶೇನ್, ಮಿಚೆಲ್ ಸ್ಟಾರ್ಕ್​, ನಾಥನ್ ಲಿಯಾನ್, ಮ್ಯಾಥ್ಯೂ ಕುಹ್ನೆಮನ್, ಲ್ಯಾನ್ಸ್ ಮೋರಿಸ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ