PSL 2023: ಈತ ಎಸೆದ ಮೊದಲ ಬಾಲ್ನಲ್ಲೇ ಎದುರಾಳಿಯ ಬ್ಯಾಟ್ ಕಟ್, 2ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್: ವಿಡಿಯೋ
LHQ vs PSZ, PSL 2023: ಪಾಕಿಸ್ತಾನ ಸೂಪರ್ ಲೀಗ್ನ 15ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಲಾಹೋರ್ ಕಲಂದರ್ಸ್ ತಂಡ 20 ಓವರ್ಗಳಲ್ಲಿ ಬರೋಬ್ಬರಿ 241 ರನ್ ಕಲೆಹಾಕಿತು. ಕಠಿಣ ಟಾರ್ಗೆಟ್ ಬೆನ್ನಟ್ಟಿದ ಪೇಶಾವರ್ ಜಲ್ಮಿ ಮೊದಲ ಓವರ್ನಲ್ಲೇ ವಿಕೆಟ್ ಕಳೆದುಕೊಂಡಿತು.

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ 2023 (PSL 2023) ಟೂರ್ನಿ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಭಾನುವಾರ ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಲಾಹೋರ್ ಕಲಂದರ್ಸ್ ಹಾಗೂ ಪೇಶಾವರ್ ಜಲ್ಮಿ (LHQ vs PSZ) ನಡುವಣ ಹೈಸ್ಕೋರ್ ಪಂದ್ಯ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಉಭಯ ತಂಡಗಳ ಮೊತ್ತ 200ರ ಗಡಿ ದಾಟಿದ್ದವು. ಶಾಹಿನ್ ಆಫ್ರಿದಿ (Shaheen Afridi) ಹಾಗೂ ಬಾಬರ್ ಅಜಮ್ ನಡುವಣ ಕಾಳಗದಲ್ಲಿ ಶಾಹಿನ್ ನಾಯಕತ್ವದ ಲಾಹೋರ್ ಕಲಂದರ್ಸ್ ತಂಡ 40 ರನ್ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ವಿಶೇಷ ಘಟನೆಯೊಂದು ನಡೆಯಿತು. ಎರಡನೇ ಇನ್ನಿಂಗ್ಸ್ ಅರಂಭವಾದ ಮೊದಲ ಎಸೆತದಲ್ಲೇ ಎದುರಾಳಿಯ ಬ್ಯಾಟ್ ಕಟ್ ಆದರೆ, ಎರಡನೇ ಎಸೆತದಲ್ಲಿ ಬೌಲ್ಡ್ ಆದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಲಾಹೋರ್ ಕಲಂದರ್ಸ್ ತಂಡ 20 ಓವರ್ಗಳಲ್ಲಿ ಬರೋಬ್ಬರಿ 241 ರನ್ ಕಲೆಹಾಕಿತು. ಕಠಿಣ ಟಾರ್ಗೆಟ್ ಬೆನ್ನಟ್ಟಿದ ಪೇಶಾವರ್ ಜಲ್ಮಿ ಮೊದಲ ಓವರ್ನಲ್ಲೇ ವಿಕೆಟ್ ಕಳೆದುಕೊಂಡಿತು. ಓಪನರ್ ಮೊಹಮ್ಮದ್ ಹ್ಯಾರಿಸ್ ಅವರು ಶಾಹಿನ್ ಅಫ್ರಿದಿ ಅವರ ಎರಡನೇ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಇದಕ್ಕೂ ಮುನ್ನ ಹಾಕಿದ ಮೊದಲ ಎಸೆತದಲ್ಲಿ ಹ್ಯಾರಿಸ್ ಬ್ಯಾಟ್ ತುಂಡಾದ ಪ್ರಸಂಗ ನಡೆಯಿತು. ಆಫ್ರಿದಿ ಮಾರಕ ವೇಗಕ್ಕೆ ಬ್ಯಾಟ್ ಎರಡು ಭಾಗವಾಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
First ball: Bat broken ⚡ Second ball: Stumps rattled ?
PACE IS PACE, YAAR ??#HBLPSL8 | #SabSitarayHumaray | #LQvPZ pic.twitter.com/VetxGXVZqY
— PakistanSuperLeague (@thePSLt20) February 26, 2023
James Anderson: ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆಯತ್ತ ಜಿಮ್ಮಿಯ ದಾಪುಗಾಲು..!
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಾಹೋರ್ ಕಲಂದರ್ಸ್ ತಂಡ ಆರಂಭದಲ್ಲಿ ಮಿರ್ಜಾ ಬೇಗ್ (5) ವಿಕೆಟ್ ಕಳೆದುಕೊಂಡಿತು. ಆದರೆ, ಎರಡನೆ ವಿಕೆಟ್ಗೆ ಜೊತೆಯಾದ ಫಖರ್ ಜಮಮ್ ಹಾಗೂ ಅಬ್ದುಲ್ಲ ಶಫೀಖ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಮನಬಂದಂತೆ ಆಟವಾಡಿದ ಇವರು ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು. ಜಮಮ್ 45 ಎಸೆತಗಳಲ್ಲಿ 3ಫೋರ್, 10 ಸಿಕ್ಸರ್ನೊಂದಿಗೆ 96 ರನ್ ಚಚ್ಚಿದರೆ, ಶಫೀಕ್ 75 ರನ್ ಸಿಡಿಸಿದರು. ಕೊನೆಯಲ್ಲಿ ಸ್ಯಾಮ್ ಬಿಲ್ಲಿಂಗ್ಸ್ ಅಜೇಯ 47 ರನ್ ಗಳಿಸಿದರು. ಲಾಹೋರ್ ತಂಡ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 241 ರನ್ ಕಲೆಹಾಕಿತು.
ಕಠಿಣ ಟಾರ್ಗೆಟ್ ಬೆನ್ನಟ್ಟಿದ ಪೇಶಾವರ್ ತಂಡ ಶಾಹಿನ್ ಅಫ್ರಿದಿ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಬಾಬರ್ ಅಜಮ್ (7) ಮೊಹಮ್ಮದ್ ಹ್ಯಾರಿಸ್ (0) ಬೇಗನೆ ಔಟಾದರು. ಮೂರನೇ ವಿಕೆಟ್ಗೆ ಸೈಮ್ ಅಯುಬ್ (51) ಹಾಗೂ ಟಾಮ್ ಕ್ಯಾಡ್ಮೋರ್ (55) ಹೋರಾಟ ನಡೆಸಿದರೂ ಸಾಧ್ಯವಾಗಲಿಲ್ಲ. ಭನುಕಾ ರಾಜಪಕ್ಷ 24 ರನ್ ಹಾಗೂ ರೋಮನ್ ಪಾವೆಲ್ 20 ರನ್ಗಳ ಕೊಡುಗೆಯೂ ಸಾಕಾಗಲಿಲ್ಲ. ಪೇಶಾವರ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತಷ್ಟೆ. ಲಾಹೋರ್ ಪರ ಅಫ್ರಿದಿ 5 ವಿಕೆಟ್ ಕಿತ್ತು ಮಿಂಚಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:29 am, Mon, 27 February 23




