IND vs ENG, 3rd ODI: ಭಾರತ- ಇಂಗ್ಲೆಂಡ್ ಫೈನಲ್ ಕದನಕ್ಕೆ ರೋಹಿತ್ ಪಡೆಯ ಸಂಭಾವ್ಯ 11

| Updated By: ಪೃಥ್ವಿಶಂಕರ

Updated on: Jul 16, 2022 | 4:37 PM

IND vs ENG, 3rd ODI: ನಾಳಿನ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳು ಸರಣಿ ಗೆಲ್ಲುವ ಸಂಕಲ್ಪದೊಂದಿಗೆ ನಾಳೆ ಮೈದಾನಕ್ಕೆ ಇಳಿಯಲಿವೆ.

IND vs ENG, 3rd ODI: ಭಾರತ- ಇಂಗ್ಲೆಂಡ್ ಫೈನಲ್ ಕದನಕ್ಕೆ ರೋಹಿತ್ ಪಡೆಯ ಸಂಭಾವ್ಯ 11
Team India
Follow us on

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ODI (IND vs ENG) ನಾಳೆ ಮ್ಯಾಂಚೆಸ್ಟರ್ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿದೆ. ಮೂರು ಏಕದಿನ ಸರಣಿಯ ಕೊನೆಯ ಪಂದ್ಯ ಇದಾಗಿದೆ. ಇದು ಸರಣಿಯ ಫಲಿತಾಂಶವನ್ನು ನಿರ್ಧರಿಸುವ ಪಂದ್ಯವಾಗಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಲಾರ್ಡ್ಸ್​ನಲ್ಲಿ ಪ್ರತಿದಾಳಿ ನಡೆಸಿ, ಭಾರತವನ್ನು 100 ರನ್‌ಗಳಿಂದ ಸೋಲಿಸಿತು. ಹೀಗಾಗಿ ನಾಳಿನ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳು ಸರಣಿ ಗೆಲ್ಲುವ ಸಂಕಲ್ಪದೊಂದಿಗೆ ನಾಳೆ ಮೈದಾನಕ್ಕೆ ಇಳಿಯಲಿವೆ. ಮೂರನೇ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ( Rohit Sharma and coach Rahul Dravid) ತಂಡದಲ್ಲಿ ಯಾವ ಬದಲಾವಣೆಗಳನ್ನು ಮಾಡುತ್ತಾರೆ? ಎಂಬುದು ಈಗ ಪ್ರಶ್ನೆಯಾಗಿದೆ. ಸದ್ಯಕ್ಕೆ ಇಂತಹ ಮಹತ್ವದ ಪಂದ್ಯಕ್ಕಾಗಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ತೋರುತ್ತದೆ. ವಿರಾಟ್ ಕೊಹ್ಲಿ (Virat Kohli) ಎರಡನೇ ಏಕದಿನ ಪಂದ್ಯಗಳಲ್ಲಿ ವಿಫಲರಾಗಿದ್ದರು. ಆದರೆ ತಂಡದ ಮ್ಯಾನೇಜ್‌ಮೆಂಟ್ ಮತ್ತೆ ವಿರಾಟ್ ಮೇಲೆ ನಂಬಿಕೆ ತೋರಿಸಲಿದೆ.

ಅದೇ ತಂಡ ಆಡಲಿದೆಯೇ?

ಯಾವುದೇ ತಂಡವು ತನ್ನ ಗೆಲುವಿನ ಸಂಯೋಜನೆಯನ್ನು ಎಂದಿಗೂ ಬದಲಾಯಿಸುವುದಿಲ್ಲ. ಗೆಲ್ಲುವ ತಂಡದ ಲಯವನ್ನು ಹಾಳು ಮಾಡುವುದಿಲ್ಲ. ಎರಡನೇ ಪಂದ್ಯದಲ್ಲಿ ಭಾರತ ಸೋತಿತ್ತು. ಆದರೆ ಭಾರತ ಅದೇ ತಂಡವನ್ನು ಕಣಕ್ಕಿಳಿಸಲಿದೆ. ಇದು ಆಟಗಾರರಿಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುವುದಲ್ಲದೆ ಉತ್ತಮ ಪ್ರದರ್ಶನ ನೀಡಲು ಆಟಗಾರರನ್ನು ಪ್ರೇರೇಪಿಸುತ್ತದೆ.

ಇದನ್ನೂ ಓದಿ
Virat Kohli: ಟೀಕಿಸುವವರಿಗೆ ಒಂದೇ ಪದದಲ್ಲಿ ಉತ್ತರ ಕೊಟ್ಟ ಕಿಂಗ್ ಕೊಹ್ಲಿ; ಏನದು ಗೊತ್ತಾ?
India vs England 3rd ODI Match Live Streaming: ನಾಳೆ ಫೈನಲ್; ಪಂದ್ಯ ಆರಂಭದ ಸಮಯ 5:30 ಅಲ್ಲ
Singapore Open 2022: ಸೆಮಿಫೈನಲ್‌ನಲ್ಲಿ ಸಿಂಧುಗೆ ಸುಲಭ ಜಯ; ಚಾಂಪಿಯನ್ ಪಟ್ಟಕ್ಕೇರಲು ಇನ್ನೊಂದೆ ಮೆಟ್ಟಿಲು ಬಾಕಿ

ಎಲ್ಲರ ದೃಷ್ಟಿ ಮತ್ತೊಮ್ಮೆ ವಿರಾಟ್ ಮೇಲೆ ನೆಟ್ಟಿದೆ

ಓಲ್ಡ್ ಟ್ರಾಫರ್ಡ್‌ನಲ್ಲಿ ಮತ್ತೊಮ್ಮೆ ಎಲ್ಲರ ಕಣ್ಣು ವಿರಾಟ್ ಕೊಹ್ಲಿಯತ್ತ ನೆಟ್ಟಿದೆ. ನಾಯಕ ರೋಹಿತ್ ಶರ್ಮಾ ನಿರಂತರವಾಗಿ ವಿರಾಟ್‌ಗೆ ಬೆಂಬಲ ನೀಡುತ್ತಿದ್ದಾರೆ. ನಾಳಿನ ಪಂದ್ಯದಲ್ಲಿ ವಿರಾಟ್ ಬ್ಯಾಟ್ ಅಬ್ಬರಿಸಲೇಬೇಕು. ಇಲ್ಲದಿದ್ದರೆ ಕೊಹ್ಲಿ ಮುಂದಿನ ಸರಣಿಗಳಿಗೆ ಆಯ್ಕೆಯಾಗುವುದು ತೀರ ಕಷ್ಟಕರವಾಗಬಹುದು. ಏಕಂದರೆ, ಟೀಂ ಇಂಡಿಯಾದಲ್ಲಿ ಪ್ರತಿಭಾವಂತ ಆಟಗಾರರ ಕೊರತೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಕೊಹ್ಲಿಗಾಗಿ ಹೂಡಾ, ಸಂಜು ಸ್ಯಾಮ್ಸನ್, ಕಿಶನ್​ರಂತಹ ಆಟಗಾರರಿಗೆ ತಂಡದಿಂದ ಗೇಟ್​ಪಾಸ್​ ನೀಡಲಾಗಿದೆ.

ಭಾರತದ ಸಂಭಾವ್ಯ 11

ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ

Published On - 4:37 pm, Sat, 16 July 22