IND vs ENG: ಇಂಗ್ಲೆಂಡ್​ನಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ; ಟೀಂ ಇಂಡಿಯಾದಲ್ಲಿ ಪ್ರಸಿದ್ಧ್ ಕೃಷ್ಣಗೆ ಸಿಗುತ್ತಾ ಅವಕಾಶ?

IND vs ENG: ಇಂಗ್ಲೆಂಡ್​ನಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ; ಟೀಂ ಇಂಡಿಯಾದಲ್ಲಿ ಪ್ರಸಿದ್ಧ್ ಕೃಷ್ಣಗೆ ಸಿಗುತ್ತಾ ಅವಕಾಶ?
ಕನ್ನಡಿಗ ಪ್ರಸಿದ್ಧ್ ಕೃಷ್ಣ

IND vs ENG: ನಾಲ್ಕನೇ ಟೆಸ್ಟ್‌ಗಾಗಿ, ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರನ್ನು ಭಾರತದ ಮುಖ್ಯ ತಂಡದಲ್ಲಿ ಸೇರಿಸಲಾಗಿದೆ. ಆರಂಭದಿಂದಲೂ ಪ್ರಸಿದ್ಧ್ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದರು, ಆದರೆ ಇಲ್ಲಿಯವರೆಗೆ ಅವರು ಕೇವಲ ಸ್ಟ್ಯಾಂಡ್ ಬೈ ಬೌಲರ್ ಆಗಿ ತಂಡದ ಭಾಗವಾಗಿದ್ದರು.

TV9kannada Web Team

| Edited By: pruthvi Shankar

Sep 01, 2021 | 3:47 PM

ಲೀಡ್ಸ್ ಟೆಸ್ಟ್​ನಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲಿನ ನಂತರ, ಭಾರತ ತಂಡದಲ್ಲಿನ ಬದಲಾವಣೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸೆಪ್ಟೆಂಬರ್ 2 ಗುರುವಾರದಿಂದ ಲಂಡನ್​ನ ಓವಲ್ ಮೈದಾನದಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಡುವ ಇಲೆವೆನ್​ನಲ್ಲಿ ಕೆಲವು ಬದಲಾವಣೆಗಳಾಗಲಿವೆ. ತಂಡದಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎಂಬುದು ನಾಳೆ ತಿಳಿಯಲಿದೆ. ಆದರೆ ಟೆಸ್ಟ್ ಆರಂಭಕ್ಕೂ ಮೊದಲು ಹೊಸ ಬೌಲರ್ ಭಾರತೀಯ ತಂಡಕ್ಕೆ ಸೇರಿದ್ದಾನೆ. ನಾಲ್ಕನೇ ಟೆಸ್ಟ್‌ಗಾಗಿ, ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರನ್ನು ಭಾರತದ ಮುಖ್ಯ ತಂಡದಲ್ಲಿ ಸೇರಿಸಲಾಗಿದೆ. ಆರಂಭದಿಂದಲೂ ಪ್ರಸಿದ್ಧ್ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದರು, ಆದರೆ ಇಲ್ಲಿಯವರೆಗೆ ಅವರು ಕೇವಲ ಸ್ಟ್ಯಾಂಡ್ ಬೈ ಬೌಲರ್ ಆಗಿ ತಂಡದ ಭಾಗವಾಗಿದ್ದರು. ಈಗ ಅವರನ್ನು ಮುಖ್ಯ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ, ಈ ಕಾರಣದಿಂದಾಗಿ ಅವರು ಟೆಸ್ಟ್ ಪಂದ್ಯಗಳಲ್ಲಿ ಆಯ್ಕೆಗೆ ಲಭ್ಯವಿರುತ್ತಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬುಧವಾರ 1 ಸೆಪ್ಟೆಂಬರ್ನಲ್ಲಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಮಾಹಿತಿ ಹೊರಹಾಕಿದ್ದು, ತಂಡದ ನಿರ್ವಹಣೆಯ ಕೋರಿಕೆಯ ಮೇರೆಗೆ, ಹಿರಿಯ ಆಯ್ಕೆ ಸಮಿತಿಯು ಪ್ರಸಿದ್ಧ್ ಕೃಷ್ಣರನ್ನು ಪ್ರಮುಖ ತಂಡಕ್ಕೆ ಸೇರಿಕೊಂಡಿದೆ. ಇಲ್ಲಿಯವರೆಗೆ ಪ್ರಸಿದ್ಧ್, ಅರ್ಜನ್ ನಾಗವಸ್ವಲ್ಲಾ ಅವರ ಮೀಸಲು ತಂಡದಲ್ಲಿದ್ದರು. ಅವರಲ್ಲದೆ ಅಭಿಮನ್ಯು ಈಶ್ವರನ್ ಮತ್ತು ಅವೇಶ್ ಖಾನ್ ಕೂಡ ಮೀಸಲು ಆಟಗಾರರಾಗಿ ತಂಡದೊಂದಿಗೆ ಇಂಗ್ಲೆಂಡ್​ಗೆ ಹಾರಿದ್ದರು. ಟೆಸ್ಟ್ ತಂಡದಲ್ಲಿ ಈಶ್ವರನ್ ಕೂಡ ಸೇರಿಕೊಂಡಿದ್ದಾರೆ, ಸರಣಿ ಆರಂಭವಾಗುವ ಮುನ್ನ ಅವೇಶ್ ಖಾನ್ ಗಾಯದಿಂದಾಗಿ ದೇಶಕ್ಕೆ ಮರಳಬೇಕಾಯ್ತು.

ಓವಲ್ ಟೆಸ್ಟ್‌ನಲ್ಲಿ ಸಿಗುತ್ತಾ ಅವಕಾಶ? ಆದಾಗ್ಯೂ, ಪ್ರಸಿದ್ಧ್ ಕೃಷ್ಣರನ್ನು ಏಕೆ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ ಎಂಬುದು ಮಂಡಳಿಯಿಂದ ಸ್ಪಷ್ಟವಾಗಿಲ್ಲ. ಏಕೆಂದರೆ ಈಗಾಗಲೇ 6 ವೇಗದ ಬೌಲರ್‌ಗಳಾದ – ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಇದ್ದಾರೆ. ಇವರಲ್ಲಿ ಯಾರಿಗೂ ಯಾವುದೇ ಇಂಜುರಿ ಸಮಸ್ಯೆಯಾದಂತೆ ಕಂಡುಬಂದಿಲ್ಲ. ಆದರೆ ಇದು ಪ್ರಶ್ನೆಗಳು ಮತ್ತು ಊಹಾಪೋಹಗಳನ್ನು ಹುಟ್ಟುಹಾಕಿದೆ. ಬಹುಶಃ ಓವಲ್ ಟೆಸ್ಟ್‌ನಲ್ಲಿ ಕೃಷ್ಣರ ಚೊಚ್ಚಲ ಪ್ರದರ್ಶನವು ಪ್ರಸಿದ್ಧವಾಗಬಹುದು. ಪ್ರಸಿದ್ಧ್ ಉತ್ತಮ ವೇಗವನ್ನು ಹೊಂದಿದ್ದಾರೆ ಮತ್ತು ಅವರು ಹೆಚ್ಚು ಎತ್ತರವಾಗಿರುವುದರಿಂದ ಅವರು ಉತ್ತಮ ಬೌನ್ಸ್ ಪಡೆಯುವ ಅವಕಾಶಗಳಿವೆ. ಇಂತಹ ಪರಿಸ್ಥಿತಿಯಲ್ಲಿ, ಓವಲ್‌ನ ನಿಧಾನಗತಿಯ ಪಿಚ್‌ನಲ್ಲಿ ಅವರ ವೇಗ ಮತ್ತು ಬೌನ್ಸ್ ಸಹಾಯಕೆ ಬರುತ್ತದಾ ಎಂಬುದನ್ನು ಕಾದುನೋಡಬೇಕಿದೆ.

ಈ ವರ್ಷ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಕರ್ನಾಟಕದ ಈ 25 ವರ್ಷದ ವೇಗಿ ಮೊದಲ ಬಾರಿಗೆ ಟೀಂ ಇಂಡಿಯಾದೊಂದಿಗೆ ಟೆಸ್ಟ್ ತಂಡದಲ್ಲಿ ಭಾಗಿಯಾಗುವ ಅವಕಾಶ ಪಡೆದಿದ್ದಾರೆ. ಇದಕ್ಕೂ ಮೊದಲು, ಅವರು ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತವರಿನ ಏಕದಿನ ಸರಣಿಯ ಭಾಗವಾಗಿದ್ದರು. ಅಲ್ಲಿ ಅವರು ಮೂರು ಪಂದ್ಯಗಳ ಸರಣಿಯಲ್ಲಿ ಪಾದಾರ್ಪಣೆ ಮಾಡಿದರು. ಚೊಚ್ಚಲ ಪಂದ್ಯದಲ್ಲೇ ಉತ್ತಮ ಬೌಲಿಂಗ್ ಮಾಡಿ 4 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದರು. ಒಟ್ಟು 3 ಏಕದಿನ ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ. ಆದಾಗ್ಯೂ, ಪ್ರಸಿದ್ಧ್ಗೆ ಪ್ರಥಮ ದರ್ಜೆ ಕ್ರಿಕೆಟ್‌ನ ಹೆಚ್ಚಿನ ಅನುಭವವಿಲ್ಲ. ಅವರು ಕೇವಲ 9 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ, 34 ವಿಕೆಟ್ ಪಡೆದಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada