IND vs AUS 3rd Test: ಭಾರತವನ್ನು ಭಾರತದಲ್ಲೇ ಸೋಲಿಸಲು ಆಸ್ಟ್ರೇಲಿಯಾ ಆಟಗಾರರು ಏನೆಲ್ಲ ಹರಸಾಹಸ ಪಡುತ್ತಿದ್ದಾರೆ ನೋಡಿ
India vs Australia 3rd Test: ಭಾರತವನ್ನು ಭಾರತದಲ್ಲೇ ಸೋಲಿಸಲು ಆಸ್ಟ್ರೇಲಿಯಾ ಪ್ಲೇಯರ್ಸ್ ಹಿಂದೆಂದೂ ಮಾಡದ ರೀತಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಪ್ರ್ಯಾಕ್ಟೀಸ್ಗಾಗಿ ದೇಸಿ ಶೈಲಿಯ ಮೊರೆ ಹೋಗಿದ್ದಾರೆ.

ಬಾರ್ಡರ್- ಗವಾಸ್ಕರ್ ಟ್ರೋಫಿ (Border- Gavaskar Trophy) ಟೆಸ್ಟ್ ಸರಣಿಗಾಗಿ ಭಾರತಕ್ಕೆ ಬಂದ ಆಸ್ಟ್ರೇಲಿಯಾ (India vs Australia) ತಂಡಕ್ಕೆ ಇದುವರೆಗೆ ಒಂದೂ ಶುಭಸುದ್ದಿ ಸಿಕ್ಕಿಲ್ಲ. ಸೋಲು ಹಾಗೂ ಇಂಜುರಿಗಳಿಗೆ ಕಾಂಗರೂ ಪಡೆ ತತ್ತರಿಸಿ ಹೋಗಿದೆ. ನಾಗ್ಪುರ ಹಾಗೂ ದೆಹಲಿಯಲ್ಲಿ ನಡೆದ ಮೊದಲ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರುವ ಕಾಂಗರೂ ಪಡೆ ಟ್ರೋಫಿಯನ್ನೂ ವಶಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇನ್ನೇನಿದ್ದರು ಕನಿಷ್ಠ ಸಮಬಲಕ್ಕೆ ಹೋರಾಟ ನಡೆಸಬೇಕಿದೆ. ಆಸ್ಟ್ರೇಲಿಯಾ ಟೆಸ್ಟ್ ಸರಣಿಯನ್ನು ಸಮಬಲ ಸಾಧಿಸಿ ಮಾನ ಉಳಿಸಿಕೊಳ್ಳ ಬೇಕು ಎಂದರೆ ಉಳಿದಿರುವ ಎರಡೂ ಪಂದ್ಯದಲ್ಲಿ ಗೆಲ್ಲಲೇ ಬೇಕು. ಇದಕ್ಕಾಗಿ ವಿಭಿನ್ನ ರೀತಿಯಲ್ಲಿ ಭರ್ಜರಿ ಅಭ್ಯಾಸ (Practice) ಕೂಡ ಶುರು ಮಾಡಿದೆ.
ಭಾರತವನ್ನು ಭಾರತದಲ್ಲೇ ಸೋಲಿಸಲು ಆಸ್ಟ್ರೇಲಿಯಾ ಪ್ಲೇಯರ್ಸ್ ಹಿಂದೆಂದೂ ಮಾಡದ ರೀತಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಪ್ರ್ಯಾಕ್ಟೀಸ್ಗಾಗಿ ದೇಸಿ ಶೈಲಿಯ ಮೊರೆ ಹೋಗಿರು ಸ್ಮಿತ್ ಪಡೆ ಫೀಲ್ಡಿಂಗ್ನಲ್ಲಿ ಯಶಸ್ಸು ಸಾಧಿಸಲು ರೋಲರ್ಗಳು, ರಗ್ಬಿ, ಫುಟ್ಬಾಲ್, ಸ್ಟೀಲ್ ಬೋರ್ಡ್ ಮೂಲಕ ಅಭ್ಯಾಸ ನಡೆಸುತ್ತಿದ್ದಾರೆ. ಮೊದಲ ಎರಡು ಟೆಸ್ಟ್ನಲ್ಲಿ ಆಸೀಸ್ ಆಟಗಾರರರು ಅನೇಕ ಕ್ಯಾಚ್ಗಳನ್ನು ಕೈಚೆಲ್ಲಿದ್ದರಿಂದ ಸಹಾಯಕ ಕೋಚ್ ಆಂಡ್ರ್ಯೋ ಬೊರೊವೆಕ್ ರೋಲರ್, ಸ್ಟೀಲ್ ಬೋರ್ಡ್ಗಳನ್ನು ಬಳಸಿ ಫೀಲ್ಡಿಂಗ್ ಅಭ್ಯಾಸ ನಡೆಸಿದರು. ವಿಶೇಷ ಎಂದರೆ ಆಸೀಸ್ ಆಟಗಾರರೇ ಈ ಸಾಧನವನ್ನು ತಂದು ತಯಾರು ಮಾಡಿದರು. ಕ್ರಿಕೆಟ್ ಆಸ್ಟ್ರೇಲಿಯಾ ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
Rollers, footys, steel sheets – the Aussies are getting innovative with their fielding sessions in India #INDvAUS pic.twitter.com/nyTSmjEDjp
— cricket.com.au (@cricketcomau) February 26, 2023
Team India Records: ಅತೀ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಟೀಮ್ ಇಂಡಿಯಾ ಆಟಗಾರ ಯಾರು ಗೊತ್ತಾ?
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1 ರಿಂದ ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುರುವಾಗಲಿದೆ. ಇಲ್ಲಿನ ಪಿಚ್ ಕೆಂಪು ಮಣ್ಣಿನಿಂದ ಆವೃತ್ತವಾಗಿರುವ ಕಾರಣ ಆರಂಭದಲ್ಲಿ ವೇಗಿಗಳಿಗೆ ಸಹಾಯ ಮಾಡುತ್ತದೆ. ಪಂದ್ಯವು ಮುಂದುವರೆದಂತೆ, ಸ್ಪಿನ್ನರ್‌ಗಳು ಪ್ರಾಬಲ್ಯ ಸಾಧಿಸುತ್ತಾರೆ. ಅಂದರೆ ಮಿಚೆಲ್ ಸ್ಟಾರ್ಕ್ ಮತ್ತು ಕ್ಯಾಮರೂನ್ ಗ್ರೀನ್ ಹೊಸ ಚೆಂಡಿನೊಂದಿಗೆ ಪಿಚ್‌ನಲ್ಲಿನ ಬೌನ್ಸ್ ಅನ್ನು ಪರಿಗಣಿಸಿ ಸ್ಲಿಪ್‌ಗಳಲ್ಲಿ ಸಾಕಷ್ಟು ಕ್ಯಾಚಿಂಗ್ ಅವಕಾಶಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿಯೆ ಆಸೀಸ್ ಆಟಗಾರರು ತಯಾರಾಗುತ್ತಿದ್ದಾರೆ.
ಇತ್ತ ಎರಡನೇ ಟೆಸ್ಟ್ ಮೂರೇ ದಿನಕ್ಕೆ ಮುಕ್ತಾಯವಾದ ಕಾರಣ ಟೀಮ್ ಇಂಡಿಯಾ ಪ್ಲೇಯರ್ಸ್ ಮನೆಗೆ ತೆರಳಿದ್ದರು. ಆದರೆ, ಶನಿವಾರ ಇಂದೋರ್ಗೆ ತಲುಪಿದ್ದು ಭಾನುವಾರ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ. ಮೂರನೇ ಟೆಸ್ಟ್ಗೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ರಣಜಿ ಟ್ರೋಫಿ ಫೈನಲ್ಗಾಗಿ ತಂಡ ತೊರೆದಿದ್ದ ಜಯದೇವ್ ಉನಾದ್ಕಟ್ ಮರಳಿದ್ದಾರೆ. ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ನೋಡುವುದಾದರೆ ಕಳಪೆ ಫಾರ್ಮ್ನಲ್ಲಿರುವ ಕೆಎಲ್ ರಾಹುಲ್ ಕೈಬಿಟ್ಟು ಶುಭ್ಮನ್ ಗಿಲ್ ಅವಕಾಶ ಪಡೆಯಬಹುದು.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್.
ಆಸ್ಟ್ರೇಲಿಯಾ ತಂಡ: ಸ್ಟೀವ್ ಸ್ಮಿತ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲ್ಯಾಬುಶೇನ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಮ್ಯಾಥ್ಯೂ ಕುಹ್ನೆಮನ್, ಲ್ಯಾನ್ಸ್ ಮೋರಿಸ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:39 am, Mon, 27 February 23




