- Kannada News Photo gallery Cricket photos IPL 2023: Jofra Archer- Jasprit Bumrah dream duo hits Another Roadblock
IPL 2023: ಉಲ್ಟಾ ಆದ ಮುಂಬೈ ಇಂಡಿಯನ್ಸ್ ತಂಡದ ಬೆಂಕಿ-ಬಿರುಗಾಳಿ ಜೋಡಿ ಪ್ಲ್ಯಾನ್..!
IPL 2023 Kannada: . ಮುಂಬೈ ತಂಡವು ವಿಶ್ವದ ಇಬ್ಬರು ಪ್ರಮುಖ ವೇಗಿಯನ್ನು ಜೊತೆಯಾಗಿ ಕಣಕ್ಕಿಳಿಸುವ ಯೋಜನೆ ರೂಪಿಸಿಕೊಂಡಿತ್ತು. ಅದರಂತೆ ಐಪಿಎಲ್ 2021 ರ ಮೆಗಾ ಹರಾಜಿನಲ್ಲಿ 8 ಕೋಟಿ ರೂ.ಗೆ ಜೋಫ್ರಾ ಆರ್ಚರ್ ಅವರನ್ನು ಖರೀದಿಸಿತ್ತು.
Updated on: Feb 27, 2023 | 11:58 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಆರಂಭಕ್ಕೆ ತಿಂಗಳು ಮಾತ್ರ ಉಳಿದಿದೆ. ಇತ್ತ ಎಲ್ಲಾ ಫ್ರಾಂಚೈಸಿಗಳು ಭರದ ಸಿದ್ಧತೆಗಳನ್ನು ಆರಂಭಿಸಿದರೆ, ಅತ್ತ ಮುಂಬೈ ಇಂಡಿಯನ್ಸ್ ತಂಡದ ಪಾಳಯದಿಂದ ಶಾಕಿಂಗ್ ನ್ಯೂಸ್ವೊಂದು ಹೊರಬಿದ್ದಿದೆ.

ಹೌದು, ಐಪಿಎಲ್ನಿಂದ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ ಇನ್ನೂ ಕೂಡ ಚೇತರಿಸಿಕೊಂಡಿಲ್ಲ. ಹೀಗಾಗಿ ಮುಂಬರುವ ಐಪಿಎಲ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ವರದಿಯಾಗಿದೆ.

ಇದರೊಂದಿಗೆ ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ತಂಡದ ಮಾಸ್ಟರ್ ಪ್ಲ್ಯಾನ್ ಕೈಕೊಟ್ಟಂತಾಗಿದೆ. ಮುಂಬೈ ತಂಡವು ವಿಶ್ವದ ಇಬ್ಬರು ಪ್ರಮುಖ ವೇಗಿಯನ್ನು ಜೊತೆಯಾಗಿ ಕಣಕ್ಕಿಳಿಸುವ ಯೋಜನೆ ರೂಪಿಸಿಕೊಂಡಿತ್ತು. ಅದರಂತೆ ಐಪಿಎಲ್ 2021 ರ ಮೆಗಾ ಹರಾಜಿನಲ್ಲಿ 8 ಕೋಟಿ ರೂ.ಗೆ ಜೋಫ್ರಾ ಆರ್ಚರ್ ಅವರನ್ನು ಖರೀದಿಸಿತ್ತು.

ಆದರೆ ಮೊಣಕಾಲಿನ ಗಾಯದ ಕಾರಣ ಆರ್ಚರ್ ಕಳೆದ ಐಪಿಎಲ್ನಲ್ಲಿ ಆಡಿರಲಿಲ್ಲ. ಇದಾಗ್ಯೂ ಇಂಗ್ಲೆಂಡ್ ವೇಗಿಯನ್ನು ಮುಂಬೈ ಫ್ರಾಂಚೈಸಿಯು ತಂಡದಲ್ಲೇ ಉಳಿಸಿಕೊಂಡಿತ್ತು. ಹೀಗಾಗಿ ಈ ಬಾರಿ ಬೆಂಕಿ-ಬಿರುಗಾಳಿ ಬೌಲಿಂಗ್ ಜೋಡಿಯ ಮೋಡಿಯನ್ನು ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಎದುರು ನೋಡಿದ್ದರು. ಇದೀಗ ಜೋಫ್ರಾ ಆರ್ಚರ್ ಸಂಪೂರ್ಣ ಫಿಟ್ ಆಗಿ ಐಪಿಎಲ್ಗೆ ರೆಡಿಯಾಗಿದ್ದಾರೆ.

ಆದರೆ ಬೆನ್ನು ನೋವಿನ ಸಮಸ್ಯೆಯ ಕಾರಣ ಈ ಬಾರಿ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯುವುದಿಲ್ಲ. ಇದರೊಂದಿಗೆ ವಿಶ್ವ ಕ್ರಿಕೆಟ್ನ ಯಾರ್ಕರ್ ಕಿಂಗ್ ಎನಿಸಿಕೊಂಡಿರುವ ಜೋಫ್ರಾ ಆರ್ಚರ್ ಹಾಗೂ ಜಸ್ಪ್ರೀತ್ ಬುಮ್ರಾರನ್ನು ಜೊತೆಯಾಗಿ ಕಣಕ್ಕಿಳಿಸಿ ಐಪಿಎಲ್ನಲ್ಲಿ ಪಾರುಪತ್ಯ ಮೆರೆಯಬೇಕೆಂದಿದ್ದ ಮುಂಬೈ ಇಂಡಿಯನ್ಸ್ ಪ್ಲ್ಯಾನ್ ಉಲ್ಟಾ ಆಗಿದೆ.

ಕಳೆದ ಸೀಸನ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿ ಹಳೆಯ ಖದರ್ ತೋರಿಸುವ ಇರಾದೆಯಲ್ಲಿತ್ತು. ಆದರೀಗ ಜಸ್ಪ್ರೀತ್ ಬುಮ್ರಾ - ಜೋಫ್ರಾ ಆರ್ಚರ್ ಜೋಡಿಯನ್ನು ಜೊತೆಯಾಗಿ ಕಣಕ್ಕಿಳಿಸುವ ಇರಾದೆಯಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭದಲ್ಲೇ ಹಿನ್ನಡೆಯಾಗಿದೆ. ಇದಾಗ್ಯೂ ಜಸ್ಪ್ರೀತ್ ಬುಮ್ರಾ ಬದಲಿಗೆ ಮುಂಬೈ ಫ್ರಾಂಚೈಸಿ ಯಾರಿಗೆ ಮಣೆಹಾಕಲಿದೆ ಕಾದು ನೋಡಬೇಕಿದೆ.

ಮುಂಬೈ ಇಂಡಿಯನ್ಸ್ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಟಿಮ್ ಡೇವಿಡ್, ಮೊಹಮ್ಮದ್ ಅರ್ಷದ್ ಖಾನ್, ರಮಣ್‌ದೀಪ್ ಸಿಂಗ್, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಟ್ರಿಸ್ಟಾನ್ ಸ್ಟಬ್ಸ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆನ್‌ಡಾರ್ಫ್, ಆಕಾಶ್ ಮಧ್ವಾಲ್, ಕ್ಯಾಮರೋನ್ ಗ್ರೀನ್, ಪಿಯೂಷ್ ಚಾವ್ಲಾ, ದುವಾನ್ ಜಾನ್ಸೆನ್, ವಿಷ್ಣು ವಿನೋದ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ರಾಘವ್ ಗೋಯಲ್, ಸಂದೀಪ್ ವಾರಿಯರ್, ರಿಲೇ ಮೆರಿಡಿತ್, ಕ್ರಿಸ್ ಜೋರ್ಡನ್.
