IND vs ENG: ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಭಾರತದ 10 ಆಟಗಾರರಿಗೆ ಚೊಚ್ಚಲ ಪಂದ್ಯ

India vs England 4th Test: ಜುಲೈ 23, 2025 ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುವ ಭಾರತ-ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಭಾರತ ತಂಡಕ್ಕೆ ದೊಡ್ಡ ಸವಾಲಾಗಿದೆ. ಏಕೆಂದರೆ ಈ ಮೈದಾನದಲ್ಲಿ ಭಾರತ ಇದುವರೆಗೆ ಗೆದ್ದಿಲ್ಲ. ಅಲ್ಲದೆ ಭಾರತದ 10 ಆಟಗಾರರಿಗೆ ಈ ಮೈದಾನದಲ್ಲಿ ಇದು ಮೊದಲ ಪಂದ್ಯವಾಗಿರುವುದು ಹೆಚ್ಚುವರಿ ಸವಾಲಾಗಿದೆ.

IND vs ENG: ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಭಾರತದ 10 ಆಟಗಾರರಿಗೆ ಚೊಚ್ಚಲ ಪಂದ್ಯ
Team India

Updated on: Jul 19, 2025 | 10:40 PM

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಜುಲೈ 23, 2025 ರಿಂದ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ (Old Trafford) ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯಲ್ಲಿ 1-2 ಹಿನ್ನಡೆಯಲ್ಲಿರುವ ಟೀಂ ಇಂಡಿಯಾಕ್ಕೆ (Team India) ಈ ಪಂದ್ಯ ಬಹಳ ಮುಖ್ಯವಾಗಲಿದೆ. ಏಕೆಂದರೆ ಸರಣಿಯನ್ನು ಜೀವಂತವಾಗಿರಸಬೇಕೆಂದರೆ ಗಿಲ್ ಪಡೆ ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಆದಾಗ್ಯೂ ಈ ಪಂದ್ಯವನ್ನು ಗೆಲ್ಲುವುದು ತಂಡಕ್ಕೆ ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಈ ಮೈದಾನದಲ್ಲಿ ಭಾರತ ಇದುವರೆಗೆ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಇದರ ಜೊತೆಗೆ ಈ ಮೈದಾನದಲ್ಲಿ ಆಡಿದ ಅನುಭವ ತಂಡದಲ್ಲಿರುವ ಆಟಗಾರರಿಗೆ ಇಲ್ಲ. ಪ್ರಸ್ತುತ ತಂಡದಲ್ಲಿರುವ 10 ಆಟಗಾರರು ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಮೊದಲ ಪಂದ್ಯವನ್ನಾಡಲಿದ್ದಾರೆ.

10 ಆಟಗಾರರಿಗೆ ಮೊದಲ ಪಂದ್ಯ

ವಿಶಿಷ್ಟವಾದ ಪಿಚ್ ಮತ್ತು ರೋಮಾಂಚಕಾರಿ ವಾತಾವರಣಕ್ಕೆ ಹೆಸರುವಾಸಿಯಾದ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣವು ಭಾರತೀಯ ತಂಡಕ್ಕೆ ಹೊಸ ಸವಾಲನ್ನು ಒಡ್ಡಲಿದೆ. ಪ್ರಸ್ತುತ ಭಾರತೀಯ ತಂಡದಲ್ಲಿ ಈ ಮೈದಾನದಲ್ಲಿ ಈ ಹಿಂದೆ ಟೆಸ್ಟ್ ಪಂದ್ಯ ಆಡಿದ ಏಕೈಕ ಆಟಗಾರ ಅಂದರೆ ಅದು ರವೀಂದ್ರ ಜಡೇಜಾ ಮಾತ್ರ. ಅವರನ್ನು ಹೊರತುಪಡಿಸಿ, ಆಡುವ 11 ರಲ್ಲಿ ಆಯ್ಕೆಯಾದ ಉಳಿದ 10 ಆಟಗಾರರು ಈ ಮೈದಾನದಲ್ಲಿ ಟೆಸ್ಟ್ ಪಂದ್ಯ ಆಡುತ್ತಿರುವುದು ಇದೇ ಮೊದಲು.

ಟೀಂ ಇಂಡಿಯಾ ತನ್ನ ಪ್ಲೇಯಿಂಗ್ 11 ರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಿದ್ದರೆ, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್, ಶುಭಮನ್ ಗಿಲ್, ರಿಷಭ್ ಪಂತ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ಸ್ಟಾರ್ ಆಟಗಾರರು ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ.

IND vs ENG: ಮ್ಯಾಂಚೆಸ್ಟರ್​ನಲ್ಲಿ ಬ್ಯಾಟ್ ಮುಟ್ಟದೆ ಅರ್ಧಶತಕ ಪೂರೈಸಲಿರುವ ಬುಮ್ರಾ

ಓಲ್ಡ್ ಟ್ರಾಫರ್ಡ್‌ನಲ್ಲಿ ಟೀಂ ಇಂಡಿಯಾ ಅಂಕಿಅಂಶಗಳು

ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾದ ದಾಖಲೆ ಇಲ್ಲಿಯವರೆಗೆ ನಿರಾಶಾದಾಯಕವಾಗಿದೆ. ಈ ಐತಿಹಾಸಿಕ ಮೈದಾನದಲ್ಲಿ ಭಾರತ 9 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಒಂದು ಪಂದ್ಯವನ್ನು ಗೆದ್ದಿಲ್ಲ. ಈ ಪೈಕಿ 4 ಪಂದ್ಯಗಳಲ್ಲಿ ಭಾರತ ಸೋಲನ್ನು ಎದುರಿಸಿದ್ದರೆ ಉಳಿದ 5 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಟೀಂ ಇಂಡಿಯಾ ಈ ಮೈದಾನದಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯವನ್ನು 1936 ರಲ್ಲಿ ಆಡಿತ್ತು. ಆದರೆ ಆ ಪಂದ್ಯ ಡ್ರಾ ಆಗಿತ್ತು. ಅದೇ ಸಮಯದಲ್ಲಿ, ಕೊನೆಯ ಟೆಸ್ಟ್ ಪಂದ್ಯವನ್ನು 2014 ರಲ್ಲಿ ಆಡಿದ್ದ ಭಾರತ ಈ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 54 ರನ್‌ಗಳಿಂದ ಸೋತಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ