IND vs ENG 3rd Test: ಆರ್. ಅಶ್ವಿನ್​ನಿಂದ ನಡೆಯಿತು ದೊಡ್ಡ ತಪ್ಪು: ಬ್ಯಾಟಿಂಗ್ ಬರುವ ಮುನ್ನವೇ ಇಂಗ್ಲೆಂಡ್​ಗೆ 5 ರನ್

England five penalty runs: ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್‌ನ ಎರಡನೇ ದಿನವು ಅಪರೂಪದ ಘಟನೆಗೆ ಸಾಕ್ಷಿಯಾಯಿತು. ಭಾರತದ ಬ್ಯಾಟ್ಸ್‌ಮನ್ ಆರ್. ಅಶ್ವಿನ್ ಪಿಚ್‌ನ ಮಧ್ಯದಲ್ಲಿ ಓಡಾಡಿದ್ದನ್ನು ಕಂಡು ಅಂಪೈರ್ ಜೋಯಲ್ ವಿಲ್ಸನ್ ಐದು ಪೆನಾಲ್ಟಿ ರನ್‌ಗಳನ್ನು ನೀಡಿದರು.

IND vs ENG 3rd Test: ಆರ್. ಅಶ್ವಿನ್​ನಿಂದ ನಡೆಯಿತು ದೊಡ್ಡ ತಪ್ಪು: ಬ್ಯಾಟಿಂಗ್ ಬರುವ ಮುನ್ನವೇ ಇಂಗ್ಲೆಂಡ್​ಗೆ 5 ರನ್
R Ashwin Penalty Runs
Follow us
Vinay Bhat
|

Updated on: Feb 16, 2024 | 12:17 PM

ರಾಜ್ಕೋಟ್​ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೂರನೇ ಟೆಸ್ಟ್ ಪಂದ್ಯ ಕುತೂಹಲ ಕೆರಳಿಸಿದೆ. ಟೀಮ್ ಇಂಡಿಯಾ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ. ಇದರ ನಡುವೆ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ರವಿಚಂದ್ರನ್ ಅಶ್ವಿನ್ ದೊಡ್ಡ ತಪ್ಪು ಮಾಡಿದ್ದಾರೆ. ಇವರು ಮಾಡಿದ ತಪ್ಪಿನಿಂದಾಗಿ ಇಂಗ್ಲೆಂಡ್‌ಗೆ ಭಾರಿ ಲಾಭವಾಗಿದೆ. ಅಶ್ವಿನ್ ಕಾರಣದಿಂದ ಇಂಗ್ಲೆಂಡ್ ಬ್ಯಾಟಿಂಗ್ ಶುರು ಮಾಡುವ ಮುನ್ನವೇ ಖಾತೆ ತೆರೆದಿದೆ. ಈಗ ಇಂಗ್ಲೆಂಡ್‌ನ ಬ್ಯಾಟಿಂಗ್ 0 ಬದಲು 5 ರನ್‌ಗಳಿಂದ ಆರಂಭವಾಗಲಿದೆ.

ಟೀಮ್ ಇಂಡಿಯಾ ಬ್ಯಾಟಿಂಗ್ ಇನಿಂಗ್ಸ್​ನ 102ನೇ ಓವರ್​ನಲ್ಲಿ ಆರ್. ಅಶ್ವಿನ್ ದೊಡ್ಡ ತಪ್ಪು ಮಾಡಿದರು. ಇದರಿಂದಾಗಿ ಭಾರತ ತಂಡ ಇಂಗ್ಲೆಂಡ್​ಗೆ 5 ರನ್‌ಗಳನ್ನು ಬಿಟ್ಟುಕೊಡಬೇಕಾಯಿತು. ರೆಹಾನ್ ಅಹ್ಮದ್ 102 ನೇ ಓವರ್ ಬೌಲ್ ಮಾಡಲು ಬಂದರು. ರೆಹಾನ್ ಅವರ ನಾಲ್ಕನೇ ಎಸೆತದಲ್ಲಿ ಅಶ್ವಿನ್ ಒಂದು ರನ್ ಗಳಿಸಿದರು. ಈ ಸಂದರ್ಭ ಅಶ್ವಿನ್ ಪಿಚ್‌ನ ಮಧ್ಯದಲ್ಲಿ ಓಡಿಕೊಂಡು ಹೋಗಿದ್ದಾರೆ.

ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದಾಗ ಸರ್ಫರಾಜ್ ಪತ್ನಿ ಏನು ಮಾಡಿದ್ರು ಗೊತ್ತೇ?

ನಿಯಮಗಳ ಪ್ರಕಾರ, ಪಿಚ್‌ನ ಮಧ್ಯದಲ್ಲಿ ಓಡುವಂತಿಲ್ಲ. ಇದರಿಂದಾಗಿ ಪಿಚ್ ಹಾಳಾಗುತ್ತದೆ. ಮೊದಲ ದಿನ ರವೀಂದ್ರ ಜಡೇಜಾ ಕೂಡ ಇದೇ ರೀತಿಯ ತಪ್ಪು ಮಾಡಿದ್ದಾರೆ. ಆಗ ಅಂಪೈರ್ ಜಡೇಜಾಗೆ ಎಚ್ಚರಿಕೆ ನೀಡಿದ್ದರು. ಆ ಬಳಿಕ ಅಶ್ವಿನ್ ಮಾಡಿದ ಅದೇ ತಪ್ಪಿನಿಂದಾಗಿ ಅಂಪೈರ್ 5 ರನ್ ಗಳ ದಂಡ ವಿಧಿಸಿದ್ದಾರೆ. ಹೀಗಾಗಿ ಅಂಪೈರ್ ಜೋಯೆಲ್ ವಿಲ್ಸನ್ ಟೀಮ್ ಇಂಡಿಯಾಕ್ಕೆ 5 ಪೆನಾಲ್ಟಿ ರನ್ ವಿಧಿಸಿದರು. ಇದೀಗ ಇಂಗ್ಲೆಂಡ್ ಖಾತೆಗೆ 5 ರನ್‌ಗಳು ಸೇರ್ಪಡೆಯಾಗಿದೆ.

ಮೇರಿಲ್ಬೋನ್ ಕ್ರಿಕೆಟ್ ಕ್ಲಬ್‌ನ ಕಾನೂನು 41 ರ ಅಡಿಯಲ್ಲಿ 2017 ರಿಂದ ಆಟಗಾರರ ನಡವಳಿಕೆಗಾಗಿ ಕಾನೂನು 42 ರ ಪ್ರಕಾರ ದಂಡವನ್ನು ನೀಡಲಾಗುತ್ತದೆ. ಬ್ಯಾಟಿಂಗ್ ತಂಡವು ಈರೀತಿಯ ತಪ್ಪು ಮಾಡಿ ಎಚ್ಚರಿಕೆ ನೀಡಿದ ನಂತರವೂ ಮುಂದುವರೆಸಿದರೆ ಫೀಲ್ಡಿಂಗ್ ತಂಡಕ್ಕೆ ಐದು ಪೆನಾಲ್ಟಿ ರನ್​ಗಳನ್ನು ನೀಡಲಾಗುತ್ತದೆ. ಪಿಚ್‌ನಲ್ಲಿ ಓಡುವುದನ್ನು ಅಥವಾ ಪಿಚ್‌ಗೆ ಹಾನಿ ಮಾಡುವ ಮಾರ್ಗವೆಂದು ಇದನ್ನು ಪರಿಗಣಿಸಲಾಗುತ್ತದೆ. ಪಿಚ್‌ನಲ್ಲಿ ಓಡುವುದನ್ನು ಲೆವೆಲ್ 1 ಅಪರಾಧವಾಗಿದೆ.

ರನೌಟ್ ಮಾಡಿದ ಜಡೇಜಾ ಬಗ್ಗೆ ಪಂದ್ಯದ ಬಳಿಕ ಸರ್ಫರಾಜ್ ಖಾನ್ ಏನು ಹೇಳಿದ್ರು ಗೊತ್ತೇ?

2016 ರಲ್ಲೂ ನಡೆದಿತ್ತು:

2016ರ ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ ಇಂದೋರ್ ಟೆಸ್ಟ್‌ನಲ್ಲಿ, ರವೀಂದ್ರ ಜಡೇಜಾ ಮಾಡಿದ ತಪ್ಪಿಗೆ ಕಿವೀಸ್​ಗೆ 5 ರನ್ ನೀಡಲಾಗಿತ್ತು. ಈ ಪಂದ್ಯದ್ಲಿ ಭಾರತ ತನ್ನ ಇನ್ನಿಂಗ್ಸ್ ಅನ್ನು 557/5 ಕ್ಕೆ ಡಿಕ್ಲೇರ್ ಮಾಡಿದ ನಂತರ, ನ್ಯೂಝಿಲೆಂಡ್ ತನ್ನ ಇನ್ನಿಂಗ್ಸ್ ಅನ್ನು 5/0 ಯಿಂದ ಪ್ರಾರಂಭಿಸಿತು. ಅಂತಿಮವಾಗಿ, ಭಾರತವು ಆ ಟೆಸ್ಟ್ ಅನ್ನು 321 ರನ್‌ಗಳಿಂದ ಗೆದ್ದುಕೊಂಡಿತು, ಅಶ್ವಿನ್ 13 ವಿಕೆಟ್‌ಗಳನ್ನು ಪಡೆದರು. ಆತಿಥೇಯರು 3-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ