AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಮ್ಯಾಂಚೆಸ್ಟರ್ ಟೆಸ್ಟ್ ಕುರಿತು ಹೇಳಿಕೆ ನೀಡಿದ ಬಿಸಿಸಿಐ; ಸರಣಿಯ ಭವಿಷ್ಯವೇನು? ಇಲ್ಲಿದೆ ವಿವರ

IND vs ENG: ರದ್ದಾದ ಪಂದ್ಯವನ್ನು ಮತ್ತೊಮ್ಮೆ ಆಯೋಜಿಸಲು ಸರಿಯಾದ ಸಮಯಕ್ಕಾಗಿ ಹುಡುಕಾಟ ನಡೆಯುತ್ತಿದೆ ಎಂದು ಬೋರ್ಡ್ ಹೇಳಿದೆ.

IND vs ENG: ಮ್ಯಾಂಚೆಸ್ಟರ್ ಟೆಸ್ಟ್ ಕುರಿತು ಹೇಳಿಕೆ ನೀಡಿದ ಬಿಸಿಸಿಐ; ಸರಣಿಯ ಭವಿಷ್ಯವೇನು? ಇಲ್ಲಿದೆ ವಿವರ
ಜೋ ರೂಟ್, ವಿರಾಟ್ ಕೊಹ್ಲಿ
TV9 Web
| Updated By: ಪೃಥ್ವಿಶಂಕರ|

Updated on: Sep 10, 2021 | 4:08 PM

Share

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯು ನಿರಾಶಾದಾಯಕ ರೀತಿಯಲ್ಲಿ ಕೊನೆಗೊಂಡಿದೆ. ಕೊರೊನಾ ವೈರಸ್ ಸೋಂಕಿನ ಆತಂಕದಿಂದಾಗಿ ಮ್ಯಾಂಚೆಸ್ಟರ್‌ನಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದವು. ಅಂದಿನಿಂದ, ಸರಣಿಯ ಫಲಿತಾಂಶದ ಬಗ್ಗೆ ಊಹಾಪೋಹಗಳು ಎದ್ದಿದ್ದವು. ರದ್ದಾದ ಪಂದ್ಯವನ್ನು ಮತ್ತೆ ಆಡಬೇಕೇ ಅಥವಾ ಸರಣಿಯನ್ನು ಇಲ್ಲಿ ಕೊನೆಗೊಳಿಸುವುದೇ? ಇಡೀ ವಿಷಯದ ಕುರಿತು ಹೇಳಿಕೆ ನೀಡುವ ಮೂಲಕ ಬಿಸಿಸಿಐ ಪ್ರತಿಯೊಂದು ಸನ್ನಿವೇಶವನ್ನೂ ಸ್ಪಷ್ಟಪಡಿಸಿದೆ.

ಮ್ಯಾಂಚೆಸ್ಟರ್ ಟೆಸ್ಟ್ ಅನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಭಾರತೀಯ ಆಟಗಾರರ ಎರಡು ಆರ್‌ಟಿ-ಪಿಸಿಐ ಪರೀಕ್ಷೆಗಳ ವರದಿಯು ನೆಗೆಟಿವ್ ಬಂದಿದ್ದರೂ, ಆಟಗಾರರು ಅದರ ಬಗ್ಗೆ ಆತಂಕಗೊಂಡಿದ್ದರು. ಈ ನಿಟ್ಟಿನಲ್ಲಿ, ಮಂಡಳಿಗಳ ನಡುವೆ ಹಲವು ಸುತ್ತಿನ ಚರ್ಚೆ ನಡೆದಿದೆ ಎಂದು ಬಿಸಿಸಿಐ ಅಧಿಕೃತವಾಗಿ ಹೇಳಿದೆ. ಇದರಲ್ಲಿ ಟೆಸ್ಟ್ ಪಂದ್ಯವನ್ನು ಆಡುವ ಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಲಾಯಿತು. ಆದರೆ ಅಂತಿಮವಾಗಿ ಕೊರೊನಾ ಸೋಂಕಿನ ಪ್ರಕರಣಗಳಿಂದಾಗಿ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲು ಭಾರತೀಯ ತಂಡ ಒತ್ತಾಯಿಸಲಾಯಿತು.

ಟೆಸ್ಟ್ ಪಂದ್ಯದ ಮರುಆಯೋಜನೆ ಕುರಿತು ಚರ್ಚೆ ಇದರೊಂದಿಗೆ, ಬಿಸಿಸಿಐ ತನ್ನ ಹೇಳಿಕೆಯಲ್ಲಿ ಗೊಂದಲಗಳಿಗೆ ಉತ್ತರಿಸಿದೆ. ರದ್ದಾದ ಪಂದ್ಯವನ್ನು ಮತ್ತೊಮ್ಮೆ ಆಯೋಜಿಸಲು ಸರಿಯಾದ ಸಮಯಕ್ಕಾಗಿ ಹುಡುಕಾಟ ನಡೆಯುತ್ತಿದೆ ಎಂದು ಬೋರ್ಡ್ ಹೇಳಿದೆ. ಬಿಸಿಸಿಐ ಮತ್ತು ಇಸಿಬಿಯ ನಡುವಿನ ಅತ್ಯುತ್ತಮ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು, ರದ್ದಾದ ಟೆಸ್ಟ್ ಪಂದ್ಯವನ್ನು ಮರು-ಸಂಘಟಿಸಲು ಬಿಸಿಸಿಐ ಇಸಿಬಿಗೆ ಪ್ರಸ್ತಾಪಿಸಿದೆ. ಎರಡೂ ಮಂಡಳಿಗಳು ಟೆಸ್ಟ್ ಪಂದ್ಯವನ್ನು ಆಯೋಜಿಸಲು ಸರಿಯಾದ ಸಮಯವನ್ನು ಹುಡುಕುವ ಕೆಲಸ ಮಾಡುತ್ತಿವೆ. ಆಟಗಾರರ ಸುರಕ್ಷತೆ ಮತ್ತು ಆರೋಗ್ಯವು ನಮಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಮಂಡಳಿಯು ಪುನರುಚ್ಚರಿಸಿದೆ. ಈ ವಿಷಯದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಲು ಮಂಡಳಿ ಸಿದ್ಧವಿಲ್ಲ ಎಂದು ಹೇಳಿಕೊಂಡಿದೆ.

ಮುಂದಿನ ವರ್ಷ ಟೆಸ್ಟ್ ಪಂದ್ಯ ಸಾಧ್ಯ ಮಂಡಳಿಯ ಹೇಳಿಕೆಯಿಂದ ಇದು ಎಷ್ಟು ಸ್ಪಷ್ಟವಾಗಿದೆ ಎಂದರೆ ಭಾರತ ತಂಡವು ಈ ಸರಣಿಯಲ್ಲಿ ಪ್ರಸ್ತುತ 2-1 ಮುನ್ನಡೆಯಲ್ಲಿದೆ ಮತ್ತು ಸರಣಿಯ ಮುಕ್ತಾಯವನ್ನು ಇನ್ನೂ ತೀರ್ಮಾನಿಸಲಾಗಿಲ್ಲ. ಮುಂದಿನ ವರ್ಷ ಉಭಯ ತಂಡಗಳಿಗೆ ಈ ಪಂದ್ಯವನ್ನು ಆಡಲು ಅವಕಾಶವಿದೆ. ಭಾರತ ತಂಡವು ಜೂನ್ 2022 ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಲಿದ್ದು, ಅಲ್ಲಿ 3 ಏಕದಿನ ಮತ್ತು 3 ಟಿ 20 ಪಂದ್ಯಗಳ ಸರಣಿಯನ್ನು ಆಡಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ, ಎರಡೂ ಮಂಡಳಿಗಳು ಈ ಪ್ರವಾಸದಲ್ಲಿ ಐದನೇ ಟೆಸ್ಟ್ ಪಂದ್ಯವನ್ನು ಪರಸ್ಪರ ಸಮನ್ವಯ ಮತ್ತು ಚರ್ಚೆಗಳ ಮೂಲಕ ಆಯೋಜಿಸಬಹುದು. ಇದಕ್ಕಾಗಿ, ಪ್ರತ್ಯೇಕ ಸಮಯವನ್ನು ಸಹ ತೆಗೆದುಕೊಳ್ಳಬಹುದು ಅಥವಾ ಏಕದಿನ ಅಥವಾ ಟಿ 20 ಸರಣಿ ನಡೆಯುವ ಒಂದು ಸ್ಥಳದಲ್ಲಿ ಟೆಸ್ಟ್ ಪಂದ್ಯವನ್ನು ಆಡಿಸಬಹುದು.

ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ