IND vs ENG: ನಾನು ಭಾರತದ ಪರ ಆಡುವುದನ್ನು ನೋಡಲು ಅವರಿರಬೇಕಿತ್ತು; ತಂದೆ ನೆನೆದು ಭಾವುಕರಾದ ವಿರಾಟ್ ಕೊಹ್ಲಿ
Virat Kohli : ನಾನು ಭಾರತಕ್ಕಾಗಿ ಆಡುತ್ತಿರುವುದನ್ನು ಅವರಿಗೆ ನೋಡಲಾಗಲಿಲ್ಲ. ಈಗ ನನ್ನ ಮಗಳೊಂದಿಗೆ, ನನ್ನ ತಾಯಿಯ ಮುಖದಲ್ಲಿ ನಾನು ಸಂತೋಷವನ್ನು ನೋಡುತ್ತಿದ್ದೇನೆ.
ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯು ನಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ನಲ್ಲಿ ಆಗಸ್ಟ್ 4 ರಿಂದ ಆರಂಭವಾಗಲಿದೆ. ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಜೊತೆ ಮಾತುಕತೆ ನಡೆಸಿದ್ದರು. ದಿನೇಶ್ ಕಾರ್ತಿಕ್ ಈ ದಿನಗಳಲ್ಲಿ ಕಾಮೆಂಟರಿಯಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಕಾರ್ಯತಂತ್ರ ಮತ್ತು ಯೋಜನೆಯನ್ನು ಚರ್ಚಿಸುವುದರ ಜೊತೆಗೆ, ವಿರಾಟ್ ತನ್ನ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿದರು.
‘ಸ್ಕೈ ಸ್ಪೋರ್ಟ್ಸ್’ ನಲ್ಲಿ ದಿನೇಶ್ ಕಾರ್ತಿಕ್ ಜೊತೆಗಿನ ಸಂಭಾಷಣೆಯಲ್ಲಿ, ವಿರಾಟ್ ಐದು ಟೆಸ್ಟ್ ಸರಣಿಯಲ್ಲಿ, ನಾವು ಪ್ರತಿ ದಿನವೂ ಶತ ಪ್ರಯತ್ನಗಳೊಂದಿಗೆ ನಮ್ಮ ಅತ್ಯುತ್ತಮ ಸಾಧನೆಯತ್ತ ಗಮನಹರಿಸುವುದನ್ನು ಮುಂದುವರಿಸಬೇಕು. ಪ್ರತಿ ಟೆಸ್ಟ್ ಪಂದ್ಯದಲ್ಲೂ ಪ್ರತಿದಿನ ಕಠಿಣವಾಗಿರುವ ಸನ್ನಿವೇಶಗಳನ್ನು ಎದುರಿಸಲು ಬಯಸುತ್ತೇನೆ ಎಂದು ಹೇಳಿದರು.
ನನ್ನ ಸಾಧನೆಗಳನ್ನು ನೋಡಲು ಸಾಧ್ಯವಾಗಲಿಲ್ಲ ಸಂಭಾಷಣೆಯ ಸಮಯದಲ್ಲಿ, ಕೊಹ್ಲಿ ತನ್ನ ತಂದೆ, ಮಗಳು ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಬಗ್ಗೆಯೂ ಮಾತನಾಡಿದರು. ಭಾರತಕ್ಕೆ ತಮ್ಮ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡುವ ಸುಮಾರು ಎರಡು ವರ್ಷಗಳ ಮೊದಲು ಕೊಹ್ಲಿ ಅವರು ತಮ್ಮ ತಂದೆ ಪ್ರೇಮ್ ಕೊಹ್ಲಿಯನ್ನು ಡಿಸೆಂಬರ್ 2006 ರಲ್ಲಿ ಕಳೆದುಕೊಂಡರು. ಟೀಮ್ ಇಂಡಿಯಾಕ್ಕೆ ಪಾದಾರ್ಪಣೆ ಮಾಡುವ ಮುನ್ನ ಕೊಹ್ಲಿ 2008 ರಲ್ಲಿ ಮಲೇಷ್ಯಾದಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದರು. ಆದರೆ ಅವರ ತಂದೆಗೆ ಕೊಹ್ಲಿಯ ಈ ಸಾಧನೆಯನ್ನು ನೋಡಲು ಸಾಧ್ಯವಾಗಲಿಲ್ಲ.
ತನ್ನ ತಂದೆಯ ಅನುಪಸ್ಥಿತಿಯ ಬಗ್ಗೆ ಕೇಳಿದಾಗ, ವಿರಾಟ್ ಕೊಹ್ಲಿ, ನಾನು ಭಾರತಕ್ಕಾಗಿ ಆಡುತ್ತಿರುವುದನ್ನು ಅವರಿಗೆ ನೋಡಲಾಗಲಿಲ್ಲ. ಈಗ ನನ್ನ ಮಗಳೊಂದಿಗೆ, ನನ್ನ ತಾಯಿಯ ಮುಖದಲ್ಲಿ ನಾನು ಸಂತೋಷವನ್ನು ನೋಡುತ್ತಿದ್ದೇನೆ. ಅವರು ಈಗ ಬದುಕಿದ್ದರೆ ಏನಾಗಿರುತ್ತಿತ್ತು ಎಂಬುದನ್ನು ನಾನು ಕುಳಿತು ಯೋಚಿಸುತ್ತಿರುತ್ತೇನೆ ಎಂದು ಹೇಳಿದರು.
ಅನುಷ್ಕಾ ಶರ್ಮಾ ಅವರ ಮೊದಲ ಭೇಟಿಯ ಕಥೆ ಈ ಸಂದರ್ಶನದ ಟೀಸರ್ ಅನ್ನು ಕಾರ್ತಿಕ್ ಹಂಚಿಕೊಂಡಿದ್ದಾರೆ. ಅದರಲ್ಲಿ, ವಿರಾಟ್ ಅನುಷ್ಕಾ ಶರ್ಮಾ ಅವರ ಮೊದಲ ಭೇಟಿಯ ಕಥೆಯನ್ನು ಹೇಳುತ್ತಿದ್ದಾರೆ. ನಾನು ಅನುಷ್ಕಾ ಜೊತೆ ಮೊದಲಿನಿಂದಲೂ ತಮಾಷೆ ಮಾಡುತ್ತಿದ್ದೆ ಎಂದು ಅವರು ಹೇಳುತ್ತಿದ್ದಾರೆ. ಪ್ರಸ್ತುತ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಕೊಹ್ಲಿ, ನಾವು ಮೈದಾನಕ್ಕೆ ಕಾಲಿಡುತ್ತೇವೆ ಮತ್ತು ನಾವು ಸ್ಪರ್ಧಿಸುತ್ತೇವೆ. ನಾವು ಪ್ರತಿ ಟೆಸ್ಟ್ ಪಂದ್ಯವನ್ನು ಗೆಲ್ಲಲು ಬಯಸುತ್ತೇವೆ, ಅದು ನನಗೆ ಹೆಚ್ಚು ಮುಖ್ಯವಾಗಿದೆ ಎಂದರು.
Published On - 4:13 pm, Tue, 3 August 21