IND vs BAN: 4 ತಿಂಗಳ ಬಳಿಕ ಅಖಾಡಕ್ಕೆ; ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ ಬಾಂಗ್ಲಾ ಎದುರಾಳಿ..!

IND vs BAN: ಕಳೆದ ನಾಲ್ಕು ತಿಂಗಳಿಂದ ಒಂದೇ ಒಂದು ಅಂತರಾಷ್ಟ್ರೀಯ ಪಂದ್ಯವನ್ನಾಡದ ಹರ್ಮನ್​ಪ್ರೀತ್ ಬಳಗ ಇದೀಗ ಬಾಂಗ್ಲಾದೇಶ ತಂಡವನ್ನು ಎದುರಿಸಲು ಸಿದ್ಧವಾಗಿದೆ.

IND vs BAN: 4 ತಿಂಗಳ ಬಳಿಕ ಅಖಾಡಕ್ಕೆ; ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ ಬಾಂಗ್ಲಾ ಎದುರಾಳಿ..!
ಭಾರತ- ಬಾಂಗ್ಲಾ ಮುಖಾಮುಖಿImage Credit source: insidesport
Follow us
ಪೃಥ್ವಿಶಂಕರ
|

Updated on:Jul 09, 2023 | 7:45 AM

ಸುದೀರ್ಘ ವಿಶ್ರಾಂತಿಯ ಬಳಿಕ ಅಂದರೆ ಬರೋಬ್ಬರಿ ನಾಲ್ಕು ತಿಂಗಳ ನಂತರ ಭಾರತ ಮಹಿಳಾ ತಂಡ ಇಂದು (ಜುಲೈ 9) ಕ್ರಿಕೆಟ್ ಕಣಕ್ಕೆ ಕಾಲಿಡುತ್ತಿದೆ. ಕಳೆದ ನಾಲ್ಕು ತಿಂಗಳಿಂದ ಒಂದೇ ಒಂದು ಅಂತರಾಷ್ಟ್ರೀಯ ಪಂದ್ಯವನ್ನಾಡದ ಹರ್ಮನ್​ಪ್ರೀತ್ (Harmanpreet Kaur) ಬಳಗ ಇದೀಗ ಬಾಂಗ್ಲಾದೇಶ ( India and Bangladesh women) ತಂಡವನ್ನು ಎದುರಿಸಲು ಸಿದ್ಧವಾಗಿದೆ. ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಭಾರತ ಮಹಿಳಾ ತಂಡ ಪ್ರಸ್ತುತ ಬಾಂಗ್ಲಾದೇಶ ಪ್ರವಾಸದಲ್ಲಿದ್ದು, ಭಾನುವಾರದಿಂದ ಟಿ20 ಸರಣಿಯೊಂದಿಗೆ ಪ್ರವಾಸ ಆರಂಭಿಸಲಿದೆ. ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮೀರ್‌ಪುರದ ಶೇರ್-ಎ-ಬಾಂಗ್ಲಾ (Shere Bangla National Stadium) ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಮಹಿಳಾ ತಂಡವು ಈ ವರ್ಷದ ಫೆಬ್ರವರಿಯಲ್ಲಿ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ತನ್ನ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ವನಿತಾ ಪಡೆ ಖಾಲಿ ಕೈಯಲ್ಲಿ ಟಿ20 ವಿಶ್ವಕಪ್​ನಿಂದ ಹೊರಬಿದ್ದಿತ್ತು. ಇದಾದ ನಂತರ ತಂಡದ ಆಟಗಾರ್ತಿಯರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಿದ್ದರು. ಆದರೆ ಆ ನಂತರ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಿಲ್ಲ. ಇದೀಗ ಈ ಉಭಯ ತಂಡಗಳು ಚುಟುಕು ಸಮರದಲ್ಲಿ ಮುಖಾಮುಖಿಯಾಗುತ್ತಿದ್ದು, ಸರಣಿಯ ಎರಡನೇ ಪಂದ್ಯ ಜುಲೈ 11 ರಂದು ಮತ್ತು ಮೂರನೇ ಪಂದ್ಯ ಜುಲೈ 13 ರಂದು ಮೀರ್‌ಪುರದಲ್ಲಿ ನಡೆಯಲಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆ: ಕನ್ನಡತಿ ರಾಜೇಶ್ವರಿ ಗಾಯಕ್ವಾಡ್‌ಗೆ 15 ಲಕ್ಷ ರೂ ಪುರಸ್ಕಾರ ಘೋಷಿಸಿದ ಕ್ರೀಡಾ ಸಚಿವ ಡಾ. ನಾರಾಯಣಗೌಡ

ಹೊಸ ಮುಖಗಳಿಗೆ ಅವಕಾಶ

ಈ ಪ್ರವಾಸದಲ್ಲಿ, ಆಯ್ಕೆದಾರರು ಕೆಲವು ಹೊಸ ಮುಖಗಳಿಗೆ ಅವಕಾಶ ನೀಡಿದ್ದಾರೆ. ತಂಡದ ಖಾಯಂ ಆಟಗಾರ್ತಿಯರಾದ ರಿಚಾ ಘೋಷ್ ಮತ್ತು ವೇಗದ ಬೌಲರ್ ರೇಣುಕಾ ಠಾಕೂರ್ ಫಿಟ್‌ನೆಸ್ ಸಮಸ್ಯೆಯಿಂದಾಗಿ ಈ ಪ್ರವಾಸದಕ್ಕೆ ಆಯ್ಕೆಯಾಗಿಲ್ಲ. ಹಾಗೆಯೇ ಶಿಖಾ ಪಾಂಡೆಯಂತಹ ವೇಗದ ಬೌಲರ್ ಕೂಡ ಈ ಪ್ರವಾಸದಲ್ಲಿ ತಂಡದೊಂದಿಗೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಶಿ ಕನೋಜಿಯಾ, ಉಮಾ ಛೆಟ್ರಿ, ಮಿನ್ನು ಮಣಿ, ಅನುಷಾ ಅವರನ್ನು ಆಯ್ಕೆಗಾರರು ತಂಡದಲ್ಲಿ ಆಯ್ಕೆ ಮಾಡಿದ್ದಾರೆ. ರಿಚಾ ಘೋಷ್ ಅನುಪಸ್ಥಿತಿಯಲ್ಲಿ ಭಾರತವು ಯಾಸ್ತಿಕಾ ಭಾಟಿಯಾ ಮತ್ತು ಉಮಾ ರೂಪದಲ್ಲಿ ಇಬ್ಬರು ವಿಕೆಟ್‌ಕೀಪರ್‌ಗಳನ್ನು ಹೊಂದಿದೆ. ಮೊದಲ ಪಂದ್ಯದಲ್ಲಿ, ತಂಡವು ಅನುಭವಿ ಭಾಟಿಯಾ ಅವರನ್ನು ತಂಡದಲ್ಲಿ ಆಡಿಸುವ ಸಾಧ್ಯತೆಗಳು ಹೆಚ್ಚಿವೆ

ಈ ಪ್ರವಾಸದಲ್ಲಿ ರಾಧಾ ಯಾದವ್ ಮತ್ತು ರಾಜೇಶ್ವರಿ ಗಾಯಕ್ವಾಡ್ ಅವರಂತಹ ಅನುಭವಿ ಸ್ಪಿನ್ನರ್‌ಗಳೂ ಇಲ್ಲ. ಈ ಇಬ್ಬರ ಬದಲಿಗೆ ಅನುಷಾ ಮತ್ತು ರಾಶಿಗೆ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡುವ ಅವಕಾಶ ಸಿಗಬಹುದು.

ಕೌನ್ ಬನೇಗಾ ಫಿನಿಶರ್?

ರಿಚಾ ಘೋಷ್ ಇಲ್ಲದ ಕಾರಣ ತಂಡದಲ್ಲಿ ಫಿನಿಶರ್ ಸಮಸ್ಯೆ ತಲೆದೋರಿದೆ. ತಂಡಕ್ಕೆ ದೀಪ್ತಿ ಶರ್ಮಾ ರೂಪದಲ್ಲಿ ಆಯ್ಕೆ ಇದೆ. ಆದರೆ ದೀಪ್ತಿ ಈ ಹಿಂದೆ ಈ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆಯ್ಕೆ ಮಂಡಳಿಯು ಪೂಜಾ ವಸ್ತ್ರಕರ್ ಮೇಲೆ ಭರವಸೆ ಇಡಬಹುದು. ಯಾಸ್ತಿಕಾ ಭಾಟಿಯಾ ಓಪನರ್ ಆಗಿದ್ದರೂ, ಶೆಫಾಲಿ ವರ್ಮಾ, ಸ್ಮೃತಿ ಮಂಧಾನ ಇರುವ ಕಾರಣ, ಅವರಿಗೆ ಆರಂಭಿಕರಾಗುವ ಅವಕಾಶ ಸಿಗುವುದಿಲ್ಲ. ಆದ್ದರಿಂದ ತಂಡವು ಅವರನ್ನು ಫಿನಿಶರ್ ಆಗಿ ಪ್ರಯತ್ನಿಸಬಹುದು.

ಈ ಸರಣಿಯಿಂದ ಮೋನಿಕಾ ಪಟೇಲ್ ಮತ್ತು ಮೇಘನಾ ಸಿಂಗ್ ಕೂಡ ಭಾರತ ತಂಡಕ್ಕೆ ಪುನರಾಗಮನ ಮಾಡುತ್ತಿದ್ದಾರೆ. ಇಬ್ಬರೂ ಕೂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ.

ಏಷ್ಯನ್ ಕ್ರೀಡಾಕೂಟಕ್ಕೆ ತಯಾರಿ

ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್​ಗೆ ಭಾರತ ಕ್ರಿಕೆಟ್ ತಂಡವನ್ನು ಕಳುಹಿಸಲು ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಏಷ್ಯನ್ ಗೇಮ್ಸ್‌ಗೆ ತಯಾರಿ ನಡೆಸುವ ದೃಷ್ಟಿಯಿಂದ ಹರ್ಮನ್‌ಪ್ರೀತ್ ಕೌರ್ ತಂಡಕ್ಕೆ ಈ ಪ್ರವಾಸ ಅತ್ಯಂತ ಮಹತ್ವದ್ದಾಗಿದೆ. ಈ ಪ್ರವಾಸದಿಂದ ತಂಡದ ಆಟಗಾರ್ತಿಯರು ಏಷ್ಯನ್ ಗೇಮ್ಸ್‌ಗೆ ತಮ್ಮ ಲಯ ಕಂಡುಕೊಳ್ಳಲು ಪ್ರಯತ್ನಿಸಲಿದ್ದಾರೆ.

ಕಾಯಂ ಕೋಚ್ ಸಿಕ್ಕಿಲ್ಲ

ಭಾರತ ಮಹಿಳಾ ತಂಡವು ಬಾಂಗ್ಲಾದೇಶ ಪ್ರವಾಸಕ್ಕೆ ಮುಖ್ಯ ಕೋಚ್ ಇಲ್ಲದೆ ಪ್ರಯಾಣ ಬೆಳೆಸಿದೆ. ಹಾಗಾಗಿ ಬಾಂಗ್ಲಾದೇಶ ಪ್ರವಾಸಕ್ಕೆ ನೌಶೀನ್ ಅಲ್ ಖದೀರ್ ಅವರನ್ನು ಹಂಗಾಮಿ ಕೋಚ್ ಆಗಿ ನೇಮಿಸಲಾಗಿದೆ. ಅವರ ತರಬೇತಿಯಲ್ಲಿ ಈ ಹಿಂದೆ ಭಾರತದ ಅಂಡರ್-19 ಮಹಿಳಾ ತಂಡ ಈ ವರ್ಷ ಟಿ20 ವಿಶ್ವಕಪ್ ಗೆದ್ದಿತ್ತು. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಮುಖ್ಯ ಕೋಚ್‌ ಆಗಿ ಅಮೋಲ್ ಮಜುಂದಾರ್ ಆಯ್ಕೆಯಾಗುವ ಸಾಧ್ಯತೆಗಳಿವೆ.

ತವರಿನ ಲಾಭ ಪಡೆಯಲ್ಲಿದೆ ಬಾಂಗ್ಲಾ ತಂಡ

ಯಾವುದೇ ತಂಡವನ್ನು ಅದರ ತವರಿನಲ್ಲಿ ಸೋಲಿಸುವುದು ಸುಲಭವಲ್ಲ. ಇಂತಹ ಪರಿಸ್ಥಿತಿಯಲ್ಲಿ ತವರಿನಲ್ಲಿ ಬಾಂಗ್ಲಾದೇಶವನ್ನು ಸೋಲಿಸುವುದು ಟೀಂ ಇಂಡಿಯಾಗೆ ಸುಲಭವಲ್ಲ. ತವರಿನಲ್ಲಿ ಭಾರತವನ್ನು ಸೋಲಿಸುವ ಶಕ್ತಿ ಈ ತಂಡಕ್ಕಿದೆ. ಆತಿಥೇಯ ತಂಡವನ್ನು ಹಗುರವಾಗಿ ಪರಿಗಣಿಸುವ ತಪ್ಪನ್ನು ಭಾರತ ತಂಡ ಮಾಡುವಂತಿಲ್ಲ. ಈ ಸರಣಿಯಲ್ಲಿ ತಂಡದ ಅನುಭವಿ ವೇಗದ ಬೌಲರ್ ಜಹನಾರಾ ಆಲಂ ಇಲ್ಲ. ಅಲ್ಲದೆ ಫರ್ಗಾನಾ ಹಕ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಅವರನ್ನು ಸ್ಟ್ಯಾಂಡ್ ಬೈ ಆಟಗಾರ್ತಿಯಾಗಿ ಆಯ್ಕೆ ಮಾಡಲಾಗಿದೆ. ಇವರಿಬ್ಬರಿಲ್ಲದಿದ್ದರೆ ಬಾಂಗ್ಲಾದೇಶ ತಂಡ ಕೊಂಚ ದುರ್ಬಲವಾಗುವುದು ಖಂಡಿತ, ಆದರೂ ಟೀಂ ಇಂಡಿಯಾ ಎಚ್ಚರಿಕೆ ವಹಿಸಬೇಕಿದೆ.

ಎರಡೂ ತಂಡಗಳು ಇಂತಿವೆ

ಭಾರತ – ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ಯಾಸ್ತಿಕಾ ಭಾಟಿಯಾ, ದೇವಿಕಾ ವೈದ್ಯ, ಉಮಾ ಛೆಟ್ರಿ (ವಿಕೆಟ್‌ಕೀಪರ್), ಅಮಂಜೋತ್ ಕೌರ್, ಎಸ್. ಮೇಘನಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಅಂಜಲಿ ಸರ್ವಾನಿ, ಮೋನಿಕಾ ಪಟೇಲ್, ರಾಶಿ ಕನೋಜಿಯಾ. ಅನುಷಾ ಬಾರೆಡ್ಡಿ, ಮಿನ್ನು ಮಣಿ.

ಬಾಂಗ್ಲಾದೇಶ – ನಿಗರ್ ಸುಲ್ತಾನ್ (ನಾಯಕಿ), ನಹಿದಾ ಅಖ್ತರ್, ದಿಲಾರಾ ಅಖ್ತರ್, ಶತಿ ರಾಣಿ, ಶಮೀಮಾ ಸುಲ್ತಾನ್, ಶೋಭನಾ ಮೊಸ್ತ್ರಿ, ಮುರ್ಷಿದಾ ಖತುನ್, ಶೋರ್ನಾ ಅಖ್ತರ್, ರಿತು ಮೋನಿ, ದಿಶಾ ಬಿಸ್ವಾಸ್, ಮಾರುಫಾ ಅಖ್ತರ್, ಸಂಜಿದಾ ಅಖ್ತರ್, ಮೇಘಲಾ, ರಬೇಯಾ ಖಾನ್, ಸುಲ್ತಾನ್ ಖಾತುನ್, ಫಾಹಿಮಾ ಖಾತುನ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:41 am, Sun, 9 July 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್