AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs BAN: ಕಾನ್ಪುರ ಟೆಸ್ಟ್​ಗೆ ಮಳೆಯ ಜೊತೆಗೆ ಮಂಗಗಳ ಕಾಟ..! ಮುಳ್ಳನ್ನು ಮುಳ್ಳಿನಿಂದಲೇ ತೆಗೆದ ಆಡಳಿತ ಮಂಡಳಿ

IND vs BAN: ಮೈದಾನಕ್ಕೆ ಬಂದ ಪ್ರೇಕ್ಷಕರಿಂದ ವಸ್ತುಗಳನ್ನು ಕಿತ್ತುಕೊಳ್ಳುವ ಕೋತಿಗಳ ಈ ದಾಳಿಯನ್ನು ತಡೆಯಲು ಕ್ರೀಡಾಂಗಣದ ಆಡಳಿತ ಮಂಡಳಿ ಲಂಗೂರ್​ಗಳನ್ನು (ಉದ್ದನೆಯ ಬಾಲದ ಕಪ್ಪು ಕೋತಿಗಳು) ಮತ್ತು ಅವುಗಳ ನಿರ್ವಾಹಕರನ್ನು ನೇಮಿಸಿದೆ. ಮೈದಾನದ ರಕ್ಷಣೆಗೆ ಸಿಬ್ಬಂದಿಗಳಿದ್ದರೂ, ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಸುಲವಾಗಿ ಲಂಗೂರ್​ಗಳನ್ನು ನಿಯೋಜಿಸಲಾಗಿದೆ.

IND vs BAN: ಕಾನ್ಪುರ ಟೆಸ್ಟ್​ಗೆ ಮಳೆಯ ಜೊತೆಗೆ ಮಂಗಗಳ ಕಾಟ..! ಮುಳ್ಳನ್ನು ಮುಳ್ಳಿನಿಂದಲೇ ತೆಗೆದ ಆಡಳಿತ ಮಂಡಳಿ
ಕಾನ್ಪುರ ಟೆಸ್ಟ್
Follow us
ಪೃಥ್ವಿಶಂಕರ
|

Updated on:Sep 28, 2024 | 3:48 PM

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಪಂದ್ಯದ ಮೊದಲ ದಿನ ಮಳೆಯಿಂದಾಗಿ ಕೇವಲ 35 ಓವರ್‌ಗಳ ಆಟ ಮಾತ್ರ ನಡೆದಿತ್ತು. ಆದರೆ ಎರಡನೇ ದಿನ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಒಂದೇ ಒಂದು ಎಸೆತವನ್ನು ಎಸೆಯಲು ಸಾಧ್ಯವಾಗದೆ ಎರಡನೇ ದಿನದಾಟವನ್ನು ರದ್ದುಗೊಳಿಸಲಾಗಿದೆ. ಈ ನಡುವೆ ಕಾನ್ಪುರ ಟೆಸ್ಟ್ ಸುಗಮವಾಗಿ ನಡೆಯುವ ಸಲುವಾಗಿ ಗ್ರೀನ್ ಪಾರ್ಕ್ ಕ್ರೀಡಾಂಗಣದ ಆಡಳಿತ ಮಂಡಳಿ ತೆಗೆದುಕೊಂಡ ನಿರ್ಧಾರ ಇದೀಗ ಭಾರಿ ಮೆಚ್ಚುಗೆಗೆ ಪಾತ್ರವಾಗಿರುವುದಲ್ಲದೆ, ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದೆ.

ವಾಸ್ತವವಾಗಿ ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಪ್ರತಿ ಭಾರಿಯೂ ಪಂದ್ಯಗಳು ನಡೆಯುವ ಸಮಯದಲ್ಲಿ ಮಂಗಗಳ ಉಪಟಳ ಹೆಚ್ಚಾಗಿರುತ್ತಿತ್ತು. ಈ ಕೋತಿಗಳು ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರಿಂದ ಆಹಾರ, ಪಾನೀಯಗಳಿಂದ ಹಿಡಿದು ಮೊಬೈಲ್ ಫೋನ್‌ಗಳವರೆಗೆ ಇತರ ವಸ್ತುಗಳನ್ನು ಕಸಿದುಕೊಂಡು ಹೋಗುತ್ತಿದ್ದವು. ಇದು ಮೈದಾನಕ್ಕೆ ಬರುವ ಅಭಿಮಾನಿಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತಿತ್ತು. ಈ ಬಗ್ಗೆ ಈ ಹಿಂದೆ ದೂರುಗಳು ಸಹ ಕೇಳಿಬಂದಿದ್ದವು. ಆದರೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿರುವ ಕ್ರೀಡಾಂಗಣದ ಆಡಳಿತ ಮಂಡಳಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಕೆಲಸ ಮಾಡಿದೆ.

ಲಂಗೂರ್​ಗಳ ನೇಮಕ

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಮೈದಾನಕ್ಕೆ ಬಂದ ಪ್ರೇಕ್ಷಕರಿಂದ ವಸ್ತುಗಳನ್ನು ಕಿತ್ತುಕೊಳ್ಳುವ ಕೋತಿಗಳ ಈ ದಾಳಿಯನ್ನು ತಡೆಯಲು ಕ್ರೀಡಾಂಗಣದ ಆಡಳಿತ ಮಂಡಳಿ ಲಂಗೂರ್​ಗಳನ್ನು (ಉದ್ದನೆಯ ಬಾಲದ ಕಪ್ಪು ಕೋತಿಗಳು) ಮತ್ತು ಅವುಗಳ ನಿರ್ವಾಹಕರನ್ನು ನೇಮಿಸಿದೆ. ಮೈದಾನದ ರಕ್ಷಣೆಗೆ ಸಿಬ್ಬಂದಿಗಳಿದ್ದರೂ, ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಸುಲವಾಗಿ ಲಂಗೂರ್​ಗಳನ್ನು ನಿಯೋಜಿಸಲಾಗಿದೆ. ಇದರಿಂದಾಗಿ ಪಂದ್ಯ ನಡೆಯುವ ವೇಳಿ ಕೋತಿಗಳು ವೀಕ್ಷಕರ ಮೇಲೆ ದಾಳಿ ಮಾಡುವುದು ನಿಯಂತ್ರಣಕ್ಕೆ ಬಂದಿದೆ ಎಂದು ಕಾನ್ಪುರದ ಗ್ರೀನ್ ಪಾರ್ಕ್‌ ಸ್ಟೇಡಿಯಂನ ನಿರ್ದೇಶಕ ಸಂಜಯ್ ಕಪೂರ್ ಹೇಳಿದ್ದಾರೆ.

ಕಾನ್ಪುರದಲ್ಲಿ ನಾನಾ ಸಮಸ್ಯೆಗಳು

ಕಾನ್ಪುರ ಟೆಸ್ಟ್​ಗೆ ಪ್ರತಿ ದಿನ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಿವೆ. ಟೆಸ್ಟ್ ಆರಂಭಕ್ಕೂ ಮುನ್ನ ಮಳೆಯಿಂದಾಗಿ ಉಭಯ ತಂಡಗಳಿಗೆ ಸರಿಯಾಗಿ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ಅಲ್ಲದೆ ಈ ಕ್ರೀಡಾಂಗಣದಲ್ಲಿ ಆಟಗಾರರಿಗೆ ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲ ಎಂದು ದೂರಿ ಟೀಂ ಇಂಡಿಯಾ ಆಟಗಾರರೇ ಇಲ್ಲಿ ಪಂದ್ಯವನ್ನು ಆಡಲು ಹಿಂಜರಿದಿದ್ದರು. ಇದೆಲ್ಲದರ ಜೊತೆಗೆ ಕ್ರೀಡಾಂಗಣದ ಸಿ ಬ್ಲಾಕ್, ಪ್ರೇಕ್ಷಕರು ಕೂತು ಪಂದ್ಯವನ್ನು ವೀಕ್ಷಿಸಲು ಅಷ್ಟು ಸುರಕ್ಷಿತವಾಗಿಲ್ಲ ಎಂಬ ವರದಿ ಹೊರಬಿದ್ದಿತ್ತು. ಆದ್ದರಿಂದ, ಮೊದಲ ದಿನದ ಆಟ ಪ್ರಾರಂಭವಾಗುವ ಮೊದಲು ಪ್ರೇಕ್ಷಕರಿಗೆ ಸಿ ಬ್ಲಾಕ್​ನ ಟಿಕೆಟ್​ಗಳನ್ನು ನೀಡುವುದನ್ನು ನಿಲ್ಲಿಸಲಾಯಿತು. ಇದಲ್ಲದೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಿದ್ದು, ಇದರಿಂದಾಗಿ ಪಂದ್ಯದ ಮೊದಲ ದಿನ ಕೇವಲ 35 ಓವರ್‌ಗಳನ್ನು ಮಾತ್ರ ಆಡಲು ಸಾಧ್ಯವಾಯಿತು.ಇದೀಗ ಎರಡನೇ ದಿನದಾಟವೂ ಮಳೆಯಿಂದ ರದ್ದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:45 pm, Sat, 28 September 24