AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs AUS 3rd Test: ರೋಚಕ ಘಟ್ಟದತ್ತ ಆ್ಯಶಸ್ ತೃತೀಯ ಟೆಸ್ಟ್: ಇಂಗ್ಲೆಂಡ್ ಗೆಲುವಿಗೆ ಬೇಕು 224 ರನ್ಸ್

Ashes 2023: 251 ರನ್​ಗಳ ಗುರಿ ಬೆನ್ನಟ್ಟಿರುವ ಇಂಗ್ಲೆಂಡ್ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 27 ರನ್ ಕಲೆಹಾಕಿದೆ. ಜ್ಯಾಕ್ ಕ್ರಾವ್ಲೆ (9) ಹಾಗೂ ಬೆನ್ ಡಕ್ಲೆಟ್ (18) ಕ್ರೀಸ್​ನಲ್ಲಿದ್ದಾರೆ.

ENG vs AUS 3rd Test: ರೋಚಕ ಘಟ್ಟದತ್ತ ಆ್ಯಶಸ್ ತೃತೀಯ ಟೆಸ್ಟ್: ಇಂಗ್ಲೆಂಡ್ ಗೆಲುವಿಗೆ ಬೇಕು 224 ರನ್ಸ್
ENG vs AUS 3rd Test
Vinay Bhat
|

Updated on: Jul 09, 2023 | 7:15 AM

Share

ಲೀಡ್ಸ್​ನ ಹೀಡಿಂಗ್ಲೆಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ (ENG vs AUS) ನಡುವಣ ಆ್ಯಶಸ್ ಸರಣಿಯ (Ashes Series) ಮೂರನೇ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ದ್ವಿತೀಯ ಇನ್ನಿಂಗ್ಸ್​ನಲ್ಲಿ ಕೂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ ಕಾಂಗರೂ ಪಡೆ 224 ರನ್​ಗಳಿಗೆ ಆಲೌಟ್ ಆಗುವ ಮೂಲಕ ಆಂಗ್ಲರಿಗೆ ಗೆಲ್ಲಲು 251 ರನ್​ಗಳ ಟಾರ್ಗೆಟ್ ನೀಡಿದೆ. ಗುರಿ ಬೆನ್ನಟ್ಟಿರುವ ಇಂಗ್ಲೆಂಡ್ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿದೆ. ಸ್ಟೋಕ್ಸ್ (Ben Stokes) ಪಡೆಯ ಗೆಲುವಿಗೆ ಇನ್ನು 224 ರನ್​ಗಳ ಅವಶ್ಯಕತೆಯಿದ್ದು, ಎರಡು ದಿನಗಳ ಆಟ ಬಾಕಿಯಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಶುರುಮಾಡಿದ ಆಸ್ಟ್ರೇಲಿಯಾ 100 ರನ್​ಗು ಮೊದಲೇ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ತಂಡದ ಪರ ಮಿಚೆಲ್ ಮಾರ್ಶ್ ಏಕಾಂಗಿ ಹೋರಾಟ ನಡೆಸಿ ಶತಕ ಸಿಡಿಸಿ ಮಿಂಚಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಅತ್ತ ಮಾರ್ಶ್ ರನ್ ಕಲೆಹಾಕಿದರು. 118 ಎಸೆತಗಳಲ್ಲಿ 17 ಫೋರ್, 4 ಸಿಕ್ಸರ್​ನೊಂದಿಗೆ 118 ರನ್ ಚಚ್ಚಿದರು. ಇವರು ಬಿಟ್ಟರೆ ಟ್ರಾವಿಸ್ ಹೆಡ್ 39 ರನ್ ಗಳಿಸಿದ್ದೇ ಹೆಚ್ಚು. ಆಸೀಸ್ 60.4 ಓವರ್​ಗಳಲ್ಲಿ 263 ರನ್​ಗಳಿಗೆ ಆಲೌಟ್ ಆಯಿತು. ಮಾರ್ಕ್​ ವುಡ್ 5 ಹಾಗೂ ಕ್ರಿಸ್ ವೋಕ್ಸ್ 3 ವಿಕೆಟ್ ಕಿತ್ತರು.

IND vs WI: ಯುವ ಆಟಗಾರರಿಗೆ ಬ್ಯಾಟ್, ಶೂಸ್ ಗಿಫ್ಟ್ ನೀಡಿದ ಮೊಹಮ್ಮದ್ ಸಿರಾಜ್

ಇದನ್ನೂ ಓದಿ
Image
WC Qualifiers Final 2023: ವಿಶ್ವಕಪ್ ಕ್ವಾಲಿಫೈಯರ್ ಫೈನಲ್; ಇಂದು ಶ್ರೀಲಂಕಾ- ನೆದರ್ಲೆಂಡ್ಸ್ ಹಣಾಹಣಿ
Image
ICC World Cup 2023: ವಿಶ್ವಕಪ್​ನಲ್ಲಿ ಆಡಲು ಪಾಕಿಸ್ತಾನ್ ಹಿಂದೇಟು? ಸಮಿತಿ ರಚಿಸಿದ ಪಾಕ್ ಪ್ರಧಾನಿ
Image
Duleep Trophy 2023: ರೋಚಕ ಜಯದೊಂದಿಗೆ ಫೈನಲ್​ಗೆ ಲಗ್ಗೆಯಿಟ್ಟ ದಕ್ಷಿಣ ವಲಯ
Image
Afghanistan: ಬಾಂಗ್ಲಾ ವಿರುದ್ಧ ಅಫ್ಘಾನ್​ಗೆ ಅಮೋಘ ಗೆಲುವು

ಬಳಿಕ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ತಂಡದ ಬ್ಯಾಟರ್​ಗಳು ಕೂಡ ನಿತ್ತು ಆಡಲಿಲ್ಲ. ತಂಡದ ಮೊತ್ತ 87 ಆಗುವ ಹೊತ್ತಿಗೆ 5 ವಿಕೆಟ್ ಪತನಗೊಂಡವು. ನಾಯಕ ಬೆನ್ ಸ್ಟೋಕ್ಸ್ 108 ಎಸೆತಗಳಲ್ಲಿ 80 ರನ್ ಗಳಿಸಿ ತಂಡದ ಮಾನ ಉಳಿಸಿದರು. ಪ್ಯಾಟ್ ಕಮಿನ್ಸ್ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಆಂಗ್ಲರು 52.3 ಓವರ್​ನಲ್ಲಿ 237 ರನ್​ಗಳಿಗೆ ಆಲೌಟ್ ಆದರು. ಕಮಿನ್ಸ್ 6 ವಿಕೆಟ್ ಕಿತ್ತು ಮಿಂಚಿದರು. 26 ರನ್​ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಆಸ್ಟ್ರೇಲಿಯಾ ಪುನಃ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಡೇವಿಡ್ ವಾರ್ನರ್ 1, ಸ್ಟೀವ್ ಸ್ಮಿತ್ 2, ಉಸ್ಮಾನ್ ಖ್ವಾಜಾ 43 ಹಾಗೂ ಮಾರ್ನಸ್ ಲಾಬುಶೇನ್ 33 ರನ್​ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿದ್ದ ಮಿಚೆಲ್ ಮಾರ್ಶ್ ಈ ಭಾರಿ 28 ರನ್​ಗೆ ಸುಸ್ತಾದರು. ಟ್ರಾವಿಸ್ ಹೆಡ್ ಬಿಟ್ಟರೆ ಉಳಿದ ಬ್ಯಾಟರ್​​ಗಳ ಖಾತೆಯಿಂದ ರನ್ ಬರಲಿಲ್ಲ. ಹೆಡ್ 77 ರನ್ ಗಳಿಸಿ ನೆರವಾದರು. ಆಸ್ಟ್ರೇಲಿಯಾ 67.1 ಓವರ್​ಗಳಲ್ಲಿ 224 ರನ್​ಗೆ ಆಲೌಟ್ ಆಯಿತು. ಬ್ರಾಡ್ ಹಾಗೂ ವೋಕ್ಸ್ ತಲಾ 3 ವಿಕೆಟ್ ಪಡೆದರು. ಇತ್ತ 251 ರನ್​ಗಳ ಗುರಿ ಬೆನ್ನಟ್ಟಿರುವ ಇಂಗ್ಲೆಂಡ್ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 27 ರನ್ ಕಲೆಹಾಕಿದೆ. ಜ್ಯಾಕ್ ಕ್ರಾವ್ಲೆ (9) ಹಾಗೂ ಬೆನ್ ಡಕ್ಲೆಟ್ (18) ಕ್ರೀಸ್​ನಲ್ಲಿದ್ದಾರೆ. ಇಂಗ್ಲೆಂಡ್ ಜಯಕ್ಕೆ 224 ರನ್​ಗಳು ಬೇಕಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ