AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: 30 ವರ್ಷಗಳ ಹಳೆಯ ದಾಖಲೆ ಮುರಿದ ಧ್ರುವ್ ಜುರೆಲ್..!

IND vs ENG: ಭಾರತ ತಂಡದ ಪರ 312ನೇ ಟೆಸ್ಟ್ ಆಟಗಾರ ಎನಿಸಿಕೊಂಡಿರುವ ಧ್ರುವ್ ಜುರೆಲ್, 46 ರನ್​ಗಳ ಇನ್ನಿಂಗ್ಸ್ ಜೊತೆಗೆ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದರು. ಈ ಇನ್ನಿಂಗ್ಸ್‌ನಲ್ಲಿ 104 ಎಸೆತಗಳನ್ನು ಎದುರಿಸಿದ ಧ್ರುವ್, ಮಾರ್ಕ್ ವುಡ್ ಎಸೆದ ಗಂಟೆಗೆ ಸುಮಾರು 150 ಕಿ.ಮೀ ವೇಗದ ಚೆಂಡನ್ನು ವಿಕೆಟ್ ಕೀಪರ್ ಮೇಲೆ ಸಿಕ್ಸರ್ ಬಾರಿಸಿ ಮೈದಾನದಲ್ಲಿ ನೆರದಿದ್ದವರು ಆಶ್ಚರ್ಯಚಕಿತರಾಗುವಂತೆ ಮಾಡಿದರು.

IND vs ENG: 30 ವರ್ಷಗಳ ಹಳೆಯ ದಾಖಲೆ ಮುರಿದ ಧ್ರುವ್ ಜುರೆಲ್..!
ಧ್ರುವ್ ಜುರೆಲ್
ಪೃಥ್ವಿಶಂಕರ
|

Updated on: Feb 16, 2024 | 2:40 PM

Share

ರಾಜ್‌ಕೋಟ್ (Rajkot) ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿರುವ ಇಬ್ಬರು ಆಟಗಾರರು ಚೊಚ್ಚಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೊದಲು, ಸರ್ಫರಾಜ್ ಖಾನ್ (Sarfaraz Kha) ತಮ್ಮ ಚೊಚ್ಚಲ ಪಂದ್ಯದಲ್ಲೇ 66 ಎಸೆತಗಳಲ್ಲಿ 62 ರನ್ ಸಿಡಿಸಿದರೆ, ಕೆಎಸ್ ಭರತ್ (ks Bharat) ಬದಲಿಗೆ ತಂಡಕ್ಕೆ ಆಯ್ಕೆಯಾದ ವಿಕೆಟ್​ಕೀಪರ್ ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ (Dhruv Jurel) ಕೂಡ 46 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದರು. ಈ ಮೂಲಕ ಕೆಳಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಬಲ್ಲ ಸುಳಿವು ನೀಡಿದರು. ಧ್ರುವ್ ತಮ್ಮ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಈ ವೇಳೆ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್​ರ ಮಾರಕ ವೇಗಕ್ಕೂ ತಕ್ಕ ಪ್ರತ್ಯುತ್ತರ ನೀಡಿದ ಧ್ರುವ್ ಅಮೋಘ ಬ್ಯಾಟಿಂಗ್ ನಡೆಸಿದರು.

ಬಿಸಿಸಿಐ ಮೆಚ್ಚುಗೆ

ಭಾರತ ತಂಡದ ಪರ 312ನೇ ಟೆಸ್ಟ್ ಆಟಗಾರ ಎನಿಸಿಕೊಂಡಿರುವ ಧ್ರುವ್ ಜುರೆಲ್, 46 ರನ್​ಗಳ ಇನ್ನಿಂಗ್ಸ್ ಜೊತೆಗೆ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದರು. ಈ ಇನ್ನಿಂಗ್ಸ್‌ನಲ್ಲಿ 104 ಎಸೆತಗಳನ್ನು ಎದುರಿಸಿದ ಧ್ರುವ್, ಮಾರ್ಕ್ ವುಡ್ ಎಸೆದ ಗಂಟೆಗೆ ಸುಮಾರು 150 ಕಿ.ಮೀ ವೇಗದ ಚೆಂಡನ್ನು ವಿಕೆಟ್ ಕೀಪರ್ ಮೇಲೆ ಸಿಕ್ಸರ್ ಬಾರಿಸಿ ಮೈದಾನದಲ್ಲಿ ನೆರದಿದ್ದವರು ಆಶ್ಚರ್ಯಚಕಿತರಾಗುವಂತೆ ಮಾಡಿದರು.

30 ವರ್ಷಗಳ ದಾಖಲೆ ಉಡೀಸ್

ಅಲ್ಲದೆ, ಧ್ರುವ್ ಜುರೆಲ್ ಟೆಸ್ಟ್ ಚೊಚ್ಚಲ ಪಂದ್ಯದಲ್ಲೇ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡರು. ಧ್ರುವ್​​ಗೂ ಮೊದಲು ಭಾರತದ ಮಾಜಿ ವಿಕೆಟ್ ಕೀಪರ್ ನಯನ್ ಮೊಂಗಿಯಾ 30 ವರ್ಷಗಳಿಂದ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರು. ಆದರೀಗ ಈ ಸ್ಥಾನವನ್ನು ಧ್ರುವ್ ಜುರೆಲ್ ಆಕ್ರಮಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಇದೇ ಆಟ ಮುಂದುವರಿಸಿ ಆಕ್ರಮಣಕಾರಿ ಧೋರಣೆಯನ್ನೂ ತೋರಿದರೆ ಕೆ.ಎಸ್.ಭರತ್​ಗೆ ಟೆಸ್ಟ್ ತಂಡದಲ್ಲಿ ಅವಕಾಶ ಸಿಗುವುದು ಅಸಾಧ್ಯ. ಅಲ್ಲದೆ, ರಿಷಬ್ ಪಂತ್‌ಗೆ ಪುನರಾಗಮನವೂ ಸವಾಲಾಗಿ ಪರಿಣಮಿಸಲಿದೆ.

445 ರನ್ ಕಲೆಹಾಕಿದ ಭಾರತ

ಭಾರತ ತಂಡ ಎರಡನೇ ದಿನದಾಟದ ಆರಂಭದಲ್ಲಿ 7 ವಿಕೆಟ್ ಕಳೆದುಕೊಂಡು 331 ರನ್ ಗಳಿಸಿತ್ತು. ಬಳಿಕ ರವಿಚಂದ್ರನ್ ಅಶ್ವಿನ್ ಜತೆಗೂಡಿ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದ ಧ್ರುವ್ ಜುರೆಲ್ 8ನೇ ವಿಕೆಟ್‌ಗೆ 77 ರನ್‌ಗಳ ಜೊತೆಯಾಟ ನೀಡಿದರು. ಇದರಿಂದಾಗಿ ಭಾರತದ ಸ್ಕೋರ್ 400 ದಾಟಿತು. ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ ಕೂಡ ಧೈರ್ಯ ತೋರಿ ಟೀಂ ಇಂಡಿಯಾ ಸ್ಕೋರ್ ಅನ್ನು 445ಕ್ಕೆ ಕೊಂಡೊಯ್ದರು. ಇದೀಗ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ಮುಂದುವರಿದಿದ್ದು, ಪ್ರವಾಸಿ ತಂಡ ಎಷ್ಟು ರನ್ ಗಳಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ